ಸಾನಿಯಾ ಹಿಜಾಬ್ ಧರಿಸಿಯೇ ಆಡುತ್ತೇನೆ ಎಂದಿದ್ದರೆ ಏನಾಗುತ್ತಿತ್ತು?
ನಾನು ಹಿಜಾಬ್ ಧರಿಸಿಯೇ ಆಡುತ್ತೇನೆ ಎಂದಿದ್ದರೆ ಇವತ್ತು ಸಾನಿಯಾ ಮಿರ್ಜಾ ಎನ್ನುವ ಭಾರತೀಯ ಟೆನಿಸ್ ಲೋಕದ ತಾರೆಯನ್ನು ನಾವು ನೋಡುವ ಅವಕಾಶವೇ ಸಿಗುತ್ತಿರಲಿಲ್ಲ. ಸಾರಾ ಅಲಿ ಖಾನ್ ತಾನು ಬುರ್ಖಾ, ಹಿಜಾಬ್ ಧರಿಸಿಯೇ ಇರುತ್ತೇನೆ ಎಂದಿದ್ದರೆ ಓರ್ವ ಯುವ ಪ್ರತಿಭಾವಂತ ನಟಿ ಬಾಲಿವುಡ್ ಗೆ ದಕ್ಕುತ್ತಲೇ ಇರುತ್ತಿರಲಿಲ್ಲ. ಮಲೈಕಾ ಅರೋರಾಗೆ ಹತ್ತು ವರ್ಷಗಳ ಹಿಂದೆ ಅವಳ ಗಂಡನಾಗಿದ್ದ ಅರ್ಬಾಜ್ ಖಾನ್ ಕಟ್ಟುನಿಟ್ಟು ಮಾಡಿದ್ದರೆ ಫಿಟ್ ನೆಸ್ ದಿವಾ ಹುಟ್ಟುತ್ತಲೇ ಇರಲಿಲ್ಲ. ಶಬನಾ ಅಜ್ಮಿಯಿಂದ ಹಿಡಿದು ಕರೀನಾ ಕಪೂರ್ ಖಾನ್ ತನಕ, ಗೌರಿ ಖಾನ್ ನಿಂದ ಹಿಡಿದು ಫರಾನ್ ಅಖ್ತರ್ ಕುಟುಂಬದವರ ತನಕ ಯಾರೂ ತಮ್ಮ ಕಲಾಕ್ಷೇತ್ರಕ್ಕೆ ಅಥವಾ ಕ್ರೀಡಾಕೇತ್ರಕ್ಕೆ ಈ ಹಿಜಾಬ್ ತರಲಿಲ್ಲ. ಹಾಗಿರುವಾಗ ಸಮವಸ್ತ್ರವೇ ಮೂಲವಸ್ತ್ರ ಎಂದು ಪರಿಗಣಿಸಿರುವ ತರಗತಿಯ ಒಳಗೆ ಹಿಜಾಬ್ ಧರಿಸಿಯೇ ಬರುತ್ತೇವೆ ಎನ್ನುವ ಹಟ ಯಾಕೆ? ಯಾಕೆಂದರೆ ಮೂಲಭೂತವಾದಿಗಳಿಗೆ ತಮ್ಮ ಸಮುದಾಯದ ಹೆಣ್ಣುಮಕ್ಕಳು ಆಕಾಶದೆತ್ತರದ ಸಾಧನೆ ಮಾಡಬೇಕು ಎನ್ನುವುದಕ್ಕಿಂತ ಅವರು ನಾಲ್ಕು ಗೋಡೆಯ ಒಳಗೆ ಬಂಧಿಯಾಗಿರಬೇಕು ಎನ್ನುವ ಹಟ.
ಈಗ ಮುಫ್ತಿ ಎನ್ನುವ ಕಾಶ್ಮೀರದ ಮೂಲಭೂತವಾದವನ್ನೇ ಹೊದ್ದು ಮಲಗಿರುವ ರಾಜಕಾರಣಿ ಕೂಡ ಉಡುಪಿಯ ವಿಷಯದಲ್ಲಿ ಮಾತನಾಡುತ್ತಾರೆ ಎಂದರೆ ಇದು ಎಂತಹ ಷಡ್ಯಂತ್ರ ಎಂದು ಅರ್ಥವಾಗುತ್ತದೆ. ಮೋದಿ ಭೇಟಿ ಬಚಾವೋ ಭೇಟಿ ಪಡಾವೋ ಎಂದು ಕೇವಲ ಹೇಳುತ್ತಾರೆ ವಿನ: ಅದನ್ನು ಕಾರ್ಯರೂಪದಲ್ಲಿ ತರುವುದಿಲ್ಲ ಎಂದು ಮುಫ್ತಿ ಹೇಳುತ್ತಾರೆ. ನನಗೆ ಆಶ್ಚರ್ಯವಾಗುತ್ತಿರುವುದು ಇಲ್ಲಿ ಮುಫ್ತಿ ಮೋದಿಯವರನ್ನು ಯಾಕೆ ಇದರಲ್ಲಿ ಎಳೆದು ತರುತ್ತಿದ್ದಾರೆ. ಹಾಗಾದರೆ ಈ ದೇಶದಲ್ಲಿ ಒಂದು ಹುಲ್ಲುಕಡ್ಡಿ ಅಲುಗಾಡಿದರೂ ಅದಕ್ಕೆ ಮೋದಿಯವರೇ ಕಾರಣರಾ? ಯಾವ ಮುಸ್ಲಿಂ ಹೆಣ್ಣುಮಗಳಿಗೂ ಉಡುಪಿಯ ಸರಕಾರಿ ಕಾಲೇಜಿನಲ್ಲಿ ಸೀಟ್ ಕೊಡುವುದಿಲ್ಲ ಎಂದು ಯಾರೂ ಹೇಳಿಲ್ಲ. ಆ ಸರಕಾರಿ ಕಾಲೇಜಿನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವ ರಘುಪತಿ ಭಟ್ ಅವರಾಗಲಿ, ಉಪಾಧ್ಯಕ್ಷರಾಗಿರುವ ಯಶಪಾಲ್ ಸುವರ್ಣ ಅವರಾಗಲಿ ನಾವು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸೀಟು ಕೊಡಲ್ಲ ಎಂದು ಹೇಳಿಲ್ಲ. ಅವರು ಹೇಳುತ್ತಿರುವುದು ತುಂಬಾ ಸಿಂಪಲ್ ಆಗಿದೆ. ದಯವಿಟ್ಟು ಹಿಜಾಬ್ ಅನ್ನು ತೆಗೆದು ತರಗತಿಯ ಒಳಗೆ ಕುಳಿತು ಪಾಠ ಕೇಳಿಸಿಕೊಳ್ಳಿ ಎನ್ನುವುದು ಮಾತ್ರ. ಇಲ್ಲಿ ಭೇಟಿ ಪಡಾವೋ ಭೇಟಿ ಬಚಾವೋ ಮತ್ತು ಮೋದಿಯವರಿಗೆ ಯಾಕೆ ವಿರೋಧ ಮಾಡಬೇಕು ಎಂದು ಮುಫ್ತಿಗೆ ಅನಿಸುತ್ತದೆ? ಕೆಲವು ಮುಸ್ಲಿಂ ಮತಾಂಧರ ವಾದ ಏನೆಂದರೆ ಹಿಜಾಬ್ ನಮ್ಮ ಹಕ್ಕು. ನಾವು ಕ್ಲಾಸಿನಲ್ಲಿ ಧರಿಸಿದರೆ ಅದಕ್ಕೆ ಅನುಮತಿ ನೀಡಬೇಕು. ನಮ್ಮ ಸಂಸ್ಕೃತಿಯಲ್ಲಿ ಇದನ್ನು ಅನಾದಿ ಕಾಲದಿಂದಲೂ ಅನುಸರಿಸಿ ಬರುತ್ತಿದ್ದೇವೆ. ಹಿಂದೂ ಹೆಣ್ಣುಮಕ್ಕಳು ಅವರ ಸಂಸ್ಕೃತಿಯಾಗಿರುವ ಬಿಂದಿಗೆಯನ್ನು ಸ್ಟೈಲ್ ಎನ್ನುವ ಕಾರಣಕ್ಕೆ ಈಗ ಧರಿಸುವುದಿಲ್ಲ. ಆದರೆ ನಾವು ಹಾಗಲ್ಲ. ನಮ್ಮ ಸಂಸ್ಕೃತಿಯನ್ನು ಮರೆತಿಲ್ಲ ಎನ್ನುತ್ತಾರೆ. ಹಿಜಾಬ್ ಈ ಮಣ್ಣಿನ ಸಂಸ್ಕೃತಿ ಅಲ್ಲ. ಬಾಬರ್, ಔರಂಗಾಜೇಬ್, ಷಹಜಹಾನ್ ಸಹಿತ ಮೊಗಲರು ಈ ದೇಶದ ಮೇಲೆ ದಂಡೆತ್ತಿ ಬಂದು ನಮ್ಮ ಹಿಂದೂ ರಾಜರ ಅಂತ:ಪುರಕ್ಕೆ ನುಗ್ಗಿದಾಗ ಅವರಿಗೆ ಮುಖ ತೋರಿಸದೇ ಸತಿಸಹಗಮನ ಮಾಡಿದರಲ್ಲ, ನಮ್ಮ ವೀರ ವನಿತೆಯರು ಅದು ಈ ದೇಶದ ಸಂಸ್ಕೃತಿ. ಯಾಕೆ ಮುಸ್ಲಿಂ ಅರಸರ ಪತ್ನಿಯರು ಹಿಜಾಬ್ ಧರಿಸಿರುವ ಉಲ್ಲೇಖವಿಲ್ಲ. ಯಾಕೆಂದರೆ ಯಾವ ಹಿಂದೂ ರಾಜ ಕೂಡ ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡಿದ ಉದಾಹರಣೆ ಇತಿಹಾಸದಲ್ಲಿ ಇಲ್ಲ. ಅದನ್ನು ಏನೂ ಮಾಡಿದರೂ ಮುಸ್ಲಿಂ ಅರಸರೇ ಮಾಡಿದ್ದಾರೆ. ಆದ್ದರಿಂದ ಹಿಜಾಬ್ ಧರಿಸುವುದು ನಮ್ಮ ಹಕ್ಕು ಎಂದು ಯಾವ ಮುಸ್ಲಿಂ ಕೂಡ ಹೇಳುವಂತಿಲ್ಲ. ಒಂದು ವೇಳೆ ಅದು ನಿಮ್ಮ ಹಕ್ಕಾಗಿದ್ದರೆ ಅದು ನಿಮಗೆ ಭಿಕ್ಷೆ ಎಂದು ನಾವು ಕೊಟ್ಟಿರುವ ಪಾಕಿಸ್ತಾನದಲ್ಲಿ ಇಟ್ಟುಕೊಳ್ಳಿ. ಇದು ಭಾರತ. ಈ ದೇಶವನ್ನು ವಿಭಜಿಸಿದ ಜಿನ್ನಾ ಅದನ್ನು ಮತೀಯ ಆಧಾರದ ಮೇಲೆ ವಿಭಜಿಸಿದ್ದರು. ಅದರ ನಂತರ ಪಾಕಿಸ್ತಾನದಲ್ಲಿ 18 ಶೇಕಡಾ ಹಿಂದೂಗಳು ಉಳಿದರು. ಭಾರತದಲ್ಲಿಯೂ ಆರೇಳು ಶೇಕಡಾ ಮುಸ್ಲಿಮರು ಸ್ವಾತಂತ್ರ್ಯ ವಿಭಜನೆಯ ಸಮಯದಲ್ಲಿ ಇದ್ದರು. ಈಗ ಅಲ್ಲಿದ್ದ ಹಿಂದೂಗಳ ಸಂಖ್ಯೆ ಒಂದು ಶೇಕಡಾಗೆ ಬಂದು ನಿಂತಿದೆ. ಇಲ್ಲಿರುವ ಮುಸ್ಲಿಮರ ಸಂಖ್ಯೆ ಇಪ್ಪತ್ತು ಶೇಕಡಾದಷ್ಟು ಬರುತ್ತಿದೆ. ಹಾಗಾದರೆ ಯಾರು ಹಿಜಾಬ್ ಧರಿಸಬೇಕು.
ಇದನ್ನು ಭಾರತೀಯ ಜನತಾ ಪಾರ್ಟಿಯೇ ಕೋಮುವಾದಿ ಶಕ್ತಿಗಳನ್ನು ಬಳಸಿ ಎಬ್ಬಿಸಿರೋ ಹುನ್ನಾರ ಎಂದು ಕೆಲವು ಅತೃಪ್ತ ಆತ್ಮಗಳು ಹೇಳುತ್ತಿವೆ. ಹಾಗಂತ ಹಿಜಾಬ್ ಧರಿಸಿ ಬಂದವರಿಗೆ ರತ್ನಗಂಬಳಿಯ ಸ್ವಾಗತ ನೀಡಿದರೆ ನಾಳೆ ಕ್ಲಾಸಿನಲ್ಲಿಯೇ ನಮಾಜ್ ಮಾಡುತ್ತೇವೆ ಎಂದು ಇವರು ಹೇಳಬಹುದು. ನಾಡಿದ್ದು ಶುಕ್ರವಾರ ಅರ್ಥ ರಜೆ ಕೊಡಿ ಎಂದು ಹಟ ಮಾಡಬಹುದು. ಶಾಲೆಯಲ್ಲಿ ರಮ್ಜಾನ್, ಮೊಹರಂ ಆಚರಿಸೋಣ ಎನ್ನಬಹುದು. ಕೊನೆಗೆ ಶಾಲೆಯಲ್ಲಿ ಇಸ್ಲಾಂ ಧ್ವಜ ಹಾರಿಸೋಣ ಎನ್ನಬಹುದು. ಅದಕ್ಕೆ ಅವಕಾಶ ಕೊಡಲು ಆಗುತ್ತಾ? ಇದು ಹಿಂದೂ ರಾಷ್ಟ್ರ. ನಾವು ಬೇಡಾ ಎಂದರೆ ಹಿಜಾಬ್ ಕ್ಲಾಸಿನಲ್ಲಿ ಅಲ್ಲ, ಕಾಲೇಜಿನ ಗೇಟಿನೊಳಗೆ ಕೂಡ ಬರಬಾರದು!
Leave A Reply