• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಣಚೂರು ಮೆಡಿಕಲ್ ಕಾಲೇಜಿಗೆ ಮೂಲ್ಕಿಯಿಂದ ಮಹಿಳೆಯರ ರವಾನೆ ಸ್ಥಳೀಯರ ತಡೆ, ಹೊರಬಿದ್ದ ಬೆಡ್ ಭರ್ತಿ ದಂದೆ

Tulunadu News Posted On June 30, 2021


  • Share On Facebook
  • Tweet It

ಮಂಗಳೂರು: ಕಣಚೂರು ಮೆಡಿಕಲ್ ಕಾಲೇಜ್ ಗೆಂದು ಮುಲ್ಕಿ ಬಳಿಯ ಕಾರ್ನಾಡು ಲಿಂಗಪ್ಪಯ್ಯಕಾಡು ಎಂಬಲ್ಲಿಂದ ಐವತ್ತಕ್ಕೂ ಹೆಚ್ಚು ಮಹಿಳೆಯರನ್ನು ಬಸ್ಸಿನಲ್ಲಿ ತುಂಬಿಸಿಕೊಂಡು ತೆರಳುತ್ತಿದ್ದ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಕಣಚೂರು ಮೆಡಿಕಲ್ ಕಾಲೇಜಿನ ಬಸ್ಸಿನಲ್ಲಿ ಐವತ್ತು ಕ್ಕೂ ಹೆಚ್ಚು ಮಹಿಳೆಯರನ್ನು ತುಂಬಿಸಿ ಒಯ್ಯುತ್ತಿರುವುದನ್ನು ತಿಳಿದು ಸ್ಥಳೀಯರು ಆಕೆ ಆಕ್ಷೇಪಿಸಿದ್ದಾರೆ , ಬಸ್ಸಿನಲ್ಲಿ ಕಣಚೂರು ಮೆಡಿಕಲ್ ಕಾಲೇಜಿನ ಚಾಲಕ ಮತ್ತು ಓರ್ವ ನರ್ಸ್ ಮಾತ್ರ ಇದ್ದು ಅವರು ಕೂರೋಣ ಲಸಿಕೆ ಹಾಕಿಸುವುದಕ್ಕಾಗಿ ಒಯ್ಯುತ್ತಿರುವುದಾಗಿ ತಿಳಿಸಿದ್ದಾರೆ .

ಕಣಚೂರು ಮೆಡಿಕಲ್ ಕಾಲೇಜಿನ ಮ್ಯಾನೇಜರ್ ನವಾಜ್ ಇವರನ್ನು ಕರೆತರುವಂತೆ ತಿಳಿಸಿದ್ದಾಗಿ ಮಾಹಿತಿ ನೀಡಿದ್ದಾರೆ .ಆದರೆ ರಾತ್ರಿ ವೇಳೆಗೆ ಇಷ್ಟೊಂದು ಮಂದಿಯನ್ನು ಲಸಿಕೆ ಹಾಕಿಸಲು ಒಯ್ಯುವ ಅಗತ್ಯವಿಲ್ಲ ಅದರಲ್ಲೂ ಮೂಲ್ಕಿಯ ಜನರನ್ನು ದೇರಳಕಟ್ಟೆಯ ಆಸ್ಪತ್ರೆಗೆ ಕರೆದೊಯ್ಯುವಾಗ ಏನಿದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ . ಬಳಿಕ ಸ್ಥಳೀಯ ಪಂಚಾಯತ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಲಸಿಕೆಯ ನೆಪದಲ್ಲಿ ಯಾವುದೇ ಅಂತರ ಇಲ್ಲದೆ ಲೊಕ್ಡೌನ್ ಸಂದರ್ಭದಲ್ಲಿ ಜನರನ್ನ ಒಯ್ಯುತ್ತಿದ್ದಾರೆ ಎಂದು ದೂರಿದ್ದಾರೆ . ಈ ಬಗ್ಗೆ ಸ್ಥಳೀಯರಲ್ಲಿ ಗೊಂದಲ ಸೃಷ್ಟಿಯಾಗಿದ್ದು ಮುಲ್ಕಿ ಪೊಲೀಸರಿಗೆ ಮಾಹಿತಿ ದೊರೆತು ಸ್ಥಳಕ್ಕೆ ತೆರಳಿದ್ದಾರೆ ಕಾಲೇಜಿನ ಪರವಾಗಿ ಬಸ್ಸಿನಲ್ಲಿ ಇಬ್ಬರು ಸಿಬ್ಬಂದಿ ಸರಿಯಾಗಿ ಮಾಹಿತಿ ನೀಡಲು ವಿಫಲರಾಗಿದ್ದರಿಂದ ಜನರನ್ನು ಬಸ್ಸಿನಿಂದ ಇರಿಸಲಾಗಿದೆ ಈ ಬಗ್ಗೆ ನಿಯಮ ಉಲ್ಲಂಘನೆ ಮತ್ತು ಲಸಿಕೆ ನೆಪದಲ್ಲಿ ಜನರನ್ನು ಇನ್ನಿತರ ಉದ್ದೇಶಕ್ಕೆ ಕರೆದೊಯ್ಯುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿವೆ .

ಮೆಡಿಕಲ್ ಕಾಲೇಜುಗಳಿಗೆ ಆಯಾ ಸಂದರ್ಭಗಳಲ್ಲಿ ಉನ್ನತಮಟ್ಟದ ಅಧಿಕಾರಿಗಳ ಪರಿಶೀಲನೆ ಬರುತ್ತಾರೆ ಈ ವೇಳೆ ಬೆಡ್ ನಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಿದ್ದರೆ ಗ್ರೇಡ್ , ನಾಕ್ ಶ್ರೇಯಾಂಕ ಲಭಿಸುವುದಿಲ್ಲ , ಅಲ್ಲದೆ ರೋಗಿಗಳ ಇಲ್ಲದಿದ್ದರೆ ಮೆಡಿಕಲ್ ಕಾಲೇಜಿಗೆ ಆಸ್ಪತ್ರೆ ನಡೆಸುವ ಅರ್ಹತೆ ತಪ್ಪಿಹೋಗುವ ಸಾಧ್ಯತೆ ಇರುತ್ತದೆ ಇದಕ್ಕಾಗಿ ಕೆಲವು ಮೆಡಿಕಲ್ ಕಾಲೇಜುಗಳು ಇಲಾಖಾಧಿಕಾರಿಗಳು ಪರಿಶೀಲನೆಗೆ ಬರುವ ಸಂದರ್ಭದಲ್ಲಿ ಬೆಡ್ ಭರ್ತಿಯಾಗಿರುವುದನ್ನು ತೋರಿಸಲು ಕೃತಕವಾಗಿ ಬೆಡ್ ತುಂಬುವ ಕೆಲಸ ಮಾಡುತ್ತಾರೆಂಬ ಆರೋಪಗಳಿವೆ . ಕಣಚೂರು ಮೆಡಿಕಲ್ ಕಾಲೇಜಿಗೆ ಈ ರೀತಿ ಕೂಲಿಯಾಳು ಮಹಿಳೆಯರನ್ನು ಒಟ್ಟು ಸೇರಿಸಿ ಕೊಂಡೊಯ್ಯುತ್ತಿದ್ದ ಹುನ್ನಾರದ ಹಿಂದೆ ಇದೇ ರೀತಿಯ ಬೆಡ್ ಭರ್ತಿ ಮಾಡುವ ಉದ್ದೇಶ ಇತ್ತೇ ಎನ್ನುವ ಸಂಶಯ ಎದ್ದಿದೆ . ಲಸಿಕೆ ನೀಡುವ ನೆಪದಲ್ಲಿ ಮಹಿಳೆಯರನ್ನು ಒಯ್ದು ಬೆಡ್ಡಿನಲ್ಲಿ ಮಲಗಿಸಿ ಇನ್ಸ್ ಪೆಕ್ಷನ್ ಮಾಡುವ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚುವ ಹಿಡನ್ ಅಜೆಂಡಾ ಇತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗಿದೆ.

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Tulunadu News January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Tulunadu News January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search