• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಕ್ ಮಹಿಳಾ ಕ್ರಿಕೆಟಿಗರೇ ಹಿಜಾಬ್ ಧರಿಸಿ ಆಡಲಿಲ್ಲ, ಹಾಗಾದ ಮೇಲೆ ಇವರದ್ದೇನು?

Tulunadu News Posted On March 8, 2022


  • Share On Facebook
  • Tweet It

ಹಿಂದೂ ಯುವಕರ ಎದುರು ನಿಂತು ಬೊಬ್ಬೆ ಹೊಡೆಯಿರಿ, ಅವರಲ್ಲಿ ಕೋಪ ಭರಿಸಿ, ಅವರು ನಿಮ್ಮ ಜೊತೆ ಗಲಾಟೆ ಮಾಡುವಂತೆ ಉದ್ರೇಕಿಸಿ, ಕಾಲೇಜು ನಿನ್ನ ಅಪ್ಪಂದಾ ಎಂದು ಅವರ ಕಣ್ಣಿಗೆ ಬೆರಳು ಹಾಕಿ ಮಾತನಾಡಿ, ಒಟ್ಟಿನಲ್ಲಿ ಒಬ್ಬ ಹಿಂದೂ ಯುವಕ ನಿಮ್ಮ ಮೇಲೆ ಕೈ ಮಾಡುವಷ್ಟು ಕೋಪ ಅವನಲ್ಲಿ ಯಾರು ಉಂಟು ಮಾಡುತ್ತಾರೋ ಅವರಿಗೆ ಹಣ, ವಸ್ತುಗಳು ಹರಿದು ಬರುವಂತೆ ಮಾಡಲಾಗುವುದು ಎನ್ನುವ ಸಂದೇಶವೊಂದು ಮುಸ್ಲಿಂ ವಿದ್ಯಾರ್ಥಿನಿಯರ ಮನೆಗೆ ತಲುಪಿರುವುದು ಪಕ್ಕಾ. ಯಾವಾಗ ಮಂಡ್ಯದ ಯುವತಿ ಹಿಂದೂ ಯುವಕರ ಗುಂಪಿನ ಎದುರು ಬಂದು ಅಲ್ಲಾಹೋ ಅಕ್ಬರ್ ಎಂದು ಕಿರುಚಿ ಹೋದ ಮೇಲೆ ಅವಳ ಮನೆಗೆ ವಿದೇಶಗಳಿಂದ ಸಾಕಷ್ಟು ಹಣ, ಗಿಫ್ಟ್, ವೈಭೋಗಗಳು ಹುಡುಕಿಕೊಂಡು ಬಂದಿತ್ತು. ಇದು ಸಹಜವಾಗಿ ಬೇರೆ ಮುಸ್ಲಿಂ ವಿದ್ಯಾರ್ಥಿನಿಯರ ಕಣ್ಣು ಕುಕ್ಕಿದೆ. ನಾವು ಹೀರೋಗಿರಿ ತೋರಿಸಬೇಕು ಎಂದು ಅವರಿಗೆ ಅನಿಸಿದೆ. ಹೇಗೂ ಗಲಾಟೆ ಆದರೆ ಸುತ್ತಲೂ ಹತ್ತಾರು ಮೊಬೈಲ್ ಫೋನ್ ಗಳು ಚಿತ್ರೀಕರಣ ಮಾಡುತ್ತಾ ಇರುತ್ತವೆ. ಯಾವುದೇ ಹಿಂದೂ ಹುಡುಗ ರೋಷದಲ್ಲಿ ಏನಾದರೂ ಆವಾಂತರ ಮಾಡಲಿ ಎಂದು ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಕಾಯುತ್ತಿದ್ದಾರೇನೋ ಎಂದು ಅನಿಸುತ್ತಿದೆ. ಎದುರಿನ ಹುಡುಗ ಕೈ ಎತ್ತಲು ಜಸ್ಟ್ ಯೋಚಿಸಿದರೂ ಸಾಕು, ಈ ವಿದ್ಯಾರ್ಥಿನಿಯರು ಆ ಹುಡುಗರು ತಮ್ಮ ಮೇಲೆ ಕೈ ಹಾಕಿದರು ಎಂದು ಪೊಲೀಸ್ ಠಾಣೆಯಲ್ಲಿ ಹೊರಟುಬಿಡುತ್ತಾರೆ. ಅದರ ನಂತರ ಆ ಯುವಕರಿಗೆ ವಿದೇಶದಲ್ಲಿ ಕುಳಿತ ಹೇಡಿಗಳಿಂದ ಕೊಲೆ ಬೆದರಿಕೆ ಬರುತ್ತದೆ. ಇದೆಲ್ಲ ನಿಜಕ್ಕೂ ಪಕ್ಕಾ ಪ್ಲ್ಯಾನ್ ಮಾಡಿ ನಡೆಯುತ್ತಿದೆ ಎನ್ನುವುದು ಗ್ಯಾರಂಟಿ. ಹಾಗಾದರೆ ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇರುವುದು ಪಕ್ಕಾ. ಭಾರತದಲ್ಲಿ ಗಲಾಟೆ ಎಬ್ಬಿಸಲು ಯಾರೆಲ್ಲ ಎಲ್ಲೆಲ್ಲಿ ಕುಳಿತು ಸಂಚು ಹೂಡುತ್ತಿದ್ದಾರೆ ಎನ್ನುವ ತನಿಖೆ ಆಗಲೇಬೇಕು. ಇಲ್ಲದಿದ್ದರೆ ಕಟ್ಟಾ ಮುಸ್ಲಿಂ ರಾಷ್ಟ್ರ ಪಾಕಿಸ್ತಾನದಲ್ಲಿ ಭಾರತದ ಕರ್ನಾಟಕದ ಉಡುಪಿಯ ಹಿಜಾಬ್ ವಿವಾದ ಮೊದಲಿಗೆ ಹೇಗೆ ಸುದ್ದಿಯಾಗಿತ್ತು ಎನ್ನುವುದೇ ನಿಗೂಢ. ಹಾಗಂತ ಅವರದ್ದೇ ದೇಶದ ಮಹಿಳಾ ಕ್ರಿಕೆಟ್ ಪಟುಗಳು ಪ್ಯಾಂಟು, ಟೀ ಶರ್ಟ್ ಹಾಕಿ ಭಾರತದ ಮಹಿಳಾ ಕ್ರಿಕೆಟ್ ಆಟಗಾರರ ಎದುರು ಮೊನ್ನೆ ಆಟವಾಡಿ ಸೋತರಲ್ಲ, ಆಗ ಆ ಹದಿನೈದು ಪಾಕಿಸ್ತಾನಿ ಮಹಿಳಾ ಕ್ರಿಕೆಟಿಗರ ತಲೆಯ ಮೇಲೆ ಯಾವ ಹಿಜಾಬ್ ಕೂಡ ಇರಲಿಲ್ಲ. ಅವರು ಮೈ ಚಳಿ ಬಿಟ್ಟು ಕ್ರಿಕೆಟ್ ಆಡಿದರು. ಸೋತರು ಎನ್ನುವುದು ಬೇರೆ ವಿಷಯ. ಆದರೆ ಅವರ ಎದುರು ನಿಂತಿದ್ದು ಪುರುಷ ಅಂಪೈರ್. ಅವರಿಗೆ ಇಷ್ಟು ಮುಸ್ಲಿಂ ಮಹಿಳೆಯರ ಮುಖ ಕಂಡಿದೆ. ಹಾಗಾದರೆ ಪರಪುರುಷರ ಎದುರು ಮುಖ ತೋರಿಸಬಾರದು ಎನ್ನುವ ನಿಯಮ ಯಾರಿಗೆ? ಅಷ್ಟೇ ಯಾಕೆ, ಪಾಕಿಸ್ತಾನದ ಮಹಿಳಾ ಕ್ರಿಕೆಟಿಗರಿಗೆ ತರಬೇತಿ ಕೊಡುತ್ತಿರುವುದು ವಿದೇಶಿ ಪುರುಷ ಕೋಚ್. ಅವರ ಮುಂದೆ ಮುಖ ತೋರಿಸಿದರೆ ಪರವಾಗಿಲ್ವಾ? ಇನ್ನು ಬಾಂಗ್ಲಾ ದೇಶವನ್ನು ತೆಗೆದುಕೊಳ್ಳಿ. ಅವರು ಕೂಡ ಮಹಿಳಾ ಕ್ರಿಕೆಟ್ ತಂಡವನ್ನು ಮಾಡಿದ್ದಾರೆ. ಅವರು ಕೂಡ ಇವತ್ತು ಮ್ಯಾಚ್ ಆಡಿದ್ದಾರೆ. ಅಲ್ಲಿ ಕೂಡ ಯಾರೂ ಹಿಜಾಬ್ ಧರಿಸಿಲ್ಲ. ಅವರು ಸಾಧನೆ ಮಾಡುತ್ತಾ ಉನ್ನತ ಸ್ಥಾನ ಪಡೆಯುತ್ತಿದ್ದರೆ, ಇತ್ತ ನಮ್ಮ ದೇಶದ ನ್ಯಾಯಾಲಯದ ಮಧ್ಯಂತರ ಆದೇಶವನ್ನು ದಿಕ್ಕರಿಸಿ ನಾವು ಹಿಜಾಬ್ ಧರಿಸಿಯೇ ಕುಳಿತುಕೊಳ್ಳುತ್ತೇವೆ ಎಂದು ಕೆಲವು ವಿದ್ಯಾರ್ಥಿನಿಯರು ಹಟ ಮಾಡುತ್ತಿದ್ದಾರೆ. ಲೈಮ್ ಲೈಟ್ ಗೆ ಬರಲೇಬೇಕು ಎಂದು ಅಷ್ಟು ಹಪಾಹಪಿ ಇದ್ದಲ್ಲಿ ಉತ್ತಮ ಕಾರ್ಯವನ್ನು ಮಾಡಿಕೊಂಡು ಕೂಡ ಬರಬಹುದು. ಸಾಧನೆ ಮಾಡಿಕೊಂಡು ಕೂಡ ಬರಲು ಸಾಧ್ಯವಿದೆ. ದೇಶಕ್ಕೆ ಕೀರ್ತಿ ತಂದರೆ ಮೀಡಿಯಾಗೆ ಹುಡುಕಿಕೊಂಡು ಬರುತ್ತವೆ. ಅದೆಲ್ಲ ಕಷ್ಟ ಎಂದು ಅನಿಸಿದವರಿಗೆ ಮಾತ್ರ ಹೀಗೆ ಚೀಪಾಗಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ನಾವು ಗಲಾಟೆ ಮಾಡುತ್ತೇವೆ, ನೀವು ಚಿತ್ರೀಕರಿಸು ಎನ್ನುವ ಸಣ್ಣ ಮನಸ್ಸು ಇರುತ್ತದೆ. ಹಿಜಾಬ್ ಅನ್ನು ಒಂದು ವೇಳೆ ಇಸ್ಲಾಂನಲ್ಲಿ ಕಡ್ಡಾಯಗೊಳಿಸಿದರೆ ಎಲ್ಲಾ ಮುಸ್ಲಿಂ ಮಹಿಳೆಯರು ಕೂಡ ಹಾಕಬೇಕಿತ್ತಲ್ಲ. ಇಲ್ಲ, ಹಾಕುತ್ತಿಲ್ಲ. ಅದರಲ್ಲಿಯೂ ಭಾರತದಲ್ಲಿ ತರಗತಿಯ ಒಳಗೆ ಪಾಠ ಕೇಳುವಾಗ, ಪರೀಕ್ಷೆಗೆ ಬರೆಯುವಾಗ ಮಾತ್ರ ಹಾಕಬೇಡಾ ಎಂದಿದೆ ವಿನ: ಬೇರೆ ಎಲ್ಲಿ ಕೂಡ ಹಾಕಲು ಸ್ವಾತಂತ್ರ್ಯವಿದೆ. ನಿಮಗೆ ಒಂದು ವೇಳೆ ಪರಪುರುಷರ ಮುಂದೆ ಮುಖ ತೋರಿಸಬಾರದು ಎಂದಿದ್ದರೆ ಯಾರೂ ತೋರಿಸಬಾರದು. ಒಂದು ವೇಳೆ ಅದು ಅವರವರ ಇಷ್ಟ ಎಂದಿದ್ದರೆ ನಿಮ್ಮ ಇಷ್ಟವನ್ನು ಎಲ್ಲಾ ಕಡೆ ನೀವೆ ನಿರ್ಧರಿಸಲು ಆಗಲ್ಲ. ಅದಕ್ಕಾಗಿ ಕಾನೂನುಗಳಿವೆ. ಒಂದು ವೇಳೆ ಗಲಾಟೆ ಆಗಲೇಬೇಕು ಎಂದು ನೀವು ನಿರ್ಧರಿಸಿದ್ದರೆ ಅದನ್ನು ಕಾನೂನಿನ ವ್ಯಾಪ್ತಿಯಲ್ಲಿ ಹೇಗೆ ತಡೆಯಬೇಕು ಎಂದು ಈ ದೇಶಕ್ಕೆ ಗೊತ್ತಿದೆ. ಇನ್ನು ಈ ಕಾಲೇಜು ನಿನ್ನ ಅಪ್ಪಂದಾ ಎಂದು ಆ ಮುಸ್ಲಿಂ ವಿದ್ಯಾರ್ಥಿನಿ ಬಹಿರಂಗವಾಗಿ ಪ್ರಶ್ನಿಸಿದ್ದಾಳೆ. ಈ ದೇಶವೇ ನಮ್ಮದು. ನೀವು ಇಲ್ಲಿ ಬಂದು ನೆಲೆಸಿದ ವಲಸಿಗರು. ನಿಮಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕಿತ್ತೋ ಅಷ್ಟು ಕೊಟ್ಟಿದ್ದೇವೆ. ಬೇಕಾದರೆ ಇರಿ, ಇಲ್ಲದಿದ್ದರೆ ಹೊರಟು ಹೋಗಿ ಎಂದು ಯಾರಾದರೂ ಆ ವಿದ್ಯಾರ್ಥಿನಿಗೆ ತಿರುಗೇಟು ನೀಡಿದರೆ ಏನಾಗಬಹುದು. ಅದರೊಂದಿಗೆ ಆ ಸಾಯಿ ಸಂದೇಶ್ ಎನ್ನುವ ಹುಡುಗನಿಗೆ ಕೊಲೆ ಬೆದರಿಕೆ ಬಂದಿದೆ. ಬೊಗಳುವ ನಾಯಿ ಕಚ್ಚುವುದಿಲ್ಲ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ನಿಜಕ್ಕೂ ತೊಂದರೆ ಆದರೆ ಯಾರು ಗತಿ? ಹಾಗೆ ಆಗದೇ ಇರುವ ಹಾಗೆ ಜಿಲ್ಲಾಡಳಿತ ನೋಡಿಕೊಳ್ಳಬೇಕಿತ್ತೆ ವಿನ: ಪೊಲೀಸರು ಆ ಹುಡುಗರ ಮೇಲೆ ಎಂತೆಂತಹ ಸೆಕ್ಷನ್ ಹಾಕಿ ಕೇಸು ಜಡಿದಿರುವುದು ನೋಡಿದ ನಂತರವೇ ಇಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ “ಈಗ ಸಹ ಕಾಂಗ್ರೆಸ್ಸಿಗರದ್ದು ನಡೆಯುತ್ತೆ”. ಬೇಕಿತ್ತಾ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search