ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
ನೂಪುರ್ ಹೇಳಿಕೆ, ನವೀನ್ ಜಿಂದಾಲ್ ಟ್ವಿಟ್ ಯಾವಾಗ ವಿವಾದ ಆಯಿತೋ ಪ್ರಪಂಚದ ಕಟ್ಟರ್ ಇಸ್ಲಾಂ ರಾಷ್ಟ್ರಗಳು ತಮ್ಮ ದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳ ಅಧಿಕಾರಿಗಳನ್ನು ಕರೆಸಿ ವಿವರಣೆ ಕೇಳಿದವು. ಅದು ಮಾಧ್ಯಮಗಳಲ್ಲಿ ಸುದ್ದಿಯಾಯಿತು. ಅಲ್ಲಿ ಕೆಲವು ಕಡೆ ಭಾರತದ ಉತ್ಪನ್ನಗಳಿಗೆ ಬಹಿಷ್ಕಾರ ಹಾಕಲಾಯಿತು. ಇದನ್ನು ಭಾರತಕ್ಕೆ ಆದ ಅಪಮಾನ ಎಂದು ಮುಸ್ಲಿಮರು ಒಳಗೊಳಗೆ ಖುಷಿಪಟ್ಟರು. ಕೆಲವು ಮುಸ್ಲಿಮ್ ದೇಶಗಳು ಭಾರತದಲ್ಲಿ ಹೀಗಾ ಹೇಳುವುದು ಎಂದು ಖಂಡನೆ ವ್ಯಕ್ತಪಡಿಸಿದವು. ಅದರಿಂದ ಭಾರತದಲ್ಲಿರುವ ಮುಸಲ್ಮಾನರಲ್ಲಿ ಬಹುತೇಕರು ಖುಷಿಗೊಂಡರು. ಎಷ್ಟೇಂದರೂ ಪ್ರೀತಿ ಆ ದೇಶದ ಮಣ್ಣಿಗೂ ಒಂದಷ್ಟು ಇರುತ್ತದೆಯಲ್ಲ, ಖುಷಿ ತಡೆಯಲಾಗಲಿಲ್ಲ. ತಕ್ಷಣ ಬಂದ ಶುಕ್ರವಾರದಂದು ನಮಾಜ್ ಮುಗಿಸಿ ಹೊರಬಂದವರೇ ಪ್ರತಿಭಟನೆ ಶುರು ಮಾಡಿದರು. ಮುಸ್ಲಿಮರು ಯಾವುದಾದರೂ ಒಂದು ವಿಷಯದಲ್ಲಿ ಅಸಮಾಧಾನಗೊಂಡರೆ ಅಂದಿನಿಂದ ಬರುವ ಮುಂದಿನ ಶುಕ್ರವಾರ ಒಂದು ಹೋರಾಟ ಇದ್ದೇ ಇರುತ್ತದೆ ಎನ್ನುವುದು ಸಾಂಪ್ರದಾಯಿಕ ಊಹೆ. ಬಹುಶ: ಅದನ್ನು ಗುಪ್ತಚರ ಇಲಾಖೆ ಅರಿತುಕೊಂಡಿರಲಿಲ್ಲವೋ ಅಥವಾ ಮಾಡಲಿ, ಎಷ್ಟು ಮಾಡುತ್ತಾರೆ ನೋಡುವ ಎನ್ನುವ ನಿರ್ಧಾರಕ್ಕೆ ಗುಪ್ತಚರ ಮಾಹಿತಿ ಬಂದ ಬಳಿಕವೂ ಸರಕಾರಗಳು ಅಂದುಕೊಂಡವೋ ತಿಳಿಯುತ್ತಿಲ್ಲ.
ಭಾರತದಲ್ಲಿ ಪ್ರತಿಭಟನೆ ಒಂದು ಹಕ್ಕು. ನೀವು ಸಾವಿರಾರು ಸಂಖ್ಯೆಯಲ್ಲಿ ಬೇಕಾದರೆ ಹೊರಗೆ ಬನ್ನಿ, ಪ್ರತಿಭಟನೆ ಎಂದು ಮಾಡಿ, ಘೋಷಣೆ ಕೂಗಿ, ಕಲ್ಲು ಬಿಸಾಡಿ, ಪೊಲೀಸರ ಮೇಲೆ ಹಲ್ಲೆ ಮಾಡಿ, ಬೆಂಕಿ ಕೊಡಿ ಏನು ಬೇಕಾದರೂ ಮಾಡಿ, ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಿಮ್ಮ ಸ್ವೇಚ್ಚಾಚಾರಕ್ಕೆ ಅನುಮತಿ ಇದೆ. ಹಾಗಂತ ಇಲ್ಲಿಂದ ಕರ್ಮಟ ಮುಸ್ಲಿಂ ರಾಷ್ಟ್ರಗಳಿಗೆ ಹೋಗಿ ದುಡಿಯುತ್ತಿರುವ ಮುಸ್ಲಿಮರಿಗೆ ಪ್ರತಿಭಟನೆ ಬಿಡಿ, ಆ ವಿಷಯದಲ್ಲಿ ಹೊರಗೆ ಬಂದು ಜೋರಾಗಿ ಕೆಮ್ಮಲು ಕೂಡ ಅವಕಾಶ ಇಲ್ಲ. ಅಲ್ಲಿನ ಪೊಲೀಸರು ಅದನ್ನೇ ಬೊಬ್ಬೆ ಹೊಡೆದರು ಎಂದು ಕೇಸ್ ಹಾಕಿ ಒಳಗೆ ಕುಳ್ಳಿರಿಸಿದರೆ ನಂತರ ಜೈಲಿನಿಂದಲೇ ಜನ್ನತ್ ನೋಡಬೇಕಾಗಬಹುದು. ಆದರೆ ಕೆಲವು ಅರೆಬೆಂದ ಮುಸಲ್ಮಾನರಿಗೆ ತಾವು ಇರೋದು ಮುಸ್ಲಿಂ ರಾಷ್ಟ್ರದಲ್ಲಿ ಎನ್ನುವುದು ಮರೆತು ಹೋಗಿತ್ತು. ಭಾರತದಲ್ಲಿ ಸಣ್ಣ ವಿಷಯಕ್ಕೂ ಬಾಲ ಬಿಚ್ಚಿ ಕಂಬಕ್ಕೆ ಕಾಲು ಎತ್ತಿ ಏನು ಬೇಕಾದರೂ ಮಾಡಬಹುದು ಎನ್ನುವುದು ಎಷ್ಟು ಸುಲಭವೋ ವಿದೇಶದಲ್ಲಿ ಅದಕ್ಕೆ ಅವಕಾಶ ಇಲ್ಲ ಎನ್ನುವುದು ನಾಯಿಗಳಿಗೂ ಗೊತ್ತು.
ಆದರೆ ಕೆಲವು ಮುಸಲ್ಮಾನರಿಗೆ ಗೊತ್ತಿಲ್ಲ. ಅವರು ಹೊರಗೆ ಬಂದು ಪ್ರತಿಭಟನೆ ಶುರು ಹಚ್ಚಿಕೊಂಡರು. ಭಾರತದಲ್ಲಿರುವ ತಮ್ಮ ಸಹೋದರರು ಕಲ್ಲು ಬಿಸಾಡಿದರೆ ಇವರು ಕೂಡ ಹಾಗೆ ಮಾಡುವ ಎಂದು ಕಲ್ಲು ಹುಡುಕಿದರಾದರೂ ಅದು ಸಿಗಲಿಲ್ಲ. ಒಟ್ಟಿನಲ್ಲಿ ಕುವೈಟ್ ಸಹಿತ ವಿವಿಧ ಮುಸ್ಲಿಂ ರಾಷ್ಟ್ರಗಳಲ್ಲಿ ಭಾರತೀಯರಿಂದ ಪ್ರತಿಭಟನೆ ನಡೆಯಿತು. ಆ ದೇಶಗಳಿಗೆ ಆಶ್ಚರ್ಯ. ಯಾರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವಿಚಾರಿಸಲಾಯಿತು. ನೋಡಿದ್ರೆ ಅನಿವಾಸಿ ಭಾರತೀಯರು. ನಾವು ಭಾರತೀಯ ರಾಯಭಾರಿ ಕಚೇರಿಗಳ ಅಧಿಕಾರಿಗಳನ್ನು ಕರೆಸಿ ವಿಚಾರಿಸಿದ್ದೇವಲ್ಲ, ನಮ್ಮ ಪ್ರತಿಭಟನೆಯನ್ನು ಲಿಖಿತವಾಗಿ ನೀಡಿದ್ದೇವಲ್ಲ, ಇನ್ನು ನಿಮ್ಮದೇನೂ ಬೇರೆ ಎಂದು ತನಿಖೆ ನಡೆಸಲಾಯಿತು. ಬರೆದು ಕೊಟ್ಟು ವಿರೋಧ ವ್ಯಕ್ತಪಡಿಸಿದ್ರೆ ಸಾಕಾ, ನಾವು ಕಲ್ಲು ಬಿಸಾಡಿ, ಬೆಂಕಿ ಕೊಟ್ಟು ಮಾಡಿದ್ರೆ ಮಾತ್ರ ವಿರೋಧ ಎಂದು ಅಂದುಕೊಂಡಿದ್ವಿ ಎಂದು ಇವರು ಹೇಳಿದ್ರು. ಅಷ್ಟೇ, ಅದರ ನಂತರ ಹಾಗೇ ಬೀದಿಗೆ ಇಳಿದವರನ್ನು, ಪ್ರತಿಭಟನೆ ಹೆಸರಿನಲ್ಲಿ ಗುಂಪು ಸೇರಿದವರನ್ನು ಗುರುತಿಸಿ ಭಾರತಕ್ಕೆ ಮರಳಿ ಕಳುಹಿಸುವ ಕೆಲಸವನ್ನು ಅಲ್ಲಿನ ಆಡಳಿತ ಮಾಡುತ್ತಿವೆ. ಇಲ್ಲಿ ಯೋಗಿ ಆದಿತ್ಯನಾಥ್ ಅವರು ದೊಂಬಿಯ ನೇತೃತ್ವ ವಹಿಸಿದವರನ್ನು ವಿಡಿಯೋದಲ್ಲಿ ಗುರುತಿಸಿ ಅಕ್ರಮ ಮನೆಗಳನ್ನು ಹುಡುಕಿ ಬುಲ್ಡೋಜರ್ ಕಳುಹಿಸಿದ್ದಾರಲ್ಲ, ಅದೇ ರೀತಿ ಕುವೈಟ್ ನಲ್ಲಿ ಪ್ರತಿಭಟನೆ ಮಾಡಿದ ಒಬ್ಬೊಬ್ಬರನ್ನು ಗುರುತಿಸಿ ” ನಿಮ್ಮ ಉಪಕಾರ ಸಾಕು, ಇನ್ನು ಭಾರತಕ್ಕೆ ರೈಟ್ ಹೇಳಿ, ಜೀವ ಇರುವ ತನಕ ಕುವೈಟ್ ಅನ್ನು ತಿರುಗಿ ಕೂಡ ನೋಡಬೇಡಿ” ಎಂದು ಹೇಳಿ ಕಳುಹಿಸುತ್ತಿದ್ದಾರೆ. ಇನ್ನು ಎನಿದ್ದರೂ ಬಟ್ಟೆ, ಸೆಂಟ್ ಪ್ಯಾಕ್ ಮಾಡಿ ಭಾರತಕ್ಕೆ ಮರಳಿ ಇಲ್ಲಿ ಗುಜರಿ ಹೆಕ್ಕಿ ಜೀವನ ಮಾಡುವುದು ಮಾತ್ರ ಉಳಿಯಲಿದೆ.
ಅದನ್ನೇ ಮೊನ್ನೆ ಖಾದರ್ ಎನ್ನುವ ಮಾಜಿ ಸಚಿವರು ಹೇಳಿದ್ದು. ಇಲ್ಲಿ ಪ್ರತಿಭಟನೆ ಮಾಡಬಹುದು, ಸುದ್ದಿಗೋಷ್ಟಿ ಮಾಡಬಹುದು, ಏನೂ ಬೇಕಾದರೂ ಮಾಡಬಹುದು, ಇಲ್ಲಿ ಬೌನ್ಸರ್ ಇಟ್ಟು ಹುಲಿಯಂತೆ ತಿರುಗಾಡಬಹುದು ಆದರೆ ಅಲ್ಲಿ ವಿಮಾನದಿಂದ ಇಳಿದ ಬಳಿಕ ಬೆಕ್ಕಿನ ಹಾಗೆ ನಡೆದುಕೊಂಡು ಹೋಗಬೇಕಾಗುತ್ತದೆ ಎಂದು ಅವರು ಹೇಳಿದ್ದು ಇಷ್ಟು ಬೇಗ ನಿಜವಾಗುತ್ತದೆ ಎನ್ನುವುದು ಪಾಪ ಅಲ್ಲಿನವರಿಗೆ ಗೊತ್ತಿರಲಿಲ್ಲವೇನೋ. ಆದ್ದರಿಂದ ಈಗ ಕುವೈಟ್ ಏನಿದ್ದರೂ ಭಾರತದ ಮುಸ್ಲಿಮರಿಗೆ ನುಂಗಲಾರದ ತುತ್ತು. ಪ್ರತಿಭಟನೆ ಮಾಡಿದ್ರೆ ಗೇಟ್ ಔಟ್!
Leave A Reply