• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹೂವನ್ನು ಮೂಸಿ ಮಾಲೆ ಮಾಡುವವರು ಜಾತ್ರೆಯಲ್ಲಿ ವ್ಯಾಪಾರ ಮಾಡಬೇಕಾ?

Hanumantha Kamath Posted On March 25, 2022


  • Share On Facebook
  • Tweet It

ನೀವು ಇತ್ತೀಚೆಗೆ ಒಂದು ವಿಡಿಯೋ ನೋಡಿರಬಹುದು. ಒಬ್ಬ ಮುಸ್ಲಿಂ ಹೂ ವ್ಯಾಪಾರಿ ಬಿಡಿ ಹೂಗಳನ್ನು ಸೇರಿಸಿ ಮಾಲೆ ಮಾಡಲು ರಸ್ತೆ ಬದಿ ಕುಳಿತಿದ್ದಾನೆ. ಪ್ರತಿ ಹೂವನ್ನು ಪೋಣಿಸುವಾಗ ಅದನ್ನು ಮೂಗಿನ ತನಕ ಒಂದು ಪರಿಮಳ ಮೂಸಿ ನಂತರ ಸೂಜಿಗೆ ಪೋಣಿಸುತ್ತಾನೆ. ನಂತರ ಅದನ್ನೇ ಅಂಗಡಿಯಲ್ಲಿ ಮಾರಾಟಕ್ಕೆ ಇಡುತ್ತಾರೆ. ಅದನ್ನು ಹಿಂದೂಗಳು ಖರೀದಿಗೆ ದೇವರಿಗೆ ಸಮರ್ಪಿಸಲು ತೆಗೆದುಕೊಂಡು ಹೋಗುತ್ತಾರೆ. ಹೂವಿನ ಮಾಲೆಯನ್ನು ದೇವರಿಗೆ ನೈವೇದ್ಯವಾಗಿ ನೀಡುವಾಗ ಅದರ ಪರಿಮಳವನ್ನು ಕೂಡ ಹಿಂದೂಗಳಾದ ನಾವು ಆಸ್ವಾದಿಸುವುದಿಲ್ಲ. ಅದರಲ್ಲಿಯೂ ಮೂಗಿನ ತನಕ ತಂದು ಪರಿಮಳ ಸ್ವೀಕರಿಸಿ ನಂತರ ಅದನ್ನು ದೇವರಿಗೆ ತೆಗೆದುಕೊಂಡು ಹೋಗುವುದಿಲ್ಲ. ಹಾಗೆ ಮಾಡುವುದು ನಮಗೆ ಅಪಚಾರ. ಆದರೆ ಅದನ್ನು ಮಾಡುವ ಮೂಲಕ ಮುಸ್ಲಿಂ ವ್ಯಾಪಾರಿಯೊಬ್ಬ ನಮ್ಮ ಭಾವನೆಗಳೊಂದಿಗೆ ಆಡಿದ ಸ್ಯಾಂಪಲ್ ಸಾಕು. ಇವರು ಯಾವುದಕ್ಕೂ ಹೇಸುವುದಿಲ್ಲ. ಬಹಿರಂಗವಾಗಿ ಇವರು ಹೀಗೆ ಮಾಡುತ್ತಾರೆ ಎಂದರೆ ಇವರ ಹೋಟೇಲುಗಳಲ್ಲಿ ಊಟಕ್ಕೆ ಹೋದರೆ ಒಳಗೆ ಅಡುಗೆಕೋಣೆಯಲ್ಲಿ ಇವರು ಎಂಜಿಲು ಹಾಕಿ ಕೊಟ್ಟರೂ ನಮಗೆ ಗೊತ್ತಾಗುವುದಿಲ್ಲ. ಹೀಗೆ ಇವರು ಮಾಡುವುದನ್ನು ಎಲ್ಲ ಅನುಭವಿಸಲು ಆಗುವುದಿಲ್ಲ. ಹಾಗಂತ ಇದನ್ನು ವಿರೋಧ ಮಾಡಿ ನೋಡಿ. ತಮ್ಮ ಮೇಲೆ ಅನ್ಯಾಯ ಎಂದು ಹೇಳುತ್ತಾರೆ. ಇವರ ಪರವಾಗಿ ಜಾತ್ಯಾತೀತ ಕಾಂಗ್ರೆಸ್ಸಿಗರು ಓಡಿ ಬರುತ್ತಾರೆ. ಮಂಗಳೂರಿನಲ್ಲಿ ಮಿಥುನ್ ರೈ ಹಾಗೂ ಅಭಯಚಂದ್ರ ಸುದ್ದಿಗೋಷ್ಟಿ ಮಾಡಿ ಹಿಂದೂ ಸಂಘಟನೆಗಳ ತಾಕತ್ತನ್ನು ಪ್ರಶ್ನಿಸಿದ್ದಾರೆ. ಈಗ ಹೀಗೆ ಅಳುವ ಬದಲು 2002 ರಲ್ಲಿ ಅಭಯಚಂದ್ರ ಜೈನ್ ಅವರು ವಿಧಾನಪರಿಷತ್ತಿನಲ್ಲಿ ಸದಸ್ಯರಾಗಿದ್ದರಲ್ಲ, ಆಗ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರಲ್ಲ, ಆಗ ಹಿಂದೂ ದೇವಾಲಯಗಳ ಆವರಣದಲ್ಲಿ, ಅದಕ್ಕೆ ಸಂಬಂಧಪಟ್ಟ ಕಟ್ಟಡ, ನಿವೇಶನದಲ್ಲಿ ಹಿಂದೂಯೇತರರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಕಾಯ್ದೆ ತಂದರಲ್ಲ, ಆಗ ಜೈನ್ ಸಹಿತ ಯಾವ ಕಾಂಗ್ರೆಸ್ ಶಾಸಕ ಕೂಡ ಯಾಕೆ ಮಾತನಾಡಲಿಲ್ಲ. ಎಲ್ಲರೂ ಬಾಯಿಗೆ ಅವಲಕ್ಕಿ ತುಂಬಿ ಕೂತಿದ್ದರಲ್ಲ. ಈಗ ಮುಸ್ಲಿಮ್ ವ್ಯಾಪಾರಿಗಳ ಪರ ನಿಮಗೆ ಸಂಕಟ ಆಗುತ್ತಿದೆಯಾ?

ಯಾವಾಗ ನೀರು ತಮ್ಮ ಕಾಲಬೆರಳುಗಳಿಗೆ ಬಂದು ಅಲ್ಲಿಂದ ಮೊಣಕಾಲಿಗೆ ಏರಿ, ಸೊಂಟವನ್ನು ಮುಗಿಸುತ್ತದೆಯೋ ಆಗ ಕೆಲವರಿಗೆ ಸಹಿಷ್ಣುತೆ ನೆನಪಾಗುತ್ತದೆ. ಅಲ್ಲಿಯ ತನಕ ಅವರಿಗೆ ಈ ದೇಶ ಇರುವುದೇ ತಮ್ಮ ಸ್ವಚ್ಚಂದ ವಾಸಕ್ಕಾಗಿ ಎನ್ನುವ ಉಢಾಪೆ ಇರುತ್ತದೆ. ಈಗ ಪರಿಸ್ಥಿತಿಯ ಬೆಂಕಿ ನಿಧಾನವಾಗಿ ಬಿಸಿ ಮುಟ್ಟಿಸುವಾಗ ನಾವು ಒಟ್ಟಾಗಿ ಇರೋಣ ಎಂದು ಹೇಳುವವರನ್ನು ಯಾವಾಗಲೂ ನಂಬಬಾರದು. ಈಗ ಅಂತಹ ತಿರುವಿನಲ್ಲಿ ಮುಸ್ಲಿಂ ವ್ಯಾಪಾರಿಗಳು ನಿಂತಿದ್ದಾರೆ. ನಾವು ತರಗತಿಯಲ್ಲಿ ಹಿಜಾಬ್ ಹಾಕದೇ ಪಾಠ ಕೇಳಲ್ಲ ಎಂದು ಹಟ ಮಾಡಿದರು. ಆದರೆ ಇದೇ ಮುಸ್ಲಿಂ ಹೆಣ್ಣುಮಕ್ಕಳು ಅಪಘಾನಿಸ್ತಾನದಲ್ಲಿ ಇದ್ದಿದ್ರೆ ಆರನೇ ತರಗತಿಯ ನಂತರ ವಿದ್ಯಾಭ್ಯಾಸಕ್ಕೆ ಶಾಲೆಗಳಲ್ಲಿ ಅವಕಾಶ ಕೊಡಿ ಎಂದು ದಂಬಾಲು ಬಿದ್ದರೂ ಅಲ್ಲಿನ ತಾಲಿಬಾನಿಗಳು ಒಪ್ಪುತ್ತಿಲ್ಲ. ಆರನೇ ಕ್ಲಾಸು ಲಾಸ್ಟ್ ಎನ್ನುವ ಸುತ್ತೋಲೆಯನ್ನು ಅಲ್ಲಿನ ಸರಕಾರ ಹೊರಡಿಸಿದೆ. ಇಲ್ಲಿ ಎಷ್ಟು ಬೇಕಾದರೂ ಕಲಿಯಿರಿ. ತರಗತಿಯ ಒಳಗೆ ಪಾಠದ ಸಮಯ ಹಿಜಾಬ್ ಬೇಡಾ ಎಂದದ್ದೇ ಇವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಷ್ಟೇ ಅಲ್ಲ, ಹಟ ಎಷ್ಟಿತ್ತು ಎಂದರೆ ಹೈಕೋರ್ಟಿಗೆ ಹೋದರು. ಓಕೆ. ಅಲ್ಲಿ ತೀರ್ಪು ಬಂದ ಮೇಲೆಯಾದರೂ ಸುಮ್ಮನೆ ಕೂರಬಹುದಿತ್ತು. ಸುಪ್ರೀಂಕೋರ್ಟಿಗೆ ಹೋದರು. ಅದಾದರೂ ಓಕೆ. ಆದರೆ ಈ ನಡುವೆ ಮುಸ್ಲಿಮರು ಒಂದು ದಿನ ತಮ್ಮ ಎಲ್ಲಾ ವ್ಯಾಪಾರ, ವಹಿವಾಟು ಬಂದ್ ಮಾಡಬೇಕು ಎಂದು ಕೆಲವು ಸಂಘಟನೆಗಳು ಹೇಳಿದ ಕೂಡಲೇ ಯಾರೂ ಬಾಯಿ ತೆರೆಯದೇ ಬಂದ್ ಮಾಡಿದರಲ್ಲ, ಅದರ ಮುಂದುವರೆದ ಭಾಗವೇ ಈಗ ಜಾತ್ರೆಗಳಲ್ಲಿ ನಿಮಗೆ ಅಂಗಡಿ ತೆರೆಯಲು ಅವಕಾಶ ಇಲ್ಲ. ಇದರಿಂದ ಉಭಯ ಜಿಲ್ಲೆಗಳ ಸುಮಾರು 650 ರಷ್ಟು ಬೀದಿಬದಿ ವ್ಯಾಪಾರಿಗಳಿಗೆ ಸಂಕಟ ಉಂಟಾಗಿದೆ. ಇಷ್ಟೇ ಆಗಿದ್ದರೆ ಮುಸ್ಲಿಮರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಜಾತ್ರೆಗಳಲ್ಲಿ ವ್ಯಾಪಾರ ಮಾಡಿ ಲಾಭ ಗಳಿಸುವುದು ಅವರಿಗೆ ಬೋನಸ್. ಆದರೆ ಇದು ಮುಂದುವರೆದು ಎಲ್ಲ ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ಕೊಡುವುದಿಲ್ಲ ಎಂದು ಹಿಂದೂಗಳು ನಿರ್ಧಾರ ಮಾಡಿದರೆ ಆಗ ತೊಂದರೆ ಆಗುತ್ತದೆ ಎನ್ನುವುದು ಮುಸ್ಲಿಂ ಉದ್ಯಮಿಗಳಿಗೆ ಅನಿಸಲು ಶುರುವಾಗಿದೆ. ಇದರ ಒಂದು ಐಡಿಯಾ ದಶಕಗಳ ಹಿಂದೆ ಗೊತ್ತಿದ್ದ ಕೆಲವು ಮುಸ್ಲಿಂ ವ್ಯಾಪಾರಿಗಳು ಏನು ಮಾಡಿದ್ದರು ಎಂದರೆ ತಮ್ಮ ಅಂಗಡಿಗಳಿಗೆ ಹಿಂದೂಗಳ ಹೆಸರು ಇಡುವುದು. ಉದಾಹರಣೆಗೆ ರಾಮ ಜ್ಯೂಸ್ ಸೆಂಟರ್ ಎಂದು ಇರುತ್ತದೆ. ಆದರೆ ಮಾಲೀಕರು ಅಬ್ದುಲ್ ಖಾದರ್ ಇರುತ್ತಾರೆ. ಇದು ಏನೂ ಊಹೆ ಅಲ್ಲ. ದೇಶದ ಪ್ರಸಿದ್ಧ ಯಾತ್ರಾ ಸ್ಥಳ ಉಜ್ಜಯನಿಯ ಮಹಾಕಾಳ ಜ್ಯೋರ್ತಿಲಿಂಗದ ವೀಕ್ಷಣೆಗೆ ಯಾವಾಗಲೂ ಅಸಂಖ್ಯಾತ ಹಿಂದೂ ಭಕ್ತರು ಭೇಟಿ ನೀಡುತ್ತಾರೆ. ಆ ಪ್ರದೇಶದ ಸುತ್ತಲೂ ಅನೇಕ ಮಳಿಗೆಗಳು ಇವೆ. ಅವರಿಗೆ ನಿತ್ಯವೂ ಉತ್ತಮ ವ್ಯಾಪಾರ ಇದೆ. ಎಲ್ಲವೂ ನೋಡಲು ಹಿಂದೂ ಹೆಸರಿನ ಅಂಗಡಿಗಳು. ಆದರೆ ಮಾಲೀಕರು ಮುಸ್ಲಿಮರು. ಹಿಂದೂಗಳು ಇದನ್ನೆಲ್ಲ ಮನಸ್ಸಿನಲ್ಲಿ ಇಟ್ಟು ಮುಸ್ಲಿಮರ ಬಳಿ ವ್ಯಾಪಾರ ನಿಲ್ಲಿಸಿದರೆ ಏನಾಗಬಹುದು? 125 ಕೋಟಿ ಜನಸಂಖ್ಯೆಯಲ್ಲಿ 100 ಕೋಟಿ ಹಿಂದೂಗಳೇ ಇದ್ದಾರೆ. ಉಳಿದದ್ದು ನಿಮಗೆ ಬಿಟ್ಟಿದ್ದು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search