• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪರಿಹಾರ ಕ್ರೆಡಿಟ್ ಗಾಗಿ ಕಾಂಗ್ರೆಸ್-ಎಸ್ ಡಿಪಿಐ ಫೈಟ್!!

Hanumantha Kamath Posted On September 19, 2022


  • Share On Facebook
  • Tweet It

ಮಸೂದ್ ಹಾಗೂ ಫಾಜಿಲ್ ಹತ್ಯೆಗೆ ನ್ಯಾಯ ಕೊಡಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಘಟಕ ಸುದ್ದಿಗೋಷ್ಟಿ ಮಾಡಿ ಹೇಳಿದೆ. ಅತ್ತ ಎಸ್ ಡಿಪಿಐ ಈ ವಿಷಯದಲ್ಲಿ ಹೋರಾಟ ನಡೆಸುತ್ತಿದೆ. ಮತ್ತೊಂದೆಡೆ ಮುಸ್ಲಿಂ ಐಕ್ಯತಾ ಒಕ್ಕೂಟ ಪ್ರತಿಭಟನೆ ಮಾಡಿದೆ. ಅಲ್ಪಸಂಖ್ಯಾತ ಮತಗಳನ್ನು ತಮ್ಮ ಕಡೆ ಸೆಳೆಯಲು ಎಲ್ಲಾ ಕಡೆಯಿಂದ ಪ್ರಯತ್ನಗಳು ಜೋರಾಗಿ ನಡೆಯುತ್ತಿವೆ. ಮುಸ್ಲಿಂ ಮತದಾರ ಗೊಂದಲಕ್ಕೆ ಬಿದ್ದಿದ್ದಾನೆ. ಎಲ್ಲಿಯಾದರೂ ಮುಸ್ಲಿಂ ಮತಗಳು ಎಸ್ ಡಿಪಿಐ ಕಡೆಗೆ ತಿರುಗಿ ನಮ್ಮ ಇರುವ ಒಂದೇ ಒಂದು ವೋಟ್ ಬ್ಯಾಂಕ್ ಕಳೆದು ಹೋಗುತ್ತದೆಯೋ ಎನ್ನುವ ಹೆದರಿಕೆ ಕಾಂಗ್ರೆಸ್ಸಿನದ್ದು. ಅದಕ್ಕಾಗಿ ಕಾಂಗ್ರೆಸ್ ಮುಖಂಡರು ಈ ವಿಷಯದಲ್ಲಿ ಸುತಾರಾಂ ಹೊಂದಾಣಿಕೆ ಆಗಲು ತಯಾರಿಲ್ಲ. ಈ ವಿಷಯದಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಲು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಮಸೂದ್ ಹಾಗೂ ಫಾಜಿಲ್ ಕುಟುಂಬಗಳಿಗೆ ಸರಕಾರದಿಂದ ಏನಾದರೂ ಕೊಡಿಸುವ ಮೂಲಕ ಅದರ ಕ್ರೆಡಿಟ್ ತಾವು ಪಡೆದುಕೊಳ್ಳಬೇಕೆಂಬ ಧಾವಂತ ಕಾಂಗ್ರೆಸ್ಸಿಗೆ ಇದೆ. ಇಲ್ಲಿ ಎಸ್ ಡಿಪಿಐಗೆ ವಿಧಾನಸಭೆಯಲ್ಲಿ ರಾಜಕೀಯ ಬಲ ಇಲ್ಲದಿದ್ದರೂ ಕಾಂಗ್ರೆಸ್ ನವರಿಂದ ಮಾತನಾಡಿಸಿದ್ದೇ ನಾವು ಎಂದು ಪ್ರತಿಭಟನೆ ಮೂಲಕ ತೋರಿಸುವ ಉಮ್ಮೇದು ಇದೆ. ಈ ನಡುವೆ ತಾಂಟ್ ರೆ ಬಾ ತಾಂಟ್ ಖ್ಯಾತಿಯ ರಿಯಾಜ್ ಫರಂಗಿಪೇಟೆಯ ಮನೆ ಮೇಲೆ ಎನ್ ಐಎ ದಾಳಿ ನಡೆಸಿ ಬಿಹಾರದಲ್ಲಿ ನಡೆಯಲಿದ್ದ ಗಲಭೆಯೊಂದನ್ನು ಭೇದಿಸಿದ ವಿಚಾರದಲ್ಲಿ ರಿಯಾಜ್ ಕೈವಾಡ ಇರಬಹುದಾ ಎಂದು ತನಿಖೆ ಮಾಡಿದೆ. ಆ ವಿಷಯದಲ್ಲಿಯೂ ಎಸ್ ಡಿಪಿಐಗೆ ಆತಂಕ ಶುರುವಾಗಿದೆ.
ನಮ್ಮನ್ನು ಏನಾದರೂ ಮಾಡಿ ಒಂದಿಷ್ಟು ಹಣಿಯುವ ಮೂಲಕ ಭಾರತೀಯ ಜನತಾ ಪಾರ್ಟಿಯ ಸರಕಾರ ಎಸ್ ಡಿಪಿಐ ವಿರುದ್ಧ ಮೌನವಾಗಿಲ್ಲ ಎಂದು ತೋರಿಸುತ್ತದೆ ಎಂದು ಎಸ್ ಡಿಪಿಐಗೆ ಗೊತ್ತಿದೆ. ಇದು ಬಿಜೆಪಿಗೆ ಅನಿವಾರ್ಯವೂ ಹೌದು. ಪ್ರತಿ ಬಾರಿ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಅದರ ಹಿಂದೆ ಮತಾಂಧರ ಕೈವಾಡ ಇದೆ ಎಂದು ತಿಳಿದುಬಂದಾಗ ಪಿಎಫ್ ಐ ಮತ್ತು ಎಸ್ ಡಿಪಿಐಯನ್ನು ನಿಷೇಧಿಸಬೇಕು ಎಂದು ಹಿಂದೂ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾಗುವುದು ಸಹಜ. ಆದರೆ ನಿಷೇಧ ಮಾಡುತ್ತೇವೆ ಎಂದು ಹೇಳುತ್ತಾ ಗಾಯಕ್ಕೆ ಮುಲಾಮು ತಾಗಿಸುವ ಕೆಲಸವನ್ನು ಬಿಜೆಪಿ ಮುಖಂಡರು ಮಾಡುತ್ತಲೇ ಬರುತ್ತಿದ್ದಾರೆ. ಆದರೆ ನಿಷೇಧ ಮಾಡಲು ಸಾಧ್ಯವಾಗಿಲ್ಲ. ಹಾಗಂತ ಹೇಳಿದಷ್ಟು ಸುಲಭವಾಗಿ ನಿಷೇಧ ಮಾಡಲು ಸಾಧ್ಯವೂ ಇಲ್ಲ. ನಿಷೇಧ ಮಾಡಿದರೆ ಅದು ಅಲ್ಲಿಗೆ ಮುಗಿಯುವುದು ಕೂಡ ಇಲ್ಲ. ಅದು ಇನ್ನೊಂದು ಹೆಸರಿನಲ್ಲಿ ತಲೆ ಎತ್ತುತ್ತದೆ. ಆದರೂ ಈ ವಿಚಾರ ಆಗಾಗ ಪ್ರತಿಧ್ವನಿಸುತ್ತದೆ. ಎಸ್ ಡಿಪಿಐ ನಿಷೇಧ ಮಾಡಿದರೆ ಬಿಜೆಪಿ ಕಾರ್ಯಕರ್ತರಲ್ಲಿ ಎಷ್ಟರಮಟ್ಟಿಗೆ ತಮ್ಮ ಪಕ್ಷದ ನಾಯಕರ ಮೇಲೆ ವಿಶ್ವಾಸ ಹೆಚ್ಚಾಗುತ್ತದೆಯೋ ಅದರ ನಾಲ್ಕುಪಟ್ಟು ಖುಷಿ ಕಾಂಗ್ರೆಸ್ಸಿನಲ್ಲಿ ಕಾಣಿಸಿಕೊಳ್ಳಲಿದೆ. ಯಾಕೆಂದರೆ ಸರಿಯಾಗಿ ನೋಡಿದರೆ ಕಾಂಗ್ರೆಸ್ಸಿಗೆ ಇವರಿಂದ ತಲೆನೋವು ಹೆಚ್ಚು. ಈಗ ಫಾಜಿಲ್ ಮತ್ತು ಮಸೂದಿಗೆ ನ್ಯಾಯ ಕೊಡಿಸಿ ಎಂದು ಕಾಂಗ್ರೆಸ್ಸಿಗರು ಸುದ್ದಿಗೋಷ್ಟಿ ಮಾಡಿ ಜನರ ಗಮನ ಸೆಳೆಯಲು ಯತ್ನಿಸುವುದು ಕೂಡ ಅದರ ಒಂದು ಭಾಗ.
ಈಗ ಇವರೆಲ್ಲ ಸೇರಿ ಪ್ರತಿಭಟನೆ ಮಾಡುವುದು ನ್ಯಾಯಕ್ಕಾಗಿಯಾದರೂ ಏನು ನ್ಯಾಯ? ಹೇಗೆ ನ್ಯಾಯ? ಎಂದು ಅವರಿಗೂ ಗೊತ್ತಿದ್ದಂತೆ ಕಾಣುವುದಿಲ್ಲ. ಮೊದಲನೇಯದಾಗಿ ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಕೊಡಬೇಕು ಎಂದು ಆಗ್ರಹ ಬಂದ ಹಿನ್ನಲೆಯಲ್ಲಿ ಅದನ್ನು ರಾಜ್ಯ ಸರಕಾರ ಎನ್ ಐಎಗೆ ಕೊಡಲಾಗಿತ್ತು. ಆದರೆ ಅದರ ಆಸುಪಾಸಿನಲ್ಲಿ ಕೊಲೆಯಾದ ಮಸೂದ್ ಹಾಗೂ ಫಾಜಿಲ್ ಪ್ರಕರಣವನ್ನು ಸ್ಥಳೀಯ ಪೊಲೀಸರಿಗೆ ಕೊಡಲಾಗಿತ್ತು. ಆ ತನಿಖೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ವಿಷಯ ಅಲ್ಲಿಗೆ ಮುಗಿದಿದೆ. ಈಗ ಇವರು ನ್ಯಾಯ ಕೇಳುತ್ತಿರುವುದು ಪರಿಹಾರ ಧನವೇ ಆಗಿದ್ದಲ್ಲಿ ಪ್ರವೀಣ್ ನೆಟ್ಟಾರುವಿಗೆ ಕೊಟ್ಟಂತೆ ಫಾಜಿಲ್ ಹಾಗೂ ಮಸೂದಿಗೆ ಕೊಡಬೇಕೆಂಬ ಬೇಡಿಕೆ ಕಾಂಗ್ರೆಸ್ ಹಾಗೂ ಎಸ್ ಡಿಪಿಐನಿಂದ ಇದೆ. ಪ್ರವೀಣ್ ಹಾಗೂ ಫಾಜಿಲ್ ಹತ್ಯೆ ನಡೆದದ್ದು ಶುದ್ಧ ಪ್ರತೀಕಾರದ ಕಾರಣದಿಂದ. ಪ್ರವೀಣ್ ಅವರನ್ನು ಕೊಂದದ್ದು ಮಸೂದ್ ಸಾವಿಗೆ ಪ್ರತೀಕಾರವಾದರೆ, ಫಾಜಿಲ್ ಹತ್ಯೆಗೊಳಗಾಗಿದ್ದು ಪ್ರವೀಣ್ ಹತ್ಯೆಯ ದ್ವೇಷದಿಂದ. ಆದ್ದರಿಂದ ಇದನ್ನು ಕೋಮುದ್ವೇಷದಿಂದ ಆದ ಕೊಲೆಗೆ ಪರಿಹಾರ ಎನ್ನುವ ಬದಲು ಸರಕಾರದ ವೈಫಲ್ಯಗಳಿಂದ ಆದ ಕೊಲೆಗಳು ಎಂದು ಹೇಳಿ ಪರಿಹಾರ ನೀಡಬಹುದು. ಯಾಕೆಂದರೆ ಪ್ರವೀಣ್ ಯಾವ ರೀತಿಯಿಂದ ನೋಡಿದರೂ ಸಮಾಜಘಾತುಕನಲ್ಲ. ಇನ್ನು ಫಾಜಿಲ್ ಕೂಡ ಯಾವುದೇ ದೊಂಬಿ, ಗಲಭೆಯಲ್ಲಿ ಭಾಗವಹಿಸಿದ ಸಮಾಜದ್ರೋಹಿ ಅಲ್ಲ. ಇದೆರಡೂ ಪ್ರಕರಣಗಳಲ್ಲಿ ಸತ್ತಿರುವುದು ಅಮಾಯಕರು. ಆದರೆ ಮಸೂದ್ ಹತ್ಯೆಯ ಹಿಂದೆ ಗ್ಯಾಂಗ್ ವಾರ್ ಇರುವುದರಿಂದ ಇದೇ ತಕ್ಕಡಿಯಲ್ಲಿ ಹಾಕಿ ನೋಡಲು ಆಗುವುದಿಲ್ಲ. ಫಾಜಿಲ್ ಕುಟುಂಬಕ್ಕೆ ಪರಿಹಾರ ಕೊಡಲು ಸಿಎಂಗೆ ಹಿಂದೂ ಸಂಘಟನೆಗಳು ಅಷ್ಟು ಸುಲಭವಾಗಿ ಗ್ರೀನ್ ಸಿಗ್ನಲ್ ಕೊಡಲಿಕ್ಕಿಲ್ಲ. ಇದೇ ಪರಿಸ್ಥಿತಿಯಲ್ಲಿ ಇಂದು ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಿದ್ದರೆ ಅವರು ಪ್ರವೀಣ್ ನೆಟ್ಟಾರು ಹಾಗೂ ಫಾಜಿಲ್ ಅವರ ಹತ್ಯೆಯನ್ನು ಹೇಗೆ ನೋಡುತ್ತಿದ್ದರು ಎನ್ನುವ ಊಹೆ ಎಲ್ಲರಿಗೂ ಇದೆ. ಪರಿಹಾರ ಕೊಡಿಸಲು ಪ್ರತಿಭಟನೆ, ಹೋರಾಟ, ಸುದ್ದಿಗೋಷ್ಟಿ ಹೊಸದಲ್ಲ. ಆದರೆ ಎಲ್ಲಾ ಹತ್ಯೆಗಳನ್ನು ಒಂದೇ ತಟ್ಟೆಯಲ್ಲಿ ಇಟ್ಟು ನಮ್ಮ ತೆರಿಗೆಯ ಹಣ ಹೇಗೆಗೋ ವ್ಯಯ ಮಾಡುವ ಮೊದಲು ಯೋಚಿಸುವುದು ಒಳ್ಳೆಯದು!!
  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Hanumantha Kamath January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search