• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮೇಯರ್ ಆಗಲು ಮಂಗಳೂರಿನಲ್ಲಿ ಇರಬೇಕಾದ ಅರ್ಹತೆಗಳು!

Tulunadu News Posted On September 9, 2022
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆ ರಾಜ್ಯದ ಬೇರೆ ಎಲ್ಲಾ ಪಾಲಿಕೆಗಳಿಗೆ ತೂಲನೆ ಮಾಡಿದಾಗ ಇ-ಖಾತದಿಂದ ಹಿಡಿದು ಅನೇಕ ವಿಷಯಗಳಲ್ಲಿ ಮುಂದೆ ಇದ್ದರೂ ಮೇಯರ್ ಮೀಸಲಾತಿ ಬಂದಾಗ ಒಂದು ವರ್ಷ ಹಿಂದೆನೆ ಇದೆ. ಎಲ್ಲಾ ಕಡೆ 24 ನೇ ಮೇಯರ್ ಮೀಸಲಾತಿ ಘೋಷಣೆಯನ್ನು ನಗರಾಭಿವೃದ್ಧಿ ಇಲಾಖೆಯಿಂದ ಮಾಡುತ್ತಿದ್ದಾಗ ಮಂಗಳೂರಿನಲ್ಲಿ 23 ನೇ ಮೇಯರ್ ಯಾರಾಗುತ್ತಾರೆ ಎನ್ನುವ ಚರ್ಚೆ ನಡೆಯುತ್ತಾ ಇರುತ್ತದೆ. ಅಂದರೆ ಏಳು ಪಾಲಿಕೆಯನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಈ ಮೀಸಲಾತಿಯ ಆಯ್ಕೆ ಬಂದಾಗ ಮಂಗಳೂರು ಒಂದು ಬೇರೆ ಎಂದು ಬೆಂಗಳೂರಿನಲ್ಲಿ ಕುಳಿತಿರುವ ಯುಡಿ ಪ್ರಧಾನ ಕಾರ್ಯದರ್ಶಿಗಳಿಗೆ ನೆನಪೇ ಇರುವುದಿಲ್ಲ. ಅವರು ಏನು ಮಾಡುತ್ತಾರೆ ಎಂದರೆ ಎಲ್ಲಾ ಪಾಲಿಕೆಯ ಮೇಯರ್ ಮೀಸಲಾತಿ ತೂಗಿ ಅಳೆದು ಘೋಷಣೆ ಮಾಡಿದ ನಂತರ ಮಂಗಳೂರಿನಿಂದ ಇಲ್ಲಿನ ಪಾಲಿಕೆ ಆಯುಕ್ತರು ಅದು ನಮಗೆ ಮುಂದಿನ ವರ್ಷ, ಈ ವರ್ಷದ್ದು ಕೊಡಿ ಎಂದು ಮತ್ತೊಮ್ಮೆ ನೆನಪಿಸಬೇಕಾಗುತ್ತದೆ. ಆಗ ನಮಗಾಗಿ ಮತ್ತೊಮ್ಮೆ ಅವರು ಮೀಟಿಂಗ್ ಮಾಡಿ ಮಂಗಳೂರಿಗೆ ಮೀಸಲಾತಿ ಕೊಡಬೇಕಾಗುತ್ತದೆ. ಅದರಿಂದ ಕಳೆದ ಮೂರು ಬಾರಿ ಏನಾಗಿದೆ ಎಂದರೆ ಒಂದೇ ಮೀಸಲಾತಿ ಬಂದಿದೆ. ಸಾಮಾನ್ಯವಾಗಿ ಬೆಂಗಳೂರಿನ ಅಧಿಕಾರಿಗಳು ತುಂಬಾ ತಲೆಕೆಡಿಸಿಕೊಳ್ಳಲು ಸಮಯ ಇಲ್ಲದೇ ಇದ್ದಾಗ ಜನರಲ್ ಕೆಟಗರಿ ಎಂದು ಬರೆದು ಸುತ್ತೋಲೆ ಕಳುಹಿಸಿಬಿಡುತ್ತಾರೆ. ಜನರಲ್ ಎಂದು ಇದ್ದರೆ ಯಾರು ಕೂಡ ಸ್ಪರ್ಧಿಸಬಹುದು. ಆದರೆ ಜನರಲ್ ಕೆಟಗರಿ ಐದು ವರ್ಷದ ಪಾಲಿಕೆಯ ಅವಧಿಯಲ್ಲಿ ಒಂದು ಸಲ ಮಾತ್ರ ಬರುವುದು. ಇದು ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯ. ಎಲ್ಲಾ ಜಾತಿಗಳಿಗೆ ಪ್ರಾಮುಖ್ಯತೆ ಕೊಡಬೇಕು ಎನ್ನುವ ಕಾರಣಕ್ಕೆ ಮೀಸಲಾತಿಯನ್ನು ಅನುಷ್ಟಾನಕ್ಕೆ ತರಲಾಗಿದೆ. ಆದರೆ ಇಲ್ಲಿ ಈ ಅವ್ಯವಸ್ಥೆಯ ಗೋಜಲುಗಳಿಂದ ಪ್ರತಿ ಬಾರಿ ನಮಗೆ ಜನರಲ್ ಕೆಟಗರಿಯೇ ಸಿಗುತ್ತಿದೆ. ಈಗ ಹಾಲಿ ಇರುವ ಮೇಯರ್ ಸೆಪ್ಟೆಂಬರ್ 8 ಕ್ಕೆ ತಮ್ಮ ಅದೃಷ್ಟದ ಹೆಚ್ಚುವರಿ ಆರು ತಿಂಗಳ ಅಧಿಕಾರಾವಧಿ ಮುಗಿಸಿ ಕೆಳಗೆ ಇಳಿಯುತ್ತಿದ್ದಾರೆ. ಪ್ರೇಮಾನಂದ ಶೆಟ್ಟಿಯವರು ಜನರಲ್ ಕೆಟಗರಿಯಲ್ಲಿಯೇ ಮೇಯರ್ ಆದವರು. ಈಗ ಅವರ ಬಳಿಕ ಮೇಯರ್ ಆಗುವವರು ಕೂಡ ಜನರಲ್ ಕೆಟಗರಿಯಲ್ಲಿಯೇ ಮೇಯರ್ ಆಗಿರುವುದು. ಇನ್ನು ಅದರ ನಂತರ ಯಾರು ಆಗಲಿದ್ದಾರೋ ಅವರಿಗೂ ಈಗಲೇ ಜನರಲ್ ಕೆಟಗರಿ ಎಂದು ಘೋಷಣೆ ಆಗಿದೆ. ಹಾಗಾದರೆ ಈಗ ಯುಡಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕೇಳಬೇಕಾಗಿದೆ.
ಇನ್ನು ಎರಡನೇಯದಾಗಿ ಮಂಗಳೂರು ಪಾಲಿಕೆಯ ವಿಷಯಕ್ಕೆ ಬರೋಣ. ನಾವೆಷ್ಟು ಬುದ್ಧಿವಂತರ ಜಿಲ್ಲೆಯವರು ಎಂದು ಅಂದುಕೊಂಡರೂ ಇಲ್ಲಿಯೂ ಜಾತಿ ಲೆಕ್ಕಾಚಾರ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹುದೇ ಜಾತಿಗೆ ಕೊಡಿ ಎಂದು ಒತ್ತಾಯ ಮಾಡುವವರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ. ಜನರಲ್ ಕೆಟಗರಿ ಬಂದಾಗ ಈ ಒತ್ತಡ, ಒತ್ತಾಯ ತಾರಕಕ್ಕೆ ಹೋಗುತ್ತದೆ. ಅಷ್ಟಕ್ಕೂ ಮೇಯರ್ ಸ್ಥಾನ ಎನ್ನುವುದು ಒಂದು ಜಾತಿಯ ಸಂಘದ ಅಧ್ಯಕ್ಷ ಸ್ಥಾನ ಅಲ್ಲ. ಯಾವುದೇ ಜಾತಿಯವರಾದರೂ ಅವರು ಪಾಲಿಕೆ ವ್ಯಾಪ್ತಿಯ ಎಲ್ಲಾ ನಾಗರಿಕರಿಗೂ ಮೇಯರ್. ಆದ್ದರಿಂದ ಇಂತವರನ್ನೇ ಮೇಯರ್ ಮಾಡಬೇಕು ಎಂದು ಹಟ ಹಿಡಿಯುವುದು ಪಾಲಿಕೆಯ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಅಲ್ಲವೇ ಅಲ್ಲ. ಅದು ಕೇವಲ ವೋಟ್ ರಾಜಕೀಯ. ಅದರಲ್ಲಿಯೂ ವಿಧಾನಸಭಾ ಚುನಾವಣೆಗೆ ಆರು ತಿಂಗಳು ಇರುವಾಗ ಯಾವ ಜಾತಿಯವರನ್ನು ಮೇಯರ್ ಮಾಡಿದರೆ ಆ ಜಾತಿಯವರು ಸಂತುಷ್ಟರಾಗುತ್ತಾರೆ ಎನ್ನುವ ಲೆಕ್ಕಾಚಾರ ಹಿಡಿದು ಮೇಯರ್ ಎನ್ನುವಂತಹ ನಗರದ ಪ್ರಥಮ ಪ್ರಜೆಯ ಜವಾಬ್ದಾರಿ ನೀಡಲಾಗುತ್ತದೆ. ಆದ್ದರಿಂದ ಜಾತಿ ಲೆಕ್ಕಾಚಾರ ಮಾಡುವ ಅಗತ್ಯ ರಾಜಕಾರಣದಲ್ಲಿ ವೋಟ್ ಬ್ಯಾಂಕ್ ಎನ್ನುವುದು ಮಂಗಳೂರಿನಲ್ಲಿಯೂ ಸಾಬೀತಾಗಿದೆ.
ಇನ್ನು ಹಿರಿತನದಲ್ಲಿ ಮೇಯರ್ ಸ್ಥಾನ ಕೊಡಬೇಕು ಎನ್ನುವ ಕೂಗು ಕ್ಷೀಣವಾಗಿಯೂ ಕೇಳಿಸುವುದುಂಟು. ನಾನು ಮೂರು ಸಲ ಆಯ್ಕೆಯಾಗಿದ್ದೇನೆ. ನನಗೆ ಕೊಡಿ ಎಂದು ವಾದ ಮಂಡಿಸುವವರಿದ್ದಾರೆ. ನೀವು ನಿಮ್ಮ ಲಾಭಕ್ಕಾಗಿ ಮೂರು ಬಾರಿ ಆಯ್ಕೆಯಾಗಿದ್ದಿರಬಹುದೇ ವಿನ: ಅದರಿಂದ ಮಾಡಿದ್ದು ನಿಮ್ಮ ವೈಯಕ್ತಿಕ ತಿಜೋರಿಯನ್ನು ತುಂಬಿಸಿದ್ದೇ ವಿನ: ಬೇರೆ ಏನು ಎಂದು ಕೇಳಿ ನೋಡಿ ಅವರು ಕೋಪಗೊಳ್ಳುತ್ತಾರೆ. ಈ ಸಿನಿಯಾರಿಟಿ ನೋಡಿ ಮೇಯರ್ ಮಾಡಿದವರು ಇಲ್ಲಿ ಎಷ್ಟು ಕಿಸಿದಿದ್ದಾರೆ ಎನ್ನುವುದನ್ನು ಮಂಗಳೂರು ಜನ ನೋಡಿದ್ದಾರೆ. ಇನ್ನು ಕೆಲವರು ತಾವು ಶಾಸಕರ ಹಿಂದೆನೆ ಯಾವಾಗಲೂ ಇರುತ್ತೇವೆ, ಸಂಸದರ ಆಪ್ತಬಳಗದಲ್ಲಿ ಇದ್ದೇವೆ. ನಮ್ಮನ್ನು ಮೇಯರ್ ಮಾಡಬೇಕು ಎಂದು ಅಂದುಕೊಂಡಿದ್ದಾರೆ. ಶಾಸಕರ, ಸಂಸದರ ಹಿಂದೆ ಮುಂದೆ ಓಡಾಡುವುದೇ ಅರ್ಹತೆಯಾಗಿದ್ದರೆ ಇಂತವರಿಗಿಂತ ಶಾಸಕರ ಪಿಎಗಳಿಗೆ ಹೆಚ್ಚು ಜ್ಞಾನ ಇರುತ್ತದೆ. ಅಂತವರನ್ನು ಮಾಡಬಹುದಲ್ಲ?ಆದರೆ ಯಾರು ಕೂಡ ತಾವು ಮೇಯರ್ ಆಗಿ ನಗರದ ಕಳಪೆ ಕಾಮಗಾರಿಗಳನ್ನು ನಿಲ್ಲಿಸುತ್ತೇವೆ, ಪಾಲಿಕೆಯ ಭ್ರಷ್ಟಾಚರ ಕಡಿಮೆ ಮಾಡುತ್ತೇವೆ, ಅವೈಜ್ಞಾನಿಕ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ ಎಂದು ಹೇಳಿ ಆ ಅರ್ಹತೆಯ ಮೇರೆಗೆ ಮೇಯರ್ ಗಿರಿ ಕೇಳುವುದಿಲ್ಲ. ಮೇಯರ್ ಆದರೆ ತಮ್ಮ ಸಂಬಂಧಿಗಳಿಗೆ ಮರಳು ತೆಗೆಯಲು ಸುಲಭವಾಗುತ್ತದೆ, ತಮ್ಮವರಿಗೆ ಗುತ್ತಿಗೆ ಸಿಗುವಂತೆ ಮಾಡಲು ಅನುಕೂಲವಾಗುತ್ತದೆ, ತಮ್ಮ ಜನರ ಕಾರೋಬಾರು ನಡೆಯಲು ಸುಸೂತ್ರವಾಗುತ್ತದೆ ಎಂದು ಅಂದುಕೊಂಡು ಮೇಯರ್ ಆಗಲು ಹೋರಾಡುತ್ತಾರೆ. ಇದಕ್ಕೆ ಈ ಬಾರಿಯ ಮೇಯರ್ ಗಿರಿ ಕೂಡ ಹೊರತಾಗಿಲ್ಲ. ಮೇಯರ್ ಆಗಲು “ಜಯ” ಮತ್ತು “ಕಿರಣ” ಎರಡೂ ಕೂಡ ಮುಖ್ಯವಾಗಿದೆ ಎನ್ನುವುದು ಸದ್ಯದ ವಾಸ್ತವ!
0
Shares
  • Share On Facebook
  • Tweet It




Trending Now
ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
Tulunadu News March 5, 2026
ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
Tulunadu News March 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
  • Popular Posts

    • 1
      ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • 2
      ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • 3
      ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!

  • Privacy Policy
  • Contact
© Tulunadu Infomedia.

Press enter/return to begin your search