• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮುಸ್ಲಿಮ್ ವಲಸಿಗರನ್ನು ಮುಸ್ಲಿಂ ರಾಷ್ಟ್ರಗಳೇ ಒಳಗೆ ಬಿಡುತ್ತಿಲ್ಲ!!

Tulunadu News Posted On August 27, 2021
0


0
Shares
  • Share On Facebook
  • Tweet It

ತಾಲಿಬಾನ್ ನಲ್ಲಿ ಈ ತಿಂಗಳ ಅಂತ್ಯದ ತನಕ ಅಮೇರಿಕಾ ಸೈನ್ಯ ಇರುತ್ತದೆ. ಅದರ ನಂತರ ಕಾಬೂಲ್ ವಿಮಾನ ನಿಲ್ದಾಣ ಕೂಡ ತಾಲಿಬಾನಿಗಳ ಸುಪರ್ದಿಗೆ ಬರಲಿದೆ. ಅಲ್ಲಿಗೆ ಅಪಘಾನಿಸ್ತಾನದಿಂದ ಹೊರ ಓಡಲು ಬಯಸುತ್ತಿರುವ ಅಷ್ಟು ನಾಗರಿಕರ ಭರವಸೆಯ ಕೊನೆಯ ಬಾಗಿಲು ಕೂಡ ಮುಚ್ಚಿದಂತಾಗುತ್ತದೆ. ಅಷ್ಟಕ್ಕೂ ಅಪಘಾನಿಸ್ತಾನದಲ್ಲಿರುವ ಜನ ಅಲ್ಲಿಂದ ಓಡಿ ಹೋಗಲು ಬಯಸುತ್ತಿರುವುದೇಕೆ ಎನ್ನುವುದೇ ಮೊದಲ ಪ್ರಶ್ನೆ. ಅವರು ಒಂದು ವೇಳೆ ಓಡಿ ಹೋಗುವುದೇ ಆದರೆ ಅವರಿಗೆ ಯಾಕೆ ಬೇರೆ ಕರ್ಮಠ ಮುಸ್ಲಿಂ ರಾಷ್ಟ್ರಗಳು ಒಳಗೆ ಸೇರಿಸಲು ಬಯಸಲ್ಲ ಎನ್ನುವುದು ಎರಡನೇ ಪ್ರಶ್ನೆ. ಈಗ ಒಂದು ರಾಷ್ಟ್ರದ ಜನ ತಮ್ಮ ದೇಶದಿಂದ ಓಡಿ ಹೋಗಲು ಇರುವ ಮುಖ್ಯ ಕಾರಣ ಆ ದೇಶದಲ್ಲಿ ಬದಲಾಗುತ್ತಿರುವ ಆಡಳಿತ ವೈಖರಿ ಧರ್ಮದ ಆಧಾರದ ಮೇಲೆ ಇರುವುದರಿಂದ ಬೇರೆ ಧರ್ಮದವರಿಗೆ ಕಷ್ಟವಿದೆ ಎನ್ನುವ ಕಾರಣಕ್ಕೆ ಆ ದೇಶ ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಇದನ್ನು ಜೆಡಿಎಸ್ ನ ದೇವೆಗೌಡರಿಂದ ಹಿಡಿದು ಅಮೀರ್ ಖಾನ್ ವಿಚ್ಚೇದಿತ ಪತ್ನಿ ಕಿರಣ್ ರಾವ್ ತನಕ ಅನೇಕರು ಹೇಳಿದ್ದರು. ಮೋದಿ ಪ್ರಧಾನಿಯಾದರೆ ತಾವು ದೇಶ ಬಿಟ್ಟು ಹೋಗುತ್ತೇವೆ ಎಂದು ದೊಡ್ಡ ಗೌಡ್ರು ಹೇಳಿದ ನಂತರ ನಡೆದುಕೊಂಡ್ರಾ ಎಂದು ನೋಡಿದ್ರೆ ಇಲ್ಲವೇ ಇಲ್ಲ, ದೇವೆಗೌಡರನ್ನು ಪಕ್ಕದಲ್ಲಿ ಕುಳ್ಳಿರಿಸಿ ಮೋದಿ ” ಕ್ಯಾ, ಗೋಡಾಜಿ ಕೈಸೆ ಹೇ” ಎಂದು ಹೇಳುವಲ್ಲಿಗೆ ಗೌಡ್ರರ ಕೋಪ ತಣ್ಣಗಾಗಿತ್ತು. ಮೋದಿ ಎರಡು ಸಲ ಪ್ರಧಾನಿಯಾದರು. ಗೌಡರು ಈಗಲೂ ದೇಶ ಬಿಡಿ, ಮನೆ ಕೂಡ ಬದಲಾಯಿಸಿಲ್ಲ. ಇನ್ನೊಂದು ಆಯಾಮ ಎಂದರೆ ಶಾರುಖ್ ಖಾನ್ ಹಾಗೂ ಅಮೀರ್ ಖಾನ್ ನಂತವರು ತಮಗೆ ಭಾರತದಲ್ಲಿ ವಾಸಿಸಲು ಕಷ್ಟವಾಗುತ್ತಿದೆ ಎಂದು ಬೊಗಳೆ ಬಿಟ್ಟಿದ್ದು. ಆದರೆ ಯಾರೂ ಕೂಡ ಭಾರತವನ್ನು ಬಿಟ್ಟು ಹೋಗಿಲ್ಲ. ಈ ಖಾನ್ ಗಳಿಗೆ ಹೆದರಿಕೆ ಇದ್ದದ್ದು ಯಾಕೆಂದು ನಿಮಗೆ ಗೊತ್ತೆ ಇದೆ. ಆದರೆ ಅಪಘಾನಿಸ್ತಾನದಲ್ಲಿ ಏನಾಗಿದೆ. ಮುಸ್ಲಿಂ ಆಡಳಿತವೇ ಇತ್ತು. ಹೋಗಲಿ, ಕಟ್ಟರ್ ಹಿಂದೂಗಳ ಆಡಳಿತ ಬಂತಾ ಎಂದು ನೋಡಿದರೆ ಇಲ್ಲ ಮತ್ತೆ ಮುಸ್ಲಿಮರ ಆಡಳಿತವೇ ಬಂದಿದೆ. ಹಾಗಾದರೆ ಅಲ್ಲಿನವರಿಗೆ ಹೆದರಿಕೆ ಯಾಕೆ? ಆದರೂ ಓಡಿಹೋಗುತ್ತಿದ್ದಾರೆ. ಆದರೆ ಮುಸ್ಲಿಂ ರಾಷ್ಟ್ರವೊಂದರಿಂದ ಓಡಿ ಬರುತ್ತಿರುವ ಅಷ್ಟೂ ಮುಸಲ್ಮಾನರನ್ನು ಸ್ವೀಕರಿಸಿ ಪ್ರಪಂಚದ ಯಾವುದೇ ಮುಸ್ಲಿಂ ದೇಶಗಳು ಕೂಡ ತಯಾರಾಗಿಲ್ಲ. ಈಗ ಅಪಘಾನಿಸ್ತಾನ ಮತ್ತು ಪಾಕಿಸ್ತಾನ ಮೇಲ್ನೋಟಕ್ಕೆ ಗೆಳೆಯರಂತೆ ಕಂಡರೂ ಪಾಕಿಸ್ತಾನ ಕೂಡ ಅಪಘಾನಿಗಳನ್ನು ತನ್ನ ದೇಶದೊಳಗೆ ಸೇರಿಸಲು ಒಪ್ಪುತ್ತಿಲ್ಲ. ಅಷ್ಟಕ್ಕೂ ನೀವೆ ಗಮನಿಸಿ, ಅಕ್ಕಪಕ್ಕದ ಎರಡು ಮುಸ್ಲಿಂ ರಾಷ್ಟ್ರಗಳಲ್ಲಿ ಎಷ್ಟು ವ್ಯತ್ಯಾಸವಿದೆ. ಅಪಘಾನಿಸ್ತಾನದಲ್ಲಿ ಮಹಿಳೆಯರು ರಾಜಕಾರಣಿಗಳಾಗುವುದು ಬಿಡಿ, ಮತ ಹಾಕಲು ಅನುಮತಿ ಇಲ್ಲ. ಮತ ಬಿಡಿ, ಹೊರಗೆ ಬರುವುದು ಕೂಡ ಕಷ್ಟ ಸಾಧ್ಯ. ಆದರೆ ಅಷ್ಟೇ ಮೂಲಭೂತವಾದಿ ರಾಷ್ಟ್ರ ಪಾಕಿಸ್ತಾನದಲ್ಲಿ ಮಹಿಳಾ ರಾಜಕಾರಣಿಗಳು ಆಳಿ ಹೋಗಿದ್ದಾರೆ. ಉದಾಹರಣೆಗೆ ಬೆನಝೀರ್ ಬುಟ್ಟೋ. ಅಷ್ಟೇ ಅಲ್ಲ ಪಾಕಿಸ್ತಾನದ ಮಹಿಳಾ ರಾಜಕಾರಣಿಗಳ ಪಟ್ಟಿಯನ್ನೇ ಮಾಡಬಹುದು. ಸುಮೈರಾ ಮಲೀಕ್, ಹೀನಾ ರುಬಾನಿ ಖಾರ್, ಕಶ್ಮಲಾ ತಾರೀಖ್, ಅಲಿಝಾ ಇಕ್ಬಾಲ್ ಹೈದರ್, ಐಲಾ ಮಲ್ಲಿಕ್, ಹೀನಾ ಪರ್ವೇಜ್ ಭಟ್, ಮರಿಯಂ ನವಾಝ್ ಹೀಗೆ ಒಂದಕ್ಕಿಂತ ಒಂದು ಅಪ್ಸರೆಯರು ಪಾಕಿಸ್ತಾನದಲ್ಲಿ ಗಂಡಸರ ಸಮಬಲದಲ್ಲಿ ನಿಂತು ರಾಜಕೀಯ ಮಾಡಿದ್ದಾರೆ. ಹೀನಾ ಅವರ ವಿದೇಶಾಂಗ ಸಚಿವೆಯೂ ಆಗಿದ್ದರು.
ಆದರೆ ಅಪಘಾನಿಸ್ತಾನದಲ್ಲಿ ತಾಲಿಬಾನಿಗಳು ಮಹಿಳೆಯರು ದೇಹದ ಒಂದು ಎಳೆಯೂ ಕಾಣದಂತೆ ಬುರ್ಖಾ ಧರಿಸಬೇಕು ಮತ್ತು ಅನಿವಾರ್ಯವಾಗಿ ಹೊರಗೆ ಬಂದರೂ ಒಬ್ಬ ಪುರುಷನೊಂದಿಗೆ ಹೋಗಬೇಕು ಎಂದು ನಿಯಮ ಮಾಡಿದ್ದಾರೆ. ಅಷ್ಟೇ ಆಗಿದ್ದರೂ ಒಂದು ವೇಳೆ ಮಹಿಳೆಯರು ಅಲ್ಲಿ ವಾಸಿಸಲು ಗಟ್ಟಿ ಮನಸ್ಸು ಮಾಡಿ ಒಪ್ಪುತ್ತಿದ್ದರೇನೋ. ಆದರೆ ತಾಲಿಬಾನಿಗಳು ಪ್ರತಿ ಮನೆಯನ್ನು ಹುಡುಕಿ ಹುಡುಕಿ ಯುವತಿಯರನ್ನು ಎಳೆದುಕೊಂಡು ಹೋಗುತ್ತಿದ್ದಾರೆ. ಮನೆಯ ಟಾಯ್ಲೆಟಿನಲ್ಲಿ ಅಡಗಿಕೊಳ್ಳಬೇಕಾದ ಅನಿವಾರ್ಯ ಕರ್ಮಕ್ಕಿಂತ ಎಲ್ಲಿಯಾದರೂ ಬೇಡಿಯಾದರೂ ತಿನ್ನುತ್ತೇವೆ ಎಂದು ಅವರು ಓಡಿ ಹೋಗಲು ತಯಾರಾಗಿದ್ದಾರೆ. ಹಾಗಂತ ಎಲ್ಲಿ, ಪಾಕಿಸ್ತಾನ, ಟರ್ಕಿ, ಅರಬ್ ರಾಷ್ಟ್ರಗಳು ಎಲ್ಲಿಯೂ ಆಶ್ರಯ ಸಿಗುತ್ತಿಲ್ಲ. ನಮ್ಮನ್ನು ಕಾಫೀರರು ಎಂದು ಹೇಳುವ ಇವರುಗಳು ಈಗ ನಮ್ಮ ದೇಶಕ್ಕೆ ಬಂದು ನೆಲೆಸಲು ಆಸೆಪಡುತ್ತಿದ್ದಾರೆ. ಹಾಗಂತ ಬರಲಿ ಬಿಡೋಣ ಎಂದುಕೊಂಡು ದೊಡ್ಡ ಮನಸ್ಸು ಮಾಡಿದರೆ ಕೆಲವೇ ವರ್ಷಗಳಲ್ಲಿ ಇವರು ಇದು ನಮ್ಮದೇ ನೆಲ, ನೀವು ಬೇಕಾದರೂ ಹೊರಗೆ ಹೋಗಿ ಎಂದು ನಮ್ಮನ್ನೇ ಕಳುಹಿಸಿಬಿಡುವ ಹಂತಕ್ಕೆ ಬಂದು ಬಿಡುತ್ತಾರೆ. ಒಂದು ಕಾಲದಲ್ಲಿ ಬಾಂಗ್ಲಾ ವಲಸಿಗರು ನಮ್ಮ ದೇಶಕ್ಕೆ ಬಂದು ಇಲ್ಲಿ ನೆಲೆಸಿ ನಂತರ ಇಲ್ಲಿನ ಮಮತಾಮಯಿ ಪಕ್ಷಕ್ಕೆ ಮತಬ್ಯಾಂಕ್ ಆಗಿ ಹೋದರೆ ವಿನ: ಅದರಿಂದ ನಮ್ಮ ದೇಶದ ಭದ್ರತೆಗೆ ದಕ್ಕೆ ವಿನ: ಏನೂ ಲಾಭ ಇಲ್ಲ. ಇನ್ನು ರೋಹಿಂಗ್ಯಾ ಮುಸ್ಲಿಮರದ್ದು ಕಥೆ ಗೊತ್ತಿದೆ. ಹೀಗಿರುವಾಗ ಇನ್ನೊಂದಿಷ್ಟು ಸಾವಿರಾರು ಜನ ಇಲ್ಲಿಗೆ ಬಂದು ನಮ್ಮದೇ ಕಾಶ್ಮೀರಿ ಪಂಡಿತರಿಗೆ ಆದ ಗತಿಯೇ ಆಗಲಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇನ್ನು ಪಾಕಿಸ್ತಾನ ಎಷ್ಟರಮಟ್ಟಿಗೆ ತಲೆಹರಟೆ ದೇಶ ಎಂದರೆ ಅಪಘಾನಿಸ್ತಾನದಿಂದ ನಾವು ರಕ್ಷಿಸಿಕೊಂಡು ಬರುತ್ತಿರುವವರನ್ನು ಹೊತ್ತುಕೊಂಡಿರುವ ವಿಮಾನವನ್ನು ತನ್ನ ರಾಷ್ಟ್ರದ ಮೇಲೆ ಹಾರಲು ಕೂಡ ಬಿಡುತ್ತಿಲ್ಲ. ಆದ್ದರಿಂದ ಭಾರತದ ವಿಮಾನಗಳು ಇರಾನ್ ಮೇಲೆ ಸುತ್ತಿಬಳಸಿ ಭಾರತಕ್ಕೆ ಬರಬೇಕಾಗಿದೆ. ಒಟ್ಟಿನಲ್ಲಿ ಮುಸ್ಲಿಮರು ವಲಸೆ ಹೋಗಲು ಬಯಸಿದರೆ ಅವರನ್ನು ಮುಸ್ಲಿಮ್ ರಾಷ್ಟ್ರಗಳೇ ಒಳಗೆ ಬಿಡಲ್ಲ ಎನ್ನುವುದನ್ನು ಭಾರತದ ಮುಸ್ಲಿಮರು ನೆನಪಿನಲ್ಲಿ ಇಟ್ಟುಕೊಂಡರೆ ಒಳ್ಳೆಯದು!
0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Tulunadu News July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Tulunadu News July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search