• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆ ಮತ್ತು ಬೀದಿಬದಿ ವ್ಯಾಪಾರಿಗಳ ನಡುವೆ ಸಮನ್ವಯತೆ ಬರದೇ ಇದ್ದರೆ….!

Hanumantha Kamath Posted On December 30, 2021


  • Share On Facebook
  • Tweet It

ಬೀದಿಬದಿ ವ್ಯಾಪಾರಿಗಳು ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಹೊರಗೆ ಎರಡು ದಿನಗಳ ತನಕ ತಮ್ಮ ಬೇಡಿಕೆಗಳ ಈಡೇರಿಕೆಗಳಿಗೆ ಪ್ರತಿಭಟನೆ ಮಾಡಿದ್ದಾರೆ. ವಿಷಯ ಏನೆಂದರೆ ತಾವು ವ್ಯಾಪಾರಕ್ಕೆ ಕುಳಿತಿದ್ದಾಗ ಅವರ ಸಾಮಾನು-ಸರಂಜಾಮುಗಳನ್ನು, ಗೂಡಂಗಡಿಗಳನ್ನು ಪಾಲಿಕೆಯವರು ಎತ್ತಿಕೊಂಡು ಹೋಗಿದ್ದಾರೆ, ಇದು ಸರಿಯಲ್ಲ, ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎನ್ನುವುದು ಪ್ರಧಾನವಾದ ಆರೋಪ. ಆದರೆ ಇಲ್ಲಿ ಈ ಪರಿಸ್ಥಿತಿ ಉದ್ಭವವಾಗಲು ಯಾರು ಕಾರಣ ಎನ್ನುವುದನ್ನು ಇದೇ ಬೀದಿಬದಿ ವ್ಯಾಪಾರಿಗಳು ಅರ್ಥ ಮಾಡಿಕೊಳ್ಳಬೇಕು. ಯಾರು ನಿಜವಾದ ಬೀದಿಬದಿ ವ್ಯಾಪಾರಿಗಳು ಇದ್ದಾರೋ ಅವರನ್ನು ಗುರುತಿಸಿ ಪಾಲಿಕೆ ಕಡೆಯಿಂದ ಗುರುತು ಚೀಟಿ ಕೊಡಲಾಗಿದೆ. ಅದೇ ರೀತಿ ಕೇಂದ್ರ ಸರಕಾರದ ನಿಯಮದ ಪ್ರಕಾರ ಅವರಿಗೆ ಸ್ಟ್ರೀಟ್ ವೆಂಡರ್ ಸ್ಟ್ರೀಟ್ ಎಂದು ಕೂಡ ಒಂದು ಜಾಗ ಗುರುತಿಸಲಾಗಿತ್ತು. ಅದು ಎಲ್ಲಿ ಅಂದರೆ ಮಂಗಳೂರಿನ ಹೃದಯಭಾಗವಾದ ಕೇಂದ್ರ ಮೈದಾನದ ಹಿಂದೆ ಯಕ್ಷಗಾನಕ್ಕಾಗಿ ಇಟ್ಟ ಜಾಗದಲ್ಲಿ ಉತ್ತಮ ರೀತಿಯಲ್ಲಿ ಇಂಟರ್ ಲಾಕ್ ಹಾಕಿಕೊಂಡು ಈ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಮೂರೇ ದಿನಗಳ ನಂತರ ಅಲ್ಲಿಂದ ಇವರು ಎದ್ದು ಹೋಗಿದ್ದರು. ಈಗ ತಾವು ಬೀದಿಬದಿ ವ್ಯಾಪಾರಿಗಳು ಎನ್ನುವ ಒಂದೇ ಕಾರಣಕ್ಕೆ ಎಲ್ಲಿ ಬೀದಿ ಸಿಗುತ್ತದೆಯೋ ಅಲ್ಲಿ ವ್ಯಾಪಾರಕ್ಕೆ ಕುಳಿತುಕೊಂಡು ಬಿಡುತ್ತಿದ್ದಾರೆ. ಅದು ಬಸ್ ಸ್ಟ್ಯಾಂಡ್ ಆಗಲಿ, ಆಸ್ಪತ್ರೆಯ ಹೊರಗೆ ಆಗಲಿ, ಶಾಲಾ ಕಾಲೇಜು ಆಗಲಿ ಇವರಿಗೆ ಪರಿವೆಯೇ ಇಲ್ಲ. ಇದು ಮೊದಲ ತಪ್ಪು. ಹಾಗಂತ ಇವರನ್ನು ಅಲ್ಲಿಂದ ಎಬ್ಬಿಸಿದರೆ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತೀರಿ ಎಂದು ಹೇಳಿಬಿಡುತ್ತಾರೆ. ಇನ್ನು ಎರಡನೇಯ ನಿಯಮವನ್ನು ಕೂಡ ಇವರು ಪಾಲಿಸುತ್ತಿಲ್ಲ. ಇಲೆಕ್ಟ್ರಾನಿಕ್ ವಸ್ತುಗಳನ್ನು ಇವರು ಮಾರುವಂತಿಲ್ಲ. ಬಟ್ಟೆ, ಚಪ್ಪಲಿ, ಪ್ಲಾಸ್ಟಿಕ್ ವಸ್ತುಗಳನ್ನು ಕೂಡ ಇವರು ಮಾರುತ್ತಾರೆ. ಹಾಗಂತ ಅದನ್ನು ಮಾರಬೇಡಿ ಎಂದು ಹೇಳಿದರೆ ಮತ್ತೆ ಹೊಟ್ಟೆಪಾಡು ಎನ್ನುತ್ತಾರೆ. ಹೀಗೆ ಎಲ್ಲ ಕಡೆಯಿಂದ ನಿಯಮಗಳನ್ನು ಉಲ್ಲಂಘಿಸಿ ಇಮೋಶನಲ್ ಟಚ್ ಕೊಟ್ಟರೆ ಪಾಲಿಕೆ ಏನು ಮಾಡಬೇಕು.

ಹಾಗಂತ ಪಾಲಿಕೆ ಏನೂ ಸಾಚಾ ಅಲ್ಲ. ಪಾರ್ಕಿಂಗ್ ಜಾಗದಲ್ಲಿ ಅತಿಕ್ರಮಣ ಮಾಡಿ ಪ್ರಭಾವಿಗಳು ಕಟ್ಟಡ ಕಟ್ಟಿದರೆ ಅದನ್ನು ತೆರವು ಮಾಡುವ ಧಮ್ ಇಲ್ಲ. ವಾಹನಗಳನ್ನು ನಿಲ್ಲಿಸಲು ಜಾಗ ಇಲ್ಲದ ಬೃಹತ್ ಕಟ್ಟಡಗಳ ಗ್ರಾಹಕರ ವಾಹನಗಳು ರಸ್ತೆಯಲ್ಲಿಯೇ ನಿಂತರೂ ಅದನ್ನು ಎತ್ತಿಕೊಂಡು ಹೋಗಲು ಇಚ್ಚಾಶಕ್ತಿ ಇಲ್ಲ. ಪೋಶ್ ಕಾರುಗಳನ್ನು ಇವರು ಮುಟ್ಟುವುದಿಲ್ಲ. ಇನ್ನು ನ್ಯಾಯಾಲಯ ಕೆಡವಿ ಎಂದು ಹೇಳಿದ ಅನಧಿಕೃತ ಕಟ್ಟಡಗಳನ್ನು ಕಣ್ಣೆತ್ತಿಯೂ ನೋಡದ ಪಾಲಿಕೆ ಬೀದಿಬದಿ ವ್ಯಾಪಾರಿಗಳ ವಸ್ತುಗಳನ್ನು ಸಲೀಸಾಗಿ ಎತ್ತಿಕೊಂಡು ಹೋಗುತ್ತಾರೆ. ಎಷ್ಟೋ ರಸ್ತೆಗಳನ್ನು ಅಗಲ ಮಾಡಿಕೊಂಡು ವಾಹನ ಸಂಚಾರ ಸಲೀಸಾಗಲಿ ಎಂದು ಯೋಜನೆ ಹಾಕಿ ರಸ್ತೆ ಅಗಲ ಮಾಡಿದರೆ ಅಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವವರಿಗೆ ತಕ್ಕಶಾಸ್ತ್ರಿ ಮಾಡಲು ಸಾಧ್ಯವಾಗದ ಪಾಲಿಕೆ ಇಲ್ಲಿ ಯಾಕೆ ಹೀಗೆ ಮಾಡುತ್ತದೆ ಎನ್ನುವುದು ಬೀದಿಬದಿ ವ್ಯಾಪಾರಿಗಳ ಅಳಲು.

ಈಗ ಪಾಲಿಕೆ ತುರ್ತಾಗಿ ಮಾಡಬೇಕಾಗಿರುವುದು ವೆಂಡರ್ ಸ್ಟ್ರೀಟ್ ಕಮಿಟಿ ಸಭೆಯನ್ನು ಕರೆಯಬೇಕು. ಆ ಕಮಿಟಿಯಲ್ಲಿ ಬೀದಿಬದಿ ವ್ಯಾಪಾರಿಗಳ ಪ್ರಮುಖರು, ಎನ್ ಜಿಒಗಳು ಎಲ್ಲಾ ಇದ್ದಾರೆ. ಅವರನ್ನು ಕರೆದು ಈಗ ಏನು ಮಾಡಬೇಕು ಎಂದು ಚರ್ಚಿಸಬೇಕು. ಅದರ ನಂತರ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇಲ್ಲಿ ಬೀದಿಬದಿ ವ್ಯಾಪಾರಿಗಳು ಕೂಡ ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕು. ಯಾಕೆಂದರೆ ಎಲ್ಲೆಲ್ಲಿಯೋ ವಸ್ತುಗಳನ್ನು ಹರಡಿ ಕುಳಿತುಕೊಂಡರೆ ಅದರಿಂದ ಪಾದಚಾರಿಗಳಿಗೆ ನಡೆದಾಡಲು ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಅದು ಆಗಬಾರದು ಎಂದಾದರೆ ಪಾಲಿಕೆ ತೋರಿಸಿದ ಜಾಗದಲ್ಲಿ ವ್ಯಾಪಾರಕ್ಕೆ ಮುಂದಾಗಬೇಕು. ಒಂದು ವೇಳೆ ಆ ಜಾಗ ಸರಿಹೊಂದದೆ ಇದ್ದರೆ ಮೂರ್ನಾಕು ಆಯ್ಕೆಗಳ ಬಗ್ಗೆ ಚರ್ಚೆಯಾಗಲಿ. ಹಾಗಂತ ಖುಷಿ ಬಂದ ಕಡೆ ವ್ಯಾಪಾರಕ್ಕೆ ಕುಳಿತುಕೊಳ್ಳುವಂತಿಲ್ಲ. ಇನ್ನು ಬೀದಿಬದಿ ವ್ಯಾಪಾರದಲ್ಲಿ ಏನು ವ್ಯಾಪಾರ ಮಾಡಲು ಅವಕಾಶ ಇದೆಯೋ ಅದನ್ನೇ ಮಾಡಬೇಕಾಗುತ್ತದೆ. ಇನ್ನು ಬೀದಿಬದಿ ವ್ಯಾಪಾರಿಗಳು ಏನು ಮಾಡಿದರೂ ಪಾಲಿಕೆ ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ನಾಗರಿಕರು ದೂರು ಕೊಟ್ಟರೆ ಆಗ ಕ್ರಮ ತೆಗೆದುಕೊಳ್ಳಲೇಬೇಕು. ಇದನ್ನೆಲ್ಲ ಬೀದಿಬದಿ ವ್ಯಾಪಾರಿಗಳ ಮುಖಂಡರು ಅರ್ಥ ಮಾಡಿಕೊಳ್ಳಬೇಕು. ಇನ್ನು ಕಳೆದ ವರ್ಷ ಪ್ರಧಾನಿ ಮೋದಿಯವರ ತಲಾ ಹತ್ತು ಸಾವಿರ ರೂಪಾಯಿ ಸಾಲವನ್ನು ಪ್ರತಿ ನಗರದ ಒಂದೊಂದು ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಕೊಡಬೇಕು ಎನ್ನುವ ಉದ್ದೇಶದಿಂದ ಅಧಿಕಾರಿಗಳು ಇದ್ದಬದ್ದವರಿಗೆಲ್ಲ ಸಾಲ ಹಂಚಿದ್ದಾರೆ. ಈಗ ಸಾಲ ಪಡೆದುಕೊಂಡವರೆಲ್ಲರೂ ಕೂಡ ತಮಗೆ ಬೀದಿಬದಿ ವ್ಯಾಪಾರಕ್ಕೆ ಅವಕಾಶ ಸಿಗಲೇಬೇಕು ಎಂದು ಹಟ ಮಾಡುತ್ತಿದ್ದಾರೆ. ಪಾಲಿಕೆ ಮತ್ತು ಇವರ ನಡುವೆ ಸೂಕ್ತ ಸಮನ್ವಯತೆ ಬರದೇ ಇದ್ದರೆ ಈ ಸಮಸ್ಯೆ ಇನ್ನು ಕೂಡ ಮುಂದುವರೆಯುತ್ತಲೇ ಹೋಗುತ್ತದೆ. ಫುಲ್ ಸ್ಟಾಪ್ ಕೊಡಬೇಕಾದ ಅವಶ್ಯಕತೆ ಇದೆ. ಎರಡು ಕಡೆಯವರು ಒಂದು ಸೂತ್ರಕ್ಕೆ ಬರಬೇಕು. ಎಷ್ಟು ಬೇಗ ಬರುತ್ತಾರೋ ಅಷ್ಟು ಒಳ್ಳೆಯದು!!

  • Share On Facebook
  • Tweet It


- Advertisement -


Trending Now
ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
Hanumantha Kamath February 6, 2023
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
Leave A Reply

  • Recent Posts

    • ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
  • Popular Posts

    • 1
      ಪಾಲಿಕೆಯ ಹೊಸ ಕಮೀಷನರ್ ಕಿವಿ ಹಿತ್ತಾಳೆಯಾಗದಿದ್ದರೆ ಅಷ್ಟೇ ಸಾಕು!!
    • 2
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 3
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 4
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search