• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಚಿವಸ್ಥಾನ ಅವಕಾಶ, ಹಕ್ಕಲ್ಲ ಎನ್ನುವುದು ಬಿಜೆಪಿ ಶಾಸಕರುಗಳಿಗೆ ಗೊತ್ತಿದೆಯಾ?

Tulunadu News Posted On August 3, 2021
0


0
Shares
  • Share On Facebook
  • Tweet It

ಮೋದಿ ಕೂಡ ಏಳುವರೆ ವರ್ಷಗಳಲ್ಲಿ ಕೆಲವು ಬಾರಿ ಮಂತ್ರಿಮಂಡಲ ಪುನಾರಚನೆ ಮಾಡಿದರು. ಆದರೆ ಕಳೆದುಕೊಂಡವರು, ಡಿಮೋಶನ್ ಆದವರು ಏನು ಕಿಸಕ್ ಅಂದಿಲ್ಲ. ಮಾಧ್ಯಮಗಳ ಮುಂದೆ ಬಂದು ಸವಾಲು ಹಾಕುವುದು ಬಿಡಿ, ಕೆಮ್ಮುವುದಕ್ಕೆ ಕೂಡ ಹೆದರಿ ಬಿಲ ಸೇರಿಕೊಂಡು ಬಿಟ್ಟರು. ರೈಲ್ವೆ ಸಚಿವ ಸ್ಥಾನದಂತಹ ಪ್ರಬಲ ಖಾತೆ ಸಿಕ್ಕಿದರೂ ಅದನ್ನು ನಿಭಾಯಿಸಲಾಗದೆ ಕೊನೆಕೊನೆಗೂ ಅಂಕಿಅಂಶ ಖಾತೆ ತನಕ ಬಂದು ಮುಟ್ಟಿದ್ದ ಡಿವಿಯಂತವರು ಕೂಡ ಅದೇ 32 ಹಲ್ಲುಗಳನ್ನು ತೋರಿಸಿ ದೆಹಲಿಯಿಂದ ಬೆಂಗಳೂರು ಸೇರಿಕೊಂಡು ಬಿಟ್ಟರೆ ವಿನ: ಯಾರೂ ಒಂದು ಅಕ್ಷರ ಕೂಡ ಹೊರಗೆ ಹಾಕಿಲ್ಲ. ಅದು ಮೋದಿಯವರ ನಿಜವಾದ ತಾಕತ್ತು. ಆದರೆ ಯಾಕೋ ಪ್ರಧಾನಿ ಅವರ ಘರ್ಜನೆ ದೇಶದ ಯಾವ ಮೂಲೆಯಲ್ಲಿ ಪ್ರತಿಧ್ವನಿಸಿದರೂ ಕರ್ನಾಟಕದ ವಿಷಯ ಬಂದಾಗ ಅದು ನಮ್ಮ ರಾಜ್ಯದ ಗಡಿಯೊಳಗೆ ಬರದಂತೆ ಏನಾದರೂ ಮಾಟಗೀಟ ಆಗಿದೆಯೋ ಎನ್ನುವ ಸಂಶಯ ಬರುತ್ತದೆ.
ಯಾಕೆಂದರೆ ಇಲ್ಲಿ ಭಾರತೀಯ ಜನತಾ ಪಾರ್ಟಿಯ ಯಾವುದೇ ಮುಖ್ಯಮಂತ್ರಿ ಇರಲಿ ಅವರು ಪೂರ್ಣಕಾಲೀಕವಾಗಿ ಅಧಿಕಾರ ನಡೆಸುವುದಿಲ್ಲ ಎನ್ನುವುದು ಒಂದು ಕಡೆಯಾದರೆ ಸಿಎಂ ಬದಲಾಗುತ್ತಿದ್ದಂತೆ ಸಚಿವ ಸ್ಥಾನ ಕೊಡಿ ಎಂದು ಒಂದಿಷ್ಟು ದಿನ ಧಾರಾವಾಹಿಯಂತೆ ಕೆಲವು ದಿನ ಎಳೆಯುವ ಸಂಪ್ರದಾಯ ಇದೆ. ಅದರೊಂದಿಗೆ ವಲಸೆ ಸಚಿವರು, ಸ್ವಾಮೀಜಿಗಳ ಬೆಂಬಲ ಇರುವ ಶಾಸಕರು, ಜಾತಿಯ ಬಲ ಇರುವ ಶಾಸಕರು, ಯಡ್ಡಿಯವರ ಆಪ್ತ ಶಾಸಕರು, ವಿಜ್ಜು ಆಪ್ತ ಶಾಸಕರು ಎಂದು ಹೀಗೆ ಕೆಲಸ ಮಾಡುವ ಅರ್ಹ ಶಾಸಕರುಗಳಿಗಿಂತ ಬೇರೆ ಬೇರೆ ವಶೀಲಿಬಾಜಿ ಇರುವ ಶಾಸಕರೇ ಪರಸ್ಪರ ಕಚ್ಚಾಡುತ್ತಾರೆ. ಇದರಲ್ಲಿ ತುಂಬಾ ಜನ ತಮ್ಮ ಕ್ಷೇತ್ರಗಳಿಗೆ ತಿಂಗಳುಗಟ್ಟಲೆ ಹೋಗುವುದಿಲ್ಲ. ಬೆಂಗಳೂರಿನಲ್ಲಿಯೇ ಬೀಡುಬಿಟ್ಟಿರುತ್ತಾರೆ. ಅವರಿಗೆ ತಮ್ಮ ಖಾತೆಯಲ್ಲಿ ಏನು ಅಭಿವೃದ್ಧಿ ತರಬೇಕೆನ್ನುವ ದೂರದೃಷ್ಟಿಯೇ ಇರುವುದಿಲ್ಲ. ಅವರದ್ದೇನಿದ್ದರೂ ಎಸ್ಕಾರ್ಟ್ ಗಾಡಿ, ಹೋದ ಜಿಲ್ಲೆಯಲ್ಲಿ ವಿಶೇಷ ಮರ್ಯಾದೆ ಹೀಗೆ ಇಷ್ಟರಲ್ಲಿಯೇ ಜೀವನ ಮುಗಿದಿರುತ್ತದೆ. ಅದಕ್ಕಾಗಿ ದೆಹಲಿಯಲ್ಲಿ ಬೀಡುಬಿಟ್ಟು, ಯಾರದೆಲ್ಲ ಕೈಕಾಲು ಹಿಡಿದು, ಸಚಿವ ಸ್ಥಾನ ದಕ್ಕಿಸಿಕೊಂಡು ಕ್ಷೇತ್ರದಲ್ಲಿ ಮೆರವಣಿಗೆ ಆಗುವಷ್ಟಲ್ಲಿ ಅವರ ಅಹಂ ಒಂದು ಹಂತಕ್ಕೆ ಬಂದು ತಲುಪಿರುತ್ತದೆ. ಅದರ ನಂತರ ಪುನ: ಯಾವ ಖಾತೆ ಸಿಗುತ್ತೆ, ಬಿಡುತ್ತೆ ಎನ್ನುವ ವಿಷಯದಲ್ಲಿ ಮತ್ತೆ ಕಚ್ಚಾಡಲು ಶುರು ಮಾಡುತ್ತಾರೆ. ಲೋಕೋಪಯೋಗಿ ಖಾತೆಯಿಂದ ಬೃಹತ್ ನೀರಾವರಿ ಸೇರಿಸಿ ನಗರಾಭಿವೃದ್ಧಿ ಒಳಗೊಂಡು ಕೆಲವು ಖಾತೆಗಳಿಗೆ ವಿಶೇಷವಾದ ಬೇಡಿಕೆ ಇದೆ.
ಇನ್ನು ಕೆಲವರಿಗೆ ಉಪಮುಖ್ಯಮಂತ್ರಿ ಸ್ಥಾನವೇ ಬೇಕು. ಸರಿಯಾಗಿ ನೋಡಿದರೆ ಉಪಮುಖ್ಯಮಂತ್ರಿ ಹುದ್ದೆಯಾಗಲಿ, ಜಿಲ್ಲಾ ಉಸ್ತುವಾರಿ ಸಚಿವ ಎನ್ನುವ ವಿಶೇಷಣವಾಗಲಿ ಸಾಂವಿಧಾನಿಕ ಹುದ್ದೆಗಳೇ ಅಲ್ಲ. ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿದ್ದಷ್ಟು ರಾಜ್ಯಗಳಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನೇ ಸೃಷ್ಟಿಸಿರಲಿಲ್ಲ. ಇನ್ನು ಡಿಸಿಎಂ ಆಗಲು ಕೂಡ ನೀವು ಇಂತಹುದೇ ಜಾತಿಯಲ್ಲಿ ಹುಟ್ಟಬೇಕೆನ್ನುವ ಅರ್ಹತೆ ಬೇಕು. ಎಲ್ಲಿಯ ತನಕ ಒಬ್ಬ ಶಾಸಕನಿಗೆ ಕೆಲಸ ಮಾಡುವ ಮನಸ್ಸು, ದೂರದೃಷ್ಟಿ ಹಾಗೂ ಉತ್ಸಾಹ ಇರುವುದಿಲ್ಲವೋ ಅಲ್ಲಿಯ ತನಕ ಆತ ತನ್ನ ಜಾತಿಯನ್ನೇ ನಂಬಿಕೊಂಡು ಸಚಿವಸ್ಥಾನಕ್ಕಾಗಿ ಹೋರಾಟ ನಡೆಸುತ್ತಾನೆ. ಹೀಗೆ ಎಲ್ಲರಿಗೂ ಅವರವರ ಇಚ್ಚೆಯ ಖಾತೆ ಕೊಟ್ಟು, ಪ್ರಾದೇಶಿಕ ಸಮತೋಲನವನ್ನು ಕೂಡ ಸಾಧಿಸಿ, ಅವರಿಂದ ಕೆಲಸ ತೆಗೆಸುವುದು ಅಷ್ಟು ಸುಲಭದ ಮಾತಲ್ಲ. ಇನ್ನು ಅವರಿಗೆ ಕೊಟ್ರಿ, ಇವರಿಗೆ ಕೊಟ್ರಿ ಎನ್ನುತ್ತಾ ವಿಧಾನಸೌಧದ ಹೊರಗೆ ನಿಮ್ಮದೇ ಪಕ್ಷದ ಶಾಸಕರು ಹತ್ತಾರು ಮೈಕುಗಳ ಮುಂದೆ ನಿಂತು ಬೊಬ್ಬೆ ಹಾಕುತ್ತಾ ಅದು ಮಧ್ಯಾಹ್ನ 1 ಗಂಟೆಯ ನ್ಯೂಸಿನಲ್ಲಿ ಹೆಡ್ ಲೈನ್ ಆಗಿ ಬರುತ್ತಾ ಇದ್ದರೆ ಮೂರನೆ ಮಹಡಿಯಲ್ಲಿರುವ ನಿಮಗೆ ಹೇಗೆ ತಾನೆ ಊಟ ಸೇರುತ್ತದೆ. ಇನ್ನು ಮಾಧ್ಯಮಗಳಿಗೆ ಕಾಂಗ್ರೆಸ್ ನವರು ಬಿಜೆಪಿಗೆ ಬೈದರೆ ಸುದ್ದಿಯಲ್ಲ, ಬಿಜೆಪಿಯವರೇ ಬಿಜೆಪಿಯವರನ್ನು ಬೈದರೆ ಸುದ್ದಿ.
ಅದಕ್ಕಾಗಿ ಮಾಧ್ಯಮಗಳು ಹೆಚ್ಚಾಗಿ ಇದೇ ಯತ್ನಾಳ್, ರೇಣು, ಯೋಗೀಶ್ವರ್, ವಿಶ್ವನಾಥ್ ಹಾಗೂ ವಲಸಿಗರ ಹಿಂದೆ ಮುಂದೆ ಸುತ್ತುತ್ತಾ ಇರುತ್ತವೆ. ಯಾಕೆಂದರೆ ಮಾಧ್ಯಮಗಳಿಗೆ ಗೊತ್ತು. ಜನರಿಗೆ ವಿಪಕ್ಷದ ಸಿದ್ದು, ಡಿಕೆಶಿ, ಕುಮಾರಣ್ಣ ಏನು ಹೇಳುತ್ತಾರೆ ಎನ್ನುವ ಸ್ಪಷ್ಟ ಮಾತುಗಳು ಜನರಿಗೆ ಅಗತ್ಯ ಇಲ್ಲ. ಅವರಿಗೇನಿದ್ದರೂ ಯತ್ನಾಳ್ ನಂತವರು ಯಡ್ಡಿಗೆ ಬೈಯುವುದು ಇಷ್ಟ. ಇದೆಲ್ಲವನ್ನು ಸರಿ ಮಾಡಲು ಮೋದಿ, ಶಾಗೆ ಆಗಲ್ವಾ? ಸಿಎಂ ಹಾಗೂ ಸಚಿವ ಸ್ಥಾನ ಕೇವಲ ಆಡಳಿತ ಮಾಡಲು ತಾವು ಯಾರಿಗಾದರೂ ಕೊಡುವ ಅವಕಾಶವೇ ಹೊರತು ಹಕ್ಕಲ್ಲ ಎಂದು ಮೋದಿ, ಶಾ ಹೇಳಲು ಆಗಲ್ವ? ಆಗುತ್ತೆ, ಆದರೂ ಹೇಳಲ್ಲ, ಯಾಕೆಂದರೆ ನಮ್ಮಲ್ಲಿ ಬೇರು ಬಿಟ್ಟಿರುವ ಜಾತಿ ವ್ಯವಸ್ಥೆ. ಇಲ್ಲಿ ತಮ್ಮ ಜಾತಿಯ ವ್ಯಕ್ತಿ ಏನೂ ಕೆಲಸ ಮಾಡದಿದ್ದರೂ ಪರವಾಗಿಲ್ಲ, ಆತ ಸಚಿವನಾಗಬೇಕು, ಡಿಸಿಎಂ ಆಗಬೇಕು, ಕೊನೆಗೆ ಸಿಎಂ ಆಗಬೇಕು ಎನ್ನುವ ಆಸೆ ಮಾತ್ರವೇ ಇರುತ್ತದೆ ವಿನ: ಕೊಟ್ಟರೆ ನಿಭಾಯಿಸಬಲ್ಲನಾ ಎನ್ನುವ ಭರವಸೆ ಇರುವುದಿಲ್ಲ. ಆ ನಿಟ್ಟಿನಲ್ಲಿ ಶೆಟ್ಟರ್ ಅರ್ಧ ಮನಸ್ಸಿನಲ್ಲಿ ಆದರೂ ಪರವಾಗಿಲ್ಲ, ಬೇರೆಯವರಿಗೆ ಅವಕಾಶ ನೀಡಿ ಎಂದಿದ್ದಾರೆ. ಅವರ ದಾರಿಯಲ್ಲಿ ಇತರರು ಮುನ್ನಡೆಯುವಂತಾಗಲಿ ಎನ್ನುವುದೇ ಹಾರೈಕೆ!!
0
Shares
  • Share On Facebook
  • Tweet It




Trending Now
ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
Tulunadu News March 5, 2026
ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
Tulunadu News March 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
  • Popular Posts

    • 1
      ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • 2
      ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • 3
      ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!

  • Privacy Policy
  • Contact
© Tulunadu Infomedia.

Press enter/return to begin your search