• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?

Hanumantha Kamath Posted On March 27, 2023


  • Share On Facebook
  • Tweet It

ಜನರಿಗೆ ಹದಿನೈದು ದಿನಗಳ ಕಾಲಾವಕಾಶ ಕೊಟ್ಟು ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿ. ಅದಕ್ಕಾಗಿ ಒಂದು ಸಾವಿರ ರೂಪಾಯಿ ಖರ್ಚು ಮಾಡಿ ಎಂದು ಸರಕಾರ ಹೇಳಿದಿದ್ದರೆ ನಾನು ಕೂಡ ಇದನ್ನು ವಿರೋಧಿಸುತ್ತಿದ್ದೆ. ಆದರೆ ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಕೇಂದ್ರ ಸರಕಾರ ಕೊಟ್ಟ ಅವಧಿ ಬರೊಬ್ಬರಿ ಆರು ವರ್ಷ. ಈ ಆರು ವರ್ಷಗಳ ಅವಧಿಯಲ್ಲಿ ದೇಶದ ಅಸಂಖ್ಯಾತ ನಾಗರಿಕರು ತಮ್ಮ ಕರ್ತವ್ಯ ಮುಗಿಸಿದ್ದಾರೆ. ಯಾಕೆ ಈ ನಿರ್ಧಾರವನ್ನು ಸರಕಾರ ಕೈಗೊಂಡಿದೆ ಎನ್ನುವುದು ಪ್ರಜ್ಞಾವಂತರಿಗೆ ಗೊತ್ತಿದೆ. ಹಿಂದೆ ಆಧಾರ್ ಜೊತೆ ರೇಶನ್ ಕಾರ್ಡ್ ಕೂಡ ಲಿಂಕ್ ಮಾಡುವ ಘೋಷಣೆಯಾಗಿತ್ತು. ಅದರ ನಂತರ ಎಷ್ಟೋ ಬೇನಾಮಿ ರೇಶನ್ ಕಾರ್ಡ್ ಗಳು ಕೂಡ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದವು. ಅದರಿಂದ ಪುಗಸಟ್ಟೆಯಾಗಿ ಯಾರದ್ದೋ ತಿಜೋರಿ ಸೇರುತ್ತಿದ್ದ ಕೋಟ್ಯಾಂತರ ರೂಪಾಯಿ ಸರಕಾರಗಳಿಗೆ ಉಳಿದಿತ್ತು. ಯಾವುದೋ ಒಂದು ಘೋಷಣೆಯ ಹಿಂದೆ ಒಂದು ಉತ್ತಮ ಉದ್ದೇಶವಿರುತ್ತದೆ ಎಂದು ಗೊತ್ತಿಲ್ಲದವರು ಮಾತ್ರ ಈಗ ಕಿರುಚುತ್ತಿದ್ದಾರೆ. ನಮ್ಮ ಒಂದು ಸಾವಿರ ರೂಪಾಯಿ ತಿಂದು ಸರಕಾರ ಬದುಕುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ನಮ್ಮಲ್ಲಿ ಆರು ವರ್ಷ ಸಮಯ ಕೊಟ್ಟು ನಂತರವೂ ಮಲಗಿದಂತೆ ನಟಿಸುವವರು ಎಚ್ಚರವಾಗಲಿ ಎನ್ನುವ ಕಾರಣಕ್ಕೆ ದಂಡದ ಅಸ್ತ್ರ ಪ್ರಯೋಗ ಮಾಡಿದರೆ ಈಗ ಕೂಗುವವರ ಸಂಖ್ಯೆಗೆನೂ ಕಡಿಮೆ ಇಲ್ಲ. ಅದರ ಬದಲು ಇದೇ ಜನ ಈ ಹಿಂದೆನೆ ಯಾರು ಮಾಡಿಸಲಿಲ್ಲ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವಾದರೂ ಮಾಡಬಹುದಿತ್ತಲ್ಲ. ಇಲ್ಲ, ಆಗ ಮಾಡಿಲ್ಲ. ಅಷ್ಟಕ್ಕೂ ಆಧಾರ್ ಮತ್ತು ಪಾನ್ ಯಾಕೆ ಲಿಂಕ್ ಮಾಡಬೇಕು?

ಪಾನ್ ಕಾರ್ಡ್ ನಂಬ್ರ ಮತ್ತು ಆದಾಯ ತೆರಿಗೆ ಇಲಾಖೆ ಒಂದು ರೀತಿಯಲ್ಲಿ ಅವಳಿ ಮಕ್ಕಳಿದ್ದಂತೆ. ನಮ್ಮ ಆರ್ಥಿಕ ವ್ಯವಹಾರಗಳ ಅಷ್ಟೂ ಸೂತ್ರಗಳನ್ನು ಒಂದು ಪಾನ್ ನಂಬ್ರ ಬಂಧಿಸಿಟ್ಟಿರುತ್ತದೆ. ನೀವು ಎಷ್ಟು ಆದಾಯ ಹೊಂದಿದ್ದೀರಿ. ಎಷ್ಟು ಬ್ಯಾಂಕಿನಲ್ಲಿ ಕೂಡಿಟ್ಟಿದ್ದೀರಿ. ಎಷ್ಟು ಟರ್ನ್ ಒವರ್ ಮಾಡಿದ್ದೀರಿ ಎನ್ನುವುದು ಈ ಪಾನ್ ಮೂಲಕ ಗೊತ್ತಾಗುತ್ತೆ. ಹಿಂದೆ ಹೆಚ್ಚಾಗಿ ಕ್ಯಾಶ್ ಮೂಲಕ ವ್ಯವಹಾರಗಳು ನಡೆಯುವಾಗ ಅದೆಲ್ಲ ಆದಾಯ ತೆರಿಗೆ ಇಲಾಖೆಯ ಕಣ್ತಪ್ಪಿಸಿ ಮಾಡಬಹುದಿತ್ತು. ಸರಕಾರಗಳಿಗೆ ಮೂರು ನಾಮ ಎಳೆದು ಶ್ರೀಮಂತರಾದವರು ಈ ದೇಶದಲ್ಲಿ ಕಡಿಮೆ ಏನಿಲ್ಲ. ಯಾವುದೇ ದೇಶದ ಆರ್ಥಿಕ ಆರೋಗ್ಯ ಚೆನ್ನಾಗಿರಬೇಕೆಂದರೆ ತೆರಿಗೆ ದಂಡಿಯಾಗಿ ಒಳಬರುತ್ತಿರಬೇಕು. ಇನ್ ಕಮಿಂಗ್ ಕಡಿಮೆ ಇದ್ದರೆ ಹೇಗೆ ತಾನೆ ದೇಶ ಅಭಿವೃದ್ಧಿಯಾಗಲು ಸಾಧ್ಯ. ಎಲ್ಲಾ ಅಭಿವೃದ್ಧಿ ಕೆಲಸಗಳು, ಸರಕಾರಿ ಖರ್ಚುವೆಚ್ಚ, ಸಂಬಳ, ಭತ್ಯೆ ಸಹಿತ ಒಂದು ದೇಶಕ್ಕೂ ಇಂತಿಷ್ಟೇ ನಿಗದಿಯಾಗಿರುವ ಖರ್ಚುಗಳಿರುತ್ತವೆ. ಆ ಖರ್ಚನ್ನು ಅವರು ನಮ್ಮ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳಿಂದ ತುಂಬಿಸಿಕೊಳ್ಳುತ್ತಾರೆ. ಹಾಗಾದರೆ ತೆರಿಗೆ ಬರುವುದು ಹೇಗೆ? ಒಂದು ದೇಶದಲ್ಲಿ ಎಷ್ಟು ಆರ್ಥಿಕ ವ್ಯವಹಾರಗಳು ನಡೆಯುತ್ತವೆಯೋ ಅಷ್ಟು ಮೊತ್ತದಲ್ಲಿ ಒಂದು ಚಿಕ್ಕ ಪಾಲು ಸರಕಾರಕ್ಕೆ ಹೋಗುತ್ತೆ. ಆದರೆ ಆರ್ಥಿಕ ವ್ಯವಹಾರಗಳ ಅಂದಾಜು ತಿಳಿಯುವ ಮಾನದಂಡ ಯಾವುದು? ಇದೇ ಪಾನ್ ನಂಬ್ರ.

ಕೆಲವು ವ್ಯಾಪಾರಿಗಳು, ಉದ್ದಿಮೆದಾರರು ಏನು ಮಾಡಿದ್ದರು ಎಂದರೆ ಒಂದಕ್ಕಿಂತ ಹೆಚ್ಚು ಪಾನ್ ನಂಬ್ರ ಹೊಂದಿದ್ದರು. ಅದರಿಂದ ಅವರ ನೈಜ ಒಳಹರಿವು ಕಂಡುಹಿಡಿಯುವುದು ಕಷ್ಟಸಾಧ್ಯವೆನಿಸುತ್ತಿತ್ತು. ಇದರಿಂದ ಸರಕಾರದ ಬೊಕ್ಕಸಕ್ಕೆ ಬರಬೇಕಿದ್ದ ಪಾಲು ಬರುತ್ತಿರಲಿಲ್ಲ. ಆದರೆ ಆಧಾರ್ ಕಾರ್ಡ್ ಬಂದ ಬಳಿಕ ಕೇಂದ್ರ ಸರಕಾರ ತನ್ನ ಹೊಸ ರಣನೀತಿಯನ್ನು ಪ್ರದರ್ಶಿಸಿತು. ಅದೇ ಪಾನ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡುವುದು. ಯಾರೂ ಕೂಡ ತಮ್ಮ ಬಳಿ ಎರಡ್ಮೂರು ಪಾನ್ ನಂಬ್ರ ಇದ್ದರೆ ಎಲ್ಲವನ್ನು ಜೋಡಿಸಲು ಆಗುವುದಿಲ್ಲ. ಯಾಕೆಂದರೆ ಆ ಅವಕಾಶ ಇಲ್ಲ. ಇದರಿಂದ ಅವರ ನೈಜ ಪಾನ್ ನಂಬ್ರ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಯಾರು ತಮ್ಮ ಇತರ ಪಾನ್ ನಂಬ್ರದಿಂದ ಬೇನಾಮಿ ವ್ಯವಹಾರ ಮಾಡುತ್ತಿದ್ದರೋ ಅವರದ್ದೆಲ್ಲ ನರನಾಡಿಗಳು ಕಟ್ ಮಾಡಿದಂತೆ ಆಗುತ್ತಿವೆ. ಅಂತವರೇ ಆರು ವರ್ಷಗಳಿಂದ ಲಿಂಕ್ ಮಾಡದೇ ಇದ್ದಷ್ಟು ದಿನ ಮಜಾ ಮಾಡೋಣ ಎಂದುಕೊಂಡಿದ್ದರು.
29 ಜೂನ್ 2017 ರಲ್ಲಿ ಮೊದಲ ಬಾರಿ ಲಿಂಕ್ ಮಾಡುವ ಆದೇಶ ಹೊರಗೆ ಬಿದ್ದಿತ್ತು. ಅಲ್ಲಿಂದ ಇಲ್ಲಿಯವರೆಗೆ ಅದು ವಿಸ್ತರಣೆಯಾಗುತ್ತಾ ಬಂದಿದೆ. ಕಳೆದ ವರ್ಷ ಜೂನ್ ನಿಂದ ಸರಕಾರ ಮತ್ತೆ ಮತ್ತೆ ಎಚ್ಚರಿಕೆ ನೀಡುತ್ತಾ ಬರುತ್ತಿತ್ತು.

ಇನ್ನು ಕೂಡ ಯಾರಿಗೂ ಅದು ಬಿದ್ದು ಹೋಗಿಲ್ಲ ಎಂದರೆ ಅದರ ಅರ್ಥ ಏನೆಂದರೆ ಅವರು ಬೇನಾಮಿ ಪಾನ್ ಹೊಂದಿದವರಿಗೆ ಸಹಾಯ ಮಾಡುತ್ತಿದ್ದಾರೆ ಅಥವಾ ಅವರೇ ಬೇನಾಮಿ ವ್ಯವಹಾರ ಹೊಂದಿದ್ದಾರೆ. ಎರಡರಲ್ಲಿ ಯಾವುದು ಸತ್ಯ ಅವರೇ ಹೇಳಬೇಕು. ಇನ್ನು ಆರು ವರ್ಷಗಳಲ್ಲಿ ಒಂದು ದಿನವೂ ಪುರುಸೊತ್ತು ಇರಲಿಲ್ಲ ಎಂದು ಹೇಳುವುದು ಕೂಡ ಹಾಸ್ಯಾಸ್ಪದವಾಗಿರುತ್ತದೆ. ತಂತ್ರಜ್ಞಾನ ಗೊತ್ತಿದ್ದವರು ಮನೆಯಲ್ಲಿಯೇ ಕುಳಿತು ಮೊಬೈಲಿನಲ್ಲಿ ಲಿಂಕ್ ಮಾಡಬಹುದಾಗಿದೆ. ಗೊತ್ತಿಲ್ಲದವರು ಸಮೀಪದ ಸೈಬರ್ ಸೆಂಟರ್ ಗೆ ಹೋಗಬಹುದಿತ್ತು. ಹತ್ತಿರದಲ್ಲಿ ಸೈಬರ್ ಸೆಂಟರ್ ಇಲ್ಲದೇ ಇದ್ದರೆ, ನೀವೆ ಅದನ್ನು ಹುಡುಕಿಕೊಂಡು ಹೋಗಬೇಕಾಗಿ ಕೂಡ ಇಲ್ಲ. ಹತ್ತಿರದ ಪೇಟೆಗೆ ಹೋಗುವವರಿಗೆ ಕೊಟ್ಟರೂ ಸಾಕಿತ್ತು. ಆಯ್ಕೆಗಳು ಅನೇಕ ಇತ್ತು. ಮನಸ್ಸಿದ್ದವರು ಮಾಡಿದ್ದಾರೆ. ಮಾಡದೇ ಇದ್ದವರು ಮಾಡಿಸುತ್ತಿದ್ದಾರೆ. ಕೆಲವರು ವಿರೋಧಕ್ಕೆ ವಿರೋಧ ಮಾಡಬೇಕು ಎಂದು ನಿಶ್ಚಯಿಸಿಕೊಂಡಿದ್ದಾರೆ. ಅದಕ್ಕಾಗಿ ವಿರೋಧಿಸುತ್ತಿದ್ದಾರೆ. ವಿಷಯ ಇಷ್ಟೇ!!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search