ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಯಿಂದ ಹಣ್ಣಿನ ಬೀಜ ಬಿತ್ತನೆ ಕಾರ್ಯಕ್ರಮ.
ಬೆಳ್ತಂಗಡಿ : ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಸರ್ವಜನಿಕರು ಕಾಡು ಪ್ರಾಣಿಗಳಿಗೆ ಆಹಾರ ವಸ್ತುಗಳನ್ನು ನೀಡಲು ನಿಷೇಧ ಇರುವ ಕಾರಣ ಪ್ರಾಣಿಗಳಿಗೆ ಆಹಾರ ವಸ್ತುಗಳ ಅಭಾವ ಇರುವ ಕಾರಣಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಚಾರ್ಮಾಡಿಯ ಕಣ್ಣಪ್ಪಾಡಿ ಮಿಸಲು ಅರಣ್ಯ ಪ್ರದೇಶದಲ್ಲಿ 10 ರಿಂದ 15 ಎಕ್ರೆ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕಾಡು ಪ್ರಾಣಿಗಳಿಗೆ ಆಹಾರಗಳು ಸಿಗಲು ಇಂದು ಹಣ್ಣಿನ ಬೀಜದ ಉಂಡೆಗಳನ್ನು ಹಾಕಿ ಬಿತ್ತನೆ ಮಾಡುವ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವಿರೇಂದ್ರ ಹೆಗ್ಡೆಯವರು ಚಾಲನೆ ನೀಡಿದರು.
ಈ ವೇಳೆ ವಿರೇಂದ್ರ ಹೆಗ್ಡೆಯವರ ಮಗಳಾದ ಶ್ರದ್ಧಾ ಅಮಿತ್ ,ಸುರೇಂದ್ರ ಕುಮಾರ್ ಅವರ ಮಗಳು ಶ್ರುತಾ ಜಿತೇಶ್, SKDRP ಯ ಮುಖ್ಯ ನಿರ್ವಾಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್ , ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರದೇಶಿಕ ನಿರ್ದೇಶಕರಾದ ವಿವೇಕ್ ಪಾಯಾಸ್, ಚಾರ್ಮಾಡಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಚಾರ್ಮಾಡಿ, ಚಾರ್ಮಾಡಿ ಪೆಂಟ್ರೋಲ್ ಬಂಕ್ ಮಾಲಕ ಅನಂತ ಭಟ್ , ಚಾರ್ಮಾಡಿ ಉಪವಲಯ ಅರಣ್ಯಾಧಿಕಾರಿ ರವೀಂದ್ರ ಅಂಕಲಾಗಿ, ಅರಣ್ಯ ರಕ್ಷಕ ಶರತ್ ಶೆಟ್ಟಿ, ವಿರೇಂದ್ರ ಹೆಗ್ಡೆಯವರ ಪಿಎ ವೀರು ಶೆಟ್ಟಿ, ಶೌರ್ಯ ವಿಪತ್ತು ಘಟಕದ ತಂಡದ ಸದಸ್ಯರು ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Leave A Reply