• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಆಂಟೋನಿಗೆ ಒಂದು ನೋಟಿಸ್ ಕೊಡಲಾಗದಷ್ಟು ವೀಕ್ ಆಯಿತೆ ಪಾಲಿಕೆಯ ಬಿಜೆಪಿ ಆಡಳಿತ!!

Hanumantha Kamath Posted On September 10, 2021
0


0
Shares
  • Share On Facebook
  • Tweet It

ಆಂಟೋನಿ ವೇಸ್ಟ್ ಮ್ಯಾನೇಜಮೆಂಟಿನವರದ್ದು ಗುತ್ತಿಗೆ ಅವಧಿ ಇದೇ ಜನವರಿಗೆ ಕೊನೆಯಾಗುತ್ತಿದೆ. ತಿಂಗಳಿಗೆ ಎರಡು ಕೋಟಿ ರೂಪಾಯಿಗಿಂತ ಹೆಚ್ಚಿನ ಬಿಲ್ ಅವರಿಗೆ ಸಂದಾಯವಾಗುತ್ತಿರುವುದಕ್ಕೂ ಅವರು ಮಾಡುವ ಕೆಲಸಕ್ಕೂ ಹೋಲಿಕೆ ಇಲ್ಲವೇ ಇಲ್ಲ. ಆದ್ದರಿಂದ ನಮ್ಮ ಜನರ ತೆರಿಗೆಯ ಹಣ ಪುಕ್ಕಟೆ ವೇಸ್ಟ್ ಆಗಬಾರದು ಎಂದಾದರೆ ಅವರಿಗೆ ಕೊಡದೇ ಇರುವುದೇ ಬೆಸ್ಟ್ ಎನ್ನುವುದು ಅವರಿಂದ ಫಲಾನುಭವಿಗಳಾಗಿರುವವರ ಬಿಟ್ಟು ಬೇರೆ ಹೆಚ್ಚಿನವರ ಅಭಿಪ್ರಾಯ ಆಗಿದೆ. ಆದ್ದರಿಂದ ಮುಂದಿನ ಅವಧಿಗೆ ಗುತ್ತಿಗೆ ವಿಸ್ತರಣೆ ಆಗುವುದಿಲ್ಲ ಎಂದು ಗೊತ್ತಿರುವುದರಿಂದ ಅವರು ಕೂಡ ಈಗಲೇ ನಿರ್ಲಕ್ಷ್ಯ ಮಾಡಲು ಶುರು ಮಾಡಿ ಆಗಿದೆ. ಅದಕ್ಕೆ ಸರಿಯಾಗಿ ಒಂದು ತಿಂಗಳಿನಿಂದ ಎಲ್ಲಿ ಕೂಡ ಸಮರ್ಪಕವಾಗಿ ತ್ಯಾಜ್ಯ ಸಂಗ್ರಹಣೆ ಆಗುತ್ತಿಲ್ಲ. ಇದರ ಪರಿಣಾಮವಾಗಿ ಅನೇಕ ಮನೆಗಳಲ್ಲಿ ನಾಗರಿಕರು ತಮ್ಮ ಮನೆಗಳ ಹೊರಗೆ ಇಡುತ್ತಿರುವ ಕಸ ತ್ಯಾಜ್ಯಗಳು ಹಾಗೆ ಅಲ್ಲಿಯೇ ಬಾಕಿ ಆಗಿ ಹೋಗುತ್ತಿವೆ. ಇನ್ನು ವಾರದಲ್ಲಿ ಆರು ದಿನ ಹಸಿ ತ್ಯಾಜ್ಯ ಸಂಗ್ರಹಣೆ ಮತ್ತು ಒಂದು ದಿನ ಒಣತ್ಯಾಜ್ಯ ಸಂಗ್ರಹಣೆಯ ನಿಯಮವನ್ನು ರೂಪಿಸಲಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಆದ್ದರಿಂದ ಅನೇಕ ವಾಣಿಜ್ಯ ವ್ಯವಹಾರ ಇರುವ ಕಡೆ ಆಂಟೋನಿ ವೇಸ್ಟಿನವರು ವಾರದಲ್ಲಿ ಒಂದು ದಿನ ಮಾತ್ರ ಸಂಗ್ರಹ ಮಾಡಲು ಬರುತ್ತಿದ್ದಾರೆ. ಇದರಿಂದ ವಾಣಿಜ್ಯ ವ್ಯಾಪಾರ ಮಾಡುವವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಮತ್ತು ಅದರಿಂದ ನಾಗರಿಕರಿಗೆ ಕೂಡ ಕಿರಿಕಿರಿಯಾಗುತ್ತಿದೆ. ಹೇಗೆಂದರೆ ಒಂದು ಬೃಹತ್ ಪುಸ್ತಕದಂಗಡಿ ಇದೆ ಎಂದು ಇಟ್ಟುಕೊಳ್ಳಿ. ಅವರ ಮಳಿಗೆಯಲ್ಲಿ ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಒಣತ್ಯಾಜ್ಯ ಉತ್ಪಾದನೆಯಾಗುತ್ತದೆ. ಅವರು ಅದನ್ನು ಎಷ್ಟು ಎಂದು ವಾರವೀಡಿ ಒಟ್ಟು ಮಾಡಿ ಇಡುವುದು. ಅವರು ವಾರಕ್ಕೊಂದು ದಿನ ಕೊಡಲು ತೆಗೆದಿಟ್ಟರೆ ಅದಕ್ಕಾಗಿಯೇ ಒಂದು ಗೋಡೌನ್ ಇಟ್ಟುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಅವರು ಅದನ್ನು ಎಲ್ಲಿಯಾದರೂ ಒಂದು ಕಡೆ ವಿಲೇವಾರಿ ಮಾಡಲು ಹೋಗುತ್ತಾರೆ. ಅದರಿಂದ ಒಣ ತ್ಯಾಜ್ಯ ಎಲ್ಲೆಲ್ಲಿಯೋ ಡಂಪ್ ಆಗುತ್ತಿದೆ. ಇಂತಹುದೇ ಸಮಸ್ಯೆಯನ್ನು ಅನೇಕ ಮಳಿಗೆಯವರು ಅನುಭವಿಸುತ್ತಿದ್ದಾರೆ. ಬೇಕಾದರೆ ಬೇಕರಿಗಳನ್ನೇ ತೆಗೆದುಕೊಳ್ಳಿ. ಅಲ್ಲಿ ನಿತ್ಯ ಒಣ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಆದರೆ ಈ ಆಂಟೋನಿ ವೇಸ್ಟ್ ನವರು ವಾರದಲ್ಲಿ ಒಂದು ದಿನ ತೆಗೆದುಕೊಂಡು ಹೋಗುತ್ತಾರೆ. ಉಳಿದ ದಿನ ಆ ತ್ಯಾಜ್ಯ ಎಲ್ಲೆಲ್ಲಿಯೋ ಬಿದ್ದಿರುತ್ತದೆ. ಅಂತಹ ಕೆಲವು ಫೋಟೋಗಳನ್ನು ಇವತ್ತು ಈ ಜಾಗೃತ ಅಂಕಣದಲ್ಲಿ ಪೋಸ್ಟ್ ಮಾಡುತ್ತಿದ್ದೇನೆ. ಒಟ್ಟಿನಲ್ಲಿ ವಾಣಿಜ್ಯ ವ್ಯವಹಾರ ಇರುವ, ಒಣ ತ್ಯಾಜ್ಯ ಯಥೇಚ್ಚವಾಗಿ ಉತ್ಪಾದನೆಯಾಗುವ ಕೇಂದ್ರಗಳಲ್ಲಿ ಆಂಟೋನಿ ವೇಸ್ಟ್ ನವರಿಗೆ ತ್ಯಾಜ್ಯ ಸಂಗ್ರಹಣೆ ನಿತ್ಯ ಮಾಡಬೇಕೆಂದು ಅನಿಸುವುದಿಲ್ಲವೇ? ಪಾಲಿಕೆಯ ವ್ಯಾಪ್ತಿಯಲ್ಲಿರುವ ಮನೆಗಳು, ಅಂಗಡಿಗಳನ್ನು ಎಲ್ಲಾ ಸೇರಿಸಿ ತ್ಯಾಜ್ಯ ಸಂಗ್ರಹಣೆ ಮತ್ತು ಇವರು ಮಾಡಬೇಕಾದ ಬೇರೆ ಬೇರೆ ಕ್ಲೀನಿಂಗ್ ಕೆಲಸಗಳನ್ನು ಸೇರಿಸಿ ಇವರಿಗೆ ತಿಂಗಳಿಗೆ ಇಷ್ಟು ಕೋಟಿ ರೂಪಾಯಿ ಎಂದು ಕೊಡಲಾಗುತ್ತಿದೆ. ಹೀಗಿರುವಾಗ ಇವರು ಅದನ್ನು ಮಾಡದಿದ್ದರೆ ಅವರಿಗೆ ಅಷ್ಟು ಹಣ ಕೊಡುವ ಅವಶ್ಯಕತೆಯಾದರೂ ಏನಿದೆ? ಹಾಗಾದರೆ ಇದನ್ನು ಯಾರು, ಯಾಕೆ ಪ್ರಶ್ನಿಸುವುದಿಲ್ಲ. ಐದು ಬಾರಿ ಗೆದ್ದಿರುವ ಪ್ರೇಮಾನಂದ ಶೆಟ್ಟಿಯವರು ಈಗ ಮೇಯರ್, ಮೂರ್ನಾಕು ಬಾರಿ ಗೆದ್ದಿರುವ ಭಾರತೀಯ ಜನತಾ ಪಾರ್ಟಿಯ ಸದಸ್ಯರು ಈಗ ಆಡಳಿತ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್ ಬಿಡಿ, ಅಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಗೆದ್ದಿರುವ ಕಾರ್ಪೋರೇಟರ್ ಗಳು ಇದ್ದಾರೆ. ಅವರು ಅಧಿಕಾರದಲ್ಲಿ ಇರುವಾಗ ಈ ತ್ಯಾಜ್ಯ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ ಆಗಿದೆ ಎಂದೇ ಇಟ್ಟುಕೊಳ್ಳೋಣ. ಆದರೆ ಈಗ ಬಿಜೆಪಿ ಆಡಳಿತ ಬಂದಿದೆಯಲ್ಲ, ನೀವು ಏನು ಮಾಡುತ್ತಿದ್ದೀರಿ. ಪ್ರಥಮ ಬಾರಿ ಗೆದ್ದಿರುವ ಕಾರ್ಪೋರೇಟರ್ ನಿಂದ ಹಿಡಿದು ಐದು ಬಾರಿ ಗೆದ್ದಿರುವವರ ತನಕ ಯಾರು ಈ ಬಗ್ಗೆ ಧ್ವನಿ ಎತ್ತಿದ್ದೀರಿ? ಎಷ್ಟು ಬಾರಿ ಮನಪಾ ಸದಸ್ಯರು ತಮ್ಮ ವಾರ್ಡಿನಲ್ಲಿ ಆಂಟೋನಿ ವೇಸ್ಟಿನವರು ಕಸ ಸಂಗ್ರಹ ಮಾಡದೇ ಹೋಗುತ್ತಿದ್ದಾರೆ ಎಂದು ಪಾಲಿಕೆಯ ಆಯುಕ್ತರಿಗೆ ಲಿಖಿತವಾಗಿ ಪತ್ರ ಬರೆದಿದ್ದಿರಿ. ಯಾಕೆ ಬರೆಯಲ್ಲ, ಯಾಕೆ ಧ್ವನಿ ಎತ್ತಲ್ಲ. ಯಾಕೆ ಆಂಟೋನಿಯವರ ವಿರುದ್ಧ ಮಾತನಾಡುವ ನೈತಿಕತೆ ಇಲ್ವಾ? ಅವರು ನೀಡಿರುವ ಎಂಜಿಲು ಪ್ರಸಾದ ರುಚಿಯಾಗಿ ಹೋಗಿದೆಯಾ? ಅವರು ಗುತ್ತಿಗೆ ಅವಧಿ ಮುಗಿಸುವುದು ನಿಮಗೆ ಸೂತಕದ ದಿನಗಳಾಗಲಿವೆಯಾ? ಆಂಟೋನಿ ವೇಸ್ಟ್ ನವರಿಗೆ ಯಾಕೆ ನೋಟಿಸ್ ಕೊಟ್ಟು ಕೆಲಸ ಮಾಡಿ ಎಂದು ಎಚ್ಚರಿಕೆ ಕೊಡುವ ಕೆಲಸ ಆಗುತ್ತಿಲ್ಲ. ಇಷ್ಟು ದೊಡ್ಡ ಅವ್ಯವಸ್ಥೆ ಆಗುತ್ತಿದ್ದರೂ ಒಂದು ನೋಟಿಸ್ ಕೊಡಲಾಗದಷ್ಟು ವೀಕ್ ಆಯಿತೆ ಪಾಲಿಕೆಯ ಬಿಜೆಪಿ ಆಡಳಿತ.
ಇನ್ನು ಕೆಲವು ಕಡೆ ನಾಗರಿಕರು ಕಸ ಸಂಗ್ರಹಣೆ ಯಾರು ಬರದೇ ಇರುವುದರಿಂದ ಹಿಂದೆ ತಾವು ಹಾಕುತ್ತಿದ್ದ ನಿರ್ದಿಷ್ಟಜಾಗದಲ್ಲಿ ಮತ್ತೆ ಕಸ ಹಾಕಲು ಶುರು ಮಾಡಿದ್ದಾರೆ. ಒಬ್ಬರು ಹಾಕುವುದನ್ನು ನೋಡಿದ ಇನ್ನೊಬ್ಬರು ಕಸ ಬಿಸಾಡಿ, ಅಲ್ಲಿ ಮತ್ತೊಬ್ಬರು ಕಸ ಬಿಸಾಡಿ ಹೀಗೆ ಜನರು ಮೇಲಿನಿಂದ ಮೇಲೆ ಕಸ ಬಿಸಾಡಿ ಅಲ್ಲಿ ಕಸದ ಕೊಂಪೆ ಆಗುತ್ತಿದೆ. ಕೇಳಿದರೆ ಮೇಯರ್ ಹಾಗೂ ಕೆಲವು ಕಾರ್ಪೋರೇಟರ್ ಗಳು ನಾವು ಅಲ್ಲಿ ಬೋರ್ಡ್ ಹಾಕುತ್ತೇವೆ, ಸೆಲ್ಫಿ ಪಾಯಿಂಟ್ ಮಾಡುತ್ತೇವೆ ಎಂದು ಹೇಳುತ್ತಾರೆ. ಕೆಲವು ಕಾರ್ಪೋರೇಟರ್ಸ್ ಬುದ್ಧಿವಂತಿಕೆ ಬಳಸಿ ಅಂತಹ ಜಾಗವನ್ನು ಸ್ವಚ್ಚ ಮಾಡಿ ಅಲ್ಲಿ ಸೆಲ್ಫಿ ಪಾಯಿಂಟ್ ಎಂದು ಜಾಗವನ್ನು ಸುಂದರೀಕರಣಗೊಳಿಸಿದ್ದಾರೆ. ಹಾಗೆ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ ಕಸ ಸಂಗ್ರಹ ಮಾಡುತ್ತಿರುವ ಆಂಟೋನಿ ವೇಸ್ಟಿನವರ ನಿರ್ಲಕ್ಷ್ಯದಿಂದ ಕಸದ ಕೊಂಪೆಗಳಾಗುತ್ತಿರುವ ಸ್ಥಳಗಳು ನಿಮಗೆ ಕಾಣಿಸುತ್ತಿವೆ. ಅಲ್ಲಿ ಸೆಲ್ಫಿ ಪಾಯಿಂಟ್ ಮಾಡಬೇಕು ಎಂದು ಅನಿಸುತ್ತದೆ. ಆದರೆ ಈ ಆಂಟೋನಿ ವಿರುದ್ಧ ಮಾತನಾಡಬೇಕು ಎಂದು ಅನಿಸಲ್ವ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ!
0
Shares
  • Share On Facebook
  • Tweet It




Trending Now
ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
Hanumantha Kamath February 19, 2026
ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
Hanumantha Kamath February 18, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
  • Popular Posts

    • 1
      ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • 2
      ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!

  • Privacy Policy
  • Contact
© Tulunadu Infomedia.

Press enter/return to begin your search