• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕೋವಿಶೀಲ್ಡ್ ಮಾತ್ರ ಶ್ರೇಷ್ಟವಲ್ಲ, ಆನಂದಯ್ಯನ ಔಷಧ ಕಡೆಗಣಿಸುವಂತಿಲ್ಲ!!

Hanumantha Kamath Posted On May 25, 2021
0


0
Shares
  • Share On Facebook
  • Tweet It

ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎನ್ನುವ ಎರಡು ಲಸಿಕೆಗಳ ಹೆಸರುಗಳನ್ನು ನೀವು ಕೇಳಿದ್ದೀರಿ. ನಮ್ಮಲ್ಲಿ ಹಲವರು ಕೋವಿಶೀಲ್ಡ್ ಲಸಿಕೆಯನ್ನು ಹಾಕಿಸಿಕೊಂಡಿರಬಹುದು. ಉಳಿದವರು ಕೋವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೊಂಡಿರಬಹುದು. ನಮ್ಮಲ್ಲೇ ಹಲವರಿಗೆ ಈ ಎರಡು ಲಸಿಕೆಗಳಲ್ಲಿ ಯಾವುದು ಒಳ್ಳೆಯದು ಎನ್ನುವ ಜಿಜ್ಞಾಸೆ ಇರಬಹುದು. ಕೆಲವರು ಕೋವ್ಯಾಕ್ಸಿನ್ ಲಸಿಕೆ ಇದ್ದರೆ ಮಾತ್ರ ಹಾಕಿಸುತ್ತೇನೆ ಎಂದು ಸುಮ್ಮನೆ ಕಾಯುತ್ತಾ ಕುಳಿತಿರಬಹುದು. ನಮಗೆ ಗೊತ್ತಿರುವಂತೆ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ ಒಂದಿಷ್ಟು ಸೂಕ್ಷ್ಮ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವಂತದ್ದು. ಕೋವಿಶೀಲ್ಡ್ ಒಂದು ಲಕ್ಷ ಡೋಸ್ ಉತ್ಪಾದಿಸುವಾಗ ಕೋವ್ಯಾಕ್ಸಿನ್ ಹೆಚ್ಚೆಂದರೆ ಹತ್ತರಿಂದ ಹದಿನೈದು ಸಾವಿರ ಡೋಸ್ ಮಾತ್ರ ಉತ್ಪಾದಿಸಲು ಸಾಧ್ಯ. ಇನ್ನು ಕೋವ್ಯಾಕ್ಸಿನ್ ಭಾರತದಲ್ಲಿಯೇ ಉತ್ಪಾದನೆಯಾಗುತ್ತದೆ. ಕೋವಿಶೀಲ್ಡ್ ವಿದೇಶದಲ್ಲಿ ಉತ್ಪಾದನೆಯಾಗುತ್ತದೆ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೋವ್ಯಾಕ್ಸಿನ್ ಗೆ ಇರುವಷ್ಟು ಮಾನ್ಯತೆ ಕೋವಿಶೀಲ್ಡ್ ಗೆ ಇಲ್ಲ. ನಾವು ಅನೇಕ ರಾಷ್ಟ್ರಗಳಿಗೆ ನಮ್ಮಲ್ಲಿಂದ ಕೋವ್ಯಾಕ್ಸಿನ್ ನ್ನು ರಫ್ತು ಮಾಡಿದ್ದೇವೆ. ಆ ಎಲ್ಲ ರಾಷ್ಟ್ರಗಳು ಕೋವ್ಯಾಕ್ಸಿನ್ ಬಗ್ಗೆ ವಿಶ್ವಾಸಾರ್ಹ ಮಾತುಗಳನ್ನು ಹೇಳಿವೆ. ಎಲ್ಲಿಯ ತನಕ ಅಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೋವ್ಯಾಕ್ಸಿನ್ ಗೆ ಇರುವಷ್ಟು ಮಾನ್ಯತೆ ಕೋವಿಶೀಲ್ಡ್ ಗೆ ಇಲ್ಲ. ಇಷ್ಟಾದರೂ ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ಬಾರಿಯಂತೆ ಈ ಬಾರಿಯೂ ಭಾರತದೊಂದಿಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಯಾವ ವ್ಯಕ್ತಿ ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡರೆ ಮಾತ್ರ ಭಾರತದಿಂದ ಬೇರೆ ರಾಷ್ಟ್ರಕ್ಕೆ ಪ್ರಯಾಣಿಸಬಹುದು ಎಂದು ಹೇಳಿದೆ. ಭಾರತದಲ್ಲಿ ತಯಾರಾಗುವ ಯಾವುದೇ ಮದ್ದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಅದರ ಅಧೀನದಲ್ಲಿರುವ ಸಂಸ್ಥೆಗಳು ಪರಿಶೀಲಿಸಿ ನಂತರ ಅದನ್ನು ಮಾನ್ಯ ಮಾಡುತ್ತವೆ. ಹಾಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಲಸಿಕೆ ಅಥವಾ ಔಷಧವನ್ನು ಮಾನ್ಯ ಮಾಡಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ನಮ್ಮ ಕೋವ್ಯಾಕ್ಸಿನ್ ಲಸಿಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಮಾಡಲು ತಯಾರಿಲ್ಲ. ಯಾಕೆಂದರೆ ಅದಕ್ಕೆ ಚೀನಾದಿಂದ ಒತ್ತಡ ಇದೆ. ಯಾವಾಗಲೂ ಚೀನಾ ಪರವಾಗಿರುವ ವಿಶ್ವ ಆರೋಗ್ಯ ಸಂಸ್ಥೆ ಎಲ್ಲಿಯ ತನಕ ಡಬ್ಬಲ್ ಗೇಮ್ ಎಂದರೆ ಚೀನಾದ ವುಹಾನ್ ಎನ್ನುವ ಪ್ರದೇಶದಲ್ಲಿ ಈ ವೈರಸ್ ಸೃಷ್ಟಿಯಾಯಿತು ಎಂದು ಅಮೇರಿಕಾದಂತಹ ರಾಷ್ಟ್ರಗಳೇ ಸಾಕ್ಷಿ ಸಮೇತ ಹೇಳುತ್ತಿದ್ದರೂ ಅದನ್ನು ಚೀನಾ ತೆಕ್ಕೆಯಲ್ಲಿದ್ದಂತೆ ಆಡುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಕಿವಿಗೆ ಹಾಕಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಒಟ್ಟಿನಲ್ಲಿ ಚೀನಾ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯಿಂದ ಭಾರತದ ಪರ ಏನಾದರೂ ಬದಲಾವಣೆ ಆಗುತ್ತೆ ಎಂದು ನಂಬುವುದೇ ಹಾಸ್ಯಾಸ್ಪದ ಎಂದು ಅನಿಸುತ್ತದೆ.

ಇನ್ನು ನಮ್ಮ ದೇಶದಲ್ಲಿ ಔಷಧ ತಯಾರಿಕಾ ಸಂಸ್ಥೆಗಳ ಲಾಬಿ ಎಷ್ಟು ಬಲಿಷ್ಟವಾಗಿದೆ ಎಂದು ಈ ದಿನಗಳಲ್ಲಿ ಮನವರಿಕೆ ಆಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಡಾ.ಗಿರಿಧರ ಕಜೆಯವರು ಕೊರೊನಾ ಔಷಧ ಎಂದು ಆಯುರ್ವೇದ ಶಾಸ್ತ್ರದ ಮದ್ದನ್ನು ಹೇಳಿದಾಗ ಅದು ಕೊರೊನಾ ಮದ್ದಲ್ಲ, ಅದು ಕೇವಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧ ಎಂದು ಅವರ ಬಾಯಿ ಮುಚ್ಚಿಸಲಾಯಿತು. ಇನ್ನು ಕೆಲವು ದಿನಗಳ ನಂತರ ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಮೂಲಕ ಕೊರೊನಾಗೆ ಔಷಧ ಸಿಗುವ ವಿಷಯ ತಂದಾಗಲೂ ಅವರನ್ನು ಹಿಮ್ಮೆಟ್ಟಿಸುವ ಕಾರ್ಯ ನಡೆದಿದೆ. ಇನ್ನು ಈಗ ಆಂಧ್ರಪ್ರದೇಶದ ನೆಲ್ಲೂರು ಎಂಬಲ್ಲಿ ಆನಂದಯ್ಯ ಎನ್ನುವ ನಾಟಿ ವೈದ್ಯರು ಔಷಧವನ್ನು ಜನರಿಗೆ ವಿತರಿಸುತ್ತಿದ್ದು ಇದರಿಂದ ಕೊರೊನಾ ಸೋಂಕಿತರು ಕೂಡ ಶೀಘ್ರ ಗುಣಮುಖರಾಗುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಐದು ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಆನಂದಯ್ಯ ಎನ್ನುವವರು ನೀಡುತ್ತಿರುವ ಈ ಔಷಧವನ್ನು ಜನ ಕೃಷ್ಣರಾಯಪಟ್ಟಣಂ ಟಾನಿಕ್ ಎಂದು ಸೇವಿಸುತ್ತಿದ್ದು, ಇದರಿಂದ ಕೊರೊನಾ ಆ ಭಾಗದಲ್ಲಿ ನಿಯಂತ್ರಣದಲ್ಲಿದೆ. ಈ ವಿಷಯವನ್ನು ಅಲ್ಲಿನ ಶಾಸಕರೇ ಸ್ವತ: ಒಪ್ಪಿದ್ದು, ಅವರೇ ಅದರ ಪ್ರಚಾರ ಮಾಡಿರುವುದರಿಂದ ಕೋಪಗೊಂಡಿರುವ ಆಂಧ್ರ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ತಕ್ಷಣ ಅದನ್ನು ಬಂದ್ ಮಾಡಿ ಆದೇಶ ಹೊರಡಿಸಿದ್ದಾರೆ. ಈಗ ಆ ಔಷಧ ಪರೀಕ್ಷೆಗೆ ಹೋಗಿದ್ದು, ಫಾರ್ಮಾ ಲಾಬಿ ತನ್ನ ಕಾರ್ಯವನ್ನು ಆರಂಭಿಸಲಿದೆ. ಯಾರಿಗೆ ಎಷ್ಟು ಸೂಟ್ ಕೇಸ್ ಹೋಗಬೇಕೋ ಅಷ್ಟು ಹೋದರೆ ಆ ಔಷಧ ಬ್ಯಾನ್ ಆಗುತ್ತದೆ. ಅದರ ಬಳಿಕ ಆ ಔಷಧದಲ್ಲಿ ಎಷ್ಟೇ ಪರಿಣಾಮಕಾರಿ ಅಂಶಗಳೇ ಇರಲಿ ಅದನ್ನು ಮೂಲೆಗುಂಪು ಮಾಡಲಾಗುತ್ತದೆ ಮತ್ತು ಆಲೋಪತಿಯನ್ನೇ ಸೇವಿಸುವಂತೆ ಜನರಿಗೆ ಒತ್ತಡ ಹಾಕಲಾಗುತ್ತದೆ. ಈ ಎರಡು ವಿಷಯಗಳು ಔಷಧ ಲೋಕದ ಕರಾಳ ಮುಖವನ್ನು ಹೊರಗೆ ತಂದಿವೆ. ನಮ್ಮ ಸನಾತನ ಪರಂಪರೆಯಿರುವ ದೇಶ ಭಾರತದಲ್ಲಿ ಇವತ್ತಿಗೂ ರಾಜಕಾರಣಿಗಳು ಆಲೋಪತಿ ಔಷಧ ಕಂಪನಿಗಳ ಬಿಗಿಮುಷ್ಟಿಯಲ್ಲಿ ನಮ್ಮ ಮೂಲ ಆಯುರ್ವೇದವನ್ನು ಕಡೆಗಣಿಸುತ್ತಿದ್ದಾರೆ. ಯಾಕೆಂದರೆ ಆಯುರ್ವೇದಕ್ಕೆ ಲಾಬಿ ಇಲ್ಲ. ಸೂಟ್ ಕೇಸ್ ಕೊಟ್ಟು ರಾಜಕಾರಣಿಗಳನ್ನು ಖರೀದಿಸುವ ಅಗತ್ಯ ಇಲ್ಲ. ಯಾರಿಗೆ ಅದರ ಅಗತ್ಯ ಇದೆಯೋ ಅವರು ಬಿಸ್ಕಿಟ್ ಬಿಸಾಡಿ ಜನರ ಆರೋಗ್ಯವನ್ನೇ ಖರೀದಿಸುತ್ತಾರೆ!!

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search