• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಒನ್ ನೇಶನ್, ಒನ್ ರೇಶನ್ ವಲಸೆ ಕಾರ್ಮಿಕರಿಗೆ ಪ್ರಯೋಜನ ಏನು?

Hanumantha Kamath Posted On June 3, 2021


  • Share On Facebook
  • Tweet It

ಒನ್ ನೇಶನ್, ಒನ್ ರೇಶನ್ ಎನ್ನುವ ಯೋಜನೆಯನ್ನು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಆರಂಭಿಸಿ ತುಂಬಾ ತಿಂಗಳುಗಳಾಗಿವೆ. ತುಂಬಾ ಉತ್ತಮ ಯೋಜನೆ ಮತ್ತು ದೂರದೃಷ್ಟಿಯ ಪ್ರಯತ್ನ. ಯಾಕೆಂದರೆ ಮೋದಿಗೆ ಬಡವರ ಹಸಿವೆಯ ಬೆಲೆ ಗೊತ್ತು. ಅವರಿಗೆ ಒಬ್ಬ ಕಾರ್ಮಿಕನ ಜೀವದ ಮಹತ್ವ ತಿಳಿದಿದೆ. ಆದ್ದರಿಂದ ಅವರು ಇಂತಹ ಯೋಜನೆ ಜಾರಿಗೊಳಿಸಲು ಕೆಲಸ ಮಾಡುತ್ತಾರೆ. ಆದರೆ ಅದು ಎಷ್ಟರಮಟ್ಟಿಗೆ ಸಮರ್ಪಕವಾಗಿ ಜಾರಿಯಲ್ಲಿದೆ ಎನ್ನುವುದನ್ನು ಯಾರಾದರೂ ನಮ್ಮ ಜನನಾಯಕರು ನೋಡಿದ್ದಾರಾ ಎನ್ನುವುದು ಈಗ ಇರುವ ಪ್ರಶ್ನೆ. ನಮ್ಮ ದೇಶದಲ್ಲಿ ವಲಸೆ ಕಾರ್ಮಿಕರು ಎನ್ನುವ ವರ್ಗವೇ ಇದೆ. ಅವರು ತಾವು ಹುಟ್ಟಿದ ಊರಿಗಿಂತ ಸಾವಿರಾರು ಕಿಲೋಮೀಟರ್ ದೂರಕ್ಕೆ ಹೋಗಿ ಕೆಲಸ ಮಾಡುತ್ತಾರೆ. ಮಹಾರಾಷ್ಟ್ರದವರು ಕರ್ನಾಟಕಕ್ಕೆ, ಉತ್ತರ ಕರ್ನಾಟಕದವರು ಗುಜರಾತಿನಲ್ಲಿ ಹೀಗೆ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ, ಗುಜರಾತಿನಿಂದ ಪಶ್ಚಿಮ ಬಂಗಾಲದ ತನಕ ವಲಸೆ ಕಾರ್ಮಿಕರು ಇಲ್ಲದ ರಾಜ್ಯಗಳಿಲ್ಲ. ಇವರಲ್ಲಿ ಬಹುತೇಕರು ಶ್ರಮಜೀವಿಗಳು ಮತ್ತು ಮಧ್ಯಮ ಹಾಗೂ ಕೆಳಮಧ್ಯಮ ವರ್ಗದವರು. ಅವರಿಗೆ ತಮ್ಮ ಊರಿನಲ್ಲಿ ರೇಶನ್ ಅಂಗಡಿಗಳೇ ಜೀವಾಳ. ಕುಟುಂಬ ದೊಡ್ಡದಿರುತ್ತದೆ. ಅನೇಕರಿಗೆ ನಾಲ್ಕೈದು ಮಕ್ಕಳು ಕೂಡ ಇರುತ್ತಾರೆ. ಕಡಿಮೆ ಮಜೂರಿಗೆ ಸಿಗುತ್ತಾರೆ ಎನ್ನುವ ಕಾರಣಕ್ಕೆ ನಮ್ಮಲ್ಲಿ ಹೆಚ್ಚಿನ ಬಿಲ್ಡರ್ ಗಳು ಅವರನ್ನು ಕರೆಸುತ್ತಾರೆ ಮತ್ತು ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ. ಇವರನ್ನು ನಂಬಿಯೇ ಅನೇಕ ನಿರ್ಮಾಣ ಕಾಮಗಾರಿಗಳು ನಡೆಯುತ್ತವೆ. ಇವರು ಸರಕಾರಿ ಅಭಿವೃದ್ಧಿ ಕಾಮಗಾರಿಗಳಿಗೂ ಬೇಕು. ಪಂಚಾಯತ್ ಅಭಿವೃದ್ಧಿ ಕಾಮಗಾರಿಗಳಿಂದ ಹಿಡಿದು ಹೊಸ ಸಂಸತ್ತು ಕಟ್ಟಡ ಕಟ್ಟಲು ಕೂಡ ಇವರು ಬೇಕು. ಇವರಲ್ಲಿ ಕಟ್ಟಡ ಕಾರ್ಮಿಕರಿಂದ ಹಿಡಿದು ಕೂಲಿಕಾರ್ಮಿಕರ ತನಕ ಬೇರೆ ಬೇರೆ ಕೆಲಸ ಮಾಡುವವರ ತಂಡವೇ ಇರುತ್ತದೆ. ಅವರ ಬಳಿ ತಮ್ಮ ಊರಿನಲ್ಲಿ ಮಾಡಿಸಿದ ರೇಶನ್ ಕಾರ್ಡ್ ಇರುತ್ತದೆ. ಆದರೆ ವರ್ಷವೀಡಿ ಎಲ್ಲೋ ಕೆಲಸ ಮಾಡಲು ತೆರಳುವ ಇವರು ವರ್ಷದಲ್ಲಿ ಒಂದೋ, ಎರಡೋ ಬಾರಿ ಕೆಲವು ದಿನ ಮೂಲ ಊರಿಗೆ ಬರುತ್ತಾರೆ. ಆಗ ಮಾತ್ರ ರೇಶನ್ ಕಾರ್ಡ್ ಉಪಯೋಗಕ್ಕೆ ಬರುವುದರಿಂದ ಮತ್ತು ಇಂತವರು ಬೇರೆಡೆ ಕೆಲಸ ಮಾಡುವಾಗ ಅಲ್ಲಿ ಜಿನಸಿ ಅಂಗಡಿಯಲ್ಲಿ ಅಕ್ಕಿ, ಗೋಧಿ ದುಬಾರಿ ದರಕ್ಕೆ ತೆಗೆದುಕೊಳ್ಳುವುದರಿಂದ ಅಂತಹ ಕುಟುಂಬದ ಮೇಲೆ ಆಗುವ ಹೊರೆಯನ್ನು ಮನಗಂಡ ಮೋದಿ ಇದನ್ನು ಆರಂಭಿಸಿರುವುದು ನಿಜಕ್ಕೂ ಮೆಚ್ಚಬೇಕಾಗಿರುವ ವಿಷಯ. ಆದರೆ ಕೆಲವು ತಾಂತ್ರಿಕ ತೊಂದರೆಗಳಿಂದ ಈ ಯೋಜನೆ ಇವತ್ತು ಹಳ್ಳಹಿಡಿದಿದೆ ಮತ್ತು ವಲಸೆ ಬಡ ಕಾರ್ಮಿಕರ ಶಾಪಕ್ಕೆ ಸಂಬಂಧಪಟ್ಟವರು ಬಲಿಯಾಗುವ ಸಾಧ್ಯತೆ ಇದೆ. ಆದ್ದರಿಂದ ನಮ್ಮ ನಾಯಕರು ಆದಷ್ಟು ಬೇಗ ಇದನ್ನು ಸರಿಪಡಿಸಲಿ ಎನ್ನುವ ಕಾರಣಕ್ಕೆ ಈ ಜಾಗೃತ ಅಂಕಣವನ್ನು ಬರೆಯುತ್ತಿದ್ದೇನೆ.
ಅಷ್ಟಕ್ಕೂ ಆಗುತ್ತಿರುವುದೇನು? ಮೊದಲನೇಯದಾಗಿ ನಿಮ್ಮ ಏರಿಯಾದಲ್ಲಿ ರೇಶನ್ ಅಂಗಡಿ ಒಂದು ಇರುತ್ತದೆ. ಅಲ್ಲಿ ಸುಮಾರು ಒಂದು ಸಾವಿರ ಪಡಿತರ ಚೀಟಿ ಇರುತ್ತದೆ. ಅದಕ್ಕೆ ಸರಿಯಾಗಿ ಆಹಾರ ಇಲಾಖೆಯಿಂದ ಆ ರೇಶನ್ ಅಂಗಡಿಗೆ ಎಷ್ಟು ಅಕ್ಕಿ, ಎಷ್ಟು ಬೇಳೆ ಉಳಿದ ಆಹಾರ ಸಾಮಾಗ್ರಿಗಳು ಬರಬೇಕೋ ಅಷ್ಟು ಬಂದೇ ಬರುತ್ತವೆ. ಅದನ್ನು ಆಯಾ ಕಾರ್ಡಿನವರಿಗೆ ಕೊಟ್ಟು ಇಲಾಖೆಗೆ ಲೆಕ್ಕ ಕೊಡುವ ಹೊಣೆ ಪಡಿತರ ಅಂಗಡಿಯವರದ್ದು. ಈಗ ಎಲ್ಲವೂ ಎರಡೆರಡು ಓಟಿಪಿ ನಂಬರ್ ಆಧಾರದಲ್ಲಿ ಬರುವುದರಿಂದ ಇದರಲ್ಲಿ ಮೋಸ ಮಾಡಲು ಆಗುವುದಿಲ್ಲ. ಕೆಲವರು ಕಾರ್ಡ್ ಇದ್ದರೂ ತೆಗೆದುಕೊಳ್ಳದೇ ಬಿಟ್ಟಿರುತ್ತಾರೆ. ಬಹುಶ: ಅಗತ್ಯ ಇಲ್ಲವೋ, ಗುಣಮಟ್ಟದ ಕಾರಣದಿಂದ ತೆಗೆದುಕೊಳ್ಳಲು ಬರುವುದಿಲ್ಲ. ಅಂತಹ ಆಹಾರ ವಸ್ತುಗಳು ಉಳಿದರೆ ಮುಂದಿನ ತಿಂಗಳ ಲೆಕ್ಕದಲ್ಲಿ ರೇಶನ್ ಅಂಗಡಿಯವರು ಕೊಡಬೇಕಾಗುತ್ತದೆ. ಇಂತಹ ವಿಷಯ ಇರುವಾಗ ಆ ಏರಿಯಾದಲ್ಲಿ ಮೂರ್ನಾಕು ವಲಸೆ ಕಾರ್ಮಿಕರ ಕುಟುಂಬಗಳು ಇದ್ದರೆ ಅವರು ಆ ರೇಶನ್ ಅಂಗಡಿಗೆ ಕಾರ್ಡ್ ಹಿಡಿದುಕೊಂಡು ಬಂದರೆ ಅವರಿಗೆ ಅಂಗಡಿಯವರು ಎಲ್ಲಿಂದ ಅಕ್ಕಿ, ಗೋಧಿ ಕೊಡುವುದು. ಯಾಕೆಂದರೆ ಎಲ್ಲವೂ ಲೆಕ್ಕದಲ್ಲಿ ಬರುವುದರಿಂದ ಇದು ಸಾಧ್ಯವೂ ಇಲ್ಲ. ಆದ್ದರಿಂದ ಒನ್ ನೇಶನ್ ಒನ್ ರೇಶನ್ ಕಾನೂನುಗಳು ಚೆನ್ನಾಗಿವೆ. ಆದರೆ ಅದರಿಂದ ಜನಸಾಮಾನ್ಯರಿಗೆ ಏನೂ ಪ್ರಯೋಜನ ಇಲ್ಲದಿದ್ದರೆ ಯೋಜನೆ ದಾಖಲೆಗಳಲ್ಲಿ ಇದ್ದರೆ ಸಾಕಾ? ಇದಕ್ಕೆ ಪರಿಹಾರ ಏನು? ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದು ಎಂದರೆ ಪ್ರತಿ ತಿಂಗಳು ನೂರು ಟನ್ ಅಕ್ಕಿ ಕಳುಹಿಸಿಕೊಡುವ ಅಂಗಡಿಗೆ 125 ಟನ್ ಕಳುಹಿಸಿಕೊಡಿ. ಉಳಿದರೆ ಮುಂದಿನ ತಿಂಗಳ ಲೆಕ್ಕಕ್ಕೆ ಸರಿಮಾಡಿಕೊಳ್ಳಿ. ಈ ಬಗ್ಗೆ ಎಲ್ಲಾ ಜಿಲ್ಲೆಗಳಲ್ಲಿಯೂ ಸಮಸ್ಯೆ ಇದೆ. ಬೇರೆ ರಾಜ್ಯದವರು ಏನು ಮಾಡುತ್ತಾರೋ, ಬಿಡ್ತಾರೋ. ನಮ್ಮ ಕರಾವಳಿಯ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳ ಸಭೆ ಕರೆದು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎನ್ನುವುದರ ಕುರಿತು ಸಭೆ ಮಾಡಬೇಕು. ಯಾಕೆಂದರೆ ಯಾವುದೇ ವಲಸೆ ಕಾರ್ಮಿಕ ಕೂಡ ತನಗೆ ಪಡಿತರ ಸಿಗುವುದಿಲ್ಲ ಎಂದು ಎಲ್ಲಿಯೂ ಹೇಳಲು ಹೋಗುವುದಿಲ್ಲ. ಅವನಿಗೆ ಎಲ್ಲಿ ಹೇಳಬೇಕು ಎಂದು ಕೂಡ ಗೊತ್ತಿರುವುದಿಲ್ಲ. ಅವರಲ್ಲಿ ಸಂಘಟನೆ ಇಲ್ಲದೆ ಇರುವುದರಿಂದ ಅವರು ಪ್ರತಿಭಟನೆ ಮಾಡುವುದಿಲ್ಲ. ಅವರು ಎಷ್ಟೇ ಅನ್ಯಾಯವಾದರೂ ಯಾವ ಡಿಸಿ, ಕಮೀಷನರ್ ಹತ್ತಿರ ಕೂಡ ಹೇಳಲು ಸಾಧ್ಯವಾಗುವುದಿಲ್ಲ. ಇನ್ನು ಅವರ ಭಾಷೆಯಿಂದ ಅವರು ಇಲ್ಲಿಯವರು ಅಲ್ಲ ಎಂದು ಗೊತ್ತಾಗುವುದರಿಂದ ನಾವು ಕೇಳಲು ಹೋದರೆ ಬೇರೆ ರಾಜ್ಯದವರು ಎಂದು ನಮಗೆ ಓಡಿಸುತ್ತಾರೆ ಎಂದು ಹೆದರಿ ಅವರು ಹೇಳಲು ಹೋಗುವುದೇ ಇಲ್ಲ. ಇನ್ನು ಇವರು ಸ್ಥಳೀಯ ಮತದಾರರು ಅಲ್ಲದೇ ಇರುವುದರಿಂದ ಇವರ ಬಳಿ ಹೋಗಿ ಇವರ ಸಮಸ್ಯೆ ಕೇಳುವ ಆಸಕ್ತಿ ಯಾರಿಗೆ ಇರುತ್ತದೆ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search