ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
ಕೇರಳದ ಕೆಲವು ಸ್ಥಳಗಳಿಂದ ಹೆಣ್ಣುಮಕ್ಕಳು ಅಚಾನಕ್ ಆಗಿ ಕಣ್ಮರೆಯಾಗುತ್ತಿದ್ದರು. ಅವರು ಎಲ್ಲಿಗೆ ಹೋದರು? ಯಾಕೆ ಹೋದರು? ಹೇಗೆ ಹೋದರು? ಏನಾಗಿ ಹೋದರು ಎನ್ನುವುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಅದರಲ್ಲಿ ಕೆಲವು ಹೆಣ್ಣುಮಕ್ಕಳು ವಾಪಾಸ್ ಬಂದೇ ಇಲ್ಲ. ಕೆಲವರು ಮಾತ್ರ ಹಿಂತಿರುಗಿದ್ದಾರೆ. ಹಾಗೆ ಬಂದವರ ಕಥೆಯೇ ದಿ ಕೇರಳ ಸ್ಟೋರಿ ಎನ್ನುವ ಸಿನೆಮಾ. ಇದು ನೈಜ ಘಟನೆಯನ್ನು ಆಧರಿಸಿ ನಿರ್ಮಾಣವಾಗಿರುವ ಸಿನೆಮಾ. ಮೇ 5 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಇದು ಬಿಡುಗಡೆಯಾಗಬಾರದು ಎಂದು ಅನೇಕ ಮತೀಯ ಸಂಘಟನೆಗಳು ನಿರಂತರ ಪ್ರಯತ್ನಪಟ್ಟವು. ಸುಪ್ರೀಂಕೋರ್ಟಿನ ಮೆಟ್ಟಿಲು ತನಕ ಏರಿದವು. ಈ ಸಿನೆಮಾ ಬಿಡುಗಡೆಯಾಗಬಾರದಾಗಿ ವಾದ ಮಂಡಿಸಿದವು. ಆದರೆ ಸುಪ್ರೀಂಕೋರ್ಟ್ ಅಂತಹ ಅರ್ಜಿಯನ್ನು ತಿರಸ್ಕರಿಸಿದೆ. ಯಾಕೆಂದರೆ ಒಂದು ಸಿನೆಮಾ ಸಾರ್ವಜನಿಕ ವೀಕ್ಷಣೆಗೆ ತಕ್ಕುದಾಗಿದೆ ಎಂದು ಕೇಂದ್ರ ಸೆನ್ಸಾರ್ ಬೋರ್ಡ್ ತೀರ್ಮಾನಿಸಿದ ಮೇಲೆ ಅದಕ್ಕೆ ಯಾವ ಆಧಾರದಲ್ಲಿ ತಡೆ ನೀಡಲು ಸಾಧ್ಯ ಎಂದು ಸುಪ್ರೀಂಕೋರ್ಟ್ ಕೇಳಿದೆ. ನೀವು ಇದನ್ನು ಹೈಕೋರ್ಟಿನಲ್ಲಿ ಪರಿಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಆದರೆ ಹೈಕೋರ್ಟಿನಲ್ಲಿ ಈ ಬಗ್ಗೆ ವಿಚಾರಣೆ ನಡೆಸುವಷ್ಟು ಕಾಲಾವಕಾಶ ಇಲ್ಲ, ಸಿನೆಮಾ ಇನ್ನೇನೂ ಬಿಡುಗಡೆಯಾಗಲಿದೆ ಎಂದು ಕೇರಳ ಸ್ಟೋರಿ ಸಿನೆಮಾ ವಿರೋಧಿಗಳ ಪರ ವಕೀಲರು ವಾದ ಮಂಡಿಸಿದರು. ನಿಮಗೆ ಒಬ್ಬರಿಗೆ ನಾವು ಅನುವು ಮಾಡಿಕೊಟ್ಟರೆ ನಂತರ ಎಲ್ಲರೂ ಎಲ್ಲಾ ವಿಷಯಕ್ಕೂ ಸುಪ್ರೀಂಕೋರ್ಟಿಗೆ ಬರುತ್ತಾರೆ ಎಂದು ಸುಪ್ರೀಂಕೋರ್ಟಿನ ನ್ಯಾಯಾಧೀಶರು ಹೇಳಿದ್ದಾರೆ. ಅಲ್ಲಿಗೆ ಮೂಲಭೂತವಾದಿಗಳಿಗೆ ಹಿನ್ನಡೆಯಾಗಿದೆ.
ಹಾಗಾದರೆ ಕೇರಳ ಸ್ಟೋರಿಯನ್ನು ವಿರೋಧಿಸಲು ಅಷ್ಟು ಕಾರಣಗಳಿವೆಯಾ? ಹೇಗೆ ಕಾಶ್ಮೀರಿ ಫೈಲ್ಸ್ ಒಂದು ತಲೆಮಾರಿನ ಕಥೆಯಾಗಿ ಇತ್ತೋ ಕೇರಳ ಸ್ಟೋರಿ ಇನ್ನೊಂದು ತಲೆಮಾರಿನ ಕಥೆ. ಕಾಶ್ಮೀರಿ ಫೈಲ್ಸ್ ನಲ್ಲಿ ಕಾಶ್ಮೀರಿ ಮತಾಂಧರು ಒಂದು ಕಾಲಘಟ್ಟದಲ್ಲಿ ಹಿಂದೂಗಳ ಮೇಲೆ ನಡೆಸಿದ ಮಾರಣಹೋಮದ ಕಥೆಯನ್ನು ನಾವು ಸಿನೆಮಾವಾಗಿ ನೋಡಿದ್ದೇವೆ. ಅದು ಆ ಕಾಲಕ್ಕೆ ಹಿಂದೂಗಳು ಅನುಭವಿಸಿದ ನೋವು, ನರಳಾಟದ ಚಿತ್ರಣ. ಅದನ್ನು ಹೇಗೆ ಒಂದೀಡಿ ಪ್ರದೇಶದ ಹಿಂದೂಗಳು ಅನುಭವಿಸಿದರು ಎನ್ನುವುದು ನಮಗೆ ಒಂದು ಚರಿತ್ರೆಯ ಭಾಗವಾಗಿ ಅರಿತುಕೊಳ್ಳಲು ಸಾಧ್ಯವಾಯಿತು. ಆದರೆ ಕೇರಳ ಸ್ಟೋರಿ ವರ್ತಮಾನ. ಇದು ಒಂದು ಕಾಲಘಟ್ಟಕ್ಕೆ ಮುಗಿಯುವುದಿಲ್ಲ. ಹಾಗಂತ ಇದಕ್ಕೆ ಅಂತ್ಯವೂ ಅಷ್ಟು ಸುಲಭವಿಲ್ಲ. ಒಬ್ಬಳು ಪ್ರಾಪ್ತ ವಯಸ್ಸಿನ ಹೆಣ್ಣುಮಗಳು ತಾನು ಮುಸ್ಲಿಮ್ ವ್ಯಕ್ತಿಯನ್ನು ಮದುವೆಯಾಗುತ್ತೇನೆ ಎಂದು ಹಟ ಮಾಡಿದರೆ ಅವಳ ಪೋಷಕರು ಏನು ಮಾಡಲು ಸಾಧ್ಯ? ಅಂತಹ ಹೆಣ್ಣಿನ ಕೈ ಕಾಲು ಹಿಡಿದರೂ ಆಕೆ ತಂದೆ, ತಾಯಿಯ ಮಾತನ್ನು ಕೇಳಲು ಒಪ್ಪದ ಎಷ್ಟೋ ಉದಾಹರಣೆಗಳಿವೆ. ಪೊಲೀಸ್ ಠಾಣೆಗಳಲ್ಲಿ, ನ್ಯಾಯಾಲಯದ ಕಟಕಟೆಗಳಲ್ಲಿ ಈ ಪ್ರಕರಣಗಳು ಯಾವುದೇ ತಂದೆ, ತಾಯಿಯ ಪರವಾಗಿ ಆಗಲಿಲ್ಲ. ಯಾಕೆಂದರೆ ಯುವತಿ ಮದುವೆಯ ವಯಸ್ಸಿಗೆ ಬಂದಿರುವುದರಿಂದ ಅವಳ ನಿರ್ಧಾರವನ್ನು ಅವಳೇ ಮಾಡಲು ಸ್ವತಂತ್ರಳಾಗಿರುತ್ತಾಳೆ ಎಂಬುದು ನಮ್ಮ ದೇಶದ ಕಾನೂನು. ಅದನ್ನೇ ಬಳಸಿ ಮೂಲಭೂತವಾದಿಗಳು ಬಲೆ ಹೆಣೆಯುತ್ತಾರೆ. ಕಾಲೇಜುಗಳಲ್ಲಿ ಮತೀಯ ಮುಸ್ಲಿಂ ವಿದ್ಯಾರ್ಥಿನಿಯನ್ನು ಬಳಸಿ ಅವಳ ಸಹಪಾಠಿಗಳ ಮೈಂಡ್ ವಾಶ್ ಮಾಡಿ ಮುಸ್ಲಿಂ ಆಗಲು ಘಟನೆಗಳನ್ನು ಸೃಷ್ಟಿಸುತ್ತಾರೆ. ಹಿಂದೂವಿಗಿಂತ ಮುಸ್ಲಿಂ ಆಗಿರುವುದು ಹೆಚ್ಚು ಸುರಕ್ಷತೆ ಎನ್ನುವ ಭಾವನೆಯನ್ನು ಮೂಡಿಸುತ್ತಾರೆ. ಕೊನೆಗೆ ಆಕೆ ಮುಸ್ಲಿಂ ಆಗುತ್ತಿದ್ದಂತೆ ಅವಳ ಮುಂದಿನ ಜೀವನ ಇವರು ನಿರ್ಧರಿಸುತ್ತಾರೆ. ಇವಳ ತಾಳಕ್ಕೆ ಆಕೆ ಕುಣಿಯುತ್ತಾ ಹೋಗುತ್ತಾಳೆ. ಇದಕ್ಕೆ ಪ್ರತಿಬಾರಿ ಹಿಂದೂ ಯುವತಿಯರೇ ಬಲಿಯಾಗುತ್ತಾರೆ ಎಂದಲ್ಲ.
ಅನೇಕ ಬಾರಿ ಕ್ರೈಸ್ತ ಯುವತಿಯರು ಕೂಡ ಟಾರ್ಗೆಟ್ ಆಗಿದ್ದಾರೆ. ಇದನ್ನು ಸ್ವತ: ಕೇರಳದ ಕ್ರೈಸ್ತ ಧರ್ಮಗುರುಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಕಾಶ್ಮೀರಿ ಫೈಲ್ಸ್ ಸಿನೆಮಾ ಮತಾಂಧರು ಒಂದು ಸೀಮಿತ ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮಾಡಿರುವ ಕರ್ಮಕಾಂಡದ ಚಿತ್ರಣವಾಗಿತ್ತು. ಆದರೆ ಕೇರಳ ಸ್ಟೋರಿ ಅದಕ್ಕಿಂತ ವಿಸ್ತಾರವಾದ ಗುರಿ ಹೊಂದಿದೆ. ಬೇಕಾದರೆ ನೀವೆ ಒಂದು ಕ್ಷಣ ಯೋಚಿಸಿ. ಒಂದು ಯುವತಿ ಇಲ್ಲಿಂದ ತಲೆಮರೆಸಿ ಮೂಲಭೂತವಾದಿಗಳ ಬೇಸ್ ನಲ್ಲಿ ಕುಳಿತು ಭಾರತದ ವಿರುದ್ಧ ಧರ್ಮಯುದ್ಧ ಸಾರಿದರೆ ಅದರಿಂದ ಕೇವಲ ಕೇರಳ ಮಾತ್ರ ಬಲಿಯಾಗುವುದಿಲ್ಲ. ಅವಳನ್ನು ಬಳಸಿ ಭಾರತದ ವಿರುದ್ಧ ಛೂಬಿಡಲಾಗುತ್ತದೆ. ಅವಳು ಐಸಿಸ್ ನಂತಹ ಸಂಘಟನೆಗೆ ಸೇರಿ ಒಂದು ಮತದ ದೇವರನ್ನು ಸಂತೃಪ್ತಿಗೊಳಿಸಲು ಕಾಫೀರರ ವಿರುದ್ಧ ಯುದ್ಧ ಸಾರುವುದು ಎಂದರೆ ಅವಳು ನಮ್ಮ ದೇಶದ ವೈರಿಯಾಗಿ ಮಾರ್ಪಟ್ಟಿದ್ದಾಳೆ ಎಂದೇ ಅರ್ಥ. ಅಂತಹ ಛದ್ಮವೇಷದಲ್ಲಿರುವ ಸುಮಾರು 32000 ಕನ್ಯೆಯರು ಭಾರತದ ಆಂತರಿಕ ಭದ್ರತೆಯನ್ನು ಕದಡಲು ಬಳಕೆಯಾದರೆ ದೇಶದ ಪರಿಸ್ಥಿತಿ ಏನಾಗಬೇಡಾ. ಇದೆಲ್ಲವೂ ಆ ಸಿನೆಮಾ ಹೇಳುತ್ತಿದೆ.ಅದಕ್ಕೆ ಕೇರಳ ಮುಖ್ಯಮಂತ್ರಿಗೆ ಹೆದರಿಕೆ ಯಾಕೆ? ಅವರು ಕೇರಳದ ಮುಖ್ಯಮಂತ್ರಿಯೋ ಅಥವಾ ಐಸಿಸ್ ನಾಯಕನೋ? ಅವರೇ ನಿರ್ಧರಿಸಬೇಕು. ಒಂದು ಸಿನೆಮಾ ಸತ್ಯ ಹೇಳಲು ಹೊರಟಾಗ ಅದನ್ನು ಬ್ಯಾನ್ ಮಾಡಲು ಯೋಚಿಸುವುದು ಎಂದರೆ ಸತ್ಯವನ್ನು ದಮನ ಮಾಡಲು ತಾವೇ ಸೂತ್ರ ಹೆಣೆದಂತೆ. ಪಿಣರಾಯಿ ವಿಜಯನ್ ಅವರಿಗೆ ಸತ್ಯ ತಿಳಿಯುವುದು ಇಷ್ಟವಿಲ್ಲ!
Leave A Reply