• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?

Hanumantha Kamath Posted On June 29, 2022


  • Share On Facebook
  • Tweet It

ಧರ್ಮ ಯುದ್ಧದ ಸಮಯದಲ್ಲಿ ಕಾಫೀರರನ್ನು ಹತ್ಯೆ ಮಾಡಿದರೆ ಜನ್ನತ್ ಸಿಗುತ್ತದೆ ಎಂದು ಯಾವ ಮತಾಂಧ ಹೇಳಿದನೆಂದು ಅದನ್ನು ಅನುಷ್ಟಾನಕ್ಕೆ ತರಲು ಹೊರಟರಲ್ಲ ಅವರಿಗೆ ಮಾತ್ರ ಗೊತ್ತು. ಆದರೆ ಒಬ್ಬ ಟೈಲರ್ ನನ್ನು ಆ ರೀತಿಯಲ್ಲಿ ರುಂಡ ಕತ್ತರಿಸಿ ಅಟ್ಟಹಾಸ ಮೆರೆದರಲ್ಲ, ಒಂದು ಕ್ಷಣ ಅದು ರಾಜಸ್ಥಾನದಲ್ಲಿ ಆಯಿತಾ ಅಥವಾ ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಅಯಿತಾ ಎನ್ನುವ ವ್ಯತ್ಯಾಸ ಗೊತ್ತಾಗಲಿಲ್ಲ. ಕನ್ನಯ್ಯ ಲಾಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದರು ಎನ್ನುವ ಕಾರಣಕ್ಕೆ ನಿಜವಾಗಿ ಹತ್ಯೆ ನಡೆದಿದೆ ಎನ್ನುವುದು ಖಚಿತವಾದರೆ ನೂಪುರ್ ಶರ್ಮಾ ಹೇಳಿದ್ದು ಇಸ್ಲಾಂನ ಹದೀಸ್ ನಲ್ಲಿ ಬರೆದಿದ್ದ ವಿಷಯ ತಾನೆ. ಹಾಗಾದರೆ ಅದನ್ನು ಆವತ್ತು ಬರೆದವರಿಗೆ ಅದು ಗೊತ್ತಿರಲಿಲ್ಲವೇ? ಇನ್ನು ನೂಪುರ್ ಶರ್ಮಾ ಹೇಳಿಕೆಯನ್ನು ಒಪ್ಪುವಂತಹ ಅಸಂಖ್ಯಾತ ಜನ ಈ ದೇಶದಲ್ಲಿದ್ದಾರೆ, ಅವರಿಗೂ ಇದೇ ಗತಿ ಕಾಣಿಸಲು ಮತಾಂಧರು ಹೊರಟಿದ್ದಾರಾ? ಅಷ್ಟಕ್ಕೂ ಗೊತ್ತಿರಲಿ, ಕನ್ನಯ್ಯಾ ಹತ್ಯೆಗೆ ಹಂತಕರಿಗೆ ಸಹಕರಿಸಿದ್ದು ಕನ್ಯಯ್ಯಾ ನೆರೆಕೆರೆಯಲ್ಲಿ ಬಹಳ ವರ್ಷಗಳಿಂದ ವಾಸಿಸುತ್ತಿದ್ದ ಮುಸಲ್ಮಾನರು. ಕಾಶ್ಮೀರ್ ಫೈಲ್ಸ್ ನೀವು ನೋಡಿದ್ದಿದ್ದರೆ ನಿಮಗೆ ಆ ಒಂದು ದೃಶ್ಯ ನೆನಪಿಗೆ ಬರಬಹುದು. ಅದೇನೆಂದರೆ ಭಯೋತ್ಪಾದಕರ ಕಣ್ತಪ್ಪಿಸಿ ಭತ್ತದ ಕಣಜದ ಡಬ್ಬಿಯಲ್ಲಿ ಅಡಗಿ ಕುಳಿತಿದ್ದ ಹಿಂದೂ ಯುವಕನನ್ನು ತೋರಿಸಿಕೊಟ್ಟಿದ್ದೇ ಪಕ್ಕದ ಮನೆಯ ಮುಸಲ್ಮಾನ. ಇಲ್ಲಿಯೂ ಹಾಗೆ ಆಗಿದೆ. ಹಾಗಾದರೆ ಮಾನವೀಯತೆ, ಬಂಧುತ್ವ ಎನ್ನುವುದು ಕೇವಲ ಶಬ್ದಗಳಲ್ಲಿ ಕೇಳಲು ಮಾತ್ರ ಚೆಂದವಿರುವ ಶಬ್ದಗಳಾ?

ಹತ್ತು ಹಿಂದೂ ಮನೆಗಳ ಮಧ್ಯದಲ್ಲಿ ಒಬ್ಬ ಮುಸಲ್ಮಾನ ನೆಮ್ಮದಿಯಾಗಿ ಬದುಕಬಹುದು. ಆದರೆ ಹತ್ತು ಮುಸಲ್ಮಾನರ ಮನೆಗಳ ನಡುವೆ ಒಬ್ಬ ಹಿಂದೂ ಧೈರ್ಯದಿಂದ ವಾಸಿಸಲು ಆಗಲ್ಲ ಎನ್ನುವ ವಾತಾವರಣ ಇದೆ. ಯಾಕೆಂದರೆ ತಮ್ಮ ಧರ್ಮದ ವಿಷಯ ಬಂದಾಗ ಮುಸಲ್ಮಾನರು ಅಷ್ಟು ಅಸಹಿಷ್ಣುಗಳಾಗುವುದು ಹೇಗೆ? ಅಭದ್ರತೆಯ ಭಾವನೆ ಕಾಡುತ್ತದೆ ಎಂದು ಹೇಳುವ ಡೈಲಾಗಿಗೆ ಏನಾದರೂ ಅರ್ಥ ಇದೆಯಾ? ಕನ್ನಯ್ಯಾ ಲಾಲ್ ಹತ್ಯೆಯ ಹಿಂದೆ ಅವರ ಮಗ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದನೋ ಅಥವಾ ಕನ್ನಯ್ಯಾ ಅವರೇ ಬೆಂಬಲಿಸಿದರೋ ಅಗತ್ಯ ಇಲ್ಲದ ಮಾತು. ಆದರೆ ಅದಾದ ಮರುದಿನದಿಂದ ಐದು ದಿನ ಕನ್ನಯ್ಯಾ ಅವರಿಗೆ ತಮ್ಮ ಟೈಲರ್ ಅಂಗಡಿ ತೆರೆಯಲು ಆ ಭಾಗದ ಮುಸ್ಲಿಮರು ಬಿಟ್ಟಿರಲೇ ಇಲ್ಲ. ಇನ್ನು ತಮಗೆ ವಾರದಿಂದ ಜೀವ ಬೆದರಿಕೆ ಇರುವುದಾಗಿ ಕನ್ನಯ್ಯಾ ಪೊಲೀಸರಿಗೆ ದೂರು ಕೂಡ ಕೊಟ್ಟಿದ್ದರು. ಆದರೆ ಪೊಲೀಸರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಯಾಕೆಂದರೆ ರಾಜಸ್ಥಾನದಲ್ಲಿ ಇರುವುದು ಇವರದ್ದೇ ಕಾಂಗ್ರೆಸ್ ಸರಕಾರ. ಅಲ್ಲಿ ಮುಸ್ಲಿಮರು ಯಾರಿಗಾದರೂ ಹತ್ಯೆ ಬೆದರಿಕೆ ಹಾಕುತ್ತಾರೆ ಎನ್ನುವುದನ್ನು ಸ್ವತ: ಅಶೋಕ್ ಗೆಹ್ಲೋಟ್ ಎನ್ನುವಂತಹ ಕಾಂಗ್ರೆಸ್ಸಿನ ಹೆದರು ಪುಕ್ಕಲ ಮುಖ್ಯಮಂತ್ರಿ ಕೂಡ ನಂಬುವುದಿಲ್ಲ. ಯಾಕೆಂದರೆ ಅವರಿಗೆ ಮುಸ್ಲಿಮರು ಎಂದರೆ ಶಾಂತಿದೂತರು. ಅವರಿಗೆ ಶಾಂತಿ ಎನ್ನುವುದು ರಕ್ತದಲ್ಲಿಯೇ ಇದೆ. ಅವರು ಹತ್ಯೆ ಮಾಡುವುದಾ, ಪಾಪ, ಅವರು ಕತ್ತಿ ಹಿಡಿಯುವುದು ಬಿಡಿ, ಬ್ಲೇಡ್ ಕೂಡ ನೋಡಿ ಗೊತ್ತಿಲ್ಲದವರು ಎಂದೇ ಅಂದುಕೊಂಡ ಸಿಎಂ ಈಗ ಈ ಘಟನೆ ಆದ ನಂತರ ಪ್ರಧಾನಿಗಳೇ ಮಧ್ಯ ಪ್ರವೇಶಿಸಿ ಶಾಂತಿಗೆ ಕರೆ ನೀಡಿ ಎಂದು ದಮ್ಮಯ್ಯ ಹಾಕುತ್ತಿದ್ದಾರೆ.

ಈ ನಡುವೆ ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಠಾಣೆಗಳು ಪಂಚಾಯತ್ ಕಟ್ಟೆಗಳಾಗಿರುವುದು ರಾಜಸ್ಥಾನದ ಉದಯಪುರದಲ್ಲಿಯೂ ಸಾಬೀತಾಗಿದೆ.ಕನ್ನಯ್ಯ ಲಾಲ್ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಮುಸ್ಲಿಮ್ ಮತಾಂಧರನ್ನು ಎದುರಿಗೆ ಕೂರಿಸಿ ತಪ್ಪಾಗಿದೆ, ಕ್ಷಮಿಸಿ ಎಂದು ಹೇಳಲು ಒತ್ತಾಯಿಸಿದ್ದರು ಎಂದು ಕೂಡ ಬೆಳಕಿಗೆ ಬಂದಿದೆ. ಆದರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದು ತಪ್ಪೇಗೆ ಆಗುತ್ತದೆ ಎಂದು ಕನ್ನಯ್ಯ ಲಾಲ್ ಹೇಳಿದ್ದರು. ಇದರಿಂದ ಒಂದು ವಿಷಯ ಸ್ಪಷ್ಟ. ಕನ್ನಯ್ಯ ಹತ್ಯೆಗೆ ಪರೋಕ್ಷವಾಗಿ ಪೊಲೀಸರು ಕೂಡ ಕಾರಣ!

ಇನ್ನು ಹಂತಕರಿಗೆ ಎಷ್ಟು ಧೈರ್ಯ ಎಂದರೆ ಅವರು ಹತ್ಯೆ ಮಾಡಿದ ವಿಡಿಯೋ ಕೂಡ ಮಾಡಿದ್ದಾರೆ. ಅದನ್ನು ವೈರಲ್ ಮಾಡಿದ್ದಾರೆ. ತಮ್ಮ ಮುಖದ ಎದುರು ಕ್ಯಾಮೆರಾ ಹಿಡಿದು ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೂ ಬೆದರಿಕೆಯ ಕರೆ ಒಡ್ಡಿದ್ದಾರೆ. ಈಗ ಹಂತಕರನ್ನು ಹಿಡಿದ ಬಳಿಕ ಅವರಿಗೆ ಕಾಲಮಿತಿಯೊಳಗೆ ಗಲ್ಲುಶಿಕ್ಷೆ ನೀಡಿ ಎಂದು ಈ ದೇಶದ ಪ್ರಜ್ಞಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮುಸಲ್ಮಾನರಿಗೆ ಹಿಂದಿನ ಬಾಗಿಲಿನಿಂದ ಹುಟ್ಟಿದ ಹಿಂದೂಗಳೆನಿಸಿಕೊಂಡವರು ಈ ದೇಶದಲ್ಲಿ ಇರುವುದು ಸೌದಿ ಕಾನೂನು ಅಲ್ಲ ಎನ್ನುತ್ತಿದ್ದಾರೆ. ಪೊಲೀಸರು ಹಿಡಿದಿದ್ದು ಅದೇ ಹಂತಕರನ್ನು ಎಂದಾದರೆ ಅದಕ್ಕೆ ವರ್ಷಗಟ್ಟಲೆ ವಿಚಾರಣೆ ಅಗತ್ಯ ಇದೆಯಾ? ಕೊಂದಿರುವುದು ಇವರೇ ಎಂದು ಸಾಬೀತಾದರೆ ತಕ್ಷಣ ಗಲ್ಲು ಶಿಕ್ಷೆ ನೀಡುವುದು ಮತ್ತು ಅದನ್ನು ಯಾವುದೇ ಮೇಲ್ಮನವಿ ಇಲ್ಲದೆ ಜಾರಿಗೊಳಿಸುವುದು. ಇದೊಂದೇ ಮಾರ್ಗ. ಅದರಿಂದ ಈ ಹಂತಕರಿಗೆ ಜನ್ನತ್ ಸಿಗುತ್ತದೋ, ಇಲ್ವೋ, ಆದರೆ ಇವರ ದಾರಿಯಲ್ಲಿ ಹೋಗಲು ಬಯಸುವವರಿಗೆ ಮಾತ್ರ ಹೆದರಿಕೆ ಉಂಟಾಗುತ್ತದೆ. ಆದರೆ ಈ ಹಂತಕರಿಗೆ ಯಾವುದೇ ಶಿಕ್ಷೆ ನೀಡಿದರೂ ಇವರು ಒಂದು ರೀತಿಯಲ್ಲಿ ರಕ್ತ ಬೀಜಾಸುರ ಇದ್ದ ಹಾಗೆ. ಇವರ ಸಂತತಿ ಅಷ್ಟು ಸುಲಭವಾಗಿ ನಾಶವಾಗುವುದಿಲ್ಲ. ಯಾಕೆಂದರೆ ಒಬ್ಬನನ್ನು ಗಲ್ಲಿಗೆ ಹಾಕಿದರೆ ಇವನಂತಹ ಇನ್ನಷ್ಟು ಜನರನ್ನು ಮೈಂಡ್ ವಾಶ ಮಾಡಿ ಸ್ವರ್ಗದಲ್ಲಿ ಅಪ್ಸರೆಯರು ಸಿಗುತ್ತಾರೆ ಎಂದು ಆಶೆ ತೋರಿಸಿ ಹಿಂದೂಗಳ ಹತ್ಯೆಗೆ ಪ್ರೇರೆಪಿಸುವ ಮೂಲಭೂತವಾದಿಗಳು ಇದ್ದಾರೆ. ಕನ್ನಯ್ಯ ಲಾಲ್ ಹತ್ಯೆಯೊಂದಿಗೆ ಒಂದಷ್ಟರ ಮಟ್ಟಿಗೆ ತಾವು ಗೆದ್ದೆವು ಎಂದು ಬೀಗುವ ಮುಸಲ್ಮಾನರು ಈ ದೇಶದಲ್ಲಿ ಇದ್ದಾರೆ. ಅವರು ಹೊರಗಿನಿಂದ ಹಿಂದೂಗಳ ಜೊತೆಗೆ ಚೆನ್ನಾಗಿದ್ದಾರೆ. ಆದರೆ ಅಂತಿಮವಾಗಿ ಅವರಿಗೆ ಈ ದೇಶ ನಂತರ, ಮೊದಲು ಧರ್ಮ ಎನ್ನುವುದನ್ನು ಭಾರತೀಯರು ಅರ್ಥ ಮಾಡಿಕೊಂಡರೆ ಸಾಕು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search