• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಎಲ್ಲಾ ಪಕ್ಷಗಳಲ್ಲಿಯೂ ಹಿತಚಿಂತಕರು ಮತ್ತು ಒಬ್ಬ ಚಾಣಾಕ್ಷ ಸಹೋದರ ಖಾದರಿಗೆ ಸಾಕು!

Hanumantha Kamath Posted On May 5, 2022
0


0
Shares
  • Share On Facebook
  • Tweet It

ಮಂಗಳೂರು ಅಥವಾ ಉಳ್ಳಾಲದಲ್ಲಿ 2023 ರಲ್ಲಿ ಹಿಂದೂ ಅಭ್ಯರ್ಥಿ ಗೆಲ್ಲಬೇಕೆಂದು ಸಂಘ ಪರಿವಾರದ ಅಂಗಸಂಘಟನೆಗಳ ಶಪಥ. ಹಾಗಂತ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯೇ ಗೆಲ್ಲಬೇಕೆಂದು ಅವರು ಹೇಳುತ್ತಿಲ್ಲ. ಬೇಕಾದರೆ ಕಾಂಗ್ರೆಸ್ಸಿನಿಂದ ಹಿಂದೂವನ್ನು ನಿಲ್ಲಿಸಿದರೂ ಹಿಂದೂಗಳು ಅವರಿಗೆ ಹಾಕಲಿ, ಆದರೆ ಒಟ್ಟಿನಲ್ಲಿ ಹಿಂದೂಗಳೇ ಉಳ್ಳಾಲದ ಮುಂದಿನ ಶಾಸಕರಾಗಲಿ ಎನ್ನುವುದು ಹಿಂದೂ ಸಂಘಟನೆಗಳ ಗುರಿ. ಅವರಿಗೆ ಗೊತ್ತಿದೆ, ಉಳ್ಳಾಲದಲ್ಲಿ ಕಾಂಗ್ರೆಸ್ಸಿನಿಂದ ಹಿಂದೂಗಳಿಗೆ ಟಿಕೆಟ್ ಕೊಡುವುದಿಲ್ಲ ಎಂದು ರಾಜಕೀಯದ ಅ, ಆ, ಇ, ಈ ಗೊತ್ತಿಲ್ಲದವನು ಕೂಡ ಹೇಳಬಲ್ಲ. ಆದ್ದರಿಂದ ನೇರ ಗುರಿ ಖಾದರ್. ಅಸಾಧ್ಯವಾಗಿರುವುದು ರಾಜಕೀಯದಲ್ಲಿ ಯಾವುದೂ ಇಲ್ಲ. ಅದರಲ್ಲಿಯೂ ಉಳ್ಳಾಲದಲ್ಲಿ ಒಮ್ಮೆ ಜಯರಾಮ್ ಶೆಟ್ಟಿಯವರು ಗೆದ್ದು ಅಲ್ಲಿ ಬಿಜೆಪಿಗೆ ಚಾನ್ಸ್ ಇದೆ ಎಂದು ತೋರಿಸಿದ್ದಾರೆ. ಆದರೆ ನಂತರ ಆ ಪವಾಡ ನಡೆಯಲಿಲ್ಲ. ಯಾಕೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಇರುವ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಗುಂಪುಗಾರಿಕೆ ಬಿಜೆಪಿಯಲ್ಲಿ ಯಾವ ಕ್ಷೇತ್ರದಲ್ಲಿ ಇದೆ ಎಂದರೆ ಅದು ನಿಸ್ಸಂದೇಹವಾಗಿ ಉಳ್ಳಾಲದಲ್ಲಿ.

ಕನಿಷ್ಟ ಐದಾರು ತಂಡಗಳು ತಮ್ಮದೇ ಶೈಲಿಯಲ್ಲಿ ಇಲ್ಲಿ ಒಬ್ಬರ ಕಾಲನ್ನು ಇನ್ನೊಬ್ಬರು ಎಳೆಯುತ್ತಿರುತ್ತಾರೆ. ಅದಕ್ಕೆ ಮುಖ್ಯ ಕಾರಣ ಬಂಟ, ಬಿಲ್ಲವ ಕಾಂಬಿನೇಶನ್. ಬಂಟರಿಗೆ ಕೊಟ್ಟರೆ ಬಿಲ್ಲವರು ಕೆಲಸ ಮಾಡುವುದಿಲ್ಲ. ಬಿಲ್ಲವರಿಗೆ ಕೊಟ್ಟರೆ ಬಂಟರು ಮಲಗುತ್ತಾರೆ. ಇನ್ನು ಇದು ಸೋಲುವ ಕ್ಷೇತ್ರವಾಗಿದೆ ಎಂದು ಬಿಜೆಪಿಯವರೇ ಅಂದುಕೊಂಡಿರುವುದರಿಂದ ಅಂಗೈ ತೋರಿಸಿ ಅವಲಕ್ಷಣ ಅನಿಸಿಕೊಳ್ಳಲು ಯಾರೂ ತಯಾರಿಲ್ಲ. ಅದಕ್ಕೆ ಕಳೆದ ಬಾರಿ ವಿಧಾನಸಭಾ ಚುನಾವಣೆಯೇ ದೃಷ್ಣಾಂತ. ಉಳ್ಳಾಲದಿಂದ ಸತ್ಯಜಿತ್ ಸುರತ್ಕಲ್ ಅವರನ್ನು ಖಾದರ್ ವಿರುದ್ಧ ಕಣಕ್ಕೆ ಇಳಿಸುವುದು ಎಂದು ನಿಶ್ಚಯವಾಗಿತ್ತು. ಆದರೆ ಬಿಜೆಪಿ ಮತ್ತು ಹಿಂದೂ ಸಂಘಟನೆ ಎರಡಕ್ಕೂ ಸಲ್ಲುವ ನಾಯಕರಾಗಿದ್ದ ಸತ್ಯಜಿತ್ ಮಾತ್ರ ತಮಗೆ ಉಳ್ಳಾಲ ಮಾತ್ರ ಬೇಡಾ ಎಂದರು. ತನಗೆ ಉಳ್ಳಾಲ ಕೊಟ್ಟು ಸಾಗಿಸುವುದು ಬೇಡಾ ಎಂದು ಅವರು ಅಂದುಕೊಂಡಿದ್ದರು. ಅದರ ನಂತರವೇ ಸಂತೋಷ್ ರೈ ಬೋಳಿಯಾರ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಸೋತರು ಎನ್ನುವುದು ಇತಿಹಾಸ.

ಈಗ ಚುನಾವಣೆಗೆ 11 ತಿಂಗಳು ಇರುವಾಗಲೇ ಮತ್ತೆ ಯಾರನ್ನು ನಿಲ್ಲಿಸುವುದು ಎಂದು ಸಂಘ ಪರಿವಾರದಲ್ಲಿ ಚರ್ಚೆಯಾಗುತ್ತಿದೆ. ಮತ್ತೆ ಹೊಸ ಮುಖಕ್ಕೆ ಮಣೆ ಹಾಕುವ ಚಿಂತನೆ ನಡೆದಿದೆ. ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಹೆಸರು ಮುನ್ನಲೆಗೆ ಬಂದಿದೆ. ಒಂದು ವೇಳೆ ಬಂಟ ಮತ್ತು ಬಿಲ್ಲವ ಇಬ್ಬರಿಗೂ ಕೊಡದೇ ಶರಣ್ ಅವರಿಗೆ ನೀಡಿದರೆ ಗುರಿ ಅಸಾಧ್ಯ ಏನಿಲ್ಲ. ಅದರೊಂದಿಗೆ ಈಗಲೇ ಗ್ರೌಂಡ್ ರೆಡಿ ಮಾಡಿಟ್ಟುಕೊಂಡರೆ ಯುದ್ಧ ಗೆಲ್ಲಲು ಸಾಧ್ಯವೇ ಇಲ್ಲ ಎಂದೇನಿಲ್ಲ. ಬಿಜೆಪಿಯ ಎಲ್ಲಾ ಗುಂಪುಗಳು ಕೂಡ ಶರಣ್ ನಿಂತರೆ ಒಂದುಗೂಡಿ ಕೆಲಸ ಕೂಡ ಮಾಡಬಲ್ಲದು. ರಾಜ್ಯ, ರಾಷ್ಟ್ರ ನಾಯಕರು ಬಂದು ಪ್ರಚಾರ ಮಾಡಿದರೆ ಖಾದರ್ ಅವರಿಗೆ ಬೆವರಿಳಿಸಬಹುದು. ಉಳ್ಳಾಲ ಕ್ಷೇತ್ರದ ಹಿಂದೂಗಳಿಗೂ ಖಾದರ್ ನಾಟಕ ನೋಡಿ ನೋಡಿ ಜಿಗುಪ್ಸೆ ಬಂದಿದೆ. ಅದು ಕೂಡ ಬಿಜೆಪಿಗೆ ಪ್ಲಸ್ ಆಗಬಲ್ಲದು. ಇನ್ನು ಮುಸ್ಲಿಮರಲ್ಲಿ ಎಲ್ಲರೂ ಖಾದರ್ ಗೆ ಸಲಾಂ ಹೊಡೆಯುತ್ತಾರೆ ಎಂದಲ್ಲ. ಅಲ್ಲಿಯೂ ಮತ್ಸರ ಇದೆ. ಬಿಜೆಪಿಯ ಗೆಲುವು ಬಯಸುವವರಿಗೆ ಎಲ್ಲವೂ ಒಂದು ಕಡೆ ನೋಡಲು ಚೆನ್ನಾಗಿರುವಂತೆ ಕಾಣುತ್ತದೆ. ಹಾಗಾದರೆ ಶರಣ್ ಗೆಲ್ಲುವುದು ಖಚಿತವೇ? ನಾಟ್ ಸೋ ಈಸಿ.

ಖಾದರ್ ಮನೆಯೊಳಗೆ ಹೇಗೆ ಇರಲಿ. ಹೊರಗೆ ಬಂದು ಎದುರಿಗೆ ಹಿಂದೂಗಳು ಕಂಡರೆ ಹಿಂದೂಗಳಿಗೂ ಆಶ್ಚರ್ಯವಾಗುವಷ್ಟು ಹಿಂದೂ ಆಗಿ ಬದಲಾಗಬಲ್ಲರು ಎನ್ನುವುದು ಪ್ಲಸ್ ಮತ್ತು ಮೈನಸ್ ಎರಡೂ ಕೂಡ ಹೌದು. ಪ್ಲಸ್ ಏನೆಂದರೆ ಒಬ್ಬ ಮುಸ್ಲಿಂ ಆಗಿಯೂ ಖಾದರ್ ದೇವಸ್ಥಾನಗಳಿಗೆ ಬರುತ್ತಾರೆ, ಕೋಲ, ನೇಮಗಳಿಗೆ ಬರುತ್ತಾರೆ, ಯಾವುದೇ ದೇವಸ್ಥಾನದಲ್ಲಿ ಹಿಂದೂ ಕಾರ್ಯಕ್ರಮಗಳಿಗೆ ಬರುತ್ತಾರೆ. ಅಲ್ಲಿ ಕೊಟ್ಟರೆ ಕುಂಕುಮ ಹಾಕಿಕೊಳ್ಳುತ್ತಾರೆ. ಕೇಸರಿ ಶಾಲು ಹಾಕಿದರೂ ಹಾಕಿಸಿ ಕ್ಯಾಮೆರಾಗಳಿಗೆ ಫೋಸ್ ಕೊಡುತ್ತಾರೆ. ಬಾಯಿಬಿಟ್ಟು ಹೊಗಳುತ್ತಾರೆ ಎನ್ನುವುದೆಲ್ಲ ಎಲ್ಲಿಯ ತನಕ ಖಾದರ್ ಅವರಿಗೆ ಪ್ಲಸ್ ಆಗಿದೆ ಎಂದರೆ ಉಳ್ಳಾಲ ಕ್ಷೇತ್ರದಲ್ಲಿ ಖಾದರ್ ಅವರೇ ದೊಡ್ಡ ಹಿಂದೂ ಎನ್ನುವುದು ಕುಚೋದ್ಯದ ಮಾತು. ಅದು ಹೇಗೆ ಮೈನಸ್ ಎಂದರೆ ಇವರು ಹೀಗೆ ಮಾಡುವುದರಿಂದ ಅಲ್ಲಿನ ಮೂಲಭೂತವಾದಿಗಳಿಗೆ ಕಿವಿಗೆ ಗಾಳಿ ಹೊಕ್ಕಿದಂತೆ ಆಗಿದೆ. ಅವರು ಅದನ್ನು ಒಪ್ಪುತ್ತಿಲ್ಲ. ಅದಕ್ಕಾಗಿಯೇ ಅಲ್ಲಿ ಎಸ್ ಡಿಪಿಐ ಬೆಳೆಯುತ್ತಿರುವುದು. ಆದರೆ ಖಾದರ್ ಬುದ್ಧಿವಂತ ರಾಜಕಾರಣಿ. ಅವರು ತಮ್ಮ ಸುತ್ತಮುತ್ತಲೂ ತಮ್ಮದೇ ಮತದವರನ್ನು ಹಿಡಿದು ಸುತ್ತುವುದಿಲ್ಲ. ಅವರಿಗಾಗಿಯೇ ಹಿಂದೂ ಟೀಂ ಕಾಂಗ್ರೆಸ್ಸಿನಲ್ಲಿ ಕೆಲಸ ಮಾಡುತ್ತದೆ. ಬೇರೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನಲ್ಲಿರುವ ಹಿಂದೂಗಳಿಗೆ ಅಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಟ್ಟರೆ ಮತಪ್ರಚಾರ ಮಾಡುವುದು ಕಷ್ಟವಾಗಬಹುದು. ಆದರೆ ಉಳ್ಳಾಲದಲ್ಲಿ ಖಾದರ್ ಪರ ಕಾಂಗ್ರೆಸ್ಸಿನ ಹಿಂದೂ ಕಾರ್ಯಕರ್ತರು ಆರಾಮದಲ್ಲಿ ಪ್ರಚಾರ ಮಾಡಬಲ್ಲರು. ಮೋದಿ, ಶಾ ಮುಸ್ಲಿಮರ ಟೋಪಿ ಧರಿಸುತ್ತಾರಾ? ಇಲ್ಲ, ಆದರೆ ಖಾದರ್ ಕೇಸರಿ, ಕುಂಕುಮ ಹಾಕಿಕೊಳ್ಳುತ್ತಾರೆ, ಯಾರು ಹೆಚ್ಚು ಜಾತ್ಯಾತೀತರು ಎಂದು ಹೇಳುತ್ತಾ ಅಲ್ಲಿನ ಹಿಂದೂ ಮತದಾರರನ್ನು ಸೆಳೆಯುವ ಕೆಲಸ ಪ್ರತಿ ಸಲ ಆಗುತ್ತದೆ. ಇನ್ನು ಹಿಂದೂಗಳ ಮನೆಯಲ್ಲಿ ಮಗುವಿನ ನಾಮಕರಣ, ಸತ್ಯನಾರಾಯಣ ಪೂಜೆಯಿಂದ ಹಿಡಿದು ಮದುವೆ, ಉಪನಯನವನ್ನು ಖಾದರ್ ತಪ್ಪಿಸುವುದಿಲ್ಲ. ಕಳೆದ ಬಾರಿ 16 ಜನ ಮುಸ್ಲಿಂ ಅಭ್ಯರ್ಥಿಗಳು ಇದ್ದರೂ ಮತ ವಿಭಜನೆಯಾಗದೇ ಖಾದರ್ ಗೆದ್ದಿದ್ದಾರೆ. ಯಾಕೆಂದರೆ ಖಾದರ್ ಅವರಿಗೆ ಎಲ್ಲಾ ಪಕ್ಷದಲ್ಲಿಯೂ ಗೆಳೆಯರಿದ್ದಾರೆ ಮತ್ತು ಒಬ್ಬ ಚಾಣಾಕ್ಷ ಸಹೋದರ ಇದ್ದಾನೆ. ಅಷ್ಟು ಗೆಲುವಿಗೆ ಸಾಕಾಗುತ್ತಿದೆ!

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Hanumantha Kamath February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Hanumantha Kamath January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!

  • Privacy Policy
  • Contact
© Tulunadu Infomedia.

Press enter/return to begin your search