• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮರಳು ಕದಿಯಲು ಸಿಸಿಟಿವಿ ಒಡೆದಿರುವುದು ಚಿಕ್ಕ ವಿಷಯವಲ್ಲ!

Hanumantha Kamath Posted On September 13, 2022


  • Share On Facebook
  • Tweet It

ಮರಳು ಅಥವಾ ಹೊಯಿಗೆಗೆ ಮಂಗಳೂರಿನಲ್ಲಿ ಬಂಗಾರದ ಬೆಲೆ ಇದೆ. ಅದಕ್ಕಾಗಿ ಇಲ್ಲಿ ಗಲಾಟೆ, ಕೊಲೆಗಳು ನಡೆದಿವೆ. ಆದರೆ ಇಲ್ಲಿಯ ತನಕ ಅದಕ್ಕೆ ಏನೂ ಅಂತ್ಯ ಬಿದ್ದಿಲ್ಲ. ಈಗಲೂ ಅದರ ಬಿಸಿ ಮಳೆಗಾಲದ ತಣ್ಣನೆಯ ವಾತಾವರಣದಲ್ಲಿಯೂ ಹಾಗೆ ಮುಂದುವರೆದಿದೆ. ಈಗ ತಾಜಾ ಉದಾಹರಣೆ ಎಂದರೆ ಸೋಮೇಶ್ವರದಲ್ಲಿ ಅಕ್ರಮ ಮರಳು ಸಾಗಾಟವನ್ನು ಪತ್ತೆ ಹಚ್ಚಲು ಹಾಕಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಅಕ್ರಮ ಮರಳು ಎತ್ತುವವರು ನಾಶ ಮಾಡಲು ಹೋಗಿದ್ದಾರೆ. ಇಂತಹ ಒಂದು ಭಂಡತನವನ್ನು ಅವರು ತೋರಿಸುತ್ತಾರೆ ಎಂದರೆ ಅವರಿಗೆ ಅದೆಷ್ಟು ಧೈರ್ಯ ಇದೆ ಎನ್ನುವುದು ಗೊತ್ತಾಗುತ್ತದೆ. ಹಾಗಂತ ಮಂಗಳೂರಿನಲ್ಲಿ ಮರಳಿಗೆ ಬಂಗಾರದ ರೇಟ್ ಬರಲು ಕಾರಣ ಯಾರು? ಒಂದು ಕಾಲದಲ್ಲಿ ನಮ್ಮಲ್ಲಿ ಮರಳು ಬೇಕಾದಷ್ಟು ಸಿಗುತ್ತಿತ್ತು. ಆದರೆ ಕೇರಳ, ಬೆಂಗಳೂರು ಕಡೆಗೆ ಕ್ಯೂನಲ್ಲಿ ಲಾರಿಗಳು ಮರಳು ತುಂಬಿಸಿಕೊಂಡು ಹೋಗುತ್ತಿದ್ದಂತೆ ಇಲ್ಲಿನವರಿಗೆ ಮರಳು ಸಿಗುವುದು ಕಷ್ಟವಾಯಿತು. ಇಲ್ಲಿಂದ ಮರಳು ರಫ್ತು ಆದ ಕಡೆಯಲ್ಲಿ ಅದಕ್ಕೆ ಉತ್ತಮ ಬೇಡಿಕೆ ಬಂತು. ಮರಳು ಸಾಗಾಟದಾರರಿಗೆ ಎರಡು ಕೈಯಲ್ಲಿ ಹಣ ಸಿಗಲು ಶುರುವಾಯಿತು. ಅವರ ತಿಜೋರಿ ತುಂಬಲು ಆರಂಭವಾಯಿತು. ನ್ಯಾಯಾಲಯದ ಹಸಿರುಪೀಠ ಸಿಆರ್ ಝಡ್ ವ್ಯಾಪ್ತಿಯಲ್ಲಿ ಮರಳು ತೆಗೆಯಲು ನಿರ್ಭಂದ ಹಾಕಿರುವುದು ಮುಂದುವರೆದಿದ್ದರೂ ಅವ್ಯಾಹತವಾಗಿ ತೆಗೆಯಲಾಯಿತು. ಯಾವಾಗ ಸೇತುವೆಯ ಕೆಳಗೆ 500 ಮೀಟರ್ ವ್ಯಾಪ್ತಿಯಲ್ಲಿ ಮರಳು ತೆಗೆಯುವುದಕ್ಕೆ ನಿಷೇಧವಿದ್ದರೂ ಮರಳು ಎತ್ತುವವರು ನಿರಂತರವಾಗಿ ಅಲ್ಲಿ ಮರಳು ತೆಗೆಯುತ್ತಿದ್ದ ಕಾರಣ ಸೇತುವೆಗಳೇ ಕುಸಿದು ಬೀಳುವ ಹಂತಕ್ಕೆ ತಲುಪಿರುವ ದೃಷ್ಟಾಂತಗಳು ನಮ್ಮ ಮುಂದಿವೆ. ಅದಕ್ಕೆ ಕುಳೂರು ಮತ್ತು ಮರವೂರು ಸೇತುವೆಗಳು ಜ್ವಲಂತ ನಿದರ್ಶನವಾಗಿದೆ. ಅಡ್ಯಾರ್ ನಲ್ಲಿ ಮರಳು ತೆಗೆಯುವಾಗ ಒಬ್ಬ ವಲಸಿಗ ಸಾವನ್ನಪ್ಪಿರುವುದು ನಾವು ಇದೇ ಜಾಗೃತ ಅಂಕಣದಲ್ಲಿ ನಿಮ್ಮ ಗಮನಕ್ಕೆ ತಂದಿದ್ದೇವೆ. ನದಿಪಾತ್ರದಲ್ಲಿ ವಾಸಿಸುವ ಕುಟುಂಬದವರಿಗೆ ಮಾತ್ರ ಮರಳು ತೆಗೆಯುವ ಅವಕಾಶ ನೀಡಬೇಕೆಂಬ ನಿಯಮ ಇದ್ದರೂ ಮರಳು ಲೈಸೆನ್ಸ್ ಕಡ್ಲೆಪುರಿಯಂತೆ ಯಾರ್ಯಾರಿಗೋ ಸಿಕ್ಕಿರುವುದು ಮಂಗಳೂರಿಗೆ ಗೊತ್ತಿದೆ. ಪಕ್ಷದ ಮುಖಂಡರಿಗೆ, ಸಂಘಟನೆಯ ಪ್ರಮುಖರಿಗೆ, ನಗರಗಳಲ್ಲಿ ಫ್ಲಾಟ್ ನಲ್ಲಿ ವಾಸಿಸುವವರಿಗೆ, ಜನಪ್ರತಿನಿಧಿಗಳ ಹಿಂದೆ ಮುಂದೆ ಸುತ್ತುವವರಿಗೆ ಲೈಸೆನ್ಸ್ ಸಿಕ್ಕಿದೆ. ಈ ವಿಷಯದಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಒಡಹುಟ್ಟಿದ ಸಹೋದರರಿಗಿಂತ ಹೆಚ್ಚು ಆಪ್ತವಾಗಿ ತಮ್ಮವರಿಗಾಗಿ ಕೆಲಸ ಮಾಡುತ್ತಾರೆ.

ಮರಳು ಎನ್ನುವುದು ಸರಕಾರದ ಸ್ವತ್ತು. ಆ ಸೊತ್ತನ್ನು ಉಳಿಸಲು ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾರೆ. ಅದನ್ನು ಒಬ್ಬ ಮುಖಕ್ಕೆ ಮುಸುಕಾಗಿ ಟ್ರಕ್ ನಲ್ಲಿ ಬಂದು ಸಿಸಿಟಿವಿ ಹಾಕಿದ ಕಂಬ ಹತ್ತಿ ಸಿಸಿಟಿವಿಗಳನ್ನು ನಾಶ ಮಾಡುವ ಹುಂಬತನ ತೋರಿಸುತ್ತಾನೆ ಎಂದರೆ ಅವನಿಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಪರೋಕ್ಷ ಬೆಂಬಲ ಇದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. “ನಾವು ಯಾರದ್ದೋ ಒತ್ತಾಯಕ್ಕೆ, ನಿಯಮಗಳಿಗೆ ಕಟ್ಟುಬಿದ್ದು ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಬೇಕಾಗಿದೆ. ನೀವು ಅದನ್ನು ಒಡೆದು ಬೇಕಾದಷ್ಟು ಮರಳು ತೆಗೆದುಕೊಂಡು ಹೋಗಿಬಿಡಿ. ಕೇಳಿದ್ರೆ ನಾವು ಯಾರು ನಾಶ ಮಾಡಿದ್ದು, ಯಾರು ಎಂದು ಗೊತ್ತೆ ಇಲ್ಲ ಎಂದು ಸಬೂಬು ಹೇಳುತ್ತೇವೆ. ಸಿಸಿಟಿವಿ ಕ್ಯಾಮೆರಾಗಳು ರಿಪೇರಿಯಾಗುವಾಗ ಎಷ್ಟೋ ದಿನ ಆಗುತ್ತದೆ ಅಥವಾ ರಿಪೇರಿಯೇ ಆಗದಿರಬಹುದು. ಹಾಗಿರುವಾಗ ಸಿಕ್ಕಿದಷ್ಟು ಲೂಟಿ ಮಾಡಬಹುದು” ಎಂದು ಅಧಿಕಾರಿಗಳು ಅಕ್ರಮಿಗಳಿಗೆ ಭರವಸೆ ಕೊಟ್ಟಿರುತ್ತಾರೆ. ಆದ್ದರಿಂದ ರಾಜಕಾರಣಿಗಳ, ಅಧಿಕಾರಿಗಳ ಧೈರ್ಯದಿಂದ ಸಿಸಿಟಿವಿ ಒಡೆಯಲಾಗಿದೆ. ಇದನ್ನು ಪ್ರಮುಖ ಟಿವಿ ವಾಹಿನಿಯೊಂದು ಬಯಲಿಗೆ ಎಳೆದ ಕಾರಣ ಈ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲದೇ ಹೋದರೆ ಇಂತಹ ಎಷ್ಟೋ ಪ್ರಕರಣಗಳು ಹಣದ ಪ್ರಭಾವದಿಂದ ಮುಚ್ಚಿಹೋಗುತ್ತದೆ. ಈ ವಿಷಯದಲ್ಲಿ ಯಾರೂ ಕೂಡ ಧ್ವನಿ ಎತ್ತುವ ಧೈರ್ಯ ಮಾಡುವುದಿಲ್ಲ. ಯಾಕೆಂದರೆ ಅಕ್ರಮ ಮರಳು ಸಾಗಾಟ ಮಾಡುವವರು ಯಾವುದಕ್ಕೂ ಹೇಸುವವರಲ್ಲ. ನೀವು ಅವರನ್ನು ಸಣ್ಣದಾಗಿ ಗುರಾಯಿಸಿದರೂ ಇವನು ನಮ್ಮ ಮೇಲೆ ದೂರು ಕೊಡಲು ಹೊರಟಿದ್ದಾನೆ ಎಂದು ನಿಮ್ಮನ್ನೇ ಮುಗಿಸಲು ಕೂಡ ಹಿಂದೆ ಮುಂದೆ ನೋಡದವರೇ ಇಂತಹ ದೋ ನಂಬರ್ ಧಂದೆಯಲ್ಲಿ ಇರುತ್ತಾರೆ. ಹೊರ ನೋಟಕ್ಕೆ ದೊಡ್ಡ ಸಂಘಟನೆಯ ಪ್ರಮುಖರಾಗಿ, ನಾಲ್ಕು ಜನರಿಗೆ ಕ್ಯಾಮೆರಾದ ಮುಂದೆ ಹಣ ಕೊಟ್ಟು ಫೋಸ್ ಕೊಟ್ಟು ಹಿಂದಿನಿಂದ ಹೀಗೆ ಮರಳು ಅಕ್ರಮದಲ್ಲಿ ಹಣ ಮಾಡುತ್ತಾ ದೊಡ್ಡ ದೊಡ್ಡ ಮನೆ ಕಟ್ಟಿ ಆರಾಮವಾಗಿ ಇರುತ್ತಾರೆ. ಕೆಲವು ಹುಡುಗರನ್ನು ಸಾಕಿಕೊಂಡು ತಾನು ಪ್ರಭಾವಿ ಎಂದು ಸಾಬೀತುಪಡಿಸಲು ಹೆಣಗುತ್ತಿರುತ್ತಾರೆ. ಆಗಾಗ ಜಾಹೀರಾತು ಕೊಟ್ಟು ಪತ್ರಿಕೆಗಳಿಗೆ, ಟಿವಿಯವರಿಗೆ ಚೆನ್ನಾಗಿ ಇಟ್ಟುಕೊಂಡಿರುತ್ತಾರೆ. ಆದರೆ ಹಿಂದಿನಿಂದ ಸಾರ್ವಜನಿಕ ಸಂಪತ್ತನ್ನು ಲೂಟಿ ಹೊಡೆಯುತ್ತಾ ಕೋಟ್ಯಾಂತರ ಸಂಪಾದಿಸುತ್ತಾರೆ. ಈಗ ಪೊಲೀಸರು ಸಿಸಿಟಿವಿ ನಾಶ ಮಾಡಿದವರನ್ನು ಬಂಧಿಸಿದ್ದಾರೆ. ಅವರಿಗೆ ಪೊಲೀಸರು ಸೂಕ್ತ ಟ್ರೀಟ್ ಮೆಂಟ್ ಕೊಟ್ಟು ಸಿಸಿಟಿವಿ ನಾಶಪಡಿಸಿದ್ದು ದೊಡ್ಡ ತಪ್ಪಾಯಿತು ಎಂದು ಅವರ ಮನಸ್ಸಿಗೆ ಬರುವಂತೆ ಮಾಡಬೇಕು. ಮರಳು ಅಕ್ರಮವಾಗಿ ತೆಗೆಯುವುದು ನಿಲ್ಲುತ್ತದೆ ಎನ್ನುವ ಭ್ರಮೆ ನನಗಿಲ್ಲ. ಆದರೆ ಖಡಕ್ ಅಧಿಕಾರಿಗಳು ಮನಸ್ಸು ಏನು ಮಾಡಬಹುದು. ಅಂತಹ ಅಧಿಕಾರಿಗಳನ್ನು ನೇಮಿಸಬೇಕು ಮತ್ತು ಅಷ್ಟು ಸ್ವಾತಂತ್ರ್ಯ ನೀಡಬೇಕು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search