• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಶೋಭಾರ ಶ್ರಮ ಈಗ ಫಲ ನೀಡಿದೆ!!

Hanumantha Kamath Posted On July 12, 2021


  • Share On Facebook
  • Tweet It

ಒಬ್ಬರ ಸೋಲು ಇನ್ನೊಬ್ಬರ ಗೆಲುವು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲಿಯೂ ಒಂದೇ ಪ್ರದೇಶದ, ಒಂದೇ ಜಾತಿಯ, ಒಂದೇ ಸಿದ್ಧಾಂತದ ಇಬ್ಬರಲ್ಲಿ ಒಬ್ಬರ ಸೋಲು ಇನ್ನೊಬ್ಬರಿಗೆ ವರದಾನವಾಗಿಬಿಡುತ್ತದೆ. ಅದಕ್ಕೆ ತಾಜಾ ಉದಾಹರಣೆ ಶೋಭಾ ಕರಂದ್ಲಾಜೆ. ಪ್ರಧಾನ ಮಂತ್ರಿ ಹುದ್ದೆಯನ್ನೊಂದು ಬಿಟ್ಟು ಮತ್ತು ತುಂಬಾ ವಯಸ್ಸಾಗಲಿಲ್ಲ ಎನ್ನುವ ಕಾರಣಕ್ಕೆ ರಾಜ್ಯಪಾಲರ ಸ್ಥಾನ ಬಿಟ್ಟು ಬಹುತೇಕ ಎಲ್ಲವನ್ನು ಅನುಭವಿಸಿರುವ ಡಿವಿ ಸದಾನಂದ ಗೌಡರು ಎಸ್ ಎಂ ಕೃಷ್ಣ ನಂತರದ ಅತೀ ಅದೃಷ್ಟವಂತ ರಾಜಕಾರಣಿ. ಕೃಷ್ಣ ಸ್ಪೀಕರ್ ಹಾಗೂ ರಾಜ್ಯಪಾಲರ ಸ್ಥಾನಮಾನ ಕೂಡ ಅನುಭವಿಸಿದವರು. ಅದರೆ ತುಂಬಾ ಏನೂ ಘನಕಾರ್ಯ ಮಾಡದಿದ್ದರೂ ಅಡಕೆ ಬೆಳೆಗಾರರ ಪರವಾದ ಪಾದಯಾತ್ರೆಗಳು ಡಿವಿಯವರನ್ನು ಎರಡು ಬಾರಿ ಪುತ್ತೂರು ಶಾಸಕರನ್ನಾಗಿ ಮಾಡಿದವು.
ಅಂತಹ ಘನಂಧಾರಿ ಕೆಲಸ ಅಲ್ಲೂ ಏನೂ ಆಗಿಲ್ಲ. ಅದೃಷ್ಟ ಇತ್ತು, ಆಗಿನ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರನ್ನಾಗಿ ಜನ ಆರಿಸಿದರು. ಇಲ್ಲಿಯೂ ಅಂತಹ ಏನೂ ಸಾಧನೆ ಮಾಡಲಿಲ್ಲ. ಮುಂದಿನ ಬಾರಿ ಇಲ್ಲಿಯೇ ಟಿಕೆಟ್ ಕೊಟ್ಟರೆ ಸೋಲಬಹುದು ಎಂದು ಉಡುಪಿಯಲ್ಲಿ ನಿಲ್ಲಿಸಲಾಯಿತು. ಅಲ್ಲಿಯೂ ಏನೂ ಗುಡ್ಡೆ ಹಾಕಲಾಗಿಲ್ಲ. ಆದರೆ ಅದೃಷ್ಟ ತುಂಬಾ ಗಟ್ಟಿ ಇತ್ತು. ಯಡ್ಡಿ ಒಳಗೆ ಹೋದ ಕೂಡಲೇ ಸಿಎಂ ಆಗಿಯೂ ಜೀವನದ ಉನ್ನತ ಸ್ಥಾನಕ್ಕೆ ಏರಿದ ಸದ್ದು ಅಲ್ಲಿಯೂ ಏನೂ ಮಾಡಲಾಗಲಿಲ್ಲ. ವಿಧಾನಪರಿಷತ್ ಸ್ಥಾನ ಅನುಭವಿಸುತ್ತಿದ್ದ ಸದ್ದುವನ್ನು ಇಲ್ಲಿ ಬೇಡಾ, ರಾಷ್ಟರಾಜಕಾರಣಕ್ಕೆ ಬನ್ನಿ ಎಂದು ಹೈಮಾಂಡ್ ಹೇಳಿತು. ಸದ್ದು ಬೆಂಗಳೂರು ಉತ್ತರದಿಂದ ಸಂಸದರಾದರು. ಅಲ್ಲಿಂದ ಮಂತ್ರಿಯೂ ಆದರು. ಅದೃಷ್ಟ ಗಟ್ಟಿಯಿದ್ದ ಕಾರಣ ರೈಲ್ವೆ ಮಂತ್ರಿಯೂ ಆದರು. ಆದರೆ ಕೆಲಸದಲ್ಲಿ ಏನೂ ಮಾಡಲಿಲ್ಲ ಎನ್ನುವ ಕಾರಣಕ್ಕೆ ಕೊನೆಕೊನೆಗೆ ಹೆಸರಿಗೆ ಮಾತ್ರ ಮಂತ್ರಿಯನ್ನಾಗಿ ಮಾಡಿ ಯಾರಿಗೂ ಗೊತ್ತೆ ಇಲ್ಲದ ಖಾತೆ ಕೂಡ ನೀಡಲಾಯಿತು. ಆದರೆ ಎಲ್ಲಾ ಕಡೆ ವಿಫಲವಾದ ಸದ್ದುವನ್ನು ದೆಹಲಿಯಿಂದ ಗಂಟುಮೂಟೆ ಕಟ್ಟಿ ವಾಪಾಸು ಕಳುಹಿಸಿದ ಮೋದಿ ಅವರದ್ದೇ ಜಿಲ್ಲೆಯಿಂದ, ಅವರದ್ದೇ ಜಾತಿಯ ಶೋಭಾ ಕರಂದ್ಲಾಜೆಯವರನ್ನು ಕರೆಸಿಕೊಂಡಿದ್ದಾರೆ.
ಸದ್ದುವಿಗೆ ಹೋಲಿಸಿದರೆ ಶೋಭಾ ಕೆಲಸದಲ್ಲಿ ಜಾಣೆ. ಕೆಲಸ ಗಿಟ್ಟಿಸುವ ದಾರಿ ಮತ್ತು ಅದನ್ನು ಹುಡುಕಿಕೊಂಡು ಹೋಗುವ ತಾಕತ್ತು ಎರಡೂ ಇದೆ. ಇಲ್ಲದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಕುಗ್ರಾಮದಿಂದ ವಿಧಾನಸೌಧದ ಮೂರನೇ ಮಹಡಿಯ ತನಕ ಅವರ ಪ್ರಯಾಣ ಅಷ್ಟು ಸುಲಭದ್ದು ಆಗಿರಲಿಲ್ಲ. ಆ ನಿಟ್ಟಿನಲ್ಲಿ ರಾಜಕೀಯದಲ್ಲಿ ದೊಡ್ಡ ಸ್ಥಾನಮಾನ ಪಡೆಯುವ ಕನಸು ಕಾಣುವ ಯುವತಿಯರಿಗೆ ಆಕೆ ಒಂದು ಪ್ರೇರಣೆ ಮತ್ತು ತೆರೆದ ಪುಸ್ತಕ ಇದ್ದ ಹಾಗೆ. ಯಡ್ಡಿ ಸರಕಾರದಲ್ಲಿ ಇಂಧನದಂತಹ ಖಾತೆ ನಿರ್ವಹಿಸಿದ ಶೋಭಾ ಅವರಿಗೆ ಈಗ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಖಾತೆ ಸಿಕ್ಕಿದೆ. ಅದು ಕೃಷಿ ಮತ್ತು ರೈತರ ಕಲ್ಯಾಣ. ಇದರಲ್ಲಿ ಇವರಿಗೆ ತಲೆ ಹೋಗುವಂತಹ ಜವಾಬ್ದಾರಿ ಏನೂ ಇರುವುದಿಲ್ಲ. ಯಾಕೆಂದರೆ ಕೃಷಿಗೆ ಸಚಿವರು ಬೇರೆ ಇರುತ್ತಾರೆ. ಅವರ ಕೈಕೆಳಗೆ ಇವರು ಮಾಡುವ ಕೆಲಸ, ತೋರಿಸುವ ಶ್ರದ್ಧೆ ಮತ್ತು ಉನ್ನತ ನಾಯಕರತ್ತ ಸೆಳೆಯಬಲ್ಲ ವ್ಯಕ್ತಿತ್ವ ಮುಂದಿನ ಸಲ ಸಚಿವ ಸಂಪುಟದಲ್ಲಿ ನೇರ ದಾಖಲಾತಿಯನ್ನು ಮಾಡಬಲ್ಲದು. ಇದು ಒಂದು ರೀತಿಯಲ್ಲಿ ಟ್ರೈನಿಂಗ್ ಪಿರೀಡ್ ಇದ್ದ ಹಾಗೆ. ಒಂದು ವೇಳೆ ಇವರು ಪ್ರಯೋಗಿಸಿದ ಯಾವುದಾದರೂ ಯೋಜನೆ ವಿಫಲವಾದರೂ ನೇರವಾಗಿ ಇವರು ಜವಾಬ್ದಾರಿಯಾಗುವುದಿಲ್ಲ. ಅದೇ ಯಶಸ್ವಿಯಾದರೆ ಐಡಿಯಾ ಇವರದಂತೆ ಎಂದು ದೆಹಲಿಯ ಸಂಸತ್ತಿನ ಪಡಸಾಲೆಯಲ್ಲಿ ಅಧಿಕಾರಿಗಳು, ಪತ್ರಕರ್ತರು ಮಾತನಾಡಿಕೊಳ್ಳುತ್ತಾರೆ. ಅದು ಯಶಸ್ಸಿನ ಮೊದಲ ಮೆಟ್ಟಿಲು.
ಇವರಿಗೆ ಕೃಷಿ ರಾಜ್ಯಖಾತೆ ಸಿಕ್ಕಿರುವುದರಿಂದ ಮತ್ತು ರೈತರ ಕಲ್ಯಾಣ ಕಾರ್ಯದಂತಹ ಅವಕಾಶ ಸಿಕ್ಕಿರುವುದು ಮತ್ತೊಂದು ಅದೃಷ್ಟ ಮತ್ತು ಜವಾಬ್ದಾರಿ ಕೂಡ. ಇವರ ಒಂದೊಂದು ಯಶಸ್ವಿ ಹೆಜ್ಜೆಗಳು ನೇರವಾಗಿ ಮೋದಿಯವರ ಕಣ್ಣಿಗೆ ಬೀಳುತ್ತವೆ ಮತ್ತು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಲಿವೆ. ಈಗ ಇರುವುದು ಅವಡುಕಚ್ಚಿ ದೆಹಲಿಯಲ್ಲಿ ಕುಳಿತು ಯೋಜನೆ ರೂಪಿಸಲು ಕೃಷಿ ಸಚಿವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವುದು. ಹಾಗಂತ ಕ್ಷೇತ್ರವನ್ನು ಮರೆಯುವ ಹಾಗೆ ಕೂಡ ಇಲ್ಲ. ಈಗಾಗಲೇ ಕ್ಷೇತ್ರದಲ್ಲಿ ಅಪರೂಪ ಎನ್ನುವ ಆರೋಪಗಳ ನಡುವೆಯೇ ಈಗ ಸಿಕ್ಕಿರುವ ದೊಡ್ಡ ಹೊಣೆ ಅವರನ್ನು ಕ್ಷೇತ್ರದಿಂದ ವಿಮುಖರನ್ನಾಗಿ ಮಾಡಬಹುದು. ಆದರೆ ಮುಂದಿನ ಲೋಕಸಭಾ ಚುನಾವಣೆಯನ್ನು ಕೂಡ ಜನರು ಮೋದಿಯವರ ಮುಖ ನೋಡಿಯೇ ಮತ ಹಾಕುವುದರಿಂದ ಶೋಭಾ ಈ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯ ಇಲ್ಲ. ಶೋಭಾರಿಗೆ ಹೇಗೆ ಇಷ್ಟು ದೊಡ್ಡ ಸ್ಥಾನ ಸಿಕ್ಕಿತು ಎಂದು ಯೋಚಿಸುವ ಸಮಯ ಇದಲ್ಲ. ಹೇಗೂ ಸಿಕ್ಕಿರಬಹುದು. ಅವರು ಹಗಲು ರಾತ್ರಿ ಹಾಕಿದ ಶ್ರಮ ಮತ್ತು ಸುರಿಸಿದ ಬೆವರು ಇರಬಹುದು. ಇವರ ಕೆಲಸ ಕಂಡು ಸಂತೃಪ್ತಿಗೊಂಡವರ ಆರ್ಶೀವಾದವೂ ಇರಬಹುದು. ಇವರ ಒಳಗೆ ಆ ಕ್ಷಮತೆ ಇದೆ ಎಂದು ಗೊತ್ತಿದ್ದವರ ಕೃಪೆಯೂ ಇರಬಹುದು. ಹೀಗೆ ಹತ್ತಾರು ಕಡೆಯಿಂದ ಸ್ಕ್ಯಾನ್ ಆದ ನಂತರ ಇಂತಹ ಹೊಣೆಗಾರಿಕೆ ಸಿಗುತ್ತದೆ. ಅದನ್ನು ನಿರ್ವಹಿಸಲು ಶೋಭಾ ಮುಂದೆ ಅಂದಾಜು ಮೂರು ವರ್ಷ ಇದೆ. ಆದರೆ ಮೋದಿ ಅಷ್ಟು ಸಮಯ ನೀಡಲಿಕ್ಕಿಲ್ಲ. ಒಂದು ರೀತಿಯಲ್ಲಿ ಶೋಭಾ ಟೆಂಟ್ವಿ ಟೆಂಟ್ವಿ ಮ್ಯಾಚ್ ತರಹ ಆಡಬೇಕಿದೆ. ಸೋತರೆ ದೆಹಲಿಯಿಂದ ರಿಟರ್ನ್ ಟಿಕೆಟ್ ನೀಡಲು ಪ್ರಧಾನಿ ಸಚಿವಾಲಯ ಯಾವತ್ತೋ ತಯಾರಾಗಿ ಇರುತ್ತದೆ. ಉಳಿದದ್ದು ಶೋಭಾರಿಗೆ ಬಿಟ್ಟಿದ್ದು. ಇಲ್ಲಿಯಾದರೂ ಎಡವಿದರೆ ಕೈಹಿಡಿಯಲು ಒಬ್ಬರಾದರೂ ಇದ್ದರು. ಅಲ್ಲಿ ಯಾರೂ ಇಲ್ಲ ಎನ್ನುವುದೇ ವ್ಯತ್ಯಾಸ!!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search