• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಉಕ್ರೇನಿನಿಂದ ಬಂದವರನ್ನು ರಾಜಕಾರಣಿಗಳು ಫ್ರೀಯಾಗಿ ತಮ್ಮ ಕಾಲೇಜುಗಳಿಗೆ ಸೇರಿಸಲಿ!!

Tulunadu News Posted On March 10, 2022
0


0
Shares
  • Share On Facebook
  • Tweet It

ಮೊದಲು ಉಕ್ರೇನಿನಿಂದ ಕರ್ನಾಟಕದವರನ್ನು ಸುರಕ್ಷಿತವಾಗಿ ಕರೆದುಕೊಂಡು ಬನ್ನಿ ಎಂದು ಕಾಂಗ್ರೆಸ್ಸಿಗರು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ಹೇಳಿಕೆಗಳನ್ನು ಕೊಟ್ಟರು. ಎಲ್ಲಾ ಆಯಿತು. ಮೋದಿಯವರ ಸರಕಾರ ತಮ್ಮ ಅಷ್ಟು ಸಾಮರ್ತ್ಯವನ್ನು ಓರೆಗೆ ಹಚ್ಚಿ ಎಲ್ಲರನ್ನು ಕರೆದುಕೊಂಡು ಬಂದು ಕೂಡ ಆಯಿತು. ಈಗ ಬಂದವರಿಗೆ ಇಲ್ಲಿ ಶಿಕ್ಷಣ ಮುಂದುವರೆಸಲು ಅವಕಾಶ ನೀಡಿ ಎಂದು ವಿಪಕ್ಷಗಳು ಧ್ವನಿ ಎತ್ತಿವೆ. ಅದಕ್ಕೆ ಸರಿಯಾಗಿ ನಮ್ಮ ರಾಜ್ಯದ ಆರೋಗ್ಯ ಸಚಿವರು ಇಲ್ಲಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅದರೊಂದಿಗೆ ಮೋದಿಯವರು ಹೇಳಿದ್ದಾರೆ ಎನ್ನಲಾದ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ 50% ಸೀಟುಗಳನ್ನು ಸರಕಾರಿ ಮೆಡಿಕಲ್ ಸೀಟುಗಳ ಶುಲ್ಕದಲ್ಲಿ ತೆಗೆದುಕೊಳ್ಳಲಾಗುವುದು ಎನ್ನುವ ಹೇಳಿಕೆಯನ್ನು ಕೆಲವು ವೆಬ್ ಸೈಟುಗಳು ಬರೆದಿವೆ. ಇದು ನಿಜನಾ ಅಥವಾ ಸುಳ್ಳಾ ಎನ್ನುವುದು ಪರಿಶೀಲಿಸಬೇಕು. ಆದರೆ ಒಂದು ವೇಳೆ ನಿಜವಾದರೆ ಇಲ್ಲಿ ಇರುವ ಸೂಕ್ಷ್ಮವನ್ನು ಗಮನಿಸಬೇಕು. ಮೆಡಿಕಲ್ ಮುಗಿಸಿದವರಿಗೆ ಇಲ್ಲಿ ಇಂಟರ್ನ್ ಶಿಪ್ ಕೊಡುವುದರಲ್ಲಿ ಗೊಂದಲ ಇಲ್ಲ. ಆದರೆ ಈಗ ಉಕ್ರೇನಿನಿಂದ ಬಂದವರಲ್ಲಿ ಹೆಚ್ಚಿನವರು ಬೇರೆ ಬೇರೆ ವರ್ಷಗಳಲ್ಲಿ ಅಲ್ಲಿ ಕಲಿಯುತ್ತಿದ್ದವರು. ಈಗ ಅವರನ್ನು ಇಲ್ಲಿ ಮೆಡಿಕಲ್ ಕಾಲೇಜು ಅಥವಾ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಹಾಗೆ ನೇರವಾಗಿ ಸೇರಿಸಲು ಆಗುವುದಿಲ್ಲ. ಯಾಕೆಂದರೆ ಅಲ್ಲಿ ಇರುವ ಪಠ್ಯಗಳು, ಯಾವ ವರ್ಷದಲ್ಲಿ ಯಾವ ಸಿಲೆಬಸ್ ಎಲ್ಲವೂ ಇಲ್ಲಿಗೆ ಸೂಟ್ ಆಗಬೇಕು. ಅದನ್ನು ಹೊಂದಿಸುವುದು ಸುಲಭ ಅಲ್ಲ. ಅದಕ್ಕಾಗಿ ಅವರಿಗೆ ಪ್ರತ್ಯೇಕ ಪರೀಕ್ಷೆ ಮಾಡಬೇಕು. ಆ ಪರೀಕ್ಷೆ ಸುಲಭವಾಗಿದ್ದರೆ ಬರೆದವರಲ್ಲಿ ಹೆಚ್ಚಿನ ಜನ ಪಾಸಾಗಬಹುದು. ಪರೀಕ್ಷೆ ಕಷ್ಟ ಇಟ್ಟರೆ ಅನೇಕರು ಫೇಲ್ ಆಗಬಹುದು. ಫೇಲ್ ಆದವರ ಕಥೆ ಏನು ಎನ್ನುವುದಕ್ಕೆ ಮೊದಲೇ ಪರಿಹಾರ ತಯಾರಾಗಿ ಇಡಬೇಕು. ನಾಳೆ ಫೇಲ್ ಆದವರು ಗೋಳೋ ಎಂದು ಸರಕಾರವನ್ನು ಬೈದು ತಿರುಗಾಡಿದರೆ ಅದನ್ನೇ ಹಿಡಿದು ಮಾಧ್ಯಮಗಳು, ವಿಪಕ್ಷಗಳು ಗಲಾಟೆ ಮಾಡಬಹುದು. ಹಾಗಾದರೆ ಮೊದಲಿಗೆ ನಿರ್ಧಾರ ಆಗಬೇಕಾಗಿರುವುದು ಪರೀಕ್ಷೆ ಸುಲಭ ಇಡುವುದಾ ಅಥವಾ ಕಷ್ಟ ಇಡುವುದಾ? ಸುಲಭ ಇಡಲು ಅದೇನೂ ನರ್ಸರಿ ಪರೀಕ್ಷೆ ಅಲ್ಲ. ಮೆಡಿಕಲ್ ಡಿಗ್ರಿಗೆ ನಡೆಯಬೇಕಾದ ಪರೀಕ್ಷೆ. ಒಬ್ಬ ರೋಗಿಯ ಜೀವನ್ಮರಣದ ವಿಷಯ. ಇವರು ಪಾಸಾಗಲಿ ಎಂದು ಪರೀಕ್ಷೆ ಸುಲಭ ಮಾಡಿ ಇವರು ಡಾಕ್ಟರ್ ಆಗಿ ಇವರು ಪ್ರಾಕ್ಟೀಸ್ ಮಾಡುವಾಗ ಒಬ್ಬ ಕಾಯಿಲೆ ಎಂದು ಬಂದರೆ ಸ್ಕೆತಸ್ಕೋಪ್ ಎಲ್ಲಿ ಇಡುವುದು ಎಂದು ಉಕ್ರೇನ್ ರಿಟರ್ನ್ಡ್ ಇಂಡಿಯಾ ಎಜುಕೇಟೆಡ್ ಡಾಕ್ಟರ್ ಅವರಿಗೆ ಗೊತ್ತಿಲ್ಲದಿದ್ದರೆ ನಾವು ಕಳಪೆ ವೈದ್ಯರನ್ನು ಸಮಾಜಕ್ಕೆ ಕೊಟ್ಟ ಹಾಗೆ ಆಗಲ್ವಾ? ಅದರಲ್ಲಿಯೂ ವೈದ್ಯರನ್ನು ಸೃಷ್ಟಿಸುವಾಗ ತುಂಬಾ ಎಚ್ಚರಿಕೆ ಇರಬೇಕು. ಸಮಾಜದಲ್ಲಿ ಬೇರೆ ಹುದ್ದೆಗಳಲ್ಲಿ ಇರುವವರಿಗೂ ವೈದ್ಯರಿಗೂ ಇರುವ ಗೌರವದಲ್ಲಿ ತುಂಬಾ ವ್ಯತ್ಯಾಸ ಇದೆ. ನಿಮಗೆ ಗೊತ್ತಿರಬಹುದು. ಎಷ್ಟೋ ಜನ ಶ್ರೀಮಂತರು ಹಣ ಕೊಟ್ಟು ಡಾಕ್ಟರೇಟ್ ಖರೀದಿಸಿ ತಮ್ಮ ಹೆಸರಿನ ಮುಂದೆ ಹಾಕಿಸಿಕೊಳ್ಳುತ್ತಾರೆ. ಅದರ ಉದ್ದೇಶ ಇಷ್ಟೇ, ಸಮಾಜದಲ್ಲಿ ವಿಶೇಷ ಗೌರವ ಸಿಗಲಿ.
ಈಗ ಈ ಅರೆಬೆಂದ ವಿದ್ಯಾರ್ಥಿಗಳಿಗೆ ಭವಿಷ್ಯ ಗೊಂದಲವಾಗಿದೆ. ದಾಖಲೆ ಏನೂ ಇಲ್ಲದೆ ಕೇವಲ ಜೀವ ಉಳಿಸಿ ಬಂದುಬಿಟ್ಟಿದ್ದಾರೆ. ಅವರು ಅಲ್ಲಿ ಫೀಸ್ ಕಟ್ಟಿ ಹಣ ಕಳೆದುಕೊಂಡಿದ್ದಾರೆ ಎನ್ನುವ ಕಾರಣಕ್ಕೆ ಇಲ್ಲಿಯೂ ಅವರಿಗೆ ಫೀಸ್ ತೆಗೆದುಕೊಳ್ಳದೆ ಸರಕಾರ ಮೆಡಿಕಲ್, ಇಂಜಿನಿಯರಿಂಗ್ ಕಲಿಸಲಿ ಎಂದು ವಿಪಕ್ಷ ಅಥವಾ ಯಾರಾದರೂ ಬಯಸುವುದಾದರೆ ಅದಕ್ಕೆ ಒಂದು ನಿಯಮ ಮಾಡಬಹುದು. ನಮ್ಮ ರಾಜ್ಯದ ರಾಜಕಾರಣಿಗಳ ತಾವು ಅಧಿಕಾರದಲ್ಲಿದ್ದಾಗ ಪ್ರಭಾವ ಬಳಸಿ ಅನೇಕ ಕಾಲೇಜುಗಳನ್ನು ಮಾಡಿಕೊಂಡಿದ್ದಾರೆ. ಉದಾಹರಣೆಗೆ ಡಿಕೆಶಿಯವರದ್ದು ರಾಜರಾಜೇಶ್ವರಿ ಕಾಲೇಜು, ಸಾಗರ್ ಕುಟುಂಬದ ದಯಾನಂದ ಸಾಗರ್ ಕಾಲೇಜು, ಜಾಲಪ್ಪನವರ ಕಾಲೇಜು, ಪರಮೇಶ್ವರ್ ಅವರ ಸಿದ್ಧಾರ್ಥ ಕಾಲೇಜು, ಬೆಳಗಾವಿಯ ಪ್ರಭಾಕರ ಕೋರೆಯವರ ಕಾಲೇಜು, ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಕಾಲೇಜು ಹೀಗೆ ಇನ್ನು ಹಲವಾರು ರಾಜಕೀಯ ನಾಯಕರ ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅಂತಹ ರಿಟರ್ನ್ಡ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಬಹುದು. ಅಂತಹ ಕಾಲೇಜುಗಳನ್ನು ಹೊಂದಿರುವ ರಾಜಕಾರಣಿಗಳು ಯಾವುದೇ ಶುಲ್ಕ ತೆಗೆದುಕೊಳ್ಳದೆ ಮಾನವೀಯತೆ ಮೆರೆಯಲಿ ಎಂದು ಹಲವರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಹಾಗೆ ಮಾಡಿದರೆ ರಾಜಕಾರಣಿಗಳ ಬಗ್ಗೆನೂ ಜನರಿಗೆ ಗೌರವ ಬರುತ್ತದೆ. ಹೇಗೂ ಮುಂದಿನ ವರ್ಷ ಚುನಾವಣೆ. ಈ ವಿಷಯದಿಂದ ರಾಜಕಾರಣಿಗಳು ಜನರ ಒಂದಿಷ್ಟು ಸಿಂಪಥಿಯನ್ನು ಕೂಡ ಗಳಿಸಬಹುದು. ಒಟ್ಟಿನಲ್ಲಿ ಉಕ್ರೇನ್ ರಿಟರ್ನ್ಡ್ ಇಂಡಿಯಾ ಎಜುಕೇಟೆಡ್ ಗಳು ವೈದ್ಯರಾದ ನಂತರ ಅವರ ಬಳಿ ಚಿಕಿತ್ಸೆಗೆ ಹೋಗುವವರು ಎಚ್ಚರಿಕೆಯಿಂದ ಇರಬೇಕು. ಮೋದಿಯವರು ವೋಕಲ್ ಫಾರ್ ಲೋಕಲ್ ಎಂದು ಹೇಳುತ್ತಾರೆ. ನಮಗೆ ಲೋಕಲ್ ನಲ್ಲಿ ಕಲಿತಿರುವ ವೈದ್ಯರ ಬಗ್ಗೆ ಇರುವಷ್ಟು ನಂಬಿಕೆ ಹೊರ ದೇಶದಲ್ಲಿ ಕಲಿತವರ ಮೇಲೆ ಇರುವುದು ಡೌಟು. ಅದರಲ್ಲಿಯೂ ಯುದ್ಧದಿಂದ ಹೀಗೆ ಮಧ್ಯದಲ್ಲಿ ಬಂದವರ ಮೇಲೆ ಇನ್ನು ಸಂಶಯ ಜಾಸ್ತಿ. ಅಲ್ಲಿ ಕಲಿತಿಲ್ಲ, ಇಲ್ಲಿ ಕಲಿಸಿಲ್ಲ ಎಂದಾದರೆ ರೋಗಿ ಗೋವಿಂದಾ!

0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Tulunadu News July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Tulunadu News July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search