ಹಿಜಾಬ್ ಧರಿಸದಿದ್ದರೆ ರೇಪ್ ಆಗುತ್ತಾ ಜಮೀರ್!
ಸಿದ್ದು ಶಿಷ್ಯ ಜಮೀರ್ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರಿಗೆ ಟಕ್ಕರ್ ಕೊಡಲು ಹೋದದ್ದೇ ಕುತೂಹಲಕಾರಿ ಸಂಗತಿ. ಹಿಜಾಬ್ ಧರಿಸದಿದ್ದರೆ ರೇಪ್ ಹೆಚ್ಚಾಗುತ್ತದೆ ಎಂದು ಹೇಳಿ ನಂತರ ಡಿಕೆಶಿ ತಪ್ಪಾಯ್ತು ಎಂದು ಒಪ್ಪಿಕೊಳ್ಳಲು ಸೂಚನೆ ಕೊಟ್ಟರೂ ಕೇರ್ ಮಾಡದೇ ಕೊನೆಗೆ ಸುರ್ಜೆವಾಲಾ ಹೇಳಿದ ನಂತರ ತಪ್ಪೊಪ್ಪಿಕೊಂಡಿದ್ದಾರೆ. 1983 ರಲ್ಲಿ ಕರ್ನಾಟಕ ಶಿಕ್ಷಣ ಕಾಯಿದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿತ್ತು. ಅದರ ಸೆಕ್ಷನ್ 133 (2) ಪ್ರಕಾರ ಸಮವಸ್ತ್ರ ಪ್ರತಿಶಾಲೆಗೂ ಕಡ್ಡಾಯ ಇರಬೇಕೆಂಬ ನಿಯಮ ಇದೆ. ಕರ್ನಾಟಕ ಶಿಕ್ಷಣ ಸಂಸ್ಥೆಗಳ ಕಾಯಿದೆ 1995 ಇದರ ರೂಲ್ 11 ಸೆಕ್ಷನ್ (1) ಮತ್ತು (2) ಪ್ರಕಾರ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ನಿಯಮ ಮತ್ತು ಸಂವಿಧಾನದ ಚೌಕಟ್ಟಿನೊಳಗೆ ಸಮವಸ್ತ್ರ ಜಾರಿಗೆ ತರಬೇಕು. ಸಮವಸ್ತ್ರದಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದರೂ ಒಂದು ವರ್ಷದ ಮೊದಲೇ ಮಕ್ಕಳ ಪೋಷಕರಿಗೆ ಈ ಕುರಿತು ಮಾಹಿತಿ ನೀಡಬೇಕು. 1983 ರಲ್ಲಿ ಶಾಸಕರಾಗಿ ಮತ್ತು 1995 ರಲ್ಲಿ ವಿತ್ತ ಸಚಿವರಾಗಿದ್ದ ಜಮೀರ್ ಗುರು ಸಿದ್ಧರಾಮಯ್ಯನವರಿಗೆ ಶಿಕ್ಷಣ ಮತ್ತು ಸಮವಸ್ತ್ರಕ್ಕೆ ಸಂಬಂಧಪಟ್ಟ ಪ್ರಮುಖ ಕಾಯ್ದೆಗಳನ್ನು ಜಾರಿಗೆ ತರುವಾಗ ಅದರ ಸಂಪೂರ್ಣ ಮಾಹಿತಿ ಇತ್ತು. ಆದರೂ ಈಗ ರಾಜಕೀಯ ಕಾರಣಗಳಿಗಾಗಿ ವಿರೋಧ ಮಾಡುತ್ತಿದ್ದಾರೆ. ಅದನ್ನು ಅವರ ಶಿಷ್ಯರು ಬೆಂಬಲಿಸುತ್ತಿದ್ದಾರೆ. ಇನ್ನು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿಯೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲೇಬೇಕೆಂಬ ನಿಯಮ ಇಲ್ಲ. ಅದೇ ರೀತಿಯಲ್ಲಿ ಮದರಸಗಳಲ್ಲಿ ಕೂಡ ಕಡ್ಡಾಯವಾಗಿ ಹಿಜಾಬ್ ಧರಿಸಬೇಕೆಂಬ ಒತ್ತಡ ಆರಂಭದಲ್ಲಿ ಇರಲಿಲ್ಲ. ಸಂವಿಧಾನದ ಪರಿಚ್ಚೇದ 25 ಮತ್ತು 26 ರಲ್ಲಿ ನಮ್ಮ ಧರ್ಮ, ಮತ ಆಚರಿಸುವ ಹಕ್ಕನ್ನು ನಮಗೆ ನೀಡಿದೆ ಎಂದು ಹಿಜಾಬ್ ಪರ ಇರುವವರು ಹೇಳುತ್ತಿದ್ದಾರೆ. ಆದರೆ ಅದೇ ಸಂವಿಧಾನದ ಪರಿಚೇದ 15 ರಲ್ಲಿ ಯಾವುದೇ ರಾಜ್ಯದಲ್ಲಿ ಧರ್ಮ, ಜಾತಿ, ಲಿಂಗ, ಜನ್ಮಸ್ಥಳದ ವಿಷಯದಲ್ಲಿ ತಾರತಮ್ಯ ಮಾಡುವಂತಿಲ್ಲ. ಈ ಪರಿಚ್ಚೇದ ಯಾವುದೇ ರಾಜ್ಯ ಸರಕಾರ ವಿಶೇಷ ಕಾನೂನು ಮಾಡುವುದನ್ನು ತಡೆಯುವಂತಿಲ್ಲ. ಆರ್ಟಿಕಲ್ 25 ಮತ್ತು 26 ಮಾತ್ರ ಹೇಳುವವರಿಗೆ ಆರ್ಟಿಕಲ್ 15 ಯಾಕೆ ಕಾಣಿಸುವುದಿಲ್ಲ.
ಅಷ್ಟಕ್ಕೂ ಈ ವಿವಾದ ಮಂಗಳೂರಿಗೆ ಹೊಸದಲ್ಲ. ಇವುಗಳ ಹಿಂದೆ ಇರುವುದು ಎಸ್ ಡಿಪಿಐ, ಪಿಎಫ್ ಐ, ಸಿಎಫ್ ಐ ಎನ್ನುವುದು ಮೂರು ವರ್ಷಗಳ ಹಿಂದೆನೆ ಸಾಬೀತಾಗಿದೆ. ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿಯಲ್ಲಿ ಕೂರಬಾರದು ಎನ್ನುವ ನಿಯಮವನ್ನು ಕಾಲೇಜಿನ ಆಡಳಿತ ಮಂಡಳಿಯವರು ಮಾಡಿದ್ದರೂ, ಅದನ್ನು ವಿರೋಧಿಸಿ ಸಿಎಫ್ ಐನವರು ಕಾಲೇಜಿನ ಹೊರಗೆ ಪ್ರತಿಭಟನೆ ಮಾಡಿದ್ದರು. ಇದನ್ನು ಸುದ್ದಿಗೋಷ್ಟಿಯಲ್ಲಿ ಆವತ್ತೆ ಕಾಲೇಜಿನ ಆಡಳಿತ ಮಂಡಳಿಯವರು ಬಹಿರಂಗಪಡಿಸಿದ್ದರು. ಸಿಎಫ್ ಐ ಈ ವಿವಾದದ ಹಿಂದೆ ಇರುವುದನ್ನು ಹೇಳಿದ್ದರು. ಆದರೆ ಆಗ ಮುಸ್ಲಿಮರ ವಿರೋಧ ಕಟ್ಟಿಕೊಳ್ಳುತ್ತೇವೆ ಎಂದು ಸೈಂಟ್ ಆಗ್ನೇಸ್ ಕಾಲೇಜಿನ ಆಡಳಿತ ಮಂಡಳಿಯನ್ನು ಬೆಂಬಲಿಸದ ಕಾಂಗ್ರೆಸ್ ಈಗ ಹಿಜಾಬ್ ಪರವಾಗಿ ಮಾತನಾಡುತ್ತಿದೆ. ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ. ಇಸ್ಲಾಂನ ಐದು ಫರ್ಜ್ ನಲ್ಲಿ ಹಿಜಾಬ್ ವಿಷಯವೇ ಇಲ್ಲ. ಫರ್ಜ್ ಗಳಲ್ಲಿ ಮುಖ್ಯವಾಗಿ ಐದು ಸಲ ಪ್ರಾರ್ಥನೆ, ಜೀವಮಾನದಲ್ಲಿ ಒಮ್ಮೆ ಮೆಕ್ಕಾ ಯಾತ್ರೆ, ರಮ್ಜಾನ್ ನಲ್ಲಿ ಉಪವಾಸ ಸೇರಿ ಐದು ಕರ್ತವ್ಯಗಳಿವೆ. ಸುನ್ನಾ ಇದರಲ್ಲಿ ಇಸ್ಲಾಂ ಹೇಗೆ ಆಚರಿಸಬಹುದು ಎಂದು ಹೇಳಲಾಗಿದೆ. ಫರ್ಜ್ ನಲ್ಲಿ ಹಿಜಾಬ್ ಬಗ್ಗೆ ಉಲ್ಲೇಖ ಇಲ್ಲ. ಮುಸಲ್ಮಾನ ರಾಷ್ಟ್ರ ಈಜಿಪ್ಟ್ ನಲ್ಲಿ ಬಹಿರಂಗವಾಗಿ ಹಿಜಾಬ್, ಬುರ್ಖಾ ನಿಷೇಧ ಇದೆ. ಟರ್ಕಿಯಲ್ಲಿಯೂ ತರಗತಿಯೊಳಗೆ ಹಿಜಾಬ್ ನಿಷೇಧ ಇದೆ. ಇಟಲಿ, ಮೊರೊಕ್ಕೊ, ಕೊಸೊವೋ, ಲಟಾವಿಯಾ, ಫ್ರಾನ್ಸ್, ನೆದರಲ್ಯಾಂಡ್, ಬೆಲ್ಜಿಯಂ, ಸ್ವಿಜರಲ್ಯಾಂಡ್ ನಲ್ಲಿಯೂ ಹಿಜಾಬ್, ಬುರ್ಖಾ ಬ್ಯಾನ್ ಇದೆ. ಭಾರತದಂತಹ ರಾಷ್ಟ್ರದಲ್ಲಿ ಓರ್ವ ಮುಸ್ಲಿಂ ವಿದ್ಯಾರ್ಥಿನಿ ಕೇಸರಿ ಧರಿಸಿದ ಹಿಂದೂ ಯುವಕರ ಗುಂಪಿನ ಎದುರು ನಿಂತು ಏಕಾಂಗಿಯಾಗಿ ಅಲ್ಲಾಹೋ ಅಕ್ಬರ್ ಎಂದು ಘೋಷಣೆ ಕೂಗುತ್ತಾಳೆ ಎಂದರೆ ಅದು ಅವಳಿಗೆ ತಾನು ಏನು ಘೋಷಣೆ ಹಾಕಿದರೂ ಸುರಕ್ಷಿತಳು ಎನ್ನುವ ಭಾವನೆ ಇದ್ದ ಕಾರಣ ಹಾಗೆ ಮಾಡಲು ಸಾಧ್ಯವಾಯಿತು. ಒಂದು ವೇಳೆ ಇಸ್ಲಾಂ ಕಟ್ಟರ್ ರಾಷ್ಟ್ರದಲ್ಲಿ ಒಬ್ಬ ಹಿಂದೂ ಯುವತಿ ಮುಸ್ಲಿಂ ಯುವಕರ ಮುಂದೆ ಶ್ರೀರಾಮ್ ಕಿ ಜೈ ಎಂದರೆ ಏನಾಗುತ್ತಿತ್ತು. ಕೆಲವು ಮುಸ್ಲಿಮರು ಶಾರದಾ ಪೂಜೆ, ಗಣೇಶೋತ್ಸವ ಆಚರಿಸುತ್ತಿರಿ, ಹಿಜಾಬ್ ತರಗತಿಯಲ್ಲಿ ಬೇಡಾ ಎನ್ನುತ್ತೀರಿ ಎಂದು ಆಕ್ಷೇಪ ಎಂದು ಹೇಳುತ್ತಿದ್ದಾರೆ. ಆದರೆ ಸನಾತನ ಸಂಸ್ಕೃತಿಯ ತಳಹದಿಯ ಮೇಲೆ ರೂಪುಗೊಂಡಿರುವ ಭಾರತದಲ್ಲಿ ಅನೇಕ ವಿಚಾರಗಳು ರಾಷ್ಟ್ರೀಯತೆಯ ನೆಲೆಗಟ್ಟಿನ ಮೇಲೆ ಬೆಳೆದು ಬಂದಿದೆ. ಬ್ರಿಟಿಷರ ವಿರುದ್ಧ ಭಾರತೀಯರನ್ನು ಒಂದುಗೂಡಿಸಲು ತಿಲಕರು ಗಣೇಶೋತ್ಸವ ರಾಷ್ಟ್ರಮಟ್ಟದಲ್ಲಿ ಆರಂಭಿಸಿದರು. ಇಂತಹ ಆಚರಣೆಗಳು ರಾಷ್ಟ್ರೀಯ ಆಚರಣೆಗಳು ವಿನ: ಹಿಂದೂ ಆಚರಣೆಗಳು ಎಂದು ಪರಿಗಣಿಸುವಂತಿಲ್ಲ. ಭಾರತದ ಸುಪ್ರೀಂಕೋರ್ಟ್ ಹೇಳಿದ ಮೇಲೆಯೂ ಮಸೀದಿಗಳಲ್ಲಿ ಬಹಿರಂಗವಾಗಿ ಅಜಾನ್ ಕೂಗಲಾಗುತ್ತದೆ. ವಿಮಾನ ನಿಲ್ದಾಣಗಳಲ್ಲಿ ನಮಾಜ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇದೆಲ್ಲ ಎಲ್ಲಾ ಮತಗಳನ್ನು ಭಾರತದ ಸಂವಿಧಾನ ನೀಡಿರುವ ಸಮಾನತೆಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಪುಸ್ತಕದಲ್ಲಿ ಮಹಾಭಾರತದ ಫೋಟೋ ಇದೆ. 87% ಮುಸ್ಲಿಮರು ಇರುವ ಇಂಡೋನೇಶಿಯಾದ 20 ಸಾವಿರ ರೂ ನೋಟಿನಲ್ಲಿ ಗಣಪತಿ ದೇವರ ಫೋಟೋ ಇದೆ. ಭಾರತ ಹಿಂದೂ ಧಾರ್ಮಿಕ ನೆಲೆಗಟ್ಟಿನ ಮೇಲೆ ರಚಿತವಾದ ಜಾತ್ಯಾತೀತ ರಾಷ್ಟ್ರ. ಯಾರು ಭಾರತದ ರಾಷ್ಟ್ರೀಯತೆಯನ್ನು ಒಪ್ಪಲಿಲ್ಲ, ಅವರು ಪಾಕಿಸ್ತಾನ, ಬಾಂಗ್ಲಾಕ್ಕೆ ಹೋಗಿದ್ದಾರೆ. ಹಿಜಾಬ್ ಧರಿಸಬೇಕು ಎಂದು ನಿಮ್ಮನ್ನು ಪ್ರೇರೆಪಿಸಿದವರು ನಿಮ್ಮನ್ನು ಬ್ರೇನ್ ವಾಶ್ ಮಾಡಿದ್ದಾರೆ. ಹಿಜಾಬ್ ಹಾಕಲು ಈಗ ಬೆಂಬಲಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ಮುಂದೆ ಇನ್ನಷ್ಟು ಭೀಕರ ಜೀವನ ಕಾಣಬೇಕಿದೆ. ಹಿಜಾಬ್ ಧರಿಸಿದರೆ ಮಾತ್ರ ತಾನು ಮುಸ್ಲಿಂ ಆಗುತ್ತೇನೆ ಎನ್ನುವುದನ್ನು ಒಪ್ಪಲ್ಲ ಎಂದಿರುವ ಕಾಶ್ಮೀರಿ ಟಾಪರ್ ವಿದ್ಯಾರ್ಥಿನಿ ಅರೂಸಾ ಪರ್ವೇಜ್ ಅವರಿಗೆ ಶಿರಚ್ಚೇದ ಮಾಡುವ ಬೆದರಿಕೆ ಒಡ್ಡಲಾಗಿದೆ. ಭವಿಷ್ಯದಲ್ಲಿ ಅಂತಹ ಮತಾಂಧರು ಇನ್ನಷ್ಟು ಕಠಿಣ ನಿಯಮವನ್ನು ಮುಸ್ಲಿಂ ಯುವತಿಯರ ಮೇಲೆ ಹೇರಬಹುದು. ಭಾರತವನ್ನು ಐಸಿಸ್ ಮನಸ್ಥಿತಿಗೆ ತರಲು ಆರಂಭಿಕ ಯತ್ನ ಶುರುವಾಗಿದೆ. ಹಿಜಾಬ್ ಹಟದ ಉದ್ದೇಶ ಕೇಸರಿ ಧರಿಸುವ ಮಕ್ಕಳನ್ನು ಉದ್ರೇಕಿಸಿ ಗಲಾಟೆ ಮಾಡಿ ನಂತರ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ. ಗೋಧ್ರಾ ಗಲಭೆ ಮಾತನಾಡದವರು ಗುಜರಾತ್ ಗಲಭೆಯನ್ನು ಮಾತನಾಡುತ್ತಾರೆ. ಗಲಾಟೆ ಆರಂಭವಾದದ್ದು ಎಲ್ಲಿಂದ ಎಂದು ಯಾರೂ ಪ್ರಗತಿಪರರು ಮಾತನಾಡುವುದಿಲ್ಲ. ಬಾಂಬೆ ಗಲಭೆಯ ಬಗ್ಗೆ ಮಾತನಾಡುತ್ತಾರೆ. ಅದು ಹಿಂದೂಗಳ ಮೇಲೆ ಆದ ದಾಳಿಯ ಪ್ರತೀಕಾರ ಎಂದು ಹೇಳುವುದಿಲ್ಲ. ಅವರು ಕ್ರಿಯೆ ಮಾಡುತ್ತಾರೆ. ನಾವು ಪ್ರತಿಕ್ರಿಯೆ ಕೊಡಲಿ ಎಂದು ಅವರು ಕಾಯುತ್ತಿರುತ್ತಾರೆ. ಜಾಗತಿಕವಾಗಿ ನಮ್ಮನ್ನು ಅವಮಾನಿಸುವ ಉದ್ದೇಶ ಕೂಡ ಇದರ ಹಿಂದೆ ಅಡಗಿದೆ!!
Leave A Reply