ಬಂದ್ ಕರೆ ಕೊಟ್ಟವರ ಮನೆ ಹೊರಗೆ ಸ್ಟಾಲ್ ಹಾಕಿ ಹೋಗಿ!!
ಉಡುಪಿಯ ಆರು ಜನ ವಿದ್ಯಾರ್ಥಿನಿಯರು ಮಾಡಿದ ಒಂದು ಹಟಕ್ಕೆ ಇವತ್ತು ಜಾತ್ರೆಗಳಲ್ಲಿ ಸ್ಟಾಲ್ ಇಟ್ಟು ಮಾರುವ ಅಷ್ಟೂ ಮುಸ್ಲಿಂ ವ್ಯಾಪಾರಿಗಳು ಬೀದಿಗೆ ಬಿದ್ದಿದ್ದಾರೆ. ಈಗ ಕರಾವಳಿ ಸೇರಿ ಮಲೆನಾಡನ್ನು ಒಳಗೊಂಡು ಮುಂದಿನ ದಿನಗಳಲ್ಲಿ ಎಲ್ಲೆಲ್ಲೆ ಹಿಂದೂಗಳ ಜಾತ್ರೆಗಳು ಆಗುತ್ತದೋ ಅಲ್ಲೆಲ್ಲ ಮುಸ್ಲಿಮರು ಅಂಗಡಿ ಇಡುವಂತಿಲ್ಲ ಎನ್ನುವ ಅಲಿಖಿತ ನಿಯಮ ಜಾರಿಗೆ ಬರಲಿದೆ. ಇಂತಹ ಒಂದು ಕಠಿಣ ನಿರ್ಧಾರವನ್ನು ಹಿಂದೂ ಸಮಾಜ ಯಾಕೆ ತೆಗೆದುಕೊಳ್ಳಬೇಕಾಯಿತು? ಸಂಶಯವೇ ಇಲ್ಲ. ಇದಕ್ಕೆ ಕಾರಣ ಇದೇ
ಮುಸ್ಲಿಮರಲ್ಲಿರುವ ಉನ್ನತ ಮುಖಂಡರು. ರಾಜ್ಯದ ಉಚ್ಚ ನ್ಯಾಯಾಲಯ ತೀರ್ಪು ನೀಡಿ ಕ್ಲಾಸಿನೊಳಗೆ ಹಿಜಾಬ್ ಅವಕಾಶ ಇಲ್ಲ ಎಂದಾಗ ರಾಜ್ಯವ್ಯಾಪಿ ಬಂದ್ ಕರೆ ಕೊಟ್ಟಿದ್ದು ಯಾರು? ಮುಸ್ಲಿಂ ವರ್ತಕರು. ಯಾಕೆ? ಹಿಂದೂಗಳಿಗೆ ಬುದ್ಧಿ ಕಲಿಸುತ್ತೇವೆ ಎನ್ನುವ ಕಾರಣಕ್ಕಾ. ಹಿಂದೂಗಳಿಗೆ ನಮ್ಮ ಬಲ ತೋರಿಸುತ್ತೇವೆ ಎನ್ನುವ ಒಣಪ್ರತಿಷ್ಟೆಗಾ? ನಾವು ಬಂದ್ ಮಾಡಿದರೆ ಕರ್ನಾಟಕ ಗಡಗಡ ನಡುಗುತ್ತೆ ಎನ್ನುವ ಭ್ರಮೆಗಾ? ಒಂದು ರಾಜ್ಯದ ಉಚ್ಚ ನ್ಯಾಯಾಲಯ ಸಂವಿಧಾನದ ಅಡಿಯಲ್ಲಿ ನೀಡಿರುವ ಆದೇಶವನ್ನು ನೀವು ಪಾಲಿಸಲ್ಲ ಎಂದು ಹಟಕ್ಕೆ ಬೀಳುತ್ತೀರಿ ಎಂದ ಮೇಲೆ ನೀವು ಯಾರ ಮಾತನ್ನು ಕೇಳುತ್ತೀರಿ. ಸುಪ್ರೀಂ ಕೋರ್ಟಿನದ್ದಾ? ಒಂದು ವೇಳೆ ದೇಶದ ಸರ್ವೋಚ್ಚ ನ್ಯಾಯಾಲಯಕ್ಕೆ ನೀವು ಹೋಗಬೇಕು ಎಂದಿದ್ದರೆ ಸುಮ್ಮನೆ ಬಾಯಿಮುಚ್ಚಿ ಹೋಗಬಹುದಿತ್ತಲ್ಲ. ಅದರ ಮಧ್ಯೆ ಬಂದ್ ಯಾಕೆ ಮಾಡಲು ಹೋದ್ರಿ. ಇನ್ನು ಬಂದ್ ಕರೆ ಕೊಡಲು ಇಲ್ಲಿ ಏನು ನಿಮ್ಮ ಮತದವರ ನರಮೇಧ ಆಗಿದೆಯಾ? ಅತ್ಯಾಚಾರ ಆಗಿದೆಯಾ? ದೌರ್ಜನ್ಯ ಆಗಿದೆಯಾ? ಕೇವಲ ತರಗತಿಯೊಳಗೆ ಹಿಜಾಬ್ ಬೇಡಾ, ನಂತರ ಎಲ್ಲಿ ಬೇಕಾದರೂ ಧರಿಸಿ ಎಂದು ಸ್ವಾತಂತ್ರ್ಯ ಸಿಕ್ಕ ದೇಶವಲ್ಲವೇ ಇದು. ಬೇರೆ ಯಾವ ದೇಶದಲ್ಲಿ ನಿಮಗೆ ಇಷ್ಟು ಸ್ವಾತಂತ್ರ್ಯ ಇದೆ. ಒಂದು ವೇಳೆ ಯಾರೋ ತಲೆ ಸರಿ ಇಲ್ಲದವರು ಬಂದ್ ಕರೆ ಕೊಟ್ಟರೂ ನೀವು ಮುಸ್ಲಿಮರು ಬಂದ್ ಗೆ ಒಪ್ಪಿಗೆ ಇಲ್ಲ ಎಂದೇ ಹೇಳಬೇಕಿತ್ತು. ಆದರೆ ನೀವು ನಿಮ್ಮ ನಾಯಕರು ಹೇಳಿದಂತೆ ಮಾಡಿದಿರಿ. ಹಾಗಾದರೆ ನಿಮ್ಮನ್ನು ಸಾಕುವವರು ಅವರಾ? ಅವರಾಗಿದ್ದರೆ ಈಗ ನಿಮಗೆ ಹಿಂದೂ ದೇವಾಲಯಗಳಲ್ಲಿ ಜಾತ್ರೆಯ ಸಂದರ್ಭದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಡುತ್ತಿಲ್ಲವಲ್ಲ, ಆವತ್ತು ಬಂದ್ ಕರೆ ಕೊಟ್ಟ ಮುಸ್ಲಿಂ ಮುಖಂಡರ ಬಳಿ ಹೋಗಿ ನಿಮ್ಮ ಸಮಸ್ಯೆ ಹೇಳಿಕೊಳ್ಳಿ.
ಅದು ಬಿಟ್ಟು ಉಡುಪಿಯಲ್ಲಿ ಪ್ರೆಸ್ ಮೀಟ್ ಮಾಡಿ ಹೇಳುವ ಅಗತ್ಯ ಏನಿತ್ತು? ಹಿಂದೂಗಳೊಡನೆ ನಾವು ಚೆನ್ನಾಗಿದ್ದೇವೆ, ಅದಕ್ಕೆ ನಾವು ಇಷ್ಟು ಬೆಳೆದಿದ್ದೇವೆ ಎಂದು ಹೇಳುವ ನೀವು ಗಂಗೊಳ್ಳಿಯಲ್ಲಿ ಮೀನು ಮಾರುವ ಹಿಂದೂ ಮಹಿಳೆಯರು ಯಾವುದೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದ ಕೂಡಲೇ ಅವರ ಬಳಿ ವ್ಯಾಪಾರ ಮಾಡಬಾರದು ಎಂದು ನಿರ್ಣಯ ತೆಗೆದುಕೊಂಡಿರಲ್ಲ, ಅದು ಸರಿನಾ? ಆಗ ಯಾವ ಬೀದಿ ಬದಿ ಮುಸ್ಲಿಂ ವ್ಯಾಪಾರಿ ಹಾಗೆ ಮಾಡಬೇಡಿ ಎಂದು ಗಂಗೊಳ್ಳಿಯ ತಮ್ಮ ಸಮಾಜ ಬಾಂಧವರಿಗೆ ಹೇಳಿದ್ದಾರೆ. ಇನ್ನು ಉಪ್ಪಿನಂಗಡಿಯಲ್ಲಿ ಮೀನು ಮಾರುವ ಹಿಂದೂ ಪುರುಷರಿಗೆ ಹೊಡೆದು ಹೋದರಲ್ಲ, ನಿಮ್ಮವರು, ಆಗ ನೀವೆಷ್ಟು ಬೀದಿಬದಿ ಮುಸ್ಲಿಂ ವ್ಯಾಪಾರಿಗಳು ಹಿಂದೂಗಳ ಸಹಾಯಕ್ಕೆ ಬಂದಿದ್ದೀರಿ. ಈಗ ನಿಮ್ಮ ಕಾಲಬುಡಕ್ಕೆ ಬಂದಾಗಲೇ ನಿಮಗೆ ಸಹೋದರತ್ವ ನೆನಪಾಗುವುದಾ? ಜಾತ್ರೆಗಳಲ್ಲಿ ನೀವು ವ್ಯಾಪಾರ ಮಾಡಿ ಲಾಭ ಮಾಡಿ ಈ ದೇಶದ ಮಣ್ಣಿಗೆ ವಿರುದ್ಧ ಮಾತನಾಡುವುದಾದರೆ ನಿಮಗೆ ಇಲ್ಲಿ ಇರಲು ನಿಜಕ್ಕೂ ನೈತಿಕತೆ ಇಲ್ಲ. ಹಿಂದೂಗಳಿಗೆ ತಮ್ಮ ಧರ್ಮಕ್ಕಿಂತ ದೇಶ ಮುಖ್ಯ. ಈ ದೇಶದ ಸಂವಿಧಾನ ಮುಖ್ಯ. ಇಲ್ಲಿ ಅದನ್ನು ವಿರೋಧಿಸುವವರೊಂದಿಗೆ ನಮಗೆ ಏನು ಸಂಬಂಧ? ಸಂವಿಧಾನ ಮನೆಯ ಯಜಮಾನ ಇದ್ದ ಹಾಗೆ. ನೀವು ಅದನ್ನೇ ವಿರೋಧಿಸುತ್ತೀರಿ ಎಂದರೆ ಅರ್ಥ ಇದೆಯಾ? ಈಗ ಹೆಚ್ಚಿನ ಕಡೆ ನಿಮಗೆ ವ್ಯಾಪಾರಕ್ಕೆ ನಿಷೇಧ ಹಾಕಿದ ಕಾರಣ ದೇವಳಗಳಿಗೆ ಲಾಭ ಇದೆ. ಹೇಗೆ ಎಂದರೆ ಅನೇಕ ಕಡೆ ಏಲಂ ಇರುವುದಿಲ್ಲ. ಜಾತ್ರೆಗಳಿಗೆ ಕಳೆ ಕಟ್ಟಲಿ ಎಂದು ಯಾರು ಸ್ಟಾಲ್ ಹಾಕಿದರೂ ಅವಕಾಶ ನೀಡಿ ಪ್ರೋತ್ಸಾಹಿಸಲಾಗುತ್ತಿತ್ತು. ಯಾಕೆಂದರೆ ಅಂಗಡಿಗಳು ಹೆಚ್ಚಿದಷ್ಟು ಜಾತ್ರೆಗಳಿಗೆ ಪರೋಕ್ಷವಾಗಿ ಸಂಭ್ರಮ ಹೆಚ್ಚಾಗುತ್ತದೆ. ಆದರೆ ಅದರಿಂದ ದೇವಳಿಗಳಿಗೆ ಯಾವುದೇ ಆದಾಯ ಇಲ್ಲ. ಇನ್ನು ಮುಂದೆ ಯಾರಿಗಾದರೂ ಒಂದು ಗುತ್ತಿಗೆ ತರ ಕೊಟ್ಟು ಅದರಿಂದ ಪುಡಿಗಾಸು ಸಿಕ್ಕಿದರೂ ಸಾಕು, ಹನಿಗೂಡಿ ಹಳ್ಳ ಎನ್ನುವಂತೆ ಆಯಾ ದೇವಸ್ಥಾನಗಳಿಗೆ ಆರ್ಥಿಕವಾಗಿಯೂ ಲಾಭವಾಗುತ್ತದೆ ಅಲ್ಲವೇ? ಇನ್ನು ಭಜರಂಗದಳದವರು ಸ್ಟಾಲ್ ಹಾಕಿ ವ್ಯಾಪಾರ ಮಾಡಿದರೆ ಆ ಹಣ ಸಮಾಜಕ್ಕೆ ಸದ್ವಿನಿಯೋಗವಾಗುತ್ತದೆ. ಸದ್ಯಕ್ಕಂತೂ ಈ ವಿಚಾರ ಹಿಂದೂ ಧರ್ಮ ಹಾಗೂ ಇಸ್ಲಾಂ ಮತಗಳ ನಡುವಿನ ಸಂಘರ್ಷವಾಗಿ ತಾರಕಕ್ಕೆ ಏರಿದೆ ಎಂದು ಯಾರೂ ಅಂದುಕೊಳ್ಳಬೇಕಿಲ್ಲ. ಇದು ಕರ್ನಾಟಕ ಬಂದ್ ಕರೆ ಕೊಟ್ಟ ಮುಸ್ಲಿಂ ವ್ಯಾಪಾರಿಗಳಿಗೆ ನಮ್ಮ ಉತ್ತರ ಈ ರೀತಿ ಇರುತ್ತದೆ ಎಂದು ತೋರಿಸಿದ ಸ್ಯಾಂಪಲ್ ಅಷ್ಟೇ. ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಮತ್ತೊಮ್ಮೆ ನೀವು ನಮಗೆ ಅಸಮಾಧಾನವಾಗಿದೆ ಎಂದು ಬಂದ್ ಕರೆ ಕೊಟ್ಟರೆ ನಂತರ ಇನ್ನಷ್ಟು ಕಠಿಣ ನಿರ್ಧಾರಗಳನ್ನು ಹಿಂದೂ ಸಮಾಜ ತೆಗೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ!!
Leave A Reply