ಆರಗ ಎಂಪಿ ಗೃಹ ಸಚಿವರ ಬಳಿ ಟ್ಯೂಶನ್ ತೆಗೆದುಕೊಳ್ಳಿ!
ಉತ್ತರ ಪ್ರದೇಶದಲ್ಲಿ ಆಗುತ್ತದೆ, ಮಧ್ಯಪ್ರದೇಶದಲ್ಲಿ ಆಗುತ್ತದೆ. ಅಲ್ಲಿನ ಮುಖ್ಯಮಂತ್ರಿಗಳು ಭಾರತೀಯ ಜನತಾ ಪಾರ್ಟಿಯವರು. ನೀವು ಹೀಗೆ ಮಾಡುವುದು ಸರಿಯಾ ಎಂದು ಭಕ್ರಾ ದತ್ ಎನ್ನುವ ಭರ್ಕಾ ದತ್ತ್ ಎಂಬ ಕಾಂಗ್ರೆಸ್ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಕ್ಕೆ ಮಧ್ಯಪ್ರದೇಶದ ಗೃಹಸಚಿವರು “ಅವರು ಹಾಗೆ ಮಾಡಿದರೆ ನಾವು ಹೀಗೆ ಮಾಡುವುದು” ಎಂದು ಹೇಳುತ್ತಾರೆ ಎಂದರೆ ಅದನ್ನು ಗಟ್ಸ್ ಎನ್ನುತ್ತಾರೆ. ಯುಪಿ, ಎಂಪಿಯವರು ಹೇಗೆ ಮತಾಂಧರಿಗೆ ಬುದ್ಧಿ ಕಲಿಸಿದರು ಎನ್ನುವುದನ್ನು ಇಡೀ ದೇಶವೇ ನೋಡಿತು. ಯುಪಿ, ಎಂಪಿಯಲ್ಲಿ ಕಲ್ಲು ಬಿಸಾಡಿದವರು ಮುಟ್ಟಿ ನೋಡುವಂತೆ ಮಾಡಲಾಗಿದೆ. ಕರ್ನಾಟಕದಲ್ಲಿಯೂ ಬಿಜೆಪಿ ಮುಖ್ಯಮಂತ್ರಿ ಇದ್ದಾರೆ, ಗೃಹ ಸಚಿವರು ಇದ್ದಾರೆ. ಹಾಗೇ ಮಾಡಿ ಎಂದು ಕೇಸರಿ ಪಾಳಯ ಸಹಿತ ಮನೆಯಲ್ಲಿ ಟಿವಿ ನೋಡುತ್ತಿರುವ ಜನಸಾಮಾನ್ಯ ಕೂಡ ಹೇಳುತ್ತಿದ್ದಾನೆ. ಆದರೆ ಬಿಜೆಪಿ ಸರಕಾರಕ್ಕೆ ಕಿವಿ ಕೇಳಿಸುವುದಿಲ್ಲ. ಯಥಾಪ್ರಕಾರ ಸಚಿವರದ್ದು ಅದೇ ಹಳೆಯ ಡೈಲಾಗ್ _”ತಪ್ಪು ಮಾಡಿದವರನ್ನು ಬಿಡುವ ಪ್ರಶ್ನೆಯೇ ಇಲ್ಲ” ಇವರು ತಪ್ಪು ಮಾಡಿದವರನ್ನು ಬಿಡುತ್ತಾರೋ, ಇಲ್ವೋ ಆದರೆ ತಪ್ಪು ಮಾಡುವ ಗುರಿ ಇಟ್ಟುಕೊಂಡವರು ಮಾತ್ರ ಕರ್ನಾಟಕದಲ್ಲಿ ತಮ್ಮದೇ ಸರಕಾರ ಇದೆ ಎನ್ನುವ ಹಾಗೆ ತಪ್ಪು ಮಾಡುತ್ತಲೇ ಇದ್ದಾರೆ. ಇವರು ಪ್ರತಿ ಸಲ ಅದೇ ಡಬ್ಬಾ ಹೇಳಿಕೆ ಕೊಟ್ಟು ಮನೆಗೆ ಹೋಗಿ ಮಲಗುತ್ತಾರೆ. ಗೃಹ ಸಚಿವರನ್ನಾಗಿ ಆರಗ ಜ್ಞಾನೇಂದ್ರ ಏನು ಮಾಡಬೇಕು ಎನ್ನುವುದನ್ನು ಯುಪಿ, ಎಂಪಿ ಗೃಹ ಸಚಿವರ ಬಳಿ ಟ್ಯೂಶನ್ ತೆಗೆದುಕೊಂಡು ಬಂದು ಇಲ್ಲಿ ಅಳವಡಿಸಲಿ. ಒಂದು ವೇಳೆ ಆ ಖಾತೆ ತುಂಬಾ ಕಠಿಣ ಎಂದಾದರೆ ಅದನ್ನು ಬಿಟ್ಟು ಏನಾದರೂ ಸುಲಭದ್ದು ಇದೆಯಾ ಎಂದು ನೋಡಲಿ. ಈ ಖಾತೆಯನ್ನು ಯತ್ನಾಳಗೋ, ರವಿಗೋ, ಸುನೀಲ್ ಗೋ ಕೊಡಲಿ. ಅವರು ಹೇಗೆ ನಿರ್ವಹಿಸುತ್ತಾರೆ ಎಂದು ನೋಡೋಣ.
ಅಷ್ಟಕ್ಕೂ ಹುಬ್ಬಳ್ಳಿಯಲ್ಲಿ ಅದ್ಯಾವ ಧೈರ್ಯದ ಮೇಲೆ ಪೊಲೀಸ್ ಠಾಣೆಯ ಹೊರಗೆ ಒಬ್ಬ ಮೌಲ್ವಿ ಪೊಲೀಸ್ ವಾಹನದ ಮೇಲೆ ನಿಂತು ಗಲಭೆಗೆ ಪ್ರಚೋದಿಸುತ್ತಾರೆ ಎಂದರೆ ಇವರಿಗೆ ಬಿಜೆಪಿ ಸರಕಾರ ಕೈಯಲ್ಲಿ ಲಾಡು ಹಿಡಿದು ಕುಳಿತುಕೊಂಡಿದೆ ಎಂದು ಅನಿಸುತ್ತದೆಯಾ? ಒಬ್ಬ ಯಾವನೋ ವಿಘ್ನ ಸಂತೋಷಿ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಒಂದು ತಲೆಕೆಟ್ಟ ವಿಡಿಯೋ ಹಾಕುತ್ತಾನೆ. ಅವನ ವಿರುದ್ಧ ಪೊಲೀಸರಿಗೆ ದೂರು ಬರುತ್ತದೆ. ಪೊಲೀಸರು ಬಂಧಿಸುತ್ತಾರೆ. ಆದರೆ ಪೊಲೀಸ್ ಠಾಣೆಯ ಹೊರಗೆ ಒಂದು ದೊಡ್ಡ ಗುಂಪು ಸೇರಿ ಆರೋಪಿಯನ್ನು ನಮ್ಮ ವಶಕ್ಕೆ ಕೊಡಿ ಎಂದು ಒತ್ತಾಯ ಮಾಡುತ್ತಾರೆ. ಪೊಲೀಸ್ ಠಾಣೆಯ ಮೇಲೆ ಕಲ್ಲು ಬಿಸಾಡುತ್ತಾರೆ. ಪೊಲೀಸ್ ವಾಹನಗಳನ್ನು ಜಖಂ ಮಾಡುತ್ತಾರೆ. ಇವರಿಗೆ ಮನಸ್ಸಿಗೆ ತೃಪ್ತಿಯಾಗುವುದಿಲ್ಲ. ಅಲ್ಲಿಯೇ ಸಮೀಪದ ದೇವಸ್ಥಾನಕ್ಕೆ ಕಲ್ಲು ಬಿಸಾಡುತ್ತಾರೆ. ಅಲ್ಲಿಯೇ ಹತ್ತಿರದಲ್ಲಿರುವ ಆಸ್ಪತ್ರೆಗಳಿಗೆ ಕಲ್ಲು ತೂರುತ್ತಾರೆ. ಒಟ್ಟಿನಲ್ಲಿ 90ರ ದಶಕದಲ್ಲಿ ಕಾಶ್ಮೀರದಲ್ಲಿ ಆಗುತ್ತಿದ್ದ ಘಟನೆಗಳು ಈಗ ಕರ್ನಾಟಕದಲ್ಲಿಯೇ ನಡೆಯುತ್ತಿದೆಯೋ ಎಂದು ಯಾರಿಗಾದರೂ ಅನಿಸದೇ ಇರಲಾರರು. ಕೆಲವು ದಿನಗಳ ಹಿಂದೆ ಮುರ್ಢೇಶ್ವರದ ಶಿವನ ಫೋಟೋ ಗ್ರಾಫಿಕ್ ಮಾಡಿ ಅಲ್ಲಿ ಮುಸ್ಲಿಂ ಧ್ವಜ ಹಾರಿಸಿದ ಫೋಟೋ ವೈರಲ್ ಆಗಿತ್ತು. ಅಂತಹ ಎಷ್ಟೋ ಪ್ರಕರಣಗಳು ನಡೆದಿವೆ. ಆ ಬಳಿಕ ಶಿವಲಿಂಗದ ಮೇಲೆ ಒಬ್ಬ ಮತಾಂಧ ಕಾಲಿಟ್ಟು ಫೋಟೋ ತೆಗೆಸಿದ್ದ. ಕೆಲವು ಮುಸ್ಲಿಮರ ವಾಟ್ಸಪ್ ಗ್ರೂಪುಗಳಲ್ಲಿ ಹಿಂದೂ ದೇವತೆಗಳನ್ನು ಎಷ್ಟು ಅಸಭ್ಯವಾಗಿ ಚಿತ್ರಿಸಿ ತಮಾಷೆ ನೋಡುತ್ತಿರುತ್ತಾರೆಂದರೆ ಅದನ್ನು ಹಿಂದೂಗಳು ನೋಡಿದರೆ ರಕ್ತ ಬಿಸಿಯಾಗುತ್ತದೆ. ಹಾಗಿರುತ್ತೆ. ಹೀಗೆ ಹಿಂದೂಗಳ ತಾಳ್ಮೆಯನ್ನು ಕೆಣಕುವವರು ಒಂದೋ ವಿದೇಶದ ಯಾವುದೇ ಮೂಲೆಯಲ್ಲಿ ಕುಳಿತು ಇಂತಹ ಕೃತ್ಯ ಮಾಡಿರುತ್ತಾರೆ ಅಥವಾ ಫೇಕ್ ಅಕೌಂಟ್ ಮಾಡಿ ಅಲ್ಲಿ ಆಟ ಆಡುತ್ತಿರುತ್ತಾರೆ. ಆದರೆ ಹುಬ್ಬಳ್ಳಿಯ ಘಟನೆ ಹಾಗೆ ಅಲ್ಲ. ಇಲ್ಲಿ ತಪ್ಪು ಮಾಡಿದವನನ್ನು ಬಂಧಿಸಲಾಗಿದೆ. ಆದರೆ ನಮ್ಮ ಕೈಗೆ ಕೊಡಿ ಎಂದು ಮತಾಂಧ ಗುಂಪು ಹೇಳುತ್ತೆ ಎಂದರೆ ಇದೇನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇದ್ದೇವಾ ಅಥವಾ ಕರ್ಮಠ ಮೂಲಭೂತವಾದಿಗಳ ಮರಳ ಊರಿನಲ್ಲಿ ಇದ್ದೇವಾ?
ಇದಕ್ಕೆಲ್ಲ ಮೂಲ ಕಾರಣ ಈ ಸರಣಿ ಘಟನೆಗಳನ್ನು ನಿಲ್ಲಿಸಲೇಬೇಕೆಂಬ ತುಡಿತ ರಾಜ್ಯ ಸರಕಾರಕ್ಕೆ ಇರಬೇಕಾಗಿತ್ತು. ಆದರೆ ಅದು ಇದ್ದಂತೆ ಕಾಣುವುದಿಲ್ಲ. ಯಾವಾಗ ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಯಾಯಿತೋ ಆಗಲೇ ಅಲ್ಲಿ ಬಾಲ ಬಿಚ್ಚಿದವರನ್ನು ಹದ್ದುಬಸ್ತಿನಲ್ಲಿ ಇಟ್ಟಿದ್ದರೆ ಈಗ ಅವರಿಗೆ ಧೈರ್ಯ ಬರುತ್ತಿರಲಿಲ್ಲ. ಇನ್ನು ವಿಪಕ್ಷಗಳು ಕೂಡ ಯಾವುದೇ ತನಿಖೆಯಾಗುವ ಮೊದಲೇ ಅಮಾಯಕರನ್ನು ಬಂಧಿಸಬೇಡಿ ಎಂದು ಹೇಳಿದರೆ ಆಗ ಏನಾಗುತ್ತದೆ? ನಾವು ಏನು ತಪ್ಪು ಮಾಡಿದರೂ ವಿಪಕ್ಷಗಳು ನಮ್ಮ ಜೊತೆ ಇರುತ್ತವೆ ಎನ್ನುವ ಭಂಡ ಧೈರ್ಯ ಇವರಿಗೆ ಇರುತ್ತದೆ. ಆದ್ದರಿಂದ ಮುಂದಿನ ಬಾರಿ ಹೇಗೂ ಕಾಂಗ್ರೆಸ್ ಸರಕಾರ ಬರುತ್ತದೆ. ಆವಾಗ ಅವರು ನಮ್ಮ ಕೇಸುಗಳನ್ನು ಹಿಂದಕ್ಕೆ ಪಡೆಯುತ್ತಾರೆ ಎಂದು ಈ ಹುಂಬ ಮೂಲಭೂತವಾದಿಗಳಿಗೆ ಧೈರ್ಯ ಇದ್ದ ಕಾರಣ ಅವರು ಕೂಡ ಏನು ಮಾಡಲು ಕೂಡ ಸಿದ್ಧರಿದ್ದಾರೆ. ಆದರೆ ಇವರ ಪರವಾಗಿ ಮಾತನಾಡಿದಷ್ಟು ಸಜ್ಜನ ಮತದಾರರು ನಮ್ಮಿಂದ ದೂರ ಹೋಗುತ್ತಾರೆ ಎಂದು ಗೊತ್ತಿಲ್ಲದ ಸಿದ್ಧು ತಲೆಗೆ ಟೋಪಿ ಇಟ್ಟುಕೊಂಡು ರಮ್ಜಾನ್ ಮಾಸದಲ್ಲಿ ಇಫ್ತಾರ್ ಕೂಟ ಆಯೋಜಿಸಿ ತಾನು ಜಾತ್ಯಾತೀತ ಎಂದು ಫೋಸ್ ಕೊಡುತ್ತಾರೆ!
Leave A Reply