• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!

Hanumantha Kamath Posted On February 2, 2023


  • Share On Facebook
  • Tweet It

ಪ್ರವೀಣ್ ನೆಟ್ಟಾರು ಹತ್ಯೆಗೆ ಕಾರಣವೇ ಇರಲಿಲ್ಲ. ಅವರನ್ನು ಕೊಂದದ್ದು ಕೇವಲ ಮಸೂದ್ ಎನ್ನುವ ವ್ಯಕ್ತಿಯ ಸಾವಿಗೆ ಪ್ರತೀಕಾರವಾಗಿ. ಅಷ್ಟಕ್ಕೂ ಮಸೂದ್ ಸತ್ತದ್ದು ಒಂದು ಗಲಾಟೆಯ ಕಾರಣಕ್ಕೆ. ಯಾವಾಗ ಮಸೂದ್ ಸತ್ತನೋ ಮತಾಂಧರು ಯಾರಾದರೂ ಹಿಂದೂಗಳು ಸಿಗುತ್ತಾರಾ ಎಂದು ಕಾದು ಕುಳಿತು ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿದ್ದರು. ಪ್ರವೀಣ್ ಯಾವುದೇ ಗಲಾಟೆಯಲ್ಲಿ ಇರದೇ ತಮ್ಮ ಪಾಡಿಗೆ ತಾವು ಪಕ್ಷವನ್ನು ಕಟ್ಟಿ ಬೆಳೆಸುತ್ತಿದ್ದ ಯುವಕ. ಯಾಕೆ ಪ್ರವೀಣ್ ಕೊಲೆ ಮಾಡಿದ್ರಿ ಎಂದು ಹಂತಕ ಆರೋಪಿಗಳನ್ನು ಕೇಳಿದ್ರೆ ಅವರ ಬಳಿ ಇರುವ ಉತ್ತರ ಪ್ರತೀಕಾರ ಬೇಕಿತ್ತು. ಹಾಗಾದರೆ ಮಸೂದ್ ಸತ್ತ ಎಂದು ನೀವು ಪ್ರವೀಣ್ ನೆಟ್ಟಾರು ಅವರನ್ನು ಕೊಲ್ಲುತ್ತೀರಿ ಎಂದರೆ ಹಿಂದೂಗಳಲ್ಲಿ ಕೂಡ ಪೌರುಷ ಇದೆ ಎಂದು ಎಲ್ಲರಿಗೂ ಗೊತ್ತಾಗಬೇಕಲ್ಲವೇ? ಅದನ್ನೇ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪವೆಲ್ ಹೇಳಿರುವುದು. ಅವರು ಹಾಗೆ ಹೇಳಿದ ಕೂಡಲೇ ಎಲ್ಲಾ ಮೂಲಭೂತವಾದಿ ಮುಸ್ಲಿಮರಿಗೆ ಉರಿ ಶುರುವಾಗಿದೆ. ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಯಾಗಿ ಫಾಜಿಲ್ ಹತ್ಯೆ ಮಾಡಿದ್ದೇವೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅದರ ಅರ್ಥ ಶರಣ್ ಪಂಪ್ವೆಲ್ ಅವರು ಹೇಳಿ, ಪ್ಲಾನ್ ಮಾಡಿ ಆರೋಪಿಗಳನ್ನು ಕೊಲ್ಲಲು ಕಳುಹಿಸಿದ್ದು ಎಂದು ಅರ್ಥ ಅಲ್ಲ. ಆದರೆ ಒಬ್ಬ ಹಿಂದೂವನ್ನು ನೀವು ಕೊಂದರೆ ನಮ್ಮ ಯುವಕರು ನಿಮ್ಮ ಇಬ್ಬರನ್ನು ಕೊಲ್ಲಬಹುದು ಅಥವಾ ಕೊಲ್ಲುವ ಸಾಮರ್ತ್ಯ ಇದೆ ಎಂದು ಹೇಳಿದ್ದಾರೆ. ಅಂದರೆ ಹಿಂದೂ ಸಮಾಜವನ್ನು ನೀವು ಕೆಣಕಿ ದಕ್ಕಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಎನ್ನುವ ಸಂದೇಶ ಹೋಗಿದೆ.

ಫಾಜಿಲ್ ಯಾವುದೇ ಮತಾಂಧರ ಸಂಘಟನೆಯಲ್ಲಿ ಇರಲಿಲ್ಲ ಎನ್ನುವ ಕಾರಣಕ್ಕೆ ಆತನ ಹತ್ಯೆಯ ಬಗ್ಗೆ ಎಲ್ಲರಿಗೂ ವಿಷಾದವಿದೆ. ಅದೇ ವಿಷಯ ಪ್ರವೀಣ್ ನೆಟ್ಟಾರು ಅವರಿಗೂ ಅನ್ವಯವಾಗುತ್ತದೆ. ಪ್ರವೀಣ್ ಭಾರತೀಯ ಜನತಾ ಪಾರ್ಟಿಯ ಯುವಮೋರ್ಚಾದ ಪದಾಧಿಕಾರಿಯಾಗಿದ್ದರು. ಅವರನ್ನು ಕೊಂದು ಓಡಿ ಹೋಗಿ ಈಗ ಸೌದಿ ಅರೇಬಿಯಾದಲ್ಲಿ ಅಡಗಿದ್ದಾರಲ್ಲ, ಅವರಿಗೆ ತಮ್ಮ ಹಿಂದೆ ಮತಾಂಧ ಭಾರತ ವಿರೋಧಿಗಳು ಇದ್ದಾರೆಂಬ ಧೈರ್ಯ ಇರಬಹುದು. ಅದೇ ರೀತಿಯಲ್ಲಿ ಹಿಂದೂಗಳ ಹಿಂದೆ ಕೂಡ ವಿಎಚ್ ಪಿ ಇದೆ ಎಂದು ಶರಣ್ ಪರೋಕ್ಷವಾಗಿ ಹೇಳಿದ್ದಾರೆ. ಈ ಹೇಳಿಕೆಗಳಿಂದ ಶರಣ್ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿರಬಹುದು. ಆದರೆ ಇವರ ಹೇಳಿಕೆಯಿಂದ ಹಿಂದೂ ಸಮಾಜದಲ್ಲಿ ಒಂದು ಜಾಗೃತಿ ಮೂಡುತ್ತದೆ. ಅದೇ ರೀತಿಯಲ್ಲಿ ವಿರೋಧಿ ಪಾಳಯದಲ್ಲಿ ಒಂದು ಸಣ್ಣನೆಯ ಆತಂಕ ಹರಿದಾಡಬಹುದು. ನಾವು ಅವರ ಯುವಕರಿಗೆ ಕೈ ಹಾಕಿದರೆ ಅವರು ನಮ್ಮ ಯುವಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗೊತ್ತಾಗುತ್ತೆ. ಆಗ ಮತಾಂಧರು ಸುಮ್ಮನೆ ಬಾಲ ಮುದುಡಿ ಕುಳಿತುಕೊಳ್ಳುತ್ತಾರೆ. ಹತ್ಯೆಗಳನ್ನು ಮಾಡಲು ಮುಂದೆ ಹೆಜ್ಜೆ ಹಾಕಲ್ಲ. ಅವರು ಕೊಲ್ಲಲು ಮುಂದಾಗದಿದ್ದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಅದು ಶರಣ್ ಹೇಳಿಕೆಯಿಂದ ಆಗುತ್ತದೆ. ಯಾವತ್ತೂ ಹಿಂದೂ ಸಮಾಜ ತಾನೇ ಮುಂದೇ ಹೋಗಿ ಮುಸ್ಲಿಂ ಪುಂಡರನ್ನು ಮುಗಿಸಲು ಹೋಗುವುದಿಲ್ಲ. ಅದು ಹಿಂದೂ ಧರ್ಮದಲ್ಲಿಯೇ ಇಲ್ಲ. ಹಾಗಂತ ಹಿಂದೂ ಧರ್ಮದ ತಂಟೆಗೆ ಬಂದರೆ ನಾವು ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಾ ಬಂದಿದ್ದೇವೆ. ಅದನ್ನು ಶರಣ್ ಪುನರುಚ್ಚರಿಸಿದ್ದಾರೆ.

ಇನ್ನು 2047 ರಲ್ಲಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲಾಗುತ್ತದೆ ಎನ್ನುವುದನ್ನು ವಿಎಚ್ ಪಿ ಹೇಳಿರುವುದರ ಹಿಂದೆ ಉದಾಹರಣೆಗಳಿವೆ. ಇದು ಹಿಂದೂ ಮುಖಂಡರ ಕಿಸೆಯಿಂದ ಬಂದ ಹೇಳಿಕೆ ಅಲ್ಲ. ಉತ್ತರ ಭಾರತದಲ್ಲಿ ಮೋದಿ ಸಮಾವೇಶದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಮಾಡಲು ಸಂಚು ರೂಪಿಸುತ್ತಿದ್ದವರನ್ನು ಅಲ್ಲಿನ ಪೊಲೀಸರು ಬಂಧಿಸಿದರಲ್ಲ, ಆವತ್ತು ಅಂತವರೇ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಪ್ಲಾನ್ ನಡೆಯುತ್ತಿದೆ ಎಂದು ಹೇಳಿದ್ದರು. ಇನ್ನು ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಏರುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಭಾರತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರು. ಸ್ವಾತಂತ್ರ್ಯ ಪೂರ್ವದಲ್ಲಿ ಮೂರ್ನಾಕು ಶೇಕಡಾ ಇದ್ದ ಅವರ ಜನಸಂಖ್ಯೆ ಈಗ ಹದಿನಾರು ಶೇಕಡಾಕ್ಕೆ ತಲುಪಿದೆ. ಅದೇ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಸಂಖ್ಯೆ ಒಂದೆರಡು ಶೇಕಡಾ ಉಳಿದರೂ ಅದು ಹೆಚ್ಚು ಎನ್ನುವಂತಾಗಿದೆ. ಇದರಿಂದ ಅಸಹಿಷ್ಣುತಾವಾದಿಗಳು ಯಾರೆಂದು ಎಲ್ಲರಿಗೂ ಗೊತ್ತಾಗಿದೆ

ಒಟ್ಟಿನಲ್ಲಿ ಉಳ್ಳಾಲ ಮತ್ತು ತುಮಕೂರಿನಲ್ಲಿ ನಡೆದ ಶೌರ್ಯ ಸಮಾವೇಶದಲ್ಲಿ ಶರಣ್ ಹೇಳಿರುವ ಮಾತುಗಳು ಒಂದು ಎಚ್ಚರಿಕೆ. ನೀವು ಆರಂಭಿಸಿದರೆ ನಾವು ಮುಗಿಸುತ್ತೇವೆ ಎನ್ನುವುದು. ಇದನ್ನು ಅರ್ಥ ಮಾಡಿ ಬಾಲ ಮುದುಡಿ ಕುಳಿತುಕೊಂಡರೆ ಮತಾಂಧರು ಸೇಫ್. ಈ ಭಾರತ ಅವರಿಗೆ ಎಲ್ಲವನ್ನು ಕೊಟ್ಟಿದೆ. ಎಚ್ಚರಿಕೆ ಕೊಡುವಂತಹ ಸನ್ನಿವೇಶಕ್ಕೂ ಅವರೇ ಕಾರಣರು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search