ಹಿಂದೂ ಯುವತಿಗೆ ಹೊಡೆದು ವಿಡಿಯೋ ಮಾಡುವ ಬದಲು ಬುದ್ಧಿ ಹೇಳಿ!!
ವಿದೇಶಗಳಲ್ಲಿ ಇದ್ದ ಹಾಗೆ ಭಾರತದಲ್ಲಿ ಬಹಿರಂಗವಾಗಿ ಯುವಕ, ಯುವತಿ ಪರಸ್ಪರ ಚುಂಬನ ನೀಡುವ ಸಂಪ್ರದಾಯವಿಲ್ಲ. ಇದು ನಮ್ಮ ದೇಶದ ನೈತಿಕ ಪರಿಧಿಯ ಒಳಗೆ ಬರುವುದಿಲ್ಲ. ಆದ್ದರಿಂದ ಒಂದು ವೇಳೆ ಯಾರಾದರೂ ಹೀಗೆ ಮಾಡುತ್ತಿದ್ದರೆ ಅದನ್ನು ನೋಡುವವರಿಗೆ ಅದು ಸಹ್ಯವೂ ಆಗುವುದಿಲ್ಲ. ಅದರಲ್ಲಿಯೂ ಚಲಿಸುತ್ತಿರುವ ಬಸ್ಸಿನಲ್ಲಿ ಒಂದು ಹಿಂದೂ ಹುಡುಗಿ ತನ್ನ ಮಾನ ಮರ್ಯಾದೆ ಪಕ್ಕಕ್ಕೆ ಇಟ್ಟು ಮುಸ್ಲಿಂ ಯುವಕನಿಗೆ ಚುಂಬಿಸುತ್ತಿದ್ದರೆ ಅದನ್ನು ಬಸ್ಸಿನ ಸಿಬ್ಬಂದಿಗಳು ಪ್ರಶ್ನಿಸಿದರೆ ಅದರಲ್ಲಿ ತಪ್ಪು ಏನಿದೆ? ಆದರೆ ಪ್ರಶ್ನಿಸಿದ ರೀತಿ ಸರಿಯಿರಲಿಲ್ಲ ಎಂದು ಆಕ್ಷೇಪಿಸಿ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಅದರೊಂದಿಗೆ ಪೊಲೀಸರು ಸುಮೋಟೋ ಕೇಸು ದಾಖಲಿಸಿರುವುದು ಹಿಂದೂ ಸಂಘಟನೆಯ ಕೋಪಕ್ಕೆ ಕಾರಣವಾಗಿದೆ. ಸುಮೋಟೋ ಅಂದರೆ ಸ್ವಯಂಪ್ರೇರಿತವಾಗಿ ಮುಂದೆ ಬಂದು ಪ್ರಕರಣ ದಾಖಲಿಸುವುದನ್ನು ಸುಮೋಟೋ ಎನ್ನುತ್ತಾರೆ. ಪೊಲೀಸ್ ಇಲಾಖೆಗೆ ಅಂತಹ ಸ್ವಾತಂತ್ರ್ಯವಿದೆ. ಯಾವಾಗ ಒಂದು ಗಂಭೀರವಾದ ಪ್ರಕರಣದಲ್ಲಿ ಯಾವ ನಾಗರಿಕ ಕೂಡ ಮುಂದೆ ಬಂದು ಆ ಪ್ರಕರಣದಲ್ಲಿ ಕೇಸು ದಾಖಲಿಸುವುದಿಲ್ಲವೋ ಆಗ ಪೊಲೀಸರೇ ಕೇಸು ದಾಖಲಿಸುತ್ತಾರೆ. ಇಲ್ಲಿಯೂ ನಾಲ್ಕು ಜನರ ಮೇಲೆ ಕೇಸು ದಾಖಲಿಸಲಾಗಿದೆ. ಈಗ ಕೇಸು ದಾಖಲಾಗಿರಬಹುದು.
ನಂತರ ಭಾರತೀಯ ಜನತಾ ಪಾರ್ಟಿಯ ಜನಪ್ರತಿನಿಧಿಗಳು ಮುಂದೆ ಬಂದು ಆ ಯುವಕರ ಯೋಗಕ್ಷೇಮ ವಿಚಾರಿಸಬಹುದು. ವಕೀಲರನ್ನು ಹಿಡಿದು ಜಾಮೀನಿನಲ್ಲಿ ಬಿಡಿಸಬಹುದು. ಇದೆಲ್ಲ, ಓಕೆ. ಆದರೆ ಶಾಂತಿ, ಸುವ್ಯವಸ್ಥೆಗೆ ಭಂಗ ಬರುತ್ತದೆ ಎಂದು ಹೇಳುತ್ತಾ ಇಂತಹ ಪ್ರಕರಣಗಳಲ್ಲಿ ಸುಮೋಟೋ ಕೇಸು ದಾಖಲಿಸುವ ನಮ್ಮ ಪೊಲೀಸರು ಯಾಕೆ ಕೆಲವು ಪ್ರಕರಣಗಳಲ್ಲಿ ಮೌನವಾಗಿ ಎಲ್ಲವನ್ನು ಅದರ ಪಾಡಿಗೆ ಬಿಟ್ಟಿರುತ್ತಾರೆ. ಉದಾಹರಣೆಗೆ ಆವತ್ತು ಎಸ್ ಡಿಪಿಐ ಮುಖಂಡ ಎನಿಸಿಕೊಂಡ ಒಬ್ಬ ವ್ಯಕ್ತಿ ಮಂಗಳೂರಿನಲ್ಲಿ ಬಹಿರಂಗ ವೇದಿಕೆಯಲ್ಲಿ ತಾಂಟ್ರೆ ಬಾ ತಾಂಟ್ ಎಂದು ಬಹಿರಂಗ ಆಹ್ವಾನ ನೀಡುತ್ತಿದ್ದಾಗ ಯಾರಾದರೂ ಹಿಂದೂ ಯುವಕರು ಅಲ್ಲಿಗೆ ನುಗ್ಗಿ ಬಾ ತಾಂಟ್ ಎಂದು ಪ್ರತ್ಯುತ್ತರ ನೀಡಿದ್ರೆ ಏನಾಗುತ್ತಿತ್ತು ಅಥವಾ ಎಸ್ ಡಿಪಿಐ ಮುಖಂಡರ ಹೇಳಿಕೆಯಿಂದ ಪ್ರೇರೇಪಿತಗೊಂಡು ಕೆಲವು ಕಾರ್ಯಕರ್ತರು ಕೇಸರಿ ಪಡೆಗಳಿಗೆ ತಾಂಟಲು ಹೋದರೆ ಅದರಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದರೆ ಆಗ ಯಾರು ಜವಾಬ್ದಾರಿ. ಅಂತಹ ಪ್ರಕರಣದಲ್ಲಿ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸುವುದಿಲ್ಲ. ಇಲ್ಲಿ ಮಾತ್ರ ದಾಖಲಿಸುತ್ತಾರೆ. ಆದ್ದರಿಂದ ಇನ್ನು ಮುಂದೆ ಹಿಂದೂ ಯುವತಿಯರು ಬಹಿರಂಗವಾಗಿ ಮುಸ್ಲಿಂ ಯುವಕರೊಂದಿಗೆ ಬಹಿರಂಗವಾಗಿ ಚಕ್ಕಂದವಾಡುವಾಗ ಯಾರಾದರೂ ನೋಡಿದರೆ ಅವಳ ಮನೆಯವರ ಫೋನ್ ನಂಬರ್ ಅವಳಿಂದ ಪಡೆಯಬೇಕು. ಏನೂ ಜೋರು ಮಾಡಲು ಹೋಗಲೇಬಾರದು. ಅವಳ ಮನೆಯವರಿಗೆ ಕಾಲ್ ಮಾಡಿ ಅಲ್ಲಿ ಕರೆಸಬೇಕು. ನೋಡಿ ನಿಮ್ಮ ಮಗಳು ಹೀಗೆ ಮುಸ್ಲಿಂ ಯುವಕನೊಂದಿಗೆ ಲವ್ವಿಡವ್ವಿ ಮಾಡುತ್ತಿದ್ದಾಳೆ. ನಿಮ್ಮ ಅಭಿಪ್ರಾಯ ಹೇಳಿ, ಎನ್ನಬೇಕು. ನಂತರ ಆಕೆಯ ಮನೆಯವರೇ ಅದನ್ನು ನೋಡಿಕೊಳ್ಳುತ್ತಾರೆ. ಅವರು ಹೊಡೆದರೆ ಯಾವ ಪೊಲೀಸರು ಕೂಡ ಏನೂ ಮಾಡಲು ಸಾಧ್ಯವಿಲ್ಲ. ಅದೇ ನೀವು ಬೈಯುವುದು, ಹೊಡೆಯುವುದು ಮಾಡಿದ ಕೂಡಲೇ ಈ ಪೊಲೀಸರಿಗೆ ದೊಡ್ಡ ಸಮಸ್ಯೆ ಉದ್ಭವವಾದಂತೆ ಕಾಣುತ್ತದೆ. ಆ ಯುವತಿಗೆ ಹೊಡೆಯುವ ವಿಡಿಯೋ ತೆಗೆಯುವ ಮೂಲಕ ನೀವು ಸುಮ್ಮನೆ ಸಮಸ್ಯೆಗೆ ಸಿಲುಕುವ ಬದಲು ಇಂತಹ ವಿಷಯದಲ್ಲಿ ಬಹಳ ಸೂಕ್ಷ್ಮವಾಗಿ ಈ ವಿಷಯವನ್ನು ಹ್ಯಾಂಡಲ್ ಮಾಡಬೇಕು.
ನೀವು ವಿಡಿಯೋ ತೆಗೆದಾಗ ಅವಳಿಗೆ ಯಾಕೆ ಹೀಗೆ ಮಾಡ್ತಿಯಮ್ಮ ಎಂದು ಕೇಳಿ. ಹಿಂದೆ ಅಕ್ರಮ ಗೋಸಾಗಾಟವನ್ನು ಹಿಂದೂ ಕಾರ್ಯಕರ್ತರು ಹಿಡಿಯುತ್ತಿದ್ದಾಗ ಅಲ್ಲಿ ಆಗುತ್ತಿದ್ದ ತಿಕ್ಕಾಟದ ಪರಿಣಾಮ ಹಿಂದೂ ಕಾರ್ಯಕರ್ತರೇ ಸಮಸ್ಯೆ ಅನುಭವಿಸುತ್ತಿದ್ದರು. ನಂತರ ಪೊಲೀಸರಿಗೆ ಸುದ್ದಿ ತಲುಪಿ ಅಡ್ಡ ಹಾಕುವ ಪ್ರಕ್ರಿಯೆ ಜಾರಿಗೆ ಬಂತು. ಇಲ್ಲಿ ಕೂಡ ಹಾಗೆ. ಹೊಡೆಯುವುದರಿಂದ ಅವಳನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ. ಯಾಕೆಂದರೆ ಅದನ್ನು ಅವಳು ನಿಮ್ಮ ವಿರುದ್ಧ ದ್ವೇಷವನ್ನಾಗಿ ಬಳಸಬಹುದು. ಅದರ ಬದಲು ಅಲ್ಲಿ ಬುದ್ಧಿ ಹೇಳಿ. ಬುದ್ಧಿ ಹೇಳುವ ವಿಡಿಯೋವನ್ನು ಮಾಡಿ ವೈರಲ್ ಮಾಡಿ. ಇದರಿಂದ ಅವಳು ಕೂಡ ಸರಿದಾರಿಗೆ ಬರಬಹುದು. ಆ ವಿಡಿಯೋ ನೋಡಿ ಬೇರೆ ಹಿಂದೂ ಹೆಣ್ಣುಮಕ್ಕಳು ಜಾಗೃತರಾಗಬಹುದು. ಆಗ ಪೊಲೀಸರು ಅಲ್ಲಿ ಕೇಸು ದಾಖಲಿಸಲು ಆಸ್ಪದ ಇರಲ್ಲ. ಹಾಗಂತ ಹೊಡೆಯುವುದು, ಬೈಯುವುದು ಎಲ್ಲವನ್ನು ವಿಡಿಯೋದಲ್ಲಿ ಚಿತ್ರೀಕರಿಸಿ, ಅದನ್ನು ವೈರಲ್ ಮಾಡಿದ ನಂತರ ಪೊಲೀಸರು ಏನೂ ಕ್ರಮ ತೆಗೆದುಕೊಳ್ಳಬಾರದು ಎಂದರೆ ಆಗುತ್ತಾ? ಯಾಕೆಂದರೆ ಒಂದು ಹುಡುಗಿಯನ್ನು ಹೊಡೆದರೂ ಪೊಲೀಸರು ಏನು ಕ್ರಮ ತೆಗೆದುಕೊಂಡಿಲ್ಲ ಎಂದು ವಿಪಕ್ಷಗಳು, ಕಮ್ಯೂನಿಷ್ಟರು ಗಲಾಟೆ ಮಾಡುತ್ತಾರೆ. ಆಗ ಪೊಲೀಸರು ಅಡಕತ್ತರಿಗೆ ಸಿಲುಕುತ್ತಾರೆ. ಈಗೀಗ ಏನಾಗಿದೆ ಎಂದರೆ ತಾವು ಮಾಡಿದ ಘನಕಾರ್ಯವನ್ನು ನಾಲ್ಕು ಜನ ನೋಡಬೇಕು, ಅದನ್ನು ಹೊಗಳಬೇಕು ಎನ್ನುವ ಕಾರಣಕ್ಕೆ ಸ್ಪರ್ಧೆಗೆ ಬಿದ್ದವರಂತೆ ಮೊಬೈಲ್ ಕ್ಯಾಮೆರಾದಲ್ಲಿ ತಮ್ಮ ಪೌರುಷ ತೋರಿಸಿ ನಂತರ ಕೇಸ್ ಆದ ಬಳಿಕ ಯಾರು ಬರಲಿಲ್ಲ ಎಂದು ಮತ್ತೆ ಪೋಸ್ಟರ್ ಮಾಡಿದರೆ ಆಗಲ್ಲ. ಬುದ್ಧಿಯನ್ನು ಆತುರದ ಕೈಯಲ್ಲಿ ಕೊಡಬಾರದು. ಮುಳ್ಳಿನ ಮೇಲೆ ಬಟ್ಟೆ ಬಿದ್ದಿದೆ. ಹೇಗೆ ತೆಗೆಯಬೇಕು ಎನ್ನುವುದು ವಿವೇಚನೆಗೆ ಬಿಟ್ಟಿದ್ದು. ಗಡಿಬಿಡಿಯಲ್ಲಿ ಬಟ್ಟೆ ಎಳೆದರೆ ಹರಿದು ಹೋಗುತ್ತದೆ. ನಂತರ ಹೊಲಿಯಲು ಯಾರಾದರೂ ಬಂದೇ ಬರುತ್ತಾರೆ. ತಾಳ್ಮೆ ಇರಬೇಕಷ್ಟೇ!
Leave A Reply