ಉಡುಪಿಯ ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್ ಹಿಂದೆ ಅಡಗಿದೆ ಮತಾಂಧತೆಯ ಕೈವಾಡ!!
ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿಷಯ ವಿವಾದವನ್ನು ಉಂಟು ಮಾಡಿದೆ. ಐದಾರು ಮಂದಿ ವಿದ್ಯಾರ್ಥಿನಿಯರು ತಾವು ಹಿಜಾಬ್ ತೆಗೆದಿಟ್ಟು ಕ್ಲಾಸ್ ಒಳಗೆ ಬರುವುದಿಲ್ಲ ಎಂದು ಹೇಳಿದ ಬಳಿಕ ಆ ಬಗ್ಗೆ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಹೆಣ್ಣುಮಕ್ಕಳೇ ಇರುವ ಕಾಲೇಜಿನಲ್ಲಿ ಹಿಜಾಬ್ ಅವಶ್ಯಕತೆ ಏನು ಎನ್ನುವುದನ್ನು ಬಲ್ಲರೇ ಹೇಳಬೇಕು. ಈಗಿನ ಆಧುನಿಕ ಕಾಲದಲ್ಲಿ ಹೆಣ್ಣುಮಕ್ಕಳು ಚಂದ್ರನಲ್ಲಿಗೆ ಹೋಗಲು ತಯಾರಿ ನಡೆಸುತ್ತಿರುವಾಗ ಅವರು ಹಿಜಾಬ್ ಧರಿಸಿಯೇ ಕ್ಲಾಸಿನೊಳಗೆ ಕೂರಬೇಕು ಎಂದು ಬಯಸುವುದೇ ಆಷಾಡಭೂತಿತನ. ಅವರ ಮೇಲೆ ಕಾಲೇಜಿನಲ್ಲಿರುವ ಗಂಡಸರು ಕಣ್ಣಾಕುತ್ತಾರೆ ಎಂದು ಹೇಳುವುದು ಒಂದು ರೀತಿಯಲ್ಲಿ ಶುದ್ಧ ಅವಿವೇಕತನದ ಪರಮಾವಧಿ. ಅಷ್ಟಕ್ಕೂ ಕಾಲೇಜುಗಳಿಗೆ ಹೆಣ್ಣುಮಕ್ಕಳು ನಿತ್ಯ ಡ್ಯಾನ್ಸ್ ಮಾಡಲು ಬರುವುದಲ್ಲ. ಸಭ್ಯರಾಗಿ ತಮ್ಮಷ್ಟಕ್ಕೆ ಓದಿನಲ್ಲಿ ಮುಳುಗಿರುವ ಹೆಣ್ಣುಮಕ್ಕಳೇ ಇರುವ ಕಾಲೇಜಿನಲ್ಲಿ ಕೂಡ ಸುರಕ್ಷತೆಯ ಭಾವನೆ ಇಲ್ಲ ಎಂದಾದರೆ ಅದಕ್ಕಿಂತ ನಿಕೃಷ್ಟ ಮನಸ್ಥಿತಿ ಎಲ್ಲಿಯಾದರೂ ಕಾಣಸಿಗುತ್ತಾ? ಇನ್ನು ಹಿಜಾಬ್ ಧರಿಸುವುದು ನಮ್ಮ ಸಂವಿಧಾನ ಆರ್ಟಿಕಲ್ 25 ರಲ್ಲಿ ನಮಗೆ ಕೊಟ್ಟಿರುವ ಹಕ್ಕು ಎಂದು ವಾದಿಸಲಾಗುತ್ತದೆ. ನೀವು ಸಾರ್ವಜನಿಕ ಪ್ರದೇಶಗಳಲ್ಲಿ ಹಿಜಾಬ್ ಧರಿಸಿ ಹೋದರೆ, ಸಿನೆಮಾ ಮಂದಿರಗಳಲ್ಲಿ, ರೆಸ್ಟೋರೆಂಟ್, ಪಾರ್ಕ್, ಐಸ್ ಕ್ರೀಂ ಪಾರ್ಲರ್ ಹೀಗೆ ಎಲ್ಲಿ ಬೇಕಾದರೂ ಧರಿಸಿ ಹೋದರೆ ಅದನ್ನು ತೆಗೆಯಿರಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಆದರೆ ಶಿಕ್ಷಣ ಸಂಸ್ಥೆಗಳು ಹಾಗಲ್ಲ. ಇಲ್ಲಿ ಪಾಠ ಕಲಿಯಲು ಕುಳಿತುಕೊಳ್ಳುವಾಗ ಹಿಜಾಬ್ ಧರಿಸಿ ಕುಳಿತುಕೊಂಡರೆ ಅದು ಇಡೀ ಕ್ಲಾಸಿನಲ್ಲಿ ಒಂದು ರೀತಿಯ ತಾಲಿಬಾನ್ ವಾತಾವರಣ ಮೂಡಲ್ವಾ? ಉಡುಪಿ ಏನು ತಾಲಿಬಾನ್ ಆಗೋಯ್ತಾ?
ಇನ್ನು ವಿಷಯ ಏನು ಗೊತ್ತಾ? ಐದಾರು ಹೆಣ್ಣುಮಕ್ಕಳು ಮಾತ್ರ ಹಟಕ್ಕೆ ಕುಳಿತುಕೊಂಡಿದ್ದಾರೆ, ಅವರ ತರಗತಿಯಲ್ಲಿ ಬೇರೆ ಮುಸಲ್ಮಾನ ಹೆಣ್ಣುಮಕ್ಕಳು ಕೂಡ ಇದ್ದಾರೆ, ಆದರೆ ಅವರ್ಯಾರು ನಾವು ಹಿಜಾಬ್ ಧರಿಸಿಯೇ ಕ್ಲಾಸಿನಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಹಟ ಮಾಡುತ್ತಿಲ್ಲ. ಅದಕ್ಕೆ ಕಾರಣ ಅವರ ಪೋಷಕರು ಇದಕ್ಕೆ ಒಪ್ಪಿರುವುದು. ಇಲ್ಲಿ ಏನಾಗುತ್ತೆ ಎಂದರೆ ಕೆಲವು ಪೋಷಕರಿಗೆ ತುಂಬಾ ಬಡತನವಿರುತ್ತದೆ. ಅವರಿಗೆ ತಮ್ಮ ಮಗಳಿಗೆ ಉತ್ತಮ ಕಾಲೇಜಿನಲ್ಲಿ ಕಲಿಸಲು ಆರ್ಥಿಕ ಸಂಪನ್ಮೂಲದ ಕೊರತೆ ಇರುತ್ತದೆ. ಅಂತಹ ಕಡೆ ಕೆಲವು ಮೂಲಭೂತವಾದಿಗಳು ಹೋಗಿ ಆ ಹೆಣ್ಣುಮಕ್ಕಳ ಶಿಕ್ಷಣದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತವೆ. ಆಗ ಆ ಹೆಣ್ಣುಮಕ್ಕಳನ್ನು ಅನಿವಾರ್ಯ ಪರಿಸ್ಥಿತಿಯಲ್ಲಿ ಹೀಗೆ ತಾವು ಹೇಳಿದ ಹಾಗೆ ಕೇಳಬೇಕು ಎಂದು ಕಂಡಿಷನ್ ಹಾಕಲಾಗಿರುತ್ತದೆ. ಅಂತಹ ಹೆಣ್ಣುಮಕ್ಕಳು ಹೀಗೆ ಎಲ್ಲಿಂದಲೋ ಆಡಿಸಿದ ಬುಗುರಿಗೆ ತಾವು ಉರುಳಿರುತ್ತಾರೆ. ಮಾತನಾಡಿದರೆ ಉಡುಪಿಯ ಆ ಕಾಲೇಜಿನಲ್ಲಿ ಹಿಂದೂ ಹೆಣ್ಣುಮಕ್ಕಳು ಬಿಂದಿ ಹಾಕುತ್ತಾರೆ, ಬಳೆ ಧರಿಸುತ್ತಾರೆ, ನಾವು ಬೇಡಾ ಎನ್ನುತ್ತಿದ್ದೇವಾ, ಹಾಗಿರುವಾಗ ನಮ್ಮ ಧರ್ಮ ಹೇಳಿದ್ದನ್ನು ನಾವು ಮಾಡಿದರೆ ತಪ್ಪೇನು ಎನ್ನುವವರು ಇದ್ದಾರೆ. ಬಿಂದಿ, ಬಳೆಗಳಿಂದ ಕಲಿಸುವಾಗ ಶಿಕ್ಷಕರಿಗೆ ತಮ್ಮ ಏಕಾಗ್ರತೆ ಅಥವಾ ಸಮಚಿತ್ತಕ್ಕೆ ದಕ್ಕೆ ಉಂಟಾಗುವುದಿಲ್ಲ. ಇನ್ನು ಬಿಂದಿ, ಕುಂಕುಮ ಅಥವಾ ಬಳೆಗಳು ನಮ್ಮ ಸನಾತನ ಸಂಸ್ಕೃತಿಯ ದ್ಯೋತಕ. ಅದು ಈ ಮಣ್ಣಿನಲ್ಲಿಯೇ ಹುಟ್ಟಿರುವ ಪರಂಪರೆ. ಆದರೆ ಇಸ್ಲಾಂ ಈ ನೆಲದ ಮತವಲ್ಲ. ಅದು ಈ ದೇಶದ ಮೇಲೆ ದಂಡೆತ್ತಿ ಬಂದ ಮುಸಲ್ಮಾನ ಅರಸರು ಬಿಟ್ಟು ಹೋದ ಪಳೆಯುಳಿಕೆ. ಈ ನೆಲದಲ್ಲಿ ತಮ್ಮ ಜೀವನವನ್ನು ಬದುಕಲು, ಧರ್ಮವನ್ನು ಅನುಸರಿಸಲು ಮತ್ತು ಪ್ರಚುರಪಡಿಸಲು ಮುಸಲ್ಮಾನರರಿಗೆ ಅವಕಾಶ ಸಿಕ್ಕಿದೆ ಎಂದಾದರೆ ಅದು ಈ ನೆಲದ ಸಹಿಷ್ಣುತೆ. ಹಾಗಿರುವಾಗ ಸುಮ್ಮನೆ ಏನು ನಿಯಮ ಇದೆಯೋ ಅದನ್ನು ಪಾಲಿಸುವುದು ಬಿಟ್ಟು ಸಂವಿಧಾನ ಅನುಮತಿ ನೀಡಿದೆ ಎಂದು ಬೊಬ್ಬಿರಿಯುವುದು ಅಧಿಕಪ್ರಸಂಗವಾಗುತ್ತದೆ. ಒಂದು ವೇಳೆ ಅವರು ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲು ಧರಿಸುತ್ತೇವೆ ಎಂದು ಹೇಳುವುದು ಕೂಡ ಕಣ್ಣಿಗೆ ಕಣ್ಣು ಎನ್ನುವ ಸಿದ್ಧಾಂತವಾಗುತ್ತದೆ. ಅದರ ಬದಲು ಏನು ಮಾಡಬೇಕು ಎನ್ನುವುದನ್ನು ನೋಡೋಣ.
ಈ ವಿಷಯವನ್ನು ಮಧ್ಯಸ್ಥಿಕೆ ಮಾಡಿ ಮುಗಿಸುವುದಕ್ಕಿಂತ ಬದಲು ಈ ಹೆಣ್ಣುಮಕ್ಕಳ ಹಿಂದೆ ಯಾರು ಇದ್ದಾರೆ ಎನ್ನುವುದನ್ನು ಸಾಕ್ಷಿ ಸಮೇತ ಪತ್ತೆ ಹಚ್ಚಬೇಕು. ಆ ಹೆಣ್ಣುಮಕ್ಕಳ ಅಥವಾ ಪೋಷಕರ ದೂರವಾಣಿ ಸಂಖ್ಯೆಗಳನ್ನು ಪರಿಶೀಲಿಸಿದರೆ ವಿಷಯ ಗೊತ್ತಾಗುತ್ತದೆ. ಅವರನ್ನು ಹಿಡಿದು ಧರ್ಮ ಧರ್ಮಗಳ ನಡುವೆ ತಿಕ್ಕಾಟ ತಂದು ಕೋಮುಗಲಭೆ ಹರಡುವ ಪ್ರಯತ್ನ ಮಾಡಿದ ಕಾರಣಕ್ಕೆ ಅಂತವರನ್ನು ಜೈಲಿನ ಒಳಗೆ ಹಾಕಬೇಕು. ಯಾಕೆಂದರೆ ಅಂತವರ ಕುಮ್ಮಕ್ಕಿನಿಂದಲೇ ನಮ್ಮ ಕರಾವಳಿಯಲ್ಲಿ ಮತೀಯ ಸಂಘರ್ಷ ಉಂಟಾಗುತ್ತದೆ. ಇನ್ನು ಹಿಜಾಬ್ ವಿವಾದ ಏನೇ ಇರಲಿ ಇದರಿಂದ ಅಂತಿಮವಾಗಿ ಲಾಭವಾಗುವುದು ರಾಜಕಾರಣಿಗಳಿಗೆ. ಕೆಲವು ಬಾರಿ ಅವರೇ ಹಿಂದಿನಿಂದ ಆಟವಾಡಿ ಯಾರನ್ನೋ ಛೂ ಬಿಟ್ಟು ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳುತ್ತಾರೆ. ಚುನಾವಣೆಗೆ ಒಂದು ವರ್ಷ ಇರುವಾಗ ಇಂತಹ ಘಟನೆಗಳು ನಡೆಯುತ್ತವೆ. ಯಾರಿಗಾದರೂ ಹಣ ಚೆಲ್ಲಿ ಈ ನಾಟಕ ಆಡಿಸಿದವರಿಗೆ ಲಾಭವಾಗಿರುತ್ತದೆ. ಆ ಹೆಣ್ಣುಮಕ್ಕಳು ಮಾತ್ರ ಹಿಜಾಬ್ ನೊಳಗೆ ಮೌನವಾಗಿ ತಮ್ಮ ಪಾಡಿಗೆ ನೊಂದುಕೊಂಡಿರುತ್ತಾರೆ!!
Leave A Reply