• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮುಸ್ಲಿಮರು ಬಿರಿಯಾನಿಯಲ್ಲಿ ಉಗಿದರೆ ಓಕೆನಾ ಬುದ್ಧಿಜೀವಿಗಳೇ!!

Hanumantha Kamath Posted On December 9, 2021
0


0
Shares
  • Share On Facebook
  • Tweet It

ಹಿಂದೂಗಳ ಹಬ್ಬ, ಹರಿದಿನ, ಜಾತ್ರೆ, ಉತ್ಸವ ಎಂದಕೂಡಲೇ ಈ ಪ್ರಗತಿಪರರಿಗೆ ಅದೇನೋ ತಪ್ಪು ಹುಡುಕುವ ಸಂಭ್ರಮ ಶುರುವಾಗುತ್ತದೆ. ಅನಾದಿಕಾಲದಿಂದಲೂ ಜಾರಿಯಲ್ಲಿರುವ ಸಂಪ್ರದಾಯವನ್ನು ಕೂಡ ಏನೇನೋ ಹೆಸರೇಳಿಕೊಂಡು ಮುಗಿಸುವ ಪ್ರಯತ್ನ ಮಾಡುತ್ತಾ ಇರುತ್ತಾರೆ. ಅದೇ ಮುಸ್ಲಿಮರು ಏನು ಮಾಡಿದರೂ ಈ ಬುದ್ಧಿಜೀವಿಗಳಿಗೆ ಅದರಲ್ಲಿ ಪಾಪ ಏನೂ ಹುಳುಕು ಕೂಡ ಕಾಣುವುದಿಲ್ಲ. ಇವತ್ತು ಹಿಂದೂಗಳಲ್ಲಿರುವ ಒಂದು ಸಂಪ್ರದಾಯ ಎಷ್ಟು ಪವಿತ್ರವಾಗಿರುವುದು ಮತ್ತು ಮುಸ್ಲಿಮರು ಆಚರಿಸುತ್ತಿರುವ ಒಂದು ಸಂಪ್ರದಾಯ ಎಂದು ಹೇಳಲಾಗುವ ಅಸಹ್ಯ ಎಷ್ಟು ಕನಿಷ್ಟವಾಗಿದೆ ಎನ್ನುವುದರ ತುಲನೆ ಮಾಡೋಣ. ಇವುಗಳಲ್ಲಿ ಯಾವುದು ಸರಿ ಅಥವಾ ತಪ್ಪು ಎನ್ನುವುದು ನಿಮ್ಮ ಮನಸ್ಥಿತಿಗೆ ಬಿಟ್ಟಿದ್ದು. ಮೊದಲಿಗೆ ಹಿಂದೂಗಳದ್ದು ತೆಗೆದುಕೊಳ್ಳೋಣ. ಮಡೆ ಸ್ನಾನ. ಇದು ಏನು ಎಂದು ಎಲ್ಲರಿಗೂ ಗೊತ್ತಿದೆ. ಅದರಲ್ಲಿಯೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯವರಿಗೆ ಹೇಳಬೇಕಾಗಿಯೇ ಇಲ್ಲ. ನೀವು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಷಷ್ಟಿ ಮಹೋತ್ಸವದ ಸಂದರ್ಭದಲ್ಲಿ ಹೋಗಿದ್ದೀರಿ ಎಂದಾದರೆ ಮಡೆ ಸ್ನಾನದ ಪದ್ಧತಿಯನ್ನು ಕಣ್ಣಾರೆ ನೋಡುತ್ತಿರಿ. ಇದನ್ನು ನ್ಯಾಯಾಲಯದ ಅಂಗಳಕ್ಕೆ ತೆಗೆದುಕೊಂಡು ಹೋಗಿ ದೊಡ್ಡ ವಿವಾದ ಮಾಡಿದ ಅಪಕೀರ್ತಿ ಪ್ರಗತಿಪರರಿಗೆ ಹೋಗಬೇಕು. ಬುದ್ಧಿಜೀವಿಗಳು ಇದನ್ನು ಬ್ರಾಹ್ಮಣರು ಕೆಳವರ್ಗದ ಜನರ ಮೇಲೆ ಹೇರುತ್ತಿರುವ ಅನಿಷ್ಟ ಪದ್ಧತಿ ಎಂದು ಜಗತ್ತಿಗೆ ಸಾರಿದರು. ಹೈಕೋರ್ಟ್ ಇವರ ಮಾತುಗಳನ್ನು ನಂಬಿ ಈ ಪದ್ಧತಿಯನ್ನು ಮುಂದುವರೆಸಬಾರದು ಎಂದು ಹೇಳಿತು. ನಂತರ ಸುಪ್ರೀಂಕೋರ್ಟ್ ಅಂಗಳಕ್ಕೆ ಈ ಪ್ರಕರಣ ಕೂಡ ಹೋಯಿತು. ಅಷ್ಟಕ್ಕೂ ಈ ಮಡೆ ಸ್ನಾನವನ್ನು ಯಾವ ವ್ಯಕ್ತಿಗೂ ಬಲವಂತವಾಗಿ ಎಲ್ಲಿಯೂ ಮಾಡಿಸುವುದಿಲ್ಲ. ನಿಮಗೆ ಮಾಡಲು ಇಷ್ಟವಿದೆಯೋ ನೀವು ಮಾಡಬಹುದು. ಇನ್ನು ಮಾಡಿದರೆ ಏನಾದರೂ ಪ್ರಯೋಜನ ಇದೆಯಾ ಎಂದು ಈ ಬಗ್ಗೆ ಏನೂ ಗೊತ್ತಿಲ್ಲದವರು ಕೇಳಬಹುದು. ಪ್ರಯೋಜನ ಇದೆ. ನಿಮ್ಮ ದೇಹದಲ್ಲಿ ಏನಾದರೂ ಚರ್ಮರೋಗಾದಿ ಸಮಸ್ಯೆಗಳು ಬಂದರೆ ನೀವು ಎಲ್ಲಾ ರೀತಿಯ ಅಲೋಪತಿ, ಆಯುರ್ವೇದಿಕ್ ಔಷಧ ಮಾಡಿದ ನಂತರವೂ ಅದು ಏನೂ ಪರಿಣಾಮಕಾರಿ ಆಗಿಲ್ಲ ಎಂದು ಅರಿವಿಗೆ ಬಂದ ನಂತರ ಕಟ್ಟಕಡೆಯದಾಗಿ ನೀವು ಹೋಗುವುದು ಈ ಮಡೆಸ್ನಾನವನ್ನು ಮಾಡಲು. ಇದರಿಂದ ಅನೇಕರಿಗೆ ಲಾಭಗಳಾಗಿವೆ. ಚರ್ಮವ್ಯಾದಿಗಳು ಗುಣವಾಗಿದೆ. ಅವರು ತಮ್ಮ ಅನುಭವಗಳನ್ನು ಬೇರೆಯವರೊಂದಿಗೆ ಮಾತ್ರವಲ್ಲ ಮಾಧ್ಯಮದವರೊಂದಿಗೂ ಹಂಚಿಕೊಂಡಿದ್ದನ್ನು ಜಗತ್ತೆ ನೋಡಿದೆ. ಇನ್ನು ಅನೇಕರಿಗೆ ಮಾನಸಿಕ ಒತ್ತಡಗಳು ಕಾಯಿಲೆಗಳಾಗಿ ಪರಿವರ್ತನೆಯಾಗುವಾಗ ಮನಸ್ಸು ಹಗುರವಾಗಲು ಕೂಡ ಮಡೆಸ್ನಾನ ಮಾಡಲಾಗುತ್ತದೆ. ಇನ್ನು ಕೆಲವರು ಪಾಪಗಳನ್ನು ಕಳೆಯಲು ನಾವು ಮಡೆಸ್ನಾನ ಮಾಡಿದ್ವಿ, ಹರಕೆ ತೀರಿಸಲು, ದೇವರ ಬಳಿ ಪ್ರಾರ್ಥಿಸಿದ ವಿಷಯ ಫಲಿಸಿದಾಗ ಮಡೆಸ್ನಾನ ಮಾಡಿದ್ದೇವೆ ಎಂದು ಕೂಡ ಹೇಳುವವರು ಇದ್ದಾರೆ. ಆದರೆ ಎಲ್ಲವನ್ನು ಮೂಢನಂಬಿಕೆ ಎಂದು ಪರಿಗಣಿಸುವ ನಾಸ್ತಿಕರಿಗೆ ನಾವು ಏನು ಹೇಳಿದರೂ ಕಡಿಮೆ. ಹಾಗಂತ ಅವರಿಗೆ ಮುಸ್ಲಿಮರು ಮಾಡುವ ಕರ್ಮವೊಂದು ಕಾಣಿಸುವುದೇ ಇಲ್ಲ.

ಇತ್ತೀಚೆಗೆ ವೈರಲ್ ಆಗಿರುವ ಕೆಲವು ವಿಡಿಯೋಗಳು ಮುಸ್ಲಿಂ ಸಮಾರಂಭಗಳಲ್ಲಿ ಅಡುಗೆ ತಯಾರಿಸುವ ಸ್ಥಳಗಳಲ್ಲಿ ಏನು ಆಗುತ್ತಿದೆ ಎನ್ನುವುದರ ಸ್ಪಷ್ಟ ಪರಿಕಲ್ಪನೆ ಜಗತ್ತಿಗೆ ತೋರಿಸಿವೆ. ಸಮಾರಂಭಗಳ ಅಡುಗೆ ರೆಡಿ ಮಾಡುವ ಸ್ಥಳಗಳಲ್ಲಿ ಬಿರಿಯಾನಿ ತಯಾರಾಗುವ ಬೃಹತ್ ಪಾತ್ರೆ ಇದೆಯಲ್ಲ, ಅದರ ಒಳಗೆ ಕೆಲವರು ಥೂ ಎಂದು ಎಂಜಿಲನ್ನು ಉಗಿಯುವ ದೃಶ್ಯವನ್ನು ನೀವು ವಿಡಿಯೋಗಳಲ್ಲಿ ನೋಡಿರಬಹುದು. ಇದರಿಂದ ಯಾವ ಕಾರ್ಯಸಾಧನೆ ಆಗುತ್ತದೆ ಎನ್ನುವ ಐಡಿಯಾ ಉಗಿದವರಿಗೆ ಗೊತ್ತಿದೆಯೋ ಇಲ್ವೋ, ಆದರೆ ಇವರು ಉಗಿಯುವುದರಿಂದ ಆ ಪದಾರ್ಥ ಅಥವಾ ಆಹಾರ ಭ್ರಷ್ಟ ಆಗುವುದಿಲ್ಲವೇ? ಇವರ ಸಮಾರಂಭಕ್ಕೆ ಊಟಕ್ಕೆ ಕುಳಿತವರು ಯಾರದ್ದೋ ಎಂಜಿಲನ್ನು ತಿನ್ನುವ ಅನಿಷ್ಟ ಅನುಭವಿಸಬೇಕಾಗುತ್ತದೆ. ಮುಸ್ಲಿಮರ ಸಮಾರಂಭದಲ್ಲಿ ಬಹುತೇಕರು ಮುಸ್ಲಿಮರೇ ಅತಿಥಿಯಾಗಿದ್ದರೂ ಒಬ್ಬರ ಎಂಜಿಲನ್ನು ಇನ್ನೊಬ್ಬರು ತಿನ್ನುವುದು ಅವರಿಗೆ ಒಪ್ಪಿಗೆಯಾಗಿರಬಹುದು. ಆದರೆ ಇದು ತಪ್ಪು ಎಂದು ಯಾವ ಪ್ರಗತಿಪರ ಬುದ್ಧಿಜೀವಿ ಕೂಡ ಇಲ್ಲಿಯವರೆಗೆ ಬಾಯಿ ತೆರೆದಿಲ್ಲ. ಹಾಗಾದರೆ ಇವರಿಗೆ ಕಾಣಿಸುವುದು ಮಡೆಸ್ನಾನ ಮಾತ್ರವೇ? ಎಲ್ಲಿಯ ತನಕ ಎಂದರೆ ಮೊದಲ ಪಂಕ್ತಿಯಲ್ಲಿ ಕುಳಿತ ಬ್ರಾಹ್ಮಣರ ಎಂಜಿಲೆಲೆಯ ಮೇಲೆ ದಲಿತರು ಮಡೆಸ್ನಾನ ಹಾಕುವ ಮೂಲಕ ಆ ವರ್ಗದವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಇವರು ಸುಳ್ಳನ್ನು ಹೇಳುತ್ತಾ ಬಂದರು. ಇಲ್ಲಿ ಯಾವ ದಲಿತನಿಗೂ ಬಲವಂತವಾಗಿ ಎಳೆದು ತಂದು ಎಂಜಿಲೆಲೆಯ ಮೇಲೆ ಉರುಳಾಡಿಸಲಿಲ್ಲ. ಇನ್ನು ಮಡೆಸ್ನಾನ ಮಾಡುವವರು ಯಾರು ಎಂದು ನೀವು ಗಮನಿಸಿರಬಹುದು, ಇಂಜಿನಿಯರ್ ಕೂಡ ಇದ್ದಾರೆ, ವಕೀಲರೂ ಇದ್ದಾರೆ, ವೈದ್ಯರೂ ಇದ್ದಾರೆ, ಉದ್ಯಮಿಗಳು, ಶಿಕ್ಷಕರು ಇದ್ದಾರೆ. ದೂರದೂರಿನಿಂದ ಮಡೆಸ್ನಾನಕ್ಕೆ ಬರುವವರು ಇದ್ದಾರೆ. ಅದೆಲ್ಲವನ್ನು ಸೈಡ್ ಲೈನ್ ಮಾಡಿ ಕೇವಲ ಜಾತಿ ಜಾತಿಗಳನ್ನು ಎತ್ತಿ ಹಾಕುವ ಬುದ್ಧಿಜೀವಿಗಳಿಗೆ ಯಾವ ಎಕ್ಕಡದಿಂದ ಹೊಡೆಯಬೇಕು. ಮುಸ್ಲಿಮರು ಮಾಡಿದರೆ ಚಮತ್ಕಾರ, ಹಿಂದೂಗಳು ಮಾಡಿದರೆ ಬಲತ್ಕಾರನಾ!

0
Shares
  • Share On Facebook
  • Tweet It




Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Hanumantha Kamath May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Hanumantha Kamath May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
  • Popular Posts

    • 1
      ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್

  • Privacy Policy
  • Contact
© Tulunadu Infomedia.

Press enter/return to begin your search