ಹಿಂದೂ ರಾಷ್ಟ್ರ ಸಮ್ಮೇಳನ ಮಾಡುವುದು ಗ್ಯಾರಂಟಿ ರಿಯಾಜ್!!
ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಂಸ್ಥೆಯವರು ಶಾಂತಿಯುತವಾಗಿ ತಮ್ಮದೇ ರೀತಿಯಲ್ಲಿ ಹಿಂದೂ ರಾಷ್ಟ್ರದ ಪರಿಕಲ್ಪನೆ ಇಟ್ಟು ಆಗಾಗ ಸಮ್ಮೇಳನ ಅಥವಾ ಸಭೆಗಳನ್ನು ಮಾಡುತ್ತಾ ಇರುತ್ತಾರೆ. ಅದೊಂದು ರೀತಿಯ ಸಾತ್ವಿಕ ನೆಲೆಯಲ್ಲಿ ನಡೆಯುವಂತಹ ಕಾರ್ಯಕ್ರಮ. ಈಗ ಈ ರಿಯಾಜ್ ಫರಂಗಿಪೇಟೆ ಎನ್ನುವ ವ್ಯಕ್ತಿ ಅದಕ್ಕೆ ವಿರೋಧವನ್ನು ವ್ಯಕ್ತಿಪಡಿಸುತ್ತಾ ಇದ್ದಾರೆ. ಅದು ಸಂವಿಧಾನ ಬಾಹಿರ, ಹಿಂದೂ ರಾಷ್ಟ್ರದ ಕಾರ್ಯಕ್ರಮ ಮಾಡಲು ಅವಕಾಶ ನೀಡಬಾರದು ಎಂದು ಹೇಳಿಕೆ ಕೊಟ್ಟಿದ್ದಾರೆ. ಹಾಗಂತ ರಿಯಾಜ್ ಫರಂಗಿಪೇಟೆ ಪಾಕಿಸ್ತಾನದವನಲ್ಲ, ಫರಂಗಿಪೇಟೆ ಎಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೆ. ಇದೇ ಮಣ್ಣಿನಲ್ಲಿ ನಿಂತು ಈತ ಹೀಗೆ ಹೇಳಿಕೆ ನೀಡುತ್ತಾರೆ ಎಂದರೆ ನಿಮಗೂ ಒಮ್ಮೆ ನಾವು ಭಾರತದಲ್ಲಿ ಇದ್ದೆವೋ ಅಥವಾ ಪಾಕಿಸ್ತಾನದಲ್ಲಿ ಇದ್ದೇವೋ ಎಂದು ಸಂಶಯ ಬರುತ್ತಾ ಇದ್ದೇವೆ. ನಾವು ಭಾರತದಲ್ಲಿಯೇ ಇದ್ದೇವೆ ಎನ್ನುವುದು ನಿಜ, ಯಾರಿಗೂ ಸಂಶಯ ಬೇಡಾ. ಆದರೆ ಭಾರತದಲ್ಲಿಯೇ ನಿಂತು ಇಂತಹ ಹೇಳಿಕೆ ಕೊಡಲು ಈ ದೇಶದ ಸಂವಿಧಾನ, ಕಾನೂನು ಮತ್ತು ಪ್ರಜಾಪ್ರಭುತ್ವ ರಿಯಾಜ್ ಅಂತವರಿಗೆ ಸ್ವಾತಂತ್ರ್ಯ ಕೊಟ್ಟಿದ್ದೆಯಲ್ಲ, ಅದೇ ನಮ್ಮ ದುರಾದೃಷ್ಟ. ನಮ್ಮಲ್ಲಿ ಇಂತವರು ಹೀಗೆ ಆಡುತ್ತಿದ್ದಾರೆ ಎಂದರೆ ನೀವು ಯೋಚಿಸಿ, ಪಾಕಿಸ್ತಾನದಲ್ಲಿ ಬೆರಳೆಣಿಕೆಯಷ್ಟು ಇರುವ ಹಿಂದೂಗಳ ಪರಿಸ್ಥಿತಿ ಹೇಗಿರಬಹುದು ಎನ್ನುವ ಸಣ್ಣ ಐಡಿಯಾ ನಿಮಗೆ ಬರುತ್ತದೆ.
ಅಖಂಡ ಭರತಖಂಡವನ್ನು ಹಿಂದೂಸ್ತಾನ್ ಮತ್ತು ಪಾಕಿಸ್ತಾನ್ ಎಂದು ತುಂಡರಿಸಿದ್ದು ಯಾಕೆ ರಿಯಾಜ್? ನಿಮ್ಮ ಪೂರ್ವಜರಾಗಿರುವ ಆಲಿ ಜಿನ್ನಾ ಆವತ್ತು ನಮಗೆ ಒಂದು ಪ್ರತ್ಯೇಕ ರಾಷ್ಟ್ರ ಕೊಡಿ ಎಂದು ಹಟಕ್ಕೆ ಬಿದ್ದದ್ದು ನಿಮ್ಮದೇ ಸಂಬಂಧಿಗಳಿಗಾಗಿ ಹೊರತು ಬೇರೆ ಯಾರಿಗೆ ರಿಯಾಜ್. ಆವತ್ತು ನಿಮ್ಮಂತವರನ್ನು ನಾವು ಇಲ್ಲಿ ಇರಲು ಬಿಟ್ಟಿರುವುದರಿಂದ ಆವತ್ತು ಬೆರಳೆಣಿಕೆಯಷ್ಟು ಇದ್ದ ನಿಮ್ಮ ಸಂಖ್ಯೆ ಈಗ ಎಲ್ಲಿಗೆ ಬಂದು ತಲುಪಿದೆ? ನಮಗೆ ನೀವು ಎಚ್ಚರಿಕೆ ಕೊಡುವ ಲೆವೆಲ್ಲಿಗೆ ಬಂದಿದ್ದೀರಿ. ಇದಕ್ಕೆ ನಿಮ್ಮನ್ನು ದೂಷಿಸಿ ಪ್ರಯೋಜನವಿಲ್ಲ. ನಿಮ್ಮನ್ನು ವೋಟ್ ಬ್ಯಾಂಕ್ ಮಾಡಿ ನಿಮ್ಮ ಮಂಡಿಗೆ ತುಪ್ಪ ಹಚ್ಚಿ ನೆಕ್ಕಿ ಎಂದು ಉಪಯೋಗಿಸಿಕೊಂಡಿದ್ದರಲ್ಲ, ನಮ್ಮ ಕೆಲವು ರಾಜಕೀಯ ಪಕ್ಷಗಳು, ಅವರಿಂದಲೇ ನೀವು ಇವತ್ತು ಇಡೀ ಹಿಂದೂ ಸಮಾಜಕ್ಕೆ ಎಚ್ಚರಿಕೆ ಕೊಡುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದೀರಿ. ಒಂದು ಕಡೆ ಭಾರತದಲ್ಲಿ ಹುಟ್ಟಿ, ಬೆಳೆದು, ಇಲ್ಲಿನ ಸೌಲಭ್ಯಗಳನ್ನು ಒಂದೂ ಬಿಡದೆ ನುಂಗಿ, ನೀರು ಕುಡಿದು ಐಷಾರಾಮಿ ಜೀವನ ನಡೆಸುತ್ತಿರುವ ನಿಮ್ಮಂತವರಿಗೆ ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದೇ ಪುಣ್ಯ. ಸುಮ್ಮನೆ ಬಾಲ ಮುದುಡಿ ಇರಬೇಕು ಎಂದು ಆವತ್ತೇ ಕಾನೂನು ಮಾಡಿದ್ದರೆ ನಿಮಗೆ ನಿಮ್ಮ ಮಟ್ಟ ಗೊತ್ತಾಗುತ್ತಿತ್ತು. ಜಿನ್ನಾ ಧರ್ಮದ ಆಧಾರದ ಮೇಲೆ ಆವತ್ತು ಭಾರತವನ್ನು ತುಂಡು ಮಾಡಿದರು. ಇವತ್ತು ನೀವು ಅದೇ ಧರ್ಮ ಹಿಡಿದುಕೊಂಡು ನಮ್ಮ ದೇಶದ ಅಸ್ಮಿತೆಗೆ ಸವಾಲು ಹಾಕುತ್ತಿದ್ದೀರಿ.
ಇನ್ನು ನೀವು ಈ ದೇಶದ ಕಾನೂನು ಸುವ್ಯವಸ್ಥೆಗೆ ಕಂಟಕನಾಗಲು ಹೊರಟವರು. ತಾಂಟೆರೆ ಬಾ ತಾಂಟೆ ಎನ್ನುವ ಮೂಲಕ ಈ ದೇಶದ ನಾಗರಿಕರ ಶಾಂತಿ, ಸಮಾಧಾನಕ್ಕೆ ಕೊಳ್ಳಿ ಇಡಲು ತಯಾರಾದವರು. ನಿಮ್ಮನ್ನು ಇನ್ನು ಕೂಡ ಹೊರಗೆ ಬಿಟ್ಟಿರುವುದೇ ನಮ್ಮ ಕರ್ಮ. ಇನ್ನು ನಿಮ್ಮ ಪಕ್ಷ, ಸಂಘಟನೆ ಪೊಲೀಸ್ ಠಾಣೆಯ ಮೇಲೆ ಕಲ್ಲು ಎಸೆಯುತ್ತಾ, ಪೆಟ್ರೋಲ್ ಬಾಂಬ್ ಬಿಸಾಡುತ್ತಾ, ಆಯುಧವನ್ನು ಹಿಡಿದು ದೊಂಬಿ, ಗಲಾಟೆ ಮಾಡುತ್ತಾ ಇರುವವರು. ಅಂತವರಿಗೆ ಈಗ ಕೇಂದ್ರ ಸರಕಾರ ಈಗ ಒಮ್ಮೆ ಬಿಸಿ ಮುಟ್ಟಿಸಿದೆ. ಆದರೆ ನಿಮಗೆ ಬುದ್ಧಿ ಬಂದಿಲ್ಲ. ಆದರೂ ನೀವು ಹಾರಾಡುತ್ತಿದ್ದೀರಿ. ಈ ದೇಶ ನೂರು ಕೋಟಿ ಹಿಂದೂಗಳಿಗೆ ಸೇರಿದ್ದು. ಮುಸ್ಲಿಮರು ಶಾಂತಿ, ಸಾಮರಸ್ಯದಿಂದ ನಮ್ಮೊಂದಿಗೆ ಇರುವ ಮೂಲಕ ಈ ದೇಶದ ಏಕತೆಗೆ ಸಹಕಾರ ನೀಡಬಹುದು. ಅದೇ ಎಲ್ಲಿಯಾದರೂ ಅಧಿಕ ಪ್ರಸಂಗ ಮಾಡುತ್ತಾ ಹೋದರೆ ನಿಮಗೆ ಸೂಕ್ತ ದಾರಿ ತೋರಿಸಲು ನಮ್ಮ ಕಾನೂನು ಸಧೃಡವಾಗಿದೆ. ಪಿಎಫ್ ಐ ನಿಷೇಧದಿಂದ ಅದನ್ನು ಈಗಾಗಲೇ ತೋರಿಸಲಾಗಿದೆ. ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕೆನ್ನುವುದು ಪ್ರತಿಯೊಬ್ಬ ಹಿಂದೂವಿನ ಕನಸು. ಅದಕ್ಕಾಗಿ ಆತ ಮೌನವಾಗಿ ಪ್ರಾರ್ಥಿಸುತ್ತಿರುತ್ತಾನೆ. ಎಲ್ಲಿಯೂ ಗಲಾಟೆ, ದೊಂಬಿ ಮಾಡದೇ ಶಾಂತಿಯಿಂದ ದೇವರಲ್ಲಿ ಗೋಗರೆಯುತ್ತಿದ್ದಾನೆ. ಆದರೆ ನಿಮ್ಮವರು 2047 ರೊಳಗೆ ಇದನ್ನು ಮುಸ್ಲಿಂ ರಾಷ್ಟ್ರ ಮಾಡಲು ಟೊಂಕ ಕಟ್ಟಿ ನಿಂತಿದ್ದಾರೆ. ಮೊದಲು ಅವರಿಗೆ ಬುದ್ಧಿ ಹೇಳಿ. ಹಿಂದೂಗಳು ಶಾಂತಿಯಿಂದ ನಡೆದುಕೊಂಡು ಈ ದೇಶಕ್ಕಾಗಿ ಚಿಂತಿಸಿದ, ಶ್ರಮಿಸಿದ ಕಾರಣದಿಂದ ನಾವು ಸೈಕಲಿನಿಂದ ನಾಸಕ್ಕೆ ತಲುಪಿದ್ದೇವೆ. ನಿಮ್ಮ ಪಾಕಿಸ್ತಾನದವರು ಸೈಕಲಿನಲ್ಲಿಯೇ ಇದ್ದೀರಿ. ನೆನಪಿರಲಿ. ಒಂದು ವೇಳೆ ನಾವು ಕೂಡ ಐಸಿಸ್ ಅಥವಾ ತಾಲಿಬಾನ್ ನಂತೆಯೇ ಯೋಚಿಸಿದ್ದರೆ 21 ನೇ ಶತಮಾನದಲ್ಲಿ ನಮಗೆ ಊಟಕ್ಕೂ ವಿದೇಶದವರು ಸಾಲ ಕೊಡಬೇಕಾದ ಪರಿಸ್ಥಿತಿ ಬರುತ್ತಿತ್ತು. ಇವತ್ತು ನಾವು ವಿಶ್ವಕ್ಕೆ ಲಸಿಕೆ ಕಳುಹಿಸಿಕೊಟ್ಟಿದ್ದೇವೆ.
ಹಿಂದೂ ರಾಷ್ಟ್ರದ ಗುರಿ ಇದ್ದೇ ಇರುತ್ತದೆ. ಅದಕ್ಕಾಗಿ ನೂರು ಸಮ್ಮೇಳನವನ್ನು ಮಾಡುತ್ತೇವೆ. ತಾಕತ್ತಿದ್ದರೆ ತಡೆಯಿರಿ!
Leave A Reply