• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮುಸ್ಲಿಮರಿಗೆ ಪ್ರತ್ಯೇಕ ಕಾಲೇಜು ಕೊಟ್ಟರೆ ಅದು ಬಿಜೆಪಿ ಸರಕಾರದ ಅಧಪತನದ ಮೊದಲ ಹೆಜ್ಜೆ!

Hanumantha Kamath Posted On November 30, 2022


  • Share On Facebook
  • Tweet It

ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ ರಾಜ್ಯದಲ್ಲಿ ಹತ್ತರಿಂದ ಇಪ್ಪತ್ತು ಪ್ರತ್ಯೇಕ ಹೊಸ ಕಾಲೇಜುಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಸರಕಾರ ಮುಂದಾಗಿದೆ. ಇಲ್ಲಿ ಬಿಜೆಪಿ ಸರಕಾರವೇ ಮುಂದೆ ನಿಂತು ವಕ್ಫ್ ಬೋರ್ಡ್ ಮೂಲಕ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜುಗಳನ್ನು ನಿರ್ಮಿಸುತ್ತಿರುವುದನ್ನು ಸಂಘ ಪರಿವಾರ ಹೇಗೆ ನೋಡುತ್ತದೆ ಎನ್ನುವುದೇ ಆಶ್ಚರ್ಯಕರ ಪ್ರಶ್ನೆ. ಆ ಹೊಸ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತಮಗೆ ಹೇಗೆ ಬೇಕಾದರೂ ಹಾಗೆ ಇರಬಹುದು. ಹಿಜಾಬ್ ಧರಿಸಿ ತರಗತಿಯೊಳಗೆ ಪಾಠ ಕೇಳಬಹುದು. ಅಲ್ಲಿಯೇ ಕಾಲೇಜು ಆವರಣದಲ್ಲಿ ಮಸೀದಿ ನಿರ್ಮಿಸಿ ನಮಾಜು ಮಾಡಬಹುದು. ಬುರ್ಖಾ ಧರಿಸಿಯೇ ಪರೀಕ್ಷೆ ಬರೆಯಬಹುದು. ಅವಕಾಶ ಸಿಕ್ಕಿದರೆ ಪರೀಕ್ಷೆಯಲ್ಲಿ ಕಾಪಿ ಮಾಡಿ ಉತ್ತಮ ಅಂಕ ಗಳಿಸಬಹುದು. ತಮ್ಮ ಮತಧರ್ಮದ ಹಬ್ಬಗಳನ್ನು ಕಾಲೇಜಿನಲ್ಲಿ ಆಚರಿಸಬಹುದು. ಎಲ್ಲದಕ್ಕೂ ಮುಕ್ತ ಅವಕಾಶವನ್ನು ಬಸ್ಸು ಬೊಮ್ಮಾಯಿ ಮಾಡಿಕೊಡಲಿದ್ದಾರೆ. ಇಂತಹ ಒಂದು ಗ್ರಹಚಾರವನ್ನು ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕಾಗಿದೆ. ಇದು ಪ್ರಸ್ತುತ ಈ ರಾಜ್ಯದ ಜನರ ಹಣೆಬರಹ.

ಹಿಜಾಬ್ ಧರಿಸಿ ತರಗತಿಯೊಳಗೆ ಪಾಠ ಕೇಳಲು ಅನುಮತಿ ಇಲ್ಲ ಎಂದು ಹೇಳಿದ ಬಿಜೆಪಿ ಸರಕಾರ ಈಗ ಅವರಿಗಾಗಿಯೇ ಪ್ರತ್ಯೇಕ ಕಾಲೇಜನ್ನು ಸೃಷ್ಟಿಸುವುದನ್ನು ನೋಡಿದಾಗ ಈ ಬಾರಿ ಮುಸ್ಲಿಮರು ಸಿಕ್ಕಾಪಟ್ಟೆ ಖುಷಿಗೊಂಡು ಬಿಜೆಪಿಗೆ ತಮ್ಮ ಸಮುದಾಯದ ಮತಗಳನ್ನು ಹಾಕಿಸಿ ಬಿಜೆಪಿಯನ್ನು ಅತ್ಯಧಿಕ ಸೀಟುಗಳಿಂದ ಗೆಲ್ಲಿಸಲಿದ್ದಾರೆ ಎನ್ನುವ ಭ್ರಮೆ ಬಿಜೆಪಿಗೆ ಇದೆ. ಒಂದು ವೇಳೆ ಸಿದ್ಧರಾಮಯ್ಯನವರು ಹೀಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜನ್ನು ಸ್ಥಾಪಿಸಿದ್ದರೆ ಆಗ ಅವರನ್ನು ಇದೇ ಸಿಟಿ ರವಿ, ಸುನೀಲ ಕುಮಾರ್, ತೇಜಸ್ವಿ ಸೂರ್ಯ, ಪ್ರತಾಪು ಹೇಗೆ ಝಾಡಿಸುತ್ತಿದ್ದರು ಎನ್ನುವುದನ್ನು ಊಹಿಸಿಕೊಳ್ಳಿ. ಸಿದ್ದು ಲೆಕ್ಕಕ್ಕಿಂತ ಹೆಚ್ಚು ಮುಸ್ಲಿಮರ ಬಗ್ಗೆ ಓಲೈಕೆ ಮಾಡಿದ್ದಾರೆ ಎನ್ನುವುದು ನಿಜ. ಅದರಲ್ಲಿ ಸಂಶಯವಿಲ್ಲ. ಅವರು ಅಲ್ಪಸಂಖ್ಯಾತ ಮಕ್ಕಳಿಗೆ ಪ್ರತ್ಯೇಕ ಪ್ರವಾಸದಿಂದ ಹಿಡಿದು ಶಾದಿ ಭಾಗ್ಯದ ತನಕ ಹತ್ತಾರು ಯೋಜನೆಗಳನ್ನು ತಂದು ಇವತ್ತು ಈ ಪರಿಸ್ಥಿತಿಯಲ್ಲಿ ಇದ್ದಾರೆ. ಅವರಿಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು ಆರಂಭಿಸುವ ಐಡಿಯಾ ಬಂದಿರಲಿಕ್ಕಿಲ್ಲ. ಬಂದಿದ್ದರೆ ಆವತ್ತೇ ಮಾಡುತ್ತಿದ್ದರು. ಆದರೆ ಬೊಮ್ಮಾಯಿಯವರಿಗೆ ಏನಾಗಿದೆ? ಇವರು ಸಿದ್ದುವಿನ ಓಲೈಕೆ ರಾಜಕಾರಣ ವಿರೋಧಿಸಿ ಅಧಿಕಾರಕ್ಕೆ ಬಂದವರಲ್ವಾ? ಬಿಡಿ, ಬೊಮ್ಮಾಯಿ ಲಾಟರಿಯಲ್ಲಿ ಸಿಎಂ ಆದವರು. ಅವರ ಮೂಲ ಜನತಾದಳ. ಅವರಿಗೆ ಹೇಳಿ ಏನು ಪ್ರಯೋಜನವಿಲ್ಲ. ಆದರೆ ದಿನ ಬೆಳಗಾದರೆ ಕೇಶವಾ ಕೃಪಾಕ್ಕೆ ಫೋನ್ ಮಾಡಿ ಇವತ್ತು ಒಂದು ಚಪಾತಿ ತಿಂದೆ. ನಾಳೆ ಎರಡು ಇಡ್ಲಿ ತಿನ್ನಬಹುದಾ ಎಂದು ಕೇಳುವಂತವರು ಇದನ್ನೊಂದು ಕೇಳದೇ ವಕ್ಫ್ ಬೋರ್ಡಿಗೆ ಪ್ರತ್ಯೇಕ ಕಾಲೇಜಿಗೆ ಅನುಮತಿ ಕೊಟ್ಟರಾ? ಈಗ ಕೊಟ್ಟುಬಿಟ್ಟಿದ್ದಿರಿ ಎಂದೇ ಇಟ್ಟುಕೊಳ್ಳೋಣ. ಆಗ ಏನಾಗುತ್ತೆ. ಸಹಜವಾಗಿ ಪ್ರತಿಭಟನೆ ಮಾಡಲು ತಮ್ಮದೇ ಪರಿವಾರದ ಸಂಘಟನೆಗಳ ಮುಖಂಡರಿಗೆ ಸೂಚನೆ ಹೋಗುತ್ತದೆ. ಆಗ ಪರಿವಾರ ಸಂಘಟನೆಯ ಕಡೆಯಿಂದ ಪ್ರತಿಭಟನೆ ಆಗುತ್ತದೆ. ಆಗ ಪ್ರತಿಭಟನೆಯ ಕಾರಣದಿಂದ ಕಾಲೇಜು ಸ್ಥಾಪನೆಗೆ ಸರಕಾರ ಕೊಟ್ಟ ಅನುಮತಿಯನ್ನು ಸರಕಾರವೇ ಹಿಂದೆಗೆದುಕೊಳ್ಳುತ್ತದೆ. ಅಲ್ಲಿಗೆ ವಕ್ಫ್ ಬೋರ್ಡಿಗೂ ಸಮಾಧಾನವಾಯಿತು. ಪರಿವಾರದ ಸಂಘಟನೆಗಳಿಗೂ ಹೋರಾಟಕ್ಕೆ ಅವಕಾಶ ಕೊಟ್ಟು ರಾಜ್ಯ ಎದುರಿಸುತ್ತಿರುವ ಬೇರೆ ಇಶ್ಯೂಗಳಿಂದ ಜನರ ಗಮನ ಬೇರೆ ಸೆಳೆಯುವಂತೆ ಮಾಡುವುದರಲ್ಲಿ ಯಶಸ್ವಿಯಾದಂತೆ ಆಯಿತು ಎನ್ನುವ ಐಡಿಯಾ ಬಿಜೆಪಿಯ ಥಿಂಕ್ ಟ್ಯಾಂಕಿಗೆ ಬಂದಿರಬಹುದು.

ಒಂದು ಕಡೆಯಲ್ಲಿ ಬೊಮ್ಮಾಯಿ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ತರಲು ತಯಾರಾಗಿದ್ದಾರೆ. ಮತ್ತೊಂದೆಡೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು ಸ್ಥಾಪಿಸಲು ಪ್ರತಿ ಕಾಲೇಜಿಗೆ ರಾಜ್ಯ ಸರಕಾರದಿಂದ 2.5 ಕೋಟಿ ರೂಪಾಯಿ ನೀಡಲು ಹೊರಟಿದ್ದಾರೆ. ಈಗ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಮಾಡಿದ ಮೇಲೆ ಮುಂದಿನ ದಿನಗಳಲ್ಲಿ ಹಿಂದೂ ಹೆಣ್ಣುಮಕ್ಕಳಿಗೂ ಪ್ರತ್ಯೇಕ ಕಾಲೇಜುಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡಿಬಿಡಿ. ನಮ್ಮ ಹೆಣ್ಣುಮಕ್ಕಳು ನಿಶ್ಚಿಂತೆಯಿಂದ ಹೂ, ಬಳೆ, ಕುಂಕುಮ ಹಾಕಿ ಕಾಲೇಜಿಗೆ ಹೋಗುವಂತಾಗಲಿ. ಅದು ಬಿಟ್ಟು ಕೇವಲ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಮಾತ್ರ ಈ ರೀತಿ ಮಾಡಿದರೆ ಬೊಮ್ಮಾಯಿ ಸರಕಾರ ಮಸೀದಿಗಳ ಮೆಟ್ಟಲಲ್ಲಿ ಶಾಶ್ವತವಾಗಿ ಮಲಗುವ ಕಾಲ ಬರಲಿದೆ!

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Hanumantha Kamath January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search