• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಓವೈಸಿ ಸತ್ತ ನಂತರ ಈ ದೇಶದ ಮುಸ್ಲಿಮರ ಗತಿ ಏನು ಎಂದು ನಾವು ಕೇಳಿದರೆ….!

Hanumantha Kamath Posted On December 28, 2021


  • Share On Facebook
  • Tweet It

ಓವೈಸಿ ಉತ್ತರಪ್ರದೇಶದಲ್ಲಿ ಬಂದು ಯಾರ ಮತವನ್ನು ಸೆಳೆಯಲು ಯತ್ನಿಸುತ್ತಾರೋ ಅವರಿಗೆ ಗೊತ್ತು. ಹಿಂದೂಗಳಂತೂ ಅವರ ಪಕ್ಷಕ್ಕೆ ಮತ ಹಾಕುವ ಸಾಧ್ಯತೆ ಇಲ್ಲ. ಆದರೆ ಅವರ ಹೇಳಿಕೆಯಿಂದ ಹಿಂದೂ ಮತ್ತು ಮುಸ್ಲಿಮರ ನಡುವಿನ ಕಂದಕ ಮಾತ್ರ ಸ್ಪಷ್ಟವಾಗಿ ದೊಡ್ಡದಾಗುವ ಸಾಧ್ಯತೆ ಇದೆ. ಅಷ್ಟಕ್ಕೂ ಓವೈಸಿ ಹೇಳಿರುವುದೇನು? ” ಕೆಲವು ಕಾಲದ ಬಳಿಕ ಯೋಗಿ ಮಠಕ್ಕೆ ಹಿಂತಿರುಗುತ್ತಾರೆ, ಮೋದಿ ಪರ್ವತಕ್ಕೆ ಮರಳುತ್ತಾರೆ. ಆ ನಂತರ ನಿಮ್ಮನ್ನು ರಕ್ಷಿಸುವವರು ಯಾರು?” ಎಂದು ಓವೈಸಿ ಕೇಳಿದ್ದಾರೆ. ಈ ಹೇಳಿಕೆಗೆ ಎರಡು ರೀತಿಯ ಆಯಾಮಗಳಿವೆ. ಒಂದನೇಯದಾಗಿ ಮೋದಿ ಮತ್ತು ಯೋಗಿ ಇರುವ ತನಕ ಹಿಂದೂಗಳು ಸುರಕ್ಷಿತರು ಎಂದು ಓವೈಸಿ ಭರವಸೆ ನೀಡಿದಂತೆ ಆಗಿದೆ. ಇನ್ನೊಂದು ಅವರಿಲ್ಲದಿದ್ದರೆ ಯಾರೂ ಇಲ್ವಾ ಎನ್ನುವ ಪ್ರಶ್ನೆಯನ್ನು ಹಿಂದೂಗಳ ಮನಸ್ಸಿನಲ್ಲಿ ಹುಟ್ಟುಹಾಕಿದಂತೆ ಆಗಿದೆ. ಈಗ ವಿಷಯಕ್ಕೆ ಬರೋಣ. ಈ ಭಾರತ ಮೋದಿ, ಯೋಗಿ ಅಧಿಕಾರಕ್ಕೆ ಬರುವ ಮೊದಲಿನಿಂದಲೂ ಇತ್ತು. ಮತ್ತೆ ಕೂಡ ಇರುತ್ತದೆ. ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡವನ್ನು ಶ್ರೀರಾಮ ಭಕ್ತರು ಧರೆಗೆ ಬೀಳಿಸುವಾಗ ಮೋದಿ ಆಗಲಿ, ಯೋಗಿ ಆಗಲಿ ಅಧಿಕಾರದಲ್ಲಿ ಇರಲಿಲ್ಲ. ಆದರೂ ಧೈರ್ಯದಿಂದ ಹಿಂದೂ ಕಾರ್ಯಕರ್ತರು ಮುನ್ನುಗ್ಗಿದ್ದರು.

ಇನ್ನು ಕಾಂಗ್ರೆಸ್ಸಿನ ವಿಷಯವನ್ನೇ ತೆಗೆದುಕೊಳ್ಳೋಣ. ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ಅವರು ಬಿಟ್ಟರೆ ಭಾರತವನ್ನು ಆಳ್ವಿಕೆ ಮಾಡಬಲ್ಲ ಮತ್ತೊಬ್ಬ ವ್ಯಕ್ತಿ ಸಿಗುತ್ತಾರಾ ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ಸಿಗರು ಕೇಳುತ್ತಿದ್ದರು. ಅವರಿಗಿಂತ ಮೊದಲು ಲಾಲ್ ಬಹುದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ಇವರಷ್ಟು ಪಾರದರ್ಶಕ, ಭ್ರಷ್ಟಾಚಾರರಹಿತ, ನಿಷ್ಕಲಂಕ ಪ್ರಧಾನಿ ಭಾರತಕ್ಕೆ ಮತ್ತೆ ಸಿಗುತ್ತಾರಾ ಎನ್ನುವ ಪ್ರಶ್ನೆಯನ್ನು ಭಾರತಕ್ಕೆ ಭಾರತವೇ ಕೇಳಿತ್ತು. ಇನ್ನು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಇಂತಹ ನಾಯಕ ಮತ್ತೊಮ್ಮೆ ಗೆಲ್ಲದಿದ್ದರೆ ದೇಶಕ್ಕೆ ತುಂಬಾ ನಷ್ಟ ಎಂದು ಹೇಳಲಾಗುತ್ತಿತ್ತು. ಆದರೆ ವಾಜಪೇಯಿ ನಂತರ ಸೋತರು. ನಂತರ ಒಂದು ದಶಕದ ಗ್ಯಾಪ್ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಅದ್ವಿತೀಯ ಛಾಪನ್ನು ಮೂಡಿಸಿದವರು ನರೇಂದ್ರ ಮೋದಿ. ಅವರು ಬಾಯಿಬಿಟ್ಟು ಹೇಳದಿದ್ದರೂ ಅವರನ್ನು ಈ ದೇಶ ಹಿಂದೂರಕ್ಷಕನ ದೃಷ್ಟಿಯಲ್ಲಿ ನೋಡುತ್ತಿದೆ. ಇನ್ನು ಯೋಗಿ ಆದಿತ್ಯನಾಥ ಅವರ ಬಗ್ಗೆ ಹೇಳಲೇಬೇಕಾಗಿಲ್ಲ. ಅವರು ಉಟ್ಟ ದಿರಿಸು ಮತ್ತು ಹಿನ್ನಲೆಯೇ ಸಾಕು, ಅವರು ಹಿಂದೂತ್ವಕ್ಕಾಗಿಯೇ ಹುಟ್ಟಿದವರು ಎನ್ನುವುದರಲ್ಲಿ ಸಂಶಯವಿಲ್ಲ. ಇದರೊಂದಿಗೆ ಮೋದಿಯ ಉತ್ತರಾಧಿಕಾರಿ ಎಂದು ಯೋಗಿಯವರನ್ನು ಬಿಂಬಿಸಲಾಗುತ್ತಿದೆ. ಹಾಗಂತ ಇವರು ಹೋದ ಮೇಲೆ ಹಿಂದೂಗಳ ಕಥೆ ಮುಗಿಯಿತಾ ಎಂದು ಓವೈಸಿ ಹೇಳಿಕೆಯ ನಂತರ ಯಾರಿಗಾದರೂ ಅನಿಸಿರಬಹುದು.

ಆದರೆ ಯಾವತ್ತೂ ಈ ಭರತಖಂಡದ ಮಣ್ಣು ಒಬ್ಬನೇ ವ್ಯಕ್ತಿಯ ಮೇಲೆ ಅವಲಂಬಿತವಾಗಿಲ್ಲ. ಕಾಲಕಾಲಕ್ಕೆ ಇಲ್ಲಿ ಅಪ್ರತಿಮ ಯೋಧರು, ಶ್ರೇಷ್ಟ ಸಂತರು, ಅದ್ವಿತೀಯ ಮಾನವತಾವಾದಿಗಳು ಮತ್ತು ಮಾದರಿ ರಾಜಕಾರಣಿಗಳು ಹುಟ್ಟಿ ಬಂದಿದ್ದಾರೆ. ಮೋದಿ ಅಥವಾ ಯೋಗಿ ಅವರಂತರಹ ರಾಜಕೀಯ ಸಂತರು ಹೇಗೆ ಶಾಶ್ವತವಲ್ಲವೋ ಅದೇ ರೀತಿ ಓವೈಸಿಯಂತಹ ಕ್ರಿಮಿಗಳು ಕೂಡ ಶಾಶ್ವತರಲ್ಲ. ಓವೈಸಿ ಸತ್ತ ಬಳಿಕ ಈ ದೇಶದ ಮುಸ್ಲಿಮರಿಗೆ ಗತಿ ಯಾರು? ಎಂದು ಯಾವ ಹಿಂದೂ ಆದರೂ ಕೇಳಿದ್ದಾರಾ? ಇಲ್ಲ, ಕೇಳುವುದಿಲ್ಲ. ಯಾಕೆಂದರೆ ಹಿಂದೂಗಳು ಅಷ್ಟು ಸೂಕ್ಷ್ಮವಾಗಿ ಸಣ್ಣ ಮನಸ್ಸಿನಿಂದ ಯಾರನ್ನಾದರೂ ಕೇವಲವಾಗಿ ತೋರಿಸಬೇಕೆನ್ನುವ ಕಾರಣದಿಂದ ಮಾತನಾಡಲು ಹೋಗುವುದಿಲ್ಲ. ಅದೇನಿದ್ದರೂ ಕೇವಲ ಓವೈಸಿಯಂತಹ ನೀಚರಿಗೆ ಮಾತ್ರ ಅನ್ವಯಿಸುವುದು. ಇನ್ನು ಉತ್ತರ ಪ್ರದೇಶ ಈಗ ಶಾಂತವಾಗಿದೆ. ಇಂತಹ ಹೇಳಿಕೆಗಳಿಂದ ಮತ್ತೆ ಗಲಾಟೆಗಳು ಉದ್ಭವಿಸಿದರೆ ಹೈದ್ರಾಬಾದಿನಲ್ಲಿ ಕುಳಿತು ಓವೈಸಿ ಚಂದ ನೋಡುತ್ತಾನಾ? ಇನ್ನು ಮೋದಿ, ಯೋಗಿಯವರು ತಮ್ಮ ಉತ್ತಮ ಆಡಳಿತದಿಂದ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ ವಿನ: ಅವರು ಧರ್ಮ ರಕ್ಷಕರು ಎಂದು ಅವರು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿಲ್ಲ. ಮೋದಿ ಪ್ರಥಮ ಬಾರಿ ಪ್ರಧಾನಿಯಾದ ತಕ್ಷಣ ಒಂದು ರಾಜ್ಯದ ಮುಖ್ಯಮಂತ್ರಿಯಾಗುವುದು ಮತ್ತು ರಾಷ್ಟ್ರದ ಪ್ರಧಾನಿಯಾಗುವುದು ಬೇರೆ ಬೇರೆ. ಸಿಎಂ ಆಗುವಷ್ಟು ಪಿಎಂ ಆಗುವುದು ಸುಲಭವಲ್ಲ ಎಂದು ಹೇಳಿದ ಜನರೇ ಇದ್ದರು. ಆದರೆ ಮೋದಿ ಹಗಲಿರುಳು ಕೆಲಸ ಮಾಡಿ ಜನಮನ್ನಣೆ ಗಳಿಸಿದರು. ಹಾಗೆ ಯೋಗಿ ಕೂಡ ಒಂದು ಮಠ ಅಥವಾ ಸಂಸದರಾಗುವುದು ಬೇರೆ, ಮುಖ್ಯಮಂತ್ರಿಯಾಗಿ ರಾಜ್ಯ ಸಂಭಾಳಿಸುವುದು ಬೇರೆ ಎಂದವರಿದ್ದರು. ಆದರೆ ಈಗ ಎರಡನೇ ಬಾರಿ ಮತ್ತೆ ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬರುವ ಸಾಧ್ಯತೆ ಜಾಸ್ತಿ ಇದೆ. ಆದ್ದರಿಂದ ಅವರ್ಯಾರು ನಾವು ಹಿಂದೂಗಳನ್ನು ರಕ್ಷಿಸ್ತಿವಿ ಎಂದು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದವರಲ್ಲ. ಆದ್ದರಿಂದ ಅವರನ್ನು ಒಂದು ಧರ್ಮಕ್ಕೆ ಸೀಮಿತ ಮಾಡುವುದು ತಪ್ಪು. ಆದರೆ ಓವೈಸಿ ಕೇವಲ ಮುಸ್ಲಿಮರ ಪ್ರತಿನಿಧಿ ಎಂದು ಹೇಳಿಕೊಂಡೇ ಸಂಸದರಾದವರು. ಅವರು ಬಾವಿಯಲ್ಲಿ ಇರುವ ಕಪ್ಪೆ. ಮೋದಿ ಸಾಗರದಲ್ಲಿ ತಿಮಿಂಗಿಲ. ಯೋಗಿ ಸಮುದ್ರದಲ್ಲಿರುವ ಶಾರ್ರ್ಕ. ಕಪ್ಪೆಗಳು ಸಮುದ್ರ, ಸಾಗದರ ಕನಸು ಕಾಣಬಾರದು!

  • Share On Facebook
  • Tweet It


- Advertisement -


Trending Now
ಹೆಣ್ಣು ಕಾಮದ ಸರಕಲ್ಲ!
Hanumantha Kamath June 7, 2023
ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
Hanumantha Kamath June 6, 2023
Leave A Reply

  • Recent Posts

    • ಹೆಣ್ಣು ಕಾಮದ ಸರಕಲ್ಲ!
    • ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
  • Popular Posts

    • 1
      ಹೆಣ್ಣು ಕಾಮದ ಸರಕಲ್ಲ!
    • 2
      ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • 3
      ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • 4
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search