ಅತ್ತ ಸ್ವರ್ಗದಲ್ಲಿ ಅಪ್ಸರೆಯರೂ ಸಿಗಲಿಲ್ಲ, ಇತ್ತ ಶೌಚಾಲಯದಲ್ಲಿ ಕೂರುವುದು ಸಾಧ್ಯವಾಗುತ್ತಿಲ್ಲ!

ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ, ಆದರೆ ಮುಸ್ಲಿಂ ಭಯೋತ್ಪಾದಕರೆಲ್ಲರೂ ಹಿಂದೂಗಳ ಆಧಾರ್ ಕಾರ್ಡ್ ಇಟ್ಟುಕೊಂಡಿರುತ್ತಾರಲ್ಲ ಎಂಬ ಹೊಸ ನಾಣ್ಣುಡಿ ಈಗ ಚಾಲ್ತಿಯಲ್ಲಿದೆ. ಯಾಕೆಂದರೆ ಒಂದು ವೇಳೆ ಬಾಂಬ್ ಸ್ಫೋಟದಲ್ಲಿ ಆ ಉಗ್ರಗಾಮಿ ಸತ್ತು 72 ಸಾವಿರ ಅಪ್ಸರೆಯರು ಸಿಗುವ ಸ್ಥಳಕ್ಕೆ ಹೋದರೆ ಇಲ್ಲಿ ಭೂಲೋಕದಲ್ಲಿ ಭಯೋತ್ಪಾದಕನ ಹೆಣದ ಜೊತೆ ಒಂದು ಆಧಾರ್ ಕಾರ್ಡ್ ಸಿಗುತ್ತದೆ. ಅದರಲ್ಲಿ ಹಿಂದೂವಿನ ಹೆಸರು ಇರುತ್ತದೆ. ಅಲ್ಲಿಗೆ ಬಾಂಬ್ ಇಟ್ಟವನು ಹಿಂದೂ ಎಂದು ಗುರುತಿಸಲ್ಪಡುತ್ತಾನೆ. ಇಡೀ ಜಗತ್ತಿನಲ್ಲಿ ಹಿಂದೂಗಳು ಬಾಂಬ್ ಇಟ್ಟಿದ್ದು ಎಂದು ಸುದ್ದಿ ಹರಡುತ್ತದೆ. ಮುಸ್ಲಿಮ್ ಸಮುದಾಯದ ಮೇಲೆ ಸಣ್ಣ ಸಂಶಯವೂ ಬರುವುದಿಲ್ಲ ಎನ್ನುವ ವಿಕಲಾಂಗ ಐಡಿಯಾವನ್ನು ಹಿಡಿದು ಹೊರಟವನ ಹೆಸರು ಶಾರೀಕ್. ಅವನಿಗೆ ತಾನು ಜೀವಂತವಾಗಿ ಸಿಕ್ಕಿಬೀಳುವುದಿಲ್ಲ ಎಂಬ ಗ್ಯಾರಂಟಿ ಇತ್ತು. ಒಂದು ವೇಳೆ ಬಾಂಬ್ ಸರಿಯಾದ ಕಡೆ ಇಟ್ಟು ಅಲ್ಲಿಂದ ತಾನು ಹೊರಟು ಬಂದರೆ ಅದು ಇನ್ನೂ ಸೇಫ್ ಎನ್ನುವ ಭಾವನೆ ಇತ್ತು. ಒಂದು ವೇಳೆ ಸತ್ತರೆ ತನ್ನನ್ನು ಕಳುಹಿಸಿದವರು ಅದನ್ನು ವೀರ ಮರಣ ಎನ್ನುತ್ತಾರೆ ಎನ್ನುವ ಧೈರ್ಯ ಇತ್ತು. ಒಂದು ವೇಳೆ ವೀರ ಮರಣ ಹೊಂದಿದರೆ ಕಾಫೀರರನ್ನು ಕೊಂದು ಬಂದಿದ್ದಾನೆ ಎನ್ನುವ ಕಾರಣ ಎರಡು ಅಪ್ಸರೆಯರು ಜಾಸ್ತಿ ಸಿಕ್ಕಿ ಅವರೊಂದಿಗೆ ಹೆಚ್ಚು ಮಜಾ ಮಾಡಬಹುದು ಎನ್ನುವ ದೂರದೃಷ್ಟಿ ಇತ್ತು. ಆದ್ದರಿಂದ ಅವನು ಸರಿಯಾಗಿ ಹಿಂದೂ ಒಬ್ಬರ ಕಳೆದು ಹೋದ ಐಡಿಯನ್ನೇ ಫೋಟೋ ಬದಲಾಯಿಸಿ ಇಟ್ಟುಕೊಂಡಿದ್ದ. ಅದರೊಂದಿಗೆ ಕೇಸರಿ ಶಾಲೊಂದನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಕೈಯಲ್ಲಿ ಕುಕ್ಕರ್ ಒಳಗೆ ಬಾಂಬ್ ಇಟ್ಟುಕೊಂಡು ಹೊರಟಿದ್ದ. ಆದರೆ ಅವನಿಗೆ ಆ ಕುಕ್ಕರ್ ತನ್ನ ಕೈಯಲ್ಲಿಯೇ ಸಿಡಿಯುತ್ತದೆ ಎನ್ನುವ ಸಣ್ಣ ಅನುಮಾನವೂ ಇರಲಿಲ್ಲ. ಈಗ ಕುಕ್ಕರ್ ಸಿಡಿದು ಅತ್ತ ಅಪ್ಸರೆಯ ಜಾಗಕ್ಕೂ ಹೋಗಲಾಗದೇ, ಇತ್ತ ಸರಿಯಾಗಿ ಶೌಚಾಲಯದಲ್ಲಿಯೂ ಕೂರಲಾಗದೇ ತ್ರಿಶಂಕು ಸ್ಥಿತಿಗೆ ಬಂದು ಶಾರೀಕ್ ತಲುಪಿದ್ದಾನೆ. ಯಾಕೆಂದರೆ ಸುಟ್ಟಗಾಯದ ನೋವು, ಉರಿ ಇದೆಯಲ್ಲ, ಅದು ಬಹಳ ಸಂಕಟವನ್ನು ಉಂಟು ಮಾಡುತ್ತದೆ. ಅದರಲ್ಲಿಯೂ ಅದು ವಾಸಿಯಾಗಲು ಇನ್ನೆಷ್ಟು ಕಾಲ ಬೇಕಾಗಬಹುದು ಎನ್ನುವುದು ಆ ಚರ್ಮಕ್ಕೆ ಬಿಟ್ಟ ವಿಷಯ. ಒಂದು ಹಂತದಲ್ಲಿ ಸತ್ತರೇನೆ ವಾಸಿ ಎಂದು ಅಂದುಕೊಳ್ಳುವ ಮಟ್ಟಿಗೆ ಕಿತ್ತುಹೋದ ಆ ಹಿಂಸೆ ಕಾಡುತ್ತದೆ. ಇಷ್ಟಿದ್ದು ಕಾಫೀರರನ್ನು ಸುಡುತ್ತೀವಿ ಎಂದು ಮತಾಂಧರು ಹೊರಟುಬಿಡುತ್ತಾರೆ. ಆವತ್ತು ಮಂಗಳೂರಿನ ಹೃದಯಭಾಗದ ಗೋಡೆಯಲ್ಲಿ ಮನುವಾದಿಗಳನ್ನು ಬಿಡುವುದಿಲ್ಲ ಎಂದು ಬರೆದು ದಕ್ಕಿಸಿಕೊಂಡಿದ್ದ ಶಾರೀಕ್ ಅದೇ ಧೈರ್ಯದ ಮೇಲೆ ಬಾಂಬ್ ಹಿಡಿದು ಮಂಗಳೂರಿನ ಜನನಿಬಿಡ ಪ್ರದೇಶವನ್ನು ಹುಡುಕುತ್ತಿದ್ದ. ಸಿಕ್ಕಿಬಿದ್ದರೆ ಕೆಲವು ದಿನಗಳ ಜೈಲುವಾಸ. ನಂತರ ಬಿಡುಗಡೆ. ಹೀಗೆ ಹಿಂದೂಗಳನ್ನು ಕೊಲ್ಲಲು ಹೊರಟಿದ್ದಾನೆ ಎಂದರೆ ಅವನ ಕುಟುಂಬದ ಆರ್ಥಿಕ ವ್ಯವಸ್ಥೆ ಚೆನ್ನಾಗಿಟ್ಟುಕೊಳ್ಳಲು ಒಂದಿಷ್ಟು ಮೂಲಭೂತವಾದಿಗಳು ತಯಾರಾಗಿಬಿಡುತ್ತಾರೆ. ಆದ್ದರಿಂದ ಹತ್ತನ್ನೆರಡು ಮಕ್ಕಳಾಗುವಾಗ ಒಂದೆರಡು ಹೀಗೆ ಮನುವಾದಿಗಳ ಹತ್ಯೆಗೆ ಹೊರಟರೆ ಯಾವ ಹೆತ್ತವರಿಗಾದರೂ ಅಳು ಬರುತ್ತಾ? ಯಾಕೆಂದರೆ ಧರ್ಮದ ಅಫೀಮು ಹಾಗೆ ಇರುತ್ತದೆಯಲ್ಲ? ಪೋಷಕರು ತ್ಯಾಗಮಯಿ ಆಗುತ್ತಾರೆ. ಹಣ ಕೈಗೆ ಬರುತ್ತದೆ. ಇವರು ಚೆನ್ನಾಗಿರುತ್ತಾರೆ. ಆತ ಯಾರನ್ನೋ ಕೊಲ್ಲಲು ಹೊರಡುತ್ತಾನೆ.
ಮುಂಬೈಯ ಬಾಂಬ್ ಬ್ಲಾಸ್ಟ್ ಸಮಯದಲ್ಲಿಯೂ ಹೀಗೆ ಆಗಿತ್ತು. ಪಾಕಿಸ್ತಾನದಿಂದ ಬಂದ ಉಗ್ರಗಾಮಿಗಳು ಕೈಗೆ ನಾವು ಹಿಂದೂಗಳು ಧರಿಸುವ ಕೆಂಪು ದಾರವನ್ನು ಧರಿಸಿಯೇ ಬಂದಿದ್ದರು. ಅವರಿಗೆ ತಾವು ಮತ್ತೆ ಸೇಫಾಗಿ ಪಾಕಿಸ್ತಾನಕ್ಕೆ ಹೋಗುವ ಸಾಧ್ಯತೆ ಇಲ್ಲ ಎಂದು ಗೊತ್ತಿತ್ತು. ಆದ್ದರಿಂದ ಸತ್ತಾಗ ತಮ್ಮ ಬಾಡಿ ಗುರುತಿಸುವ ಸಂದರ್ಭದಲ್ಲಿ ತಮ್ಮ ಕೈಗೆ ಹಾಕಿದ ಕೆಂಪು ದಾರದ ಆಧಾರದಲ್ಲಿ ಹಿಂದೂಗಳು ಮಾಡಿದ್ದು ಎಂದು ತಿಳಿಯಲಿ ಎನ್ನುವ ಗೂಢಾಲೋಚನೆ ಇತ್ತು. ಇದೆಲ್ಲವೂ ವ್ಯವಸ್ಥಿತ ಷಡ್ಯಂತ್ರ. ಉಗ್ರಗಾಮಿಗಳ ಈ ಪ್ಲಾನ್ ತಿಳಿಯದ ಕೆಲವು ನಮ್ಮ ದೇಶದವರು ಶಾಕೀರ್ ತಯಾರು ಮಾಡಿಟ್ಟುಕೊಂಡಿದ್ದ ಹಿಂದೂ ಆಧಾರ್ ಕಾರ್ಡ್ ನೋಡಿದವರೇ ಇದು ಹಿಂದೂ ಭಯೋತ್ಪಾದಕ ಕೃತ್ಯ ಎಂದು ಬಾಯಿ ಬಡಿದುಕೊಳ್ಳುತ್ತಾ ನಿಂತರು. ಸಿಎಂ ಇಬ್ರಾಹಿಂ ತರದವರು ಇದರ ಹಿಂದೆ ಆರ್ ಎಸ್ ಎಸ್ ಇರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದರು. ಕೆಲವರು ಮಾಲೆಗಾಂ ಸ್ಫೋಟದ ತರಹ ಪುರೋಹಿತ್, ಪ್ರಜ್ಞಾ ಸಿಂಗ್ ವಿಷಯವನ್ನು ಎಳೆದು ತಂದರು. ಒಟ್ಟಿನಲ್ಲಿ ಬಾಂಬ್ ಸ್ಫೋಟ ಆದ ಕೆಲವು ಗಂಟೆಗಳ ತನಕ ಬುದ್ಧಿಜೀವಿಗಳಿಗೆ, ಪ್ರಗತಿಪರರಿಗೆ ಹಿಂದೂ ಒಬ್ಬ ಬಾಂಬ್ ಇಡಲು ಬಂದಿದ್ದ ಎನ್ನುವ ಭ್ರಮೆಯಲ್ಲಿ ರೋಮಾಂಚನವಾಗುತ್ತಿತ್ತು. ಆದರೆ ಕೊನೆಗೆ ಇವತ್ತಿನ ಆಧುನಿಕ ತಂತ್ರಜ್ಞಾನದಲ್ಲಿ ಇಂತಹ ಕಾಗಕ್ಕ, ಗುಬ್ಬಕ್ಕನ ಕಥೆಯನ್ನು ಯಾರೂ ನಂಬುವುದಿಲ್ಲ ಎನ್ನುವುದು ಅವರಿಗೆ ತಿಳಿಯಲೇ ಇಲ್ಲ. ಈ ನಡುವೆ ಜಾಕೀರ್ ನೈಕ್ ಗೆ ಫಿಫಾ ವಿಶ್ವಕಪ್ ನಲ್ಲಿ ವಿಶೇಷ ಗೌರವ ಕೊಡಲು ಕತಾರ್ ಸರಕಾರ ನಿರ್ಧರಿಸಿದೆ. ಜಾಕೀರ್ ನೈಕ್ ನಂತವರ ಹಿಂದೂ ವಿರೋಧಿ ಭಾಷಣಗಳಿಂದ ಅರ್ಧ ಮುಸ್ಲಿಂ ಯುವಕರು ದಾರಿ ತಪ್ಪುತ್ತಿದ್ದಾರೆ. ಅಂತಹ ಜಾಕೀರ್ ನಾಲಾಯಕನಿಗೆ ಸನ್ಮಾನ ಮಾಡುವ ಮೂಲಕ ಕತಾರ್ ಸರಕಾರ ಏನು ಸಂದೇಶ ಕೊಡಲು ಹೊರಟಿದೆ ಎಂದು ಭಾರತ ನೋಡಬೇಕು!
Leave A Reply