• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸೇವಾಂಜಲಿ ಹಾಗೂ ನನ್ನ ಮೇಲೆ ಮಾಜಿ ಶಾಸಕರ ಕೋಪ ಯಾಕೋ??

Hanumantha Kamath Posted On August 13, 2021


  • Share On Facebook
  • Tweet It

ಯಾವುದಾದರೂ ಪಾಲಿಕೆ ಸದಸ್ಯ ಅಥವಾ ಸದಸ್ಯಳಿಗೆ ಗುಟ್ಟಿನಲ್ಲಿ ಕೇಳಿ ನೋಡಿ “ವಾರ್ಡ್ ಕಮಿಟಿ ಆಗಬೇಕಾ?” ಪಕ್ಷಾತೀತವಾಗಿ ಬೇಡಾ ಎಂದೇ ಹೇಳುತ್ತಾರೆ. ಯಾಕೆಂದರೆ ಯಾವ ಕಾರ್ಪೋರೇಟರ್ ಗೂ ತನ್ನ ಮೇಲೆ ಒಂದು ಅಂಕುಶ ಇರುವುದು ಇಷ್ಟವಿಲ್ಲ. ವಾರ್ಡ್ ಕಮಿಟಿ ಎಂದರೆ ಅದರ ಸದಸ್ಯರೆಲ್ಲರ ಅಭಿಪ್ರಾಯ ಕೇಳಿ ಕೆಲಸ ಅನುಷ್ಟಾನಕ್ಕೆ ತರುವುದು. ಈಗ ಏನಾಗುತ್ತಿದೆ ಎಂದರೆ ವಾರ್ಡಿನಲ್ಲಿ ತನಗೆ ಮತ ಕೊಟ್ಟವರ ಏರಿಯಾ ಅಭಿವೃದ್ಧಿ ಮಾಡುವುದು, ಅದರಲ್ಲಿ ಕಮೀಷನ್ ಹೊಡೆಯುವುದು ನಡೆಯುತ್ತಾ ಬಂದಿರುತ್ತದೆ. ವಾರ್ಡ್ ಕಮಿಟಿ ಆದರೆ ಅದರಲ್ಲಿ ಸದಸ್ಯರಾದವರು ಗುತ್ತಿಗೆದಾರರ ಮೂಗು ಹಿಡಿದು ಕೆಲಸ ಮಾಡಿಸುತ್ತಾರೆ. ಅದರಿಂದ ಅವನು ಯಾರಿಗೆ ಎಷ್ಟು ಕೊಡಬೇಕೋ ಅಷ್ಟು ಕೊಡಲು ಹಿಂದೆ ಮುಂದೆ ನೋಡುತ್ತಾನೆ. ಕಾರ್ಪೋರೇಟರ್ ಆಗುವುದು ಲಾಭದಾಯಕ ಉದ್ಯೋಗ ಅಲ್ಲ ಎಂದು ಒಂದು ಪೀಳಿಗೆಗೆ ಅನಿಸಿದರೆ ನಂತರ ನಿಜವಾದ ಅರ್ಥದಲ್ಲಿ ಸಮಾಜಸೇವೆಯಲ್ಲಿ ತೊಡಗುವವರು ಮಾತ್ರ ಕಾರ್ಪೋರೇಟರ್ ಚುನಾವಣೆಗೆ ನಿಲ್ಲುತ್ತಾರೆ. ಅಷ್ಟು ಹೇಳಿದ ನಂತರ ನಾಳೆ ವಾರ್ಡ್ ಕಮಿಟಿ ಆದ ಕೂಡಲೇ ನಿಮ್ಮ ವಾರ್ಡಿನಲ್ಲಿ ಸ್ವರ್ಗ ಧರೆಗೆ ಇಳಿಯುತ್ತದೆ ಎಂದು ಅಂದುಕೊಳ್ಳಲೇಬೇಡಿ. ವಾರ್ಡ್ ಕಮಿಟಿ ಚಾಪೆ ಕೆಳಗೆ ನುಗ್ಗಿದರೆ ಕಾರ್ಪೋರೇಟರ್ ಗಳು ರಂಗೋಲಿ ಕೆಳಗೆ ನುಗ್ಗುತ್ತಾರೆ. ಈಗ ಬಂದಿರುವ ತಾಜಾ ವಿವಾದ ಎಂದರೆ ವಾರ್ಡ್ ಕಮಿಟಿಗಳಲ್ಲಿ ಆಡಳಿತ ಪಕ್ಷ ಅಂದರೆ ಭಾರತೀಯ ಜನತಾ ಪಾರ್ಟಿಯ ಬೆಂಬಲಿಗರೇ ತುಂಬಿದ್ದಾರೆ ಎನ್ನುವುದು. ಇಂತಹ ಆರೋಪ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಹಿಂದಿನ ಶಾಸಕರು. ಅವರು ಹೇಳುತ್ತಿರುವ ಇನ್ನೊಂದು ವಿಷಯ ಎಂದರೆ ವಾರ್ಡ್ ಕಮಿಟಿಯೊಂದರಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಕೂಡ ಸೇರಿದೆ. ಹನುಮಂತ ಕಾಮತ್ ಕೂಡ ಸೇರಿದ್ದಾರೆ. ಮಾಜಿಯಾಗಿರುವ ಆ ಶಾಸಕರಿಗೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವಾರ್ಡ್ ಕಮಿಟಿಯಲ್ಲಿ ಸೇರಿದ ಬಗ್ಗೆ, ನನ್ನ ಬಗ್ಗೆ ಅಸಮಾಧಾನ ಇದ್ದರೆ ಆ ಬಗ್ಗೆ ಪಾಲಿಕೆಯಲ್ಲಿ ಎರಡು ವಾರದ ಒಳಗೆ ಆಕ್ಷೇಪಣೆ ಸಲ್ಲಿಸಬಹುದು. ಆದರೆ ಒಂದು ವಿಷಯ ಅವರಿಗೆ ತಿಳಿಸಲು ಬಯಸುತ್ತೇನೆ. ಅದೇನೆಂದರೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಬಗ್ಗೆ ನಿಮಗೆ ಯಾಕೆ ಕೆಂಗಣ್ಣು ಎಂದರೆ ಅದು ಈಗಿನ ಶಾಸಕ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಸೇವೆ ಸಲ್ಲಿಸುತ್ತಿದೆ ಎನ್ನುವ ಕಾರಣಕ್ಕೆ ಮಾತ್ರ. ಸೇವಾಂಜಲಿ ಟ್ರಸ್ಟ್ ವೇದವ್ಯಾಸ ಕಾಮತ್ ಶಾಸಕರಾದ ನಂತರ ಹುಟ್ಟಿದ್ದಲ್ಲ ಅಥವಾ ಅವರು ಶಾಸಕರಾಗಲು ಹೊರಟ ನಂತರ ಹುಟ್ಟಿದ್ದಲ್ಲ. ಸೇವಾಂಜಲಿ 20 ವರ್ಷಗಳ ಹಿಂದೆ ಜನ್ಮ ತಾಳಿದಾಗ ವೇದವ್ಯಾಸ ಕಾಮತ್ ಶಾಸಕ ಬಿಡಿ, ಚುನಾವಣೆ, ರಾಜಕೀಯ ಹೀಗೆ ಯಾವುದೇ ಆಸೆ, ಗುರಿ ಇಟ್ಟುಕೊಂಡವರೇ ಅಲ್ಲ. ಸಮಾನ ಮನಸ್ಕ ಹುಡುಗರು ಸೇರಿ ಸಮಾಜ ಸೇವೆಯ ಗುರಿಯಿಟ್ಟು ಜನ್ಮ ನೀಡಿದ ಟ್ರಸ್ಟ್ ಇತ್ತೀಚೆಗೆ ಲಾಕ್ ಡೌನ್ ಅವಧಿಯಲ್ಲಿ ಎರಡು ವರ್ಷ ಮಾಡಿದ ಕೆಲಸವನ್ನು ನಾನು ಇವತ್ತು ಪುನ: ಬರೆಯುವ ಅಗತ್ಯ ಇಲ್ಲ. ಈ ಟ್ರಸ್ಟ್ ವಾರ್ಡ್ ಕಮಿಟಿಯಲ್ಲಿ ಸೇರಿದರೆ ವಾರ್ಡ್ ಕಮಿಟಿಗೆ ಗೌರವ ಹೆಚ್ಚಾಗುತ್ತದೆ ವಿನ: ಸೇವಾಂಜಲಿಗೆ ವಿಶೇಷ ಕೊಂಬು ಬರುವುದಿಲ್ಲ.
ಇನ್ನು ನನ್ನ ವಿಷಯವನ್ನು ಕೂಡ ಕಾಂಗ್ರೆಸ್ಸಿಗರು, ಮಾಜಿ ಶಾಸಕರು ಎತ್ತಿದ್ದಾರೆ. ನನ್ನ ಹೆಸರಿನ ಬಗ್ಗೆ ಅವರಿಗೆ ಆಕ್ಷೇಪ ಯಾಕಿದೆಯೋ ಅವರೇ ಬಿಡಿಸಿ ಹೇಳಬೇಕು. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನಲ್ಲಿ ನಾನು ಇದ್ದೇನೆ ಎನ್ನುವುದೇ ಅವರ ಆಕ್ಷೇಪ ಎನ್ನುವುದಾದರೆ ನಾನು ಅದರಲ್ಲಿ ಮಾತ್ರ ಇರುವುದಲ್ಲ. ನಾನು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷನಾಗಿದ್ದೇನೆ. ನನ್ನ ಕೈಲಾಗುವ ಬೇರೆ ಬೇರೆ ರೂಪದ ಸಹಾಯವನ್ನು ಸಮಾಜದ ನೊಂದ, ಅಸಹಾಯಕರ ಪರವಾಗಿ ಮಾಡುತ್ತಾ ಬಂದಿದ್ದೇನೆ. ಒಂದು ಸಹಾಯ ಮಾಡಿದ ಕೂಡಲೇ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವ ಹಪಾಹಪಿ ನನಗೆ ಇಲ್ಲ. ನನ್ನಿಂದ ಸಹಾಯ ಪಡೆದವರು ಹರಸಿದರೆ ನನಗೆ ಅಷ್ಟೇ ಸಾಕು. ಇನ್ನು ನಾನು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ಕೂಡ. ಅದರಲ್ಲಿ ಕೂಡ ಪ್ರಭಾವಿ ಅಧಿಕಾರಿಗಳ ವಿರುದ್ಧ ಬಡಿದಾಡಿದ್ದೇನೆ. ನಮ್ಮ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅದು ಕಮಿಟಿಯಲ್ಲಿರುವವರಿಗೆ ಗೊತ್ತು. ಮಾಜಿ ಶಾಸಕರಿಗೆ ನಾನು ಹೇಳಬೇಕಾಗಿಲ್ಲ. ಇನ್ನು ನಾನು ಯಾವುದೇ ಪಕ್ಷದ 5 ರೂಪಾಯಿ ಸದಸ್ಯನಲ್ಲ. ಇವತ್ತಿಗೂ ಬಿಜೆಪಿ, ಕಾಂಗ್ರೆಸ್ ಯಾವ ಪಕ್ಷ ತಪ್ಪು ಮಾಡಿದರೂ ಅದನ್ನು ಖಂಡಾತುಂಡವಾಗಿ ಟಿವಿ ನೇರಪ್ರಸಾರದಲ್ಲಿ ಜಾಡಿಸಿದ್ದೇನೆ. ಅದರಿಂದ ಎಷ್ಟೋ ಬಿಜೆಪಿಗರ ಕೋಪವನ್ನು ಕೂಡ ನೋಡಿದ್ದೇನೆ. ಇಷ್ಟೆಲ್ಲ ಇದ್ದು ಕೂಡ ಕಾಂಗ್ರೆಸ್ಸಿನ ಮಾಜಿ ಶಾಸಕರು ನಾನು ಬಿಜೆಪಿಯವನು ಎನ್ನುತ್ತಾರೆ ಎಂದರೆ ಸೋಲಿನ ನೋವಿನಿಂದ ಅವರು ಹೊರಗೆ ಬಂದಿಲ್ಲ ಎಂದೇ ಅರ್ಥ.
ಇನ್ನು ವಾರ್ಡ್ ಕಮಿಟಿಯನ್ನು ಹೇಗಾದರೂ ಮಾಡಿ ಮುಂದಿನ ಚುನಾವಣೆಯ ತನಕ ಅನುಷ್ಟಾನಕ್ಕೆ ತರದಂತೆ ದಿನ ದೂಡಬೇಕು ಎಂದು ಕಾಂಗ್ರೆಸ್ ಮಾಜಿ ಶಾಸಕರ, ಬಾವಿ ಅಭ್ಯರ್ಥಿಗಳ ಆಶಯ. ಅವರಿಗೆ ಗೊತ್ತು, ಇದು ಜಾರಿಯಾದರೆ ನಂತರ ಬಿಜೆಪಿಯನ್ನು ಹಿಡಿಯಲು ಕಷ್ಟ. ಅದಕ್ಕಾಗಿ ಒಳಗೊಳಗೆ ಒಪ್ಪಂದ ಮಾಡಿಕೊಂಡ ಕಾಂಗ್ರೆಸ್, ಬಿಜೆಪಿ ಕಾರ್ಪೋರೇಟರ್ಸ್ ನಿಮ್ಮ ವಾರ್ಡಿನ ಪಟ್ಟಿಗೆ ನಾವು ಆಕ್ಷೇಪ ಎತ್ತಲ್ಲ, ನಮ್ಮ ವಾರ್ಡ್ ಪಟ್ಟಿಗೆ ನೀವು ಆಕ್ಷೇಪ ಎತ್ತಬೇಡಿ ಎಂದು ಅಲಿಖಿತ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ರಂಗ ಪ್ರವೇಶ ಮಾಡಿದ ಮಾಜಿ ಶಾಸಕರು ಹಾಲಿನಲ್ಲಿ ಹುಳಿ ಹಿಂಡಿದ್ದಾರೆ. ಇವರು ಯಾಕ್ರೀ ಪ್ರೆಸ್ ಮೀಟ್ ಮಾಡಲು ಹೋದದ್ದು ಎಂದು ಅವರದ್ದೇ ಪಕ್ಷದ ಕಾರ್ಪೋರೇಟರ್ಸ್ ಹಿಡಿಶಾಪ ಹಾಕುತ್ತಿದ್ದಾರೆ. ಪಾಲಿಕೆ ಅಂಗಳ ನಗುತ್ತಿದೆ!!
  • Share On Facebook
  • Tweet It


- Advertisement -


Trending Now
ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
Hanumantha Kamath July 5, 2022
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Hanumantha Kamath July 4, 2022
Leave A Reply

  • Recent Posts

    • ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
  • Popular Posts

    • 1
      ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • 2
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 3
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 4
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 5
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search