• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಸ್ ಬೇ ಹೊರಗೆ ನಿಲ್ಲಿಸಿ ಕರೆಯುವುದು ಯಾವಾಗ ನಿಲ್ಲುತ್ತೆ?

Hanumantha Kamath Posted On October 7, 2021


  • Share On Facebook
  • Tweet It

ಮಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗಲು ಏನು ಕಾರಣ ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಯನ್ನು ಜನರ ಮುಂದಿಟ್ಟರೆ ನೂರಾರು ಕಾರಣಗಳು ಬರಬಹುದು. ಆದರೆ ಅದರಲ್ಲಿ ಬಹಳ ಪ್ರಮುಖವಾಗಿ ಒಂದು ಕಾರಣ ಏನೆಂದರೆ ಬಸ್ಸು ಚಾಲಕರು ಮಂಗಳೂರು ನಗರದ ಟ್ರಾಫಿಕ್ ಪೊಲೀಸರನ್ನು ಕ್ಯಾರೇ ಮಾಡದಿರುವುದು. ಇವರು ಯಾಕೆ ಟ್ರಾಫಿಕ್ ಪೊಲೀಸರನ್ನು ಕ್ಯಾರ್ ಮಾಡುವುದಿಲ್ಲ ಎಂದರೆ ಪೊಲೀಸರ ಬಗ್ಗೆ ಭಯವಿಲ್ಲದಿರುವುದು ಮೊದಲ ಕಾರಣ. ಪೊಲೀಸರ ಬಗ್ಗೆ ಭಯ ಯಾಕೆ ಇಲ್ಲ ಎಂದರೆ ಪೊಲೀಸರು ಈ ಬಸ್ಸಿನ ಚಾಲಕರು ಏನು ಅಡ್ಡಾದಿಡ್ಡಿ ನಿಲ್ಲಿಸಿದರೂ ತಲೆಕೆಡಿಸಿಕೊಳ್ಳದೇ ಇರುವುದೇ ಭಯ ಇಲ್ಲದಿರಲು ಮುಖ್ಯ ಕಾರಣ. ಪೊಲೀಸರು ಯಾಕೆ ಬಸ್ಸು ಚಾಲಕರ ಅಡ್ಡಾದಿಡ್ಡಿ ನಿಲುಗಡೆಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರೆ ಅವರು ಬೈಕು, ಸ್ಕೂಟರ್ ಗಳನ್ನು ಟೋ ಮಾಡುವುದರಲ್ಲಿ ಮಾತ್ರ ಆಸಕ್ತಿ ವಹಿಸುತ್ತಿರುವುದು. ಹೀಗೆಲ್ಲ ಒಬ್ಬರ ನಿರ್ಲಕ್ಷ್ಯ ಇನ್ನೊಬ್ಬ ಉಡಾಫೆತನ ಮತ್ತು ನಾಗರಿಕರ ಮೌನ ಒಟ್ಟು ಸೇರಿ ಮಂಗಳೂರಿನ ಟ್ರಾಫಿಕ್ ಅವ್ಯವಸ್ಥೆ ತಾರಕಕ್ಕೆ ಏರಿರುವುದು. ಇದನ್ನು ಸರಿ ಮಾಡುವುದು ಹೇಗೆ?

ಮೊದಲನೇಯದಾಗಿ ಬಸ್ಸುಗಳನ್ನು ಬಸ್ ಸ್ಟಾಪಿನ ಹತ್ತಿರವೇ ನಿಲ್ಲಿಸುವುದು ಮೊದಲ ಪರಿಹಾರ. ಬಸ್ ಸ್ಟಾಪಿನ ಎದುರಿಗೆ ನಿರ್ದಿಷ್ಟ್ಯ ಅಂತರದಲ್ಲಿ ಪ್ಲಾಸ್ಟಿಕ್ ರಬ್ಬರ ಬಳಸಿ ಮೊಣಕಾಲಿನಷ್ಟು ಎತ್ತರದ ಪುಟ್ಟ ಪುಟ್ಟ ಕಂಬಗಳನ್ನು ನೀವು ನೋಡಿರಬಹುದು. ಅದನ್ನು ಮಾಡಿರುವ ಉದ್ದೇಶ ಏನು? ಬಸ್ಸುಗಳು ಈ ಕಂಬ ಮತ್ತು ಬಸ್ ಸ್ಟಾಪಿನ ಮಧ್ಯದಲ್ಲಿಯೇ ತಂದು ನಿಲ್ಲಿಸಬೇಕು ಎಂದು ತಾನೇ? ಇಲ್ಲದೇ ಹೋದರೆ ಅದರ ಅಗತ್ಯ ಏನಾದರೂ ಇತ್ತಾ? ಅಷ್ಟಕ್ಕೂ ಆ ಕಂಬಗಳು ಹಾಕಿದ ನಂತರ ಏನಾದರೂ ಪ್ರಯೋಜನವಾಗಿದೆಯಾ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ನೂರರಲ್ಲಿ ತೊಂಭತ್ತು ಕಡೆ ಏನೂ ಪ್ರಯೋಜನವಾಗುತ್ತಿಲ್ಲ. ಲಾಲ್ ಭಾಗ್ ಒಂದು ಬಿಟ್ಟರೆ ಬಹುತೇಕ ಕಡೆ ಬಸ್ಸುಗಳು ಈ ಬಸ್ ಬೇಗಳ ಒಳಗೆ ಕಾಲಿಡುವುದೇ ಇಲ್ಲ. ಅವರದ್ದೇನಿದ್ದರೂ ಮನೆಯ ಅಂಗಳದಲ್ಲಿ ನಿಂತು ಅಮ್ಮಾ, ತಾಯಿ ಎಂದು ಬಿಕ್ಷುಕ ಬೇಡುವ ರೀತಿಯಲ್ಲಿ, ಬಸ್ ಬೇ ಹೊರಗೆ ನಿಂತು ಜನರನ್ನು ಕರೆಯುವುದೇ ಸಾಮಾನ್ಯವಾಗಿ ಬಿಟ್ಟಿದೆ. ಹೊಸದಾಗಿ ಬಸ್ ಬೇಗಳ ನಿರ್ಮಾಣವಾದಾಗ ನಾಲ್ಕು ದಿನ ಟ್ರಾಫಿಕ್ ಪೊಲೀಸರು ಅಲ್ಲಿಯೇ ನಿಂತು ಬಸ್ಸಿನವರಿಗೆ ಕಣ್ಣಿನಲ್ಲಿಯೇ ಎಚ್ಚರಿಕೆ ಕೊಡುತ್ತಿದ್ದರು. ಪೊಲೀಸರ ಭಯಕ್ಕಾದರೂ ಬಸ್ಸಿನವರು ಸ್ಟೇರಿಂಗ್ ಲೆಫ್ಟ್ ತಿರುಗಿಸಿ ಬಸ್ ಬೇ ಒಳಗೆ ಹೋಗುತ್ತಿದ್ದರು. ನಾಲ್ಕು ದಿನ ಆದ ಮೇಲೆ ಪೊಲೀಸರು ಅಲ್ಲಿ ನಿಲ್ಲುವುದನ್ನು ನಿಲ್ಲಿಸಿಬಿಟ್ಟರು. ಅವರು ಅತ್ತ ಸುಳಿಯದೇ ಹೋದಾಗ ಬಸ್ಸಿನ ಚಾಲಕರು ಕೂಡ ಸ್ಟೇರಿಂಗ್ ಎಡಕ್ಕೆ ತಿರುಗಿಸುವುದನ್ನು ನಿಲ್ಲಿಸಿಬಿಟ್ಟರು. ಬಸ್ ಬೇಯಿಂದ ಅನತಿ ದೂರದಲ್ಲಿಯೇ ಬಸ್ ನಿಲ್ಲುವಂತಾಯಿತು. ಇದರಿಂದ ಏನಾಯಿತು? ಬಸ್ಸಿನವರು ತಮ್ಮ ಪಾಡಿಗೆ ತಮ್ಮದೇ ಗ್ಯಾರೇಜಿನ ಅಂಗಳದಲ್ಲಿ ನಿಲ್ಲಿಸುವಂತೆ ರಸ್ತೆಯಲ್ಲಿ ಅಲ್ಲಲ್ಲಿ ಜನರನ್ನು ಹತ್ತಿಸುತ್ತಿದ್ದರೆ, ಅತ್ತ ಹಿಂದಿನಿಂದ ಬರುತ್ತಿರುವ ವಾಹನ ಈ ಬಸ್ಸಿನವರು ಪ್ರಯಾಣಿಕರನ್ನು ಹತ್ತಿ ಇಳಿಸುವ ತನಕ ಹಿಂದೆ ಕಾಯುವಂತಾಯಿತು. ಈ ಮೂಲಕ ಬಸ್ಸಿನ ಹಿಂದೆ ಬಾಲ ಬೆಳೆದು ಟ್ರಾಫಿಕ್ ಜಾಮ್ ಎನ್ನುವುದು ಮಂಗಳೂರು ನಗರದಲ್ಲಿ ಸಾಮಾನ್ಯವಾಗಿದೆ. ಟ್ರಾಫಿಕ್ ಪೊಲೀಸರು ಟೋ ಮಾಡುವ ಜೊತೆ ಒಂದಿಷ್ಟು ಇತ್ತ ಕಡೆ ಕೂಡ ನೋಡಿದರೆ ಬಸ್ಸಿನವರ ಉಪದ್ರವದಿಂದ ಆಗುವ ತೊಂದರೆ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಇದು ಮುಂದುವರೆಯುತ್ತವೆ. ಎಂಪರ್ ಮಾಲ್ ನಿಂದ ಹಿಡಿದು ಕುಳಾಯಿಯ ಚಿತ್ರಾಪುರದವರೆಗೆ ಈ ಸಮಸ್ಯೆ ಶಾಶ್ವತವಾಗಿದೆ.

ಇನ್ನು ಮಂಗಳೂರು ನಗರದಲ್ಲಿ ಅಮೃತ ಯೋಜನೆ, ಸ್ಮಾರ್ಟ್ ಸಿಟಿ ಸಹಿತ ಬೇರೆ ಬೇರೆ ಯೋಜನೆಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈ ಎಲ್ಲಾ ಯೋಜನೆಗಳ ಆರಂಭದ ದಿನಗಳು ದಾಖಲೆಯಲ್ಲಿ ಇವೆ. ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಆಗಾಗ ನಮ್ಮ ಜನಪ್ರತಿನಿಧಿಗಳು ರಸ್ತೆಗೆ ಗುದ್ದಲಿಪೂಜೆ ಮಾಡುವಂತಹ ದೃಶ್ಯಗಳು ಬರುವುದರಿಂದ ಇಡೀ ಮಂಗಳೂರು ಹೊಸ ರೂಪ ಪಡೆಯುತ್ತಿದೆಯೇನೋ ಎನ್ನುವ ಭಾವನೆ ವ್ಯಕ್ತವಾಗುತ್ತಿದೆ. ಗುದ್ದಲಿಪೂಜೆಯ ದಿನ, ತಾರೀಕು ಈ ಜನಪ್ರತಿನಿಧಿಗಳ ಡೈರಿಯಲ್ಲಿ ಬರೆದು ಇರಬಹುದು. ಆದರೆ ಇದರ ಅಂತಿಮ ದಿನ ಯಾವಾಗ ಎಂದು ಇವರಲ್ಲಿ ಯಾರಿಗೂ ಗೊತ್ತಿಲ್ಲ. ಕಾಮಗಾರಿ ಆರಂಭವಾದರೆ ಸಾಲದು, ಮುಗಿಯುವುದು ಯಾವಾಗ ಎಂದು ಗೊತ್ತಿಲ್ಲದಿದ್ರೆ ಅದು ಆ ಜನಪ್ರತಿನಿಧಿಗೆ ದೊಡ್ಡ ಮೈನಸ್ ಕೂಡ ಆಗಲಿದೆ. ಸದ್ಯ ಯಾವ ಕಾಮಗಾರಿಯೂ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಇದನ್ನು ಯಾಕೆ ಯಾವ ಜನಪ್ರತಿನಿಧಿ, ಜಿಲ್ಲಾಡಳಿತ ನೋಡುವುದಿಲ್ಲ ಎನ್ನುವುದು ಆಶ್ಚರ್ಯದ ಸಂಗತಿ. ಯಾರಿಗೂ ಇದು ಬಿದ್ದು ಹೋಗಿಲ್ವಾ ಅಥವಾ ಇಚ್ಚಾಶಕ್ತಿ ಇಲ್ವಾ?

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Hanumantha Kamath January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search