ತಮ್ಮ ರಾಜಕೀಯ ವೈರಿ ಜಮೀರುವಿಗೆ ದೊಡ್ಡ ಗೌಡ್ರು ಕೊಟ್ಟ ಶಾಕ್; ರೇಡ್!!
ಮಾಜಿ ಸಿಎಂ ಸಿದ್ಧರಾಮಯ್ಯನವರು ತಮ್ಮ ಆಪ್ತ ಜಮೀರ್ ಮನೆ, ಕಚೇರಿ ಮೇಲೆ ರೇಡ್ ಆಗುತ್ತಿದ್ದಂತೆ ಕೊಟ್ಟ ಸ್ಟೇಟ್ ಮೆಂಟ್ ಏನು ಗೊತ್ತಾ? “ಪಾಪ, ಒಂದು ಮನೆ ಕಟ್ಟಿಸಿದ್ದಾನೆ, ಅದನ್ನು ಈ ಬಿಜೆಪಿಯವರಿಗೆ ನೋಡಲಾಗದೇ ರೇಡ್ ಮಾಡಿಸಿದ್ದಾರೆ” ಎನ್ನುವ ಅರ್ಥದ ಟ್ವೀಟ್ ಮಾಡಿದ್ದಾರೆ. ಒಂದೋ ಸಿದ್ದು ಆ ಮನೆ ನೋಡಿಲ್ಲ, ಅದರ ಒಳಗೆ ಕಾಲಿಟ್ಟಿಲ್ಲ ಅಥವಾ ಅದನ್ನು ಸಿದ್ದು ಕೇವಲ ಮನೆ ಎನ್ನುವುದಾದರೆ ಅವರ ಪ್ರಕಾರ ಅರಮನೆ ಎಂದರೆ ಯಾವುದು? ಟಿವಿಯವರು ಆ ಅರಮನೆಯನ್ನು ಚಿತ್ರೀಕರಿಸಲು ಹೋದಾಗಲೇ ದಂಗಾಗಿದ್ದಾರೆ. ಈಡಿಯವರು ಶಾಕ್ ಗೆ ಒಳಗಾಗಿದ್ದಾರೆ. ಆ ಅರಮನೆ ಕಟ್ಟಲು ಮತ್ತು ಅದಕ್ಕೆ ಬಳಸಿರುವ ವಸ್ತುಗಳನ್ನು ಖರೀದಿಸಲು ಯಾವುದಾದರೂ ಖಜಾನೆ ಸಿಕ್ಕಿದರೆ ಮಾತ್ರ ಸಾಧ್ಯ. ಒಬ್ಬ ಚಾಲಕನಿಂದ ಸಚಿವನಾಗಿದ್ದವನಿಗೆ ಅದು ಸಾಧ್ಯವಿಲ್ಲ. ಒಂದೋ ಅಂತವರು ಯಾವುದಾದರೂ ಸರಕಾರಿ ಜಾಗಗಳಿಗೆ ಬೇಲಿ ಸುತ್ತಿ ಅಥವಾ ಬಡವರಿಗೆ ಸಿಕ್ಕಿದ ಸರಕಾರಿ ಜಾಗವನ್ನು ಸ್ವಲ್ಪ ಹೆಚ್ಚು ಹಣ ಕೊಟ್ಟು ಖರೀದಿಸಿರಬಹುದು. ನಂತರ ಅಲ್ಲಿ ಏನೇನೋ ಲೇಔಟ್ ಮಾಡಿ ಮಾರಿ ಕೋಟಿಗಟ್ಟಲೆ ಸಂಪಾದಿಸಿರಬಹುದು. ಇದಲ್ಲದಿದ್ದರೆ ಎಲ್ಲಿಯಾದರೂ ಬಡವರು ಆಸೆಯಿಂದ ಕಟ್ಟುತ್ತಿದ್ದ ಹಣದ ತಿಜೋರಿ ಸಿಕ್ಕಿರಬಹುದು. ಇದು ಬಿಟ್ಟು ಬೇರೆ ಯಾವ ರೀತಿಯಲ್ಲಿ ಜಮೀರ್ ಈ ಪರಿ ಹಣ ಮಾಡಿರಬಹುದು ಎನ್ನುವುದರ ತನಿಖೆ ಆಗುತ್ತಿದೆ. ಈಗ ಕೆಲವು ಅತೀ ಬುದ್ಧಿವಂತರ ಪ್ರಶ್ನೆ ಎಂದರೆ ಇದು ರಾಜಕೀಯ ಪ್ರೇರಿತ ದಾಳಿ, ಇಲ್ಲದೇ ಹೋದರೆ ಅದು ಹೇಗೆ ನೇರವಾಗಿ ಈಡಿ ರೇಡ್ ಮಾಡಿತು? ಮೊದಲಿಗೆ ಆದಾಯ ತೆರಿಗೆ ಇಲಾಖೆ ರೇಡ್ ಮಾಡಬೇಕಿತ್ತಲ್ಲ ಎನ್ನುತ್ತಾರೆ. ಒಂದು ರೀತಿಯಲ್ಲಿ ಇದು ಹೌದು. ಯಾವುದೇ ಪ್ರಕರಣದಲ್ಲಿ ಈಡಿ ನೇರವಾಗಿ ಎಲ್ಲಿಯೂ ದಾಳಿ ಮಾಡುವುದಿಲ್ಲ. ಈಡಿ ನೇರವಾಗಿ ದೂರು ಕೂಡ ಸ್ವೀಕರಿಸುವುದಿಲ್ಲ. ಆದರೆ ವಿಷಯ ಏನೆಂದರೆ ಯಾವುದೇ ನಾಗರಿಕ “ಇಂತಿಂತಹ ವ್ಯಕ್ತಿ ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದ್ದಾರೆ” ಎಂದು ದಾಖಲೆ ಸಮೇತ ಇನ್ ಕಂ ಟ್ಯಾಕ್ಸ್ ಅಧಿಕಾರಿಗಳಿಗೆ ದೂರು ಕೊಟ್ಟರೆ ಆ ಇಲಾಖೆಯವರು ಅದನ್ನು ಕೂಲಂಕುಶವಾಗಿ ಪರಿಶೀಲಿಸಿ ಇದು ಸಣ್ಣ ಪ್ರಮಾಣದ ಪ್ರಕರಣ ಅಲ್ಲ, ಮೊದಲಿಗೆ ನಾವು ರೇಡ್ ಮಾಡುವುದು, ನಂತರ ನಾವು ನಮ್ಮ ವ್ಯಾಪ್ತಿಗಿಂತ ಹೆಚ್ಚು ಆಸ್ತಿಪಾಸ್ತಿ ಇರುವ ಪ್ರಕರಣ, ನಿಮಗೆ ದಾಖಲೆ ಕೊಡುತ್ತೇವೆ, ನೀವು ಪರಿಶೀಲನೆ ಮಾಡಿ ರೇಡ್ ಮಾಡಿ ಎಂದು ಈಡಿಯನ್ನು ವಿನಂತಿಸಿಕೊಳ್ಳುವ ತನಕ ಆರೋಪಿಗೆ ನುಸುಳಲು ಸಮಯ ಕೊಟ್ಟ ಹಾಗೆ ಆಗುತ್ತೆ ಎನ್ನುವ ಕಾರಣಕ್ಕೆ ನೇರವಾಗಿ ಫೈಲ್ಸ್ ಈಡಿಗೆ ಹಸ್ತಾಂತರಿಸಬಹುದು. ಆಗ ಈಡಿ ರೇಡ್ ಮಾಡುವಾಗ ಸಿಬಿಐ ಅಧಿಕಾರಿಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ರೇಡ್ ಮಾಡುತ್ತದೆ. ಇದು ಮುಂದೆ ಪ್ರಕರಣ ಸಿಬಿಐಗೆ ತನಿಖೆ ಮಾಡಲು ಅವಕಾಶ ನೀಡುತ್ತದೆ. ಇಲ್ಲದಿದ್ದರೆ ಒಂದು ವೇಳೆ ಈ ಪ್ರಕರಣ ಸಿಬಿಐ ತನಿಖೆಗೆ ಹೋದರೆ ಮತ್ತೆ ಅವರು ಪ್ರತ್ಯೇಕ ವಿಚಾರಣೆ ಮಾಡಲು ಅನುಕೂಲವಾಗುತ್ತದೆ. ಆದ್ದರಿಂದ ಆದಾಯಕರ ಇಲಾಖೆಯವರು ಮೊದಲ ರೇಡ್ ಮಾಡಿ ನಂತರ ಈಡಿಯವರು ಮಾಡಬೇಕು ಎನ್ನುವುದು ಇಲ್ಲಿಯ ತನಕ ನಡೆದುಕೊಂಡ ಸಂಪ್ರದಾಯವೇ ವಿನ: ಇಲ್ಲಿ ಆರೋಪಿಗೆ ಶಿಕ್ಷೆ ಆಗಲೇಬೇಕು ಎನ್ನುವುದಾದರೆ ಸಂಪ್ರದಾಯಕ್ಕಿಂತ ಪ್ರಾಕ್ಟಿಕಲ್ ಆಗಿ ಹೋಗುವುದು ಮುಖ್ಯ. ಅಷ್ಟಕ್ಕೂ ಜಮೀರು ತಮ್ಮ ಆಸ್ತಿ ಕಾನೂನುಬದ್ಧವಾಗಿದೆ ಎಂದು ದಾಖಲೆ ಕೊಟ್ಟರೆ ಅದರಿಂದ ಅವರಿಗೆ ತೊಂದರೆ ಏನಿಲ್ಲ. ಇನ್ನು ಇದೇ ಸಮಯದಲ್ಲಿ ಮಾಜಿ ಸಚಿವ ರೋಶನ್ ಬೇಗ್ ಮೇಲೆಯೂ ರೇಡ್ ಆಗಿರುವುದರಿಂದ ಇದು ನೇರವಾಗಿ ಐಎಂಎಗೆ ಸಂಬಂಧಪಟ್ಟ ದಾಳಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಇನ್ನು ಇಂತಹ ದಾಳಿಗಳ ನಂತರ ಆರೋಪಿಯ ಅಪರಾಧ ಸಾಬೀತಾಗಿ ಅವರ ಹೆಚ್ಚುವರಿ ಆಸ್ತಿಪಾಸ್ತಿಯನ್ನು ಇಲಾಖೆ ವಶಪಡಿಸಿಕೊಂಡರೆ ಅದು ನಿಜವಾದ ಜಯ. ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಒಂದಿಷ್ಟು ದಿನ ವಿಚಾರಣೆ ಎದುರಿಸಿ, ಅಪರೂಪಕ್ಕೊಮ್ಮೆ ಕೆಲವು ವಾರ ಜೈಲಿನಲ್ಲಿದ್ದು ನಂತರ ಆರಾಮವಾಗಿ ಹೊರಗೆ ಬಂದು ಮತ್ತೆ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾನ್ಯರ ಕಣ್ಣಿಗೆ ಇವರು ಮಾಡಿದ ದುಡ್ಡು ಯಾರದ್ದೋ ತಲೆ ಹೊಡೆದದ್ದು ಎನ್ನುವುದು ಕಣ್ಣಿಗೆ ಕಾಣುವಂತಿದ್ದರೂ ಅನೇಕ ಬಾರಿ ಅದು ದಾಖಲೆಗಳ ಮೂಲಕ ಸಾಬೀತಾಗುವುದಿಲ್ಲ. ಇನ್ನು ಜಮೀರ್ ನಂತವರಿಗೆ ಎಲ್ಲಾ ಪಕ್ಷಗಳಲ್ಲಿ ಕೂಡ ಗೆಳೆಯರಿದ್ದಾರೆ ಅಷ್ಟೇ ಶತ್ರುಗಳೂ ಇದ್ದಾರೆ. ತಮ್ಮ ರಾಜಕೀಯ ಜೀವನ ಜಾತ್ಯಾತೀತ ಜನತಾದಳದಿಂದ ಆರಂಭಿಸಿ ನಂತರ ಜೆಡಿಎಸ್ ಗೆ ಐನಾತಿ ಸಮಯದಲ್ಲಿ ಕೈಕೊಟ್ಟು ಕಾಂಗ್ರೆಸ್ಸಿಗೆ ಸೇರಿರುವುದರಿಂದ ದೊಡ್ಡ ಗೌಡ್ರಿಗೆ ಇವರು ವಿರೋಧಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಯಾಕೆಂದರೆ ಜಮೀರುವಿನಿಂದ ಮಗನೂ ಹಾಳಾದ ಅದರೊಂದಿಗೆ ಪಕ್ಷಕ್ಕೂ ಡ್ಯಾಮೇಜ್ ಆಯಿತು ಎನ್ನುವುದು ಪದ್ಮನಾಭನಗರದ ರಾಜಕೀಯ ಮಾಂತ್ರಿಕನ ಮನದಾಳದ ಮಾತು. ಆದ್ದರಿಂದ ತಮ್ಮನ್ನು ಭೇಟಿಯಾಗಲು ಬಂದ ಸಿಎಂ ಎದುರು ಬಿಬಿಎಂಪಿ ಚುನಾವಣೆಯ ಮೊದಲೇ ಜಮೀರುವನ್ನು ಕಟ್ಟಿ ಹಾಕಿ, ಇಬ್ಬರಿಗೂ ಸುಲಭ ಎಂದಿರುವ ಸಾಧ್ಯತೆ ಇದೆ. ಹಾಗಂತ ಜಮೀರು ಯಡ್ಡಿ ಹಾಗೂ ಬಸ್ಸುವಿಗೆ ದೂರ ಏನಲ್ಲ. ಯಡ್ಡಿ ಇಳಿಯುವ ಮೊದಲು ಜಮೀರುವಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಬಸ್ಸು ಬೊಮ್ಮಾಯಿ ಆಗ ಗೃಹ ಸಚಿವರಾಗಿದ್ದಾಗ ಪಾದರಾಯನಪುರ ದೊಂಬಿಯಲ್ಲಿ ಇದೇ ಜಮೀರುವನ್ನು ಹಗ್ಗ ಕಟ್ಟಿ ಏರಿಸಬಹುದಾಗಿದ್ದರೂ ಏನೂ ಮಾಡಿರಲಿಲ್ಲ. ಒಟ್ಟಿನಲ್ಲಿ ತಮ್ಮ ಪಾಳಯದ ವ್ಯಕ್ತಿ ಸಿಎಂ ಆಗಿರುವುದರಿಂದ ಸಿಕ್ಕಿದ್ದೇ ಚಾನ್ಸ್ ಎಂದು ಮುಸ್ಲಿಮರ ಅನಭಿಷೇಕ್ತ ದೊರೆಯಾಗಲು ಹೊರಟ್ಟಿದ್ದ ಜಮೀರುವಿಗೆ ದೊಡ್ಡ ಗೌಡರು ಆಡಿರುವ ಆಟ ಸಿದ್ದುವಿಗೆ ಶಾಕ್ ಕೊಟ್ಟಿದೆ, ಡಿಕೆಶಿ ಥ್ರಿಲ್ ಆಗಿದ್ದಾರೆ!
Leave A Reply