ಪ್ರಕೃತಿಯ ಮಡಿಲಲ್ಲಿ ಧುಮ್ಮಿಕ್ಕಿದೆ ಅಮ್ಮುಂಜೆಯ ಕಲ್ಲಗೆರೆ ಫಾಲ್ಸ್..
Posted On June 28, 2021

ಮಂಗಳೂರು: ಕಡಿದಾದ ದಾರಿಯ ಇಕ್ಕೆಲಗಳಲ್ಲಿ ಬಣ್ಣ-ಬಣ್ಣದ ಹೂವು, ಜೀವ ವೈವಿಧ್ಯಗಳನ್ನು ನೋಡುತ್ತಾ, ಸುರಿಯುವ ಮಳೆಯ ಜತೆ ಹೆಜ್ಜೆ ಹಾಕುವುದೇ ರೋಚಕ.
ಕಾಡಿನ ಮಧ್ಯೆ ಜಲಪಾತಗಳ ಭೋರ್ಗರೆತದ ಸದ್ದು ಪ್ರಕೃತಿ ಪ್ರಿಯರನ್ನು ತಮ್ಮನ್ನ ಸೆಳೆಯುತ್ತವೆ. ಹೀಗೆ ಮಳೆಗಾಲದಲ್ಲಿ ಕಾಡುಗಳ ನಡುವೆ ಧುಮ್ಮಿಕ್ಕುವ ಜಲಪಾತಗಳನ್ನು ನೋಡುವುದೇ ಸೊಗಸು. ಕೆಲವು ಜಲಪಾತಗಳು ಅಷ್ಟೇನೂ ಖ್ಯಾತವಾಗಿಲ್ಲವಾದರೂ ಸೌಂದರ್ಯದಲ್ಲಿ ಮಾತ್ರ ಯಾವುದಕ್ಕೂ ಸರಿಸಾಟಿ ಇಲ್ಲ. ಅಂತಹ ಕೆಲವು ಜಲಪಾತಗಳಿವೆ.ಅದರಲ್ಲೂ ನಾವು ತೋರಿಸುವ ಈ ಸುಂದರ ಜಲಪಾತ ಯಾವುದು ಗೊತ್ತಾ? ಹೌದು ,ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮುಡಾಯಿಕೋಡಿ ಸಮೀಪದಲ್ಲಿದೆ ಈ ಫಾಲ್ಸ್,
ಇದು ಕಲ್ಲಗೆರೆ ಫಾಲ್ಸ್ ಎಂದೇ ಪ್ರಸಿದ್ದಿ ಪಡೆದಿದೆ.ಈ ಫಾಲ್ಸ್ ಹಾಲಿನ ರೂಪದಲ್ಲಿ ಹರಿತಾ ಇದೆ. ಮಳೆಗಾಲ ಬಂತಂದ್ರೆ ಸಾಕು, ಇದನ್ನು ನೋಡುವುದೇ ಚೆಂದ. ಇನ್ನೂ ಫಾಲ್ಸ್ ನಲ್ಲಿ ಎಂಜಾಯ್ ಮಾಡಲು ಯುವಕರು ತಂಡೋಪತಂಡವಾಗಿ ಆಗಮಿಸಿ ಮಸ್ತ್ ಮಸ್ತಾಗಿ ಎಂಜಾಯ್ ಮಾಡುತ್ತಿದ್ದಾರೆ.
- Advertisement -
Trending Now
40 ವರ್ಷಗಳಿಂದ ಈ ದೇವಳದಿಂದ ನಡೆಯುತ್ತಿದೆ ಇಫ್ತಾರ್ ಆಚರಣೆ!
March 22, 2025
Leave A Reply