• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರಿನ ಹುಚ್ಚಾಸ್ಪತ್ರೆಯಲ್ಲಿ “ಅವರಿಗೆ” ಬೆಡ್ ಖಾಲಿ ಇದೆ!!

Hanumantha Kamath Posted On October 22, 2021


  • Share On Facebook
  • Tweet It

ರಾಹುಲ್ ಎಂಬ ಕಾಂಗ್ರೆಸ್ಸಿನ ಚಿರಯುವಕನ ಬಗ್ಗೆ ಏನು ಸತ್ಯ ಹೇಳಿದರೂ ಅದನ್ನು ಒಪ್ಪಲು ಕಾಂಗ್ರೆಸ್ಸಿಗರು ಸಿದ್ಧರಿಲ್ಲ. ಆ ನಿಟ್ಟಿನಲ್ಲಿ ಅವರ ವ್ಯಕ್ತಿಪೂಜೆಯನ್ನು ಯಾರೂ ಮೀರಿಸಲು ಸಾಧ್ಯವಿಲ್ಲ. ಸತತ ಸೋಲು, ಇಳಿಯುತ್ತಿರುವ ಕಾಂಗ್ರೆಸ್ ಜನಪ್ರಿಯತೆ, ಅನೇಕ ರಾಜ್ಯಗಳಲ್ಲಿ ಅಳಿವಿನಂಚಿನಲ್ಲಿ, ಅಧಿಕೃತ ವಿರೋಧ ಪಕ್ಷವೂ ಆಗುವ ಸಾಮರ್ತ್ಯ ಇಲ್ಲದ ಪಕ್ಷವೊಂದರ ಅನಭಿಷೇಕ್ತ ಪಟ್ಟದರಸನ ಬಗ್ಗೆ ಕರ್ನಾಟಕದ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾದರೂ ಏನು? ರಾಹುಲ್ ಡ್ರಗಿಸ್ಟ್, ಡ್ರಗ್ ಪೆಡ್ಲರ್ ಎಂದು ತಾನು ಹೇಳುತ್ತಿಲ್ಲ, ವಾರ್ತೆಗಳಲ್ಲಿ, ಮಾಧ್ಯಮಗಳಲ್ಲಿ ಬಂದದ್ದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪು ಏನಿದೆ? ಈ ಬಗ್ಗೆ ಎಷ್ಟೋ ವರ್ಷಗಳ ಹಿಂದೆಯೇ ಮಾಧ್ಯಮಗಳಲ್ಲಿ ಬಂದಿದೆ. ಇಲ್ಲ ಎಂದು ಯಾವುದಾದರೂ ಕಾಂಗ್ರೆಸ್ ನಾಯಕ ಹೇಳಲಿ ನೋಡೋಣ. 2013 ಡಿಸೆಂಬರ್ 17 ರಲ್ಲಿ ರಾಜ್ಯಸಭಾ ಸಂಸದ ಸುಬ್ರಹ್ಮಣ್ಯ ಸ್ವಾಮಿಯವರು ಇದೇ ಮಂಗಳೂರಿನ ಪುರಭವನದಲ್ಲಿ ಕುಳಿತು ಹೇಳಿದ ವಿಡಿಯೋ ಕ್ಲೀಪ್ ಇದೆ. ರಾಹುಲ್ ಡ್ರಗ್ ಸೇವಿಸುತ್ತಾರೆ ಎಂದು ಅವರು ಆವತ್ತೆ ಹೇಳಿದ್ದಾರೆ. ಅದನ್ನು ಸೇವಿಸಿಯೇ ಸುದ್ದಿಗೋಷ್ಟಿಗಳಲ್ಲಿ ಕುಳಿತುಕೊಳ್ಳುತ್ತಾರೆ ಎನ್ನುವ ಅರ್ಥದ ಮಾತುಗಳನ್ನು ಹೇಳಿದ್ದಾರೆ. ಅದನ್ನು ವಿರೋಧಿಸಿ ಆವತ್ತು ಯುವ ಕಾಂಗ್ರೆಸ್ಸಿಗರು ಸರ್ಕ್ಯೂಟ್ ಹೌಸ್ ಹೊರಗಡೆ ಪ್ರತಿಭಟನೆ ಕೂಡ ಮಾಡಿದ್ದರು. ಸುಬ್ರಹ್ಮಣ್ಯ ಸ್ವಾಮಿ ವಿರುದ್ಧ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು. ನಂತರ ಏನಾಯಿತು ಸ್ವಾಮಿಗೆ ಶಿಕ್ಷೆಯಾಯಿತಾ? ಅವರೇನು ಕಂಬಿಗಳ ಹಿಂದೆ ಇದ್ರಾ? ಇಲ್ಲ. ಇದೇ ರಾಹುಲ್ ಹಾವರ್ಡ್ ವಿಶ್ವವಿದ್ಯಾನಿಲಯದಿಂದ ಅರ್ಧದಲ್ಲಿ ಶಿಕ್ಷಣ ಮೊಟಕುಗೊಳಿಸಿ ಬಂದದ್ದು ಇಲ್ಲಿ ಯಾವುದೇ ದೇಶಸೇವೆ ಮಾಡಲು ಅಲ್ಲ. ಅದರ ಬದಲು ಡ್ರಗ್ ಸೇವಿಸುತ್ತಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಷ್ಟಾದರೂ ಅದನ್ನು ಒಪ್ಪಲು ಸಾಧ್ಯವಾಗದೇ ನಳಿನ್ ಸತ್ಯ ಹೇಳಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ ಕಾಂಗ್ರೆಸ್ಸಿನ ಘಟಾನುಘಟಿ ನಾಯಕರು ಜಿದ್ದಿಗೆ ಬಿದ್ದವರಂತೆ ಮಾಧ್ಯಮಗಳ ಮುಂದೆ ವೀರಾವೇಶ ತೋರಿಸುತ್ತಿದ್ದಾರಲ್ಲ. ಅದಕ್ಕೆ ಏನು ಹೇಳಬೇಕು.
ಹಾಗಾದರೆ ಕಾಂಗ್ರೆಸ್ಸಿಗರು ಏನು ಹೇಳಿದರೂ ನಡೆಯುತ್ತಾ? ಇದೇ ಸೋನಿಯಾ ಚುನಾವಣೆಯ ಸಮಯದಲ್ಲಿ ಮೋದಿಯವರನ್ನು ಮೌತ್ ಕೀ ಸೌಧಾಗರ್ ಎಂದರಲ್ಲ. ಮೋದಿಗೆ ಯಾವ ಹತ್ಯೆಯಲ್ಲಿ ಶಿಕ್ಷೆ ಆಗಿದೆ? ಅವರು ಹೇಳಿದರೆ ಚಮತ್ಕಾರ. ಬೇರೆಯವರು ಇವರಿಗೆ ಹೇಳಿದರೆ ಅದು ಬಲಾತ್ಕಾರ. ಮೋದಿಯವರನ್ನು ಹೆಬ್ಬೆಟ್ಟು ಗಿರಾಕಿ ಎಂದರಲ್ಲ. ಹಾಗಾದರೆ ಮೋದಿ ಯುಎನ್ ನಲ್ಲಿ ಅಷ್ಟು ಚೆಂದದ ಭಾಷಣ ಮಾಡಿದರಲ್ಲ, ಅದೇನು ಖರ್ಗೆ, ಸಿದ್ದು ಬರೆದುಕೊಟ್ಟಿರುವುದಾ? ಬರೆದುಕೊಟ್ಟಿದ್ದರೆ ಹೆಬ್ಬೆಟ್ಟು ಗಿರಾಕಿಯಾಗಿದ್ದಲ್ಲಿ ಹೇಗೆ ಓದಿದರು? ಕಾಂಗ್ರೆಸ್ಸಿಗರು ಸುಳ್ಳಿನ ಗೋರಿಯನ್ನು ಕಟ್ಟಬಹುದು. ಅದೇ ಬಿಜೆಪಿಯ ರಾಜ್ಯಾಧ್ಯಕ್ಷರು ಸತ್ಯದ ಬಾವುಟವನ್ನು ಎತ್ತಿಹಿಡಿದರೆ ಈ ಕಾಂಗ್ರೆಸ್ಸಿಗರಿಗೆ ತಮ್ಮ ಬಣ್ಣ ಹೊರಗೆ ಬರುತ್ತದೆ ಎನ್ನುವ ಹೆದರಿಕೆ ಶುರುವಾಗುತ್ತದೆ. ಇನ್ನು ರಾಹುಲ್ ತಾವು ಡ್ರಗ್ಸ್ ಸೇವಿಸುವುದಿಲ್ಲ ಎಂದಾದರೆ ದೆಹಲಿಯ ಯಾವುದಾದರೂ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಲಿ. ತಮ್ಮ ರಕ್ತ, ಮೂತ್ರ, ಕೂದಲು ಸ್ಯಾಂಪಲ್ ಕೊಡಲಿ. ಅಷ್ಟು ನೈತಿಕತೆ ಇದ್ದರೆ ಅದಕ್ಕೆ ತಯಾರಾಗಲಿ. ಆಗುತ್ತಾ? ಗುಜರಾತಿನ ಗಲಭೆಯಲ್ಲಿ ಮೋದಿಯವರನ್ನು ಸೋನಿಯಾ ಮೌತ್ ಕಿ ಸೌಧಾಗಾರ್ ಎಂದು ಹೇಳಿದಾಗ ಮೋದಿ ಅದನ್ನು ನ್ಯಾಯಾಲಯದ ಮೂಲಕವೇ ಎದುರಿಸಿದರು. ಹಾಗೆ ಇಲ್ಲಿ ಕೂಡ ರಾಹುಲ್ ತಯಾರಾಗಲಿ. ಅಷ್ಟಕ್ಕೂ ಇನ್ನೊಂದು ವಿಷಯವನ್ನು ಡಿಕೆಶಿ ಹೇಳಬೇಕು. ಬಹುಶ: ಅವರು ಚುನಾವಣೆ ಮುಗಿದ ಬಳಿಕ ಏನೇನೋ ಹೊರಗೆ ಹಾಕುತ್ತೇನೆ ಎಂದು ಹೇಳುತ್ತಿದ್ದಾರೆ. ಹಾಗೆ ಹೇಳುವುದೇ ಆಗಿದ್ದಲ್ಲಿ 1998 ರಲ್ಲಿ ರಾಹುಲ್ ವಿದೇಶದಲ್ಲಿ ಒಂದು ಕೇಸಿನಲ್ಲಿ ಸಿಕ್ಕಿಬಿದ್ದರಲ್ಲ, ಆಗ ಅಂದಿನ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರ ಕೈ ಕಾಲು ಹಿಡಿದು ಮಗನನ್ನು ಹೇಗಾದರೂ ಬಿಡಿಸಿ ಎಂದು ಹೇಳಿದ್ದು ಯಾರು ಮತ್ತು ಯಾಕೆ ಎನ್ನುವುದನ್ನು ಕೂಡ ಡಿಕೆಶಿ ಬಹಿರಂಗಗೊಳಿಸಲಿ.
ಇನ್ನು ಈ ವಿಷಯದಲ್ಲಿ ನಳಿನ್ ಅವರ ಹೇಳಿಕೆಯ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೆ ಎಲ್ಲಾ ನಾಯಕರು ಬಹಿರಂಗ ಬೆಂಬಲ ನೀಡಬೇಕು. ಯಾಕೋ ಯತ್ನಾಳ್ ನಂತವರು ಒಬ್ಬಿಬ್ಬರು ಬಿಟ್ಟು ಅಂತಹ ಸಮರ್ಥನೆ ಬಂದಿಲ್ಲ. ಯಡ್ಡಿ ತಾವು ಈ ವಿಷಯದಲ್ಲಿ ರಾಜ್ಯಾಧ್ಯಕ್ಷರ ಜೊತೆ ಮಾತನಾಡುತ್ತೇನೆ ಎಂದು ಹೇಳಿ ಡಿಕೆಶಿಯಂತವರನ್ನು ಒಲೈಸುವ ಕಾರ್ಯ ಮಾಡಿದ್ದಾರೆ. ಇನ್ನು ಸಿದ್ದು ನಳಿನ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ “ಗುಂಡು” ಮಾಮ ಒಬ್ಬರು ತಮ್ಮ ಮಾನಸಿಕ ಚಿಕಿತ್ಸೆಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿರುವ ದಾಖಲೆಗಳು ಕೂಡ ಇವೆ. ಅವರು ಕೂಡ ನಳಿನ್ ಹುಚ್ಚ, ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎನ್ನುತ್ತಾರೆ. ನಳಿನ್ ಒಬ್ಬ ಶುದ್ಧ ಸಸ್ಯಹಾರಿ, ಮದ್ಯ ಸೇವನೆ ಇಲ್ಲವೇ ಇಲ್ಲ. ಅವರು ಮಂಗಳೂರಿನಲ್ಲಿ ಇದ್ದರೆ ಬೆಳಿಗ್ಗೆ ಸೂರ್ಯ ಹುಟ್ಟುವ ಮೊದಲೇ ಕಟೀಲು ದೇವಿಯ ಎದುರು ಇರುತ್ತಾರೆ. ಅವರಷ್ಟು ಕಾಲಿಗೆ ಚಕ್ರ ಕಟ್ಟಿ ತಿರುಗುವ ನಾಯಕ ದಕ್ಷಿಣ ಕನ್ನಡದಲ್ಲಿ ಬಿಡಿ, ರಾಜ್ಯದಲ್ಲಿಯೇ ಇಲ್ಲ. ಅವರಿಗೆ ಹುಚ್ಚಾಸ್ಪತ್ರೆಯ ಅಗತ್ಯ ಇಲ್ಲ. ಅಗತ್ಯ ಇದ್ದ ರಾಜ್ಯ ಕಾಂಗ್ರೆಸ್ ಮುಖಂಡರು ಮಂಗಳೂರಿಗೆ ಬರಬಹುದು. ಹಿಂದೆ ಚಿಕಿತ್ಸೆ ಪಡೆದ ಆಸ್ಪತ್ರೆಯಲ್ಲಿಯೇ ಮತ್ತೆ ಚಿಕಿತ್ಸೆ ಪಡೆಯಬಹುದು. ತಾವು ಮಾನಸಿಕ ಕಾಯಿಲೆಗೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು ಬೇರೆಯವರಿಗೆ ಹುಚ್ಚ ಎನ್ನುವುದೇ ಕಾಂಗ್ರೆಸ್ ಲೇಟೆಸ್ಟ್ ಸ್ಟೈಲ್!

  • Share On Facebook
  • Tweet It


- Advertisement -


Trending Now
ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
Hanumantha Kamath February 1, 2023
ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
Hanumantha Kamath January 31, 2023
Leave A Reply

  • Recent Posts

    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
  • Popular Posts

    • 1
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 2
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 3
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • 4
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 5
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search