• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಔರಂಗಾಜೇಬ್ ರಕ್ತಕ್ಕೆ ಹುಟ್ಟಿದ ಅಫ್ತಾಬ್ ನನ್ನು ಅಲ್ಲಿಯೇ ಕಳುಹಿಸಬೇಕು!

Hanumantha Kamath Posted On November 19, 2022
0


0
Shares
  • Share On Facebook
  • Tweet It

ನಾವು ನಮ್ಮ ಅಪ್ಪ, ಅಮ್ಮನನ್ನು ಆಯ್ಕೆ ಮಾಡಲು ಆಗುವುದಿಲ್ಲ. ಯಾಕೆಂದರೆ ಅದು ನಮ್ಮ ಕೈಯಲ್ಲಿ ಇಲ್ಲ. ಆದರೆ ಒಬ್ಬ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಅವಕಾಶ ನಮಗೆ ಖಂಡಿತ ಇದೆ. ನೋಡಿ, ಅಳೆದು, ವಿಚಾರಿಸಿ ನಂತರ ಸೂಕ್ತ ಎಂದು ಅನಿಸಿದ ಬಳಿಕ ಮದುವೆ ಆಗುವುದರಿಂದ ರಿಸ್ಕ್ ಕಡಿಮೆ. ಹಾಗಂತ ಎಲ್ಲವನ್ನು ನೋಡಿ, ಜಾತಕ ಕೂಡಿಸಿ ಬಳಿಕ ಮದುವೆಯಾದ ಎಲ್ಲ ವೈವಾಹಿಕ ಸಂಬಂಧಗಳು ಚೆನ್ನಾಗಿಯೇ ಇರುತ್ತದೆ ಎಂದಲ್ಲ. ಯಾಕೆಂದರೆ ಹೊರಗಿನಿಂದ ನೋಡುವಾಗ ಚೆನ್ನಾಗಿದ್ದ ಹಣ್ಣು ಮನೆಗೆ ಹೋಗಿ ತುಂಡರಿಸಿ ಕೊಟ್ಟಾಗ ಒಂದಿಷ್ಟು ಹಾಳಾಗಿರುವ ಸಾಧ್ಯತೆಗಳು ಕೂಡ ಇರುತ್ತವೆ. ಹಾಗಂತ ಕೊಚ್ಚೆಯಲ್ಲಿ ಬಿದ್ದಿದ್ದ ಬಾಳೆಹಣ್ಣನ್ನು ಎತ್ತಿ ಚೆನ್ನಾಗಿರಬಹುದು ಎನ್ನುವ ಭ್ರಮೆ ಇದೆಯಲ್ಲ, ಅದಕ್ಕಿಂತ ಮೂರ್ಖತನ ಬೇರೆ ಇಲ್ಲ. ಹಾಗೆ ಶ್ರದ್ಧಾ ತಾನು ಬೆಳೆದಿದ್ದೇನೆ ಎನ್ನುವ ಭ್ರಮೆಯಲ್ಲಿ ಅಫ್ತಾಬ್ ಕೈ ಹಿಡಿದು ಲಿವಿಂಗ್ ರಿಲೇಶನ್ ಶಿಪ್ ಗೆ ಕಾಲಿಟ್ಟಾಗ ಅವಳಿಗೆ ತಾನು ಒಂದು ದಿನ ಮನೆಯಲ್ಲಿ ಉಳಿದ ಹಾಲು ಹಾಳಾಗದಂತೆ ಇಡುವ ಫ್ರಿಜ್ ನಲ್ಲಿ ತನ್ನನ್ನು ತುಂಡು ತುಂಡು ಮಾಡಿ ಮಲಗಿಸುತ್ತಾರೆ ಎಂದು ಅಂದುಕೊಳ್ಳುವ ಚಾನ್ಸೇ ಇರಲಿಲ್ಲ. ಅವಳ ಗ್ರಹಚಾರ ಕೆಟ್ಟಿತ್ತು. ಅದಕ್ಕಿಂತ ಹೆಚ್ಚಾಗಿ ಅವಳಲ್ಲಿದ್ದ ಎಲ್ಲವನ್ನು ಆತ ದೋಚಿ ಆಗಿತ್ತು. ಅವನಿಗೆ ಒಂದೇ ಊಟ ಮಾಡಿ ಮಾಡಿ ಸಾಕಾಗಿತ್ತು. ಅವನ ನಾಲಿಗೆ ಬೇರೆ ರುಚಿಗೆ ತಡಕಾಡುತ್ತಿತ್ತು. ಇವಳನ್ನು ಕೊಂದರೆ ಮಾತ್ರ ಅದು ಸಾಧ್ಯ ಎಂದು ಅವನಿಗೆ ಗೊತ್ತಾಗಿತ್ತು. ಅವಳನ್ನು ಹತ್ಯೆ ಮಾಡಿ ಫ್ರಿಜ್ ನಲ್ಲಿಟ್ಟು ಅದೇ ದಿನ ಬೇರೆ ಯುವತಿಯೊಂದಿಗೆ ಮನೆಯ ಕೋಣೆಯ ಒಳಗೆ ಚಕ್ಕಂದ ಆಡುತ್ತಾನೆ ಎಂದರೆ ಅವನು ಔರಂಗಾಜೇಬ ಅಥವಾ ಷಹಜಹಾನನ ರಕ್ತಕ್ಕೆ ಹುಟ್ಟಿದವನೇ ಇರಬೇಕು.
ಅಷ್ಟಕ್ಕೂ ಶ್ರದ್ಧಾ ದಲಿತ ಯುವತಿ. ಅದರೊಂದಿಗೆ ಉತ್ತಮ ವಿದ್ಯಾರ್ಹತೆ ಇದ್ದವಳು. ಉತ್ತಮ ಮನೆತನದ ಹಿನ್ನಲೆಯವಳು. ಇಂತವರೇ ಸಾಮಾನ್ಯವಾಗಿ ಒಂದು ಸಣ್ಣ ಕೆಟ್ಟ ಘಳಿಗೆಯಲ್ಲಿ ಮೈ ಮರೆತುಬಿಡುತ್ತಾರೆ. ತನಗೆ ಗಾಳ ಬೀಸಲು ತಯಾರಾದ ಯುವಕನ ಜಾತಿ, ಧರ್ಮವನ್ನು ನೋಡುವುದೇ ಇಲ್ಲ. ಜಾತಿ, ಧರ್ಮವನ್ನು ನೋಡಿ ಯಾರೂ ಪ್ರೀತಿಸಲೇಬೇಕು ಎಂದಲ್ಲ. ಆದರೆ ಇತಿಹಾಸ ಅರಿಯದವರು ಇತಿಹಾಸವನ್ನು ಸೃಷ್ಟಿಸುವುದಿಲ್ಲ ಎನ್ನುವ ಮಾತಿದೆ. ಆದ್ದರಿಂದ ಅಫ್ತಾಬ್ ನಂತವರ ಇತಿಹಾಸವನ್ನು ಮೊದಲು ಅರಿತು ನಂತರ ಕಾಲಿಡಬೇಕು. ಯಾಕೆಂದರೆ ಈ ದೇಶದಲ್ಲಿ ಲವ್ ಜಿಹಾದ್ ಎನ್ನುವಂತದ್ದು ಇದೆ ಎನ್ನುವುದನ್ನು ಯಾವ ಹಿಂದೂ ಹೆಣ್ಣುಮಗಳು ಕೂಡ ಮರೆಯಬಾರದು. ಹಾಗಂತ ಪ್ರತಿ ಮುಸ್ಲಿಮ್ ವ್ಯಕ್ತಿಯೂ ಕೆಟ್ಟವರಲ್ಲ ಎಂದು ಅಂದುಕೊಂಡು ಲವ್ ಮಾಡಲು ಹೋಗುತ್ತಾರಲ್ಲ, ಅವರಲ್ಲಿ ಎಷ್ಟು ಮಂದಿ ಉತ್ತಮ ಜೀವನ ಕಂಡುಕೊಂಡಿದ್ದಾರೆ ಎನ್ನುವುದನ್ನು ನೋಡಬೇಕು. ಶಾರೂಕ್ ಖಾನ್ ಮುಸ್ಲಿಂ ಅಲ್ವಾ? ಅವನ ಹೆಂಡತಿ ಗೌರಿ ಚೆನ್ನಾಗಿ ವಾಸಿಸುತ್ತಿಲ್ವಾ ಎಂದು ಅಂದುಕೊಳ್ಳುವ ಹೆಣ್ಣುಮಕ್ಕಳು ಇದ್ದಾರೆ. ಹಾಗೆ ನೋಡಿದರೆ ಹೈ ಲೆವೆಲ್ಲಿನಲ್ಲಿ ಹತ್ಯೆ, ಹಿಂಸೆ ಆಗುವುದು ಕಡಿಮೆ. ಎಷ್ಟೋ ಉನ್ನತ ಬಿಜೆಪಿ ಮುಖಂಡರ ಮಗಳಂದಿರು ಮುಸ್ಲಿಮರನ್ನು ಮದುವೆಯಾಗಿದ್ದಾರೆ. ಕಾಂಗ್ರೆಸ್ಸಿನಲ್ಲಿಯೂ ಇದು ಇದೆ. ದೊಡ್ಡ ದೊಡ್ಡ ಸಿನೆಮಾ ನಟರ, ಸಾಹಿತಿಗಳ, ಕ್ರೀಡಾಪಟುಗಳ ವೈವಾಹಿಕ ಜೀವನದಲ್ಲಿ ಹೀಗೆ ಆಗಿದೆ. ಆದರೆ ಅದು ವಿವಾಹ ವಿಚ್ಚೇದನದೊಂದಿಗೆ ಮುಕ್ತಾಯಗೊಂಡಿರಬಹುದೇ ವಿನ: ಅದಕ್ಕಿಂತ ದೊಡ್ಡ ಸಮಸ್ಯೆ ಆಗಿಲ್ಲ. ಆದರೆ ಈ ಮಿಡಲ್ ಕ್ಲಾಸ್ ಇರುತ್ತಾರಲ್ಲ, ಅವರು ಅಪ್ಪ, ಅಮ್ಮನ ವಿರುದ್ಧ ಹೋಗಿ ಮುಸ್ಲಿಂ ಯುವಕನನ್ನು ಮದುವೆಯಾಗಿ ಮೇರಾ ಅಬ್ದುಲ್ಲಾ ಅಲಗ್ ಹೈ ಎನ್ನುತ್ತಾರೆ. ಆದರೆ ಆತ ನಿಮ್ಮ ಮೈಯನ್ನು ಉಂಡ ಬಳಿಕ ನಿಮ್ಮನ್ನು ಬೇರೆಯವರಿಗೆ ಮಾರಲು ಅಥವಾ ನಿಮ್ಮ ಮುಂದೆ ಇನ್ನೊಬ್ಬಳೊಂದಿಗೆ ಮಲಗಲು ಹೋದರೆ ಆಗ ಈ ಹೆಣ್ಣುಮಗಳು ಏನು ಮಾಡಬೇಕು. ಒಂದೋ ಅಲ್ಲಿಯೇ ಸಾಯಬೇಕು ಅಥವಾ ಅಲ್ಲಿಂದ ಓಡಿ ಬಂದು ಬೀದಿಹೆಣವಾಗಬೇಕು. ಇವತ್ತಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಈ ಪರಿ ಬೆಳೆದ ನಂತರ ಸಂಬಂಧಗಳು ಕೂಡಿ ಬರುವುದು ಸುಲಭವಾಗಿದೆ. ಅದೇ ರೀತಿ ಸಂಬಂಧಗಳು ಮುರಿಯುವುದು ಕೂಡ ಅಷ್ಟೇ ಸುಲಭವಾಗಿದೆ. ಮದುವೆಗೆ ಅಂತಹ ಮಹತ್ವ ಉಳಿದಿಲ್ಲ. ಮದುವೆಯಷ್ಟೇ ವಿಚ್ಚೇದನ ಮಾಮೂಲಿಯಾಗಿದೆ. ಹಾಗಂತ ಮದುವೆಯ ಮೇಲಿನ ವಿಶ್ವಾಸ ಕಡಿಮೆಯಾಗಿಲ್ಲ. ವಿಶ್ವಾಸ ಕಡಿಮೆಯಾಗಿರುವುದು ಮನುಷ್ಯತ್ವದ ಮೇಲೆ. ಅಫ್ತಾಬ್ ನಂತವರು ಹೂವಿನೊಂದಿಗಿನ ಮುಳ್ಳಿನಂತವರು. ಮುಳ್ಳು ಚುಚ್ಚುತ್ತೆ ಎಂದು ಗೊತ್ತಿದ್ದರೆ ನೀವು ಬದುಕುತ್ತೀರಿ. ಇಲ್ಲದಿದ್ದರೆ ಫ್ರಿಜ್ ವಾಸ ಗ್ಯಾರಂಟಿ!

0
Shares
  • Share On Facebook
  • Tweet It




Trending Now
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
Hanumantha Kamath April 6, 2026
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Hanumantha Kamath March 27, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
  • Popular Posts

    • 1
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search