ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
ದಿ ಕೇರಳ ಸ್ಟೋರಿ ಸಿನೆಮಾವನ್ನು ಎಲ್ಲಾ ಮುಸ್ಲಿಮರು ತಮ್ಮ ಮತದ ವಿರುದ್ಧವಾಗಿ ಮಾಡಿದ ಸಿನೆಮಾ ಎಂದು ತೆಗೆದುಕೊಳ್ಳಲೇಬಾರದು. ಇಸ್ಲಾಂ ಮತವನ್ನು ಮುಂದಿಟ್ಟು ಪ್ರಪಂಚದಲ್ಲಿ ಅಶಾಂತಿಯನ್ನು ಸೃಷ್ಟಿಸಿ, ತಾವು ಮಾತ್ರ ಶ್ರೇಷ್ಟರು ಉಳಿದವರು ಬದುಕಲು ಯೋಗ್ಯರಲ್ಲ ಎಂದು ಹಟ ಹಿಡಿದುಕೊಂಡು ಕಾರ್ಯಾಚರಣೆಗೆ ಇಳಿದಿರುವ ಪುಂಡರ ಗುಂಪಿನ ಕಥೆ ಎಂದು ಇದನ್ನು ಯಾಕೆ ತಿಳಿದುಕೊಳ್ಳಬಾರದು. ಜಗತ್ತಿನ ಯಾವ ಧರ್ಮ ಅಥವಾ ಮತಗಳು ಕೆಟ್ಟದ್ದನ್ನು ಬೋಧಿಸುವುದಿಲ್ಲ. ಆದರೆ ಆ ಮತದ ಒಳಗಿನ ಮತಾಂಧರು ಕೆಟ್ಟದ್ದನ್ನು ಬೋಧಿಸುತ್ತಾರೆ. ಅದನ್ನು ಕಾರ್ಯರೂಪಕ್ಕೆ ಇಳಿಸುತ್ತಾರೆ. ಅದಕ್ಕಾಗಿ ಹಿಂಸಾಮಾರ್ಗವನ್ನು ಕೈಗೆತ್ತಿಕೊಳ್ಳುತ್ತಾರೆ. ಅದನ್ನು ಕೇರಳ ಸ್ಟೋರಿ ಕಥೆಯಾಗಿ ಹೇಳುತ್ತದೆ.
ಇದು ನೈಜ ಘಟನೆಗಳ ಸುತ್ತ ನಡೆದದ್ದನ್ನೇ ಕಥೆಯಾಗಿ ಹೇಳಲಾಗಿದೆ. ಅಷ್ಟಕ್ಕೆ ಕೆಲವು ಮೂಲಭೂತವಾದಿಗಳು ಹೆದರಿಬಿಟ್ಟಿದ್ದಾರೆ. ಸಿನೆಮಾ ಪ್ರದರ್ಶಿಸದಂತೆ ಸಿನೆಮಾ ಮಂದಿರದ ಮಾಲೀಕರಿಗೆ ದಮ್ಕಿ ಹಾಕುತ್ತಿದ್ದಾರೆ. ಮಲ್ಟಿಫ್ಲೆಕ್ಸ್ ಗಳಲ್ಲಿ ನುಗ್ಗಿ ದಾಂಧಲೆ ಮಾಡಬೇಕಾಗುತ್ತದೆ ಎಂದು ಪ್ರದರ್ಶಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ನ್ಯಾಯಾಲಯದಲ್ಲಿ ದುಬಾರಿ ವಕೀಲರನ್ನು ಇಟ್ಟುಕೊಂಡು ವಾದ ಮಾಡಲಾಗಿದೆ. ಕೇರಳದ ಮುಖ್ಯಮಂತ್ರಿಯನ್ನು ತಮ್ಮ ಇಶಾರೆಯಿಂದ ಡ್ಯಾನ್ಸ್ ಮಾಡಿಸಲು ಆಗುತ್ತದೆ ಎಂದು ಈ ಸಿನೆಮಾ ವಿರೋಧಿಗಳು ಅಂದುಕೊಂಡಿರಬಹುದು. ಆದರೆ ಇಡೀ ದೇಶದಲ್ಲಿ ಇಂತವರ ಸರಕಾರ ಮಾತ್ರ ಇರುವುದು ಅಲ್ಲವಲ್ಲ. ಮಧ್ಯಪ್ರದೇಶ ಸರಕಾರ ಕೇರಳ ಸ್ಟೋರಿ ಸಿನೆಮಾಕ್ಕೆ ನೂರು ಶೇಕಡಾ ತೆರಿಗೆ ವಿನಾಯಿತಿ ಘೋಷಿಸಿದೆ. ಸರಿಯಾಗಿ ನೋಡಿದರೆ ಈ ಸಿನೆಮಾವನ್ನು ವಿರೋಧಿಸಬೇಕಾಗಿದ್ದವರು ಐಸಿಸ್ ಸಂಘಟನೆಯವರು. ಯಾಕೆಂದರೆ ಈ ಸಿನೆಮಾ ಅವರಿಗೆ ತಮ್ಮ ವಿರುದ್ಧವಾಗಿ ಕಾಣಿಸುತ್ತಾ ಇರಬಹುದು. ಆದರೆ ಭಾರತದೊಳಗೆ ಈ ಸಿನೆಮಾಕ್ಕೆ ಇಷ್ಟು ವಿರೋಧವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ ಎಂದಾದರೆ ಐಸಿಸ್ ಕುಟುಂಬದವರು ಭಾರತ ದೇಶದೊಳಗೆ ಇದ್ದಾರೆ ಎಂದು ಅರ್ಥವಲ್ಲವೇ? ಅವರು ಬಿಲದೊಳಗೆ ಕುಳಿತು ಕುಮ್ಮಕ್ಕು ಕೊಟ್ಟು ವಿರೋಧವಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಅನಿಸುವುದಿಲ್ಲವೇ? ಹಾಗಾದರೆ ಇಂತಹ ಘಟನೆಗಳು ನಡೆಯಲೇ ಇಲ್ಲವೇ? ಹಾಗಂತ ಯಾರೂ ಹೇಳಲು ಸಾಧ್ಯವಿಲ್ಲ. ಇನ್ನು ಈ ಸಿನೆಮಾದಲ್ಲಿ ಒಂದು ಧರ್ಮ ಅಥವಾ ಇಸ್ಲಾಂ ಮತಕ್ಕೆ ಅವಹೇಳನ ಮಾಡುವಂತಹ ಸೀನ್ ಅಥವಾ ಡೈಲಾಗ್ ಇದ್ದಿದ್ದರೆ ಸೆನ್ಸಾರ್ ಬೋರ್ಡ್ ನವರೇ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಆದರೆ ಸಿನೆಮಾ ವಯಸ್ಕರು ನೋಡಲು ಯೋಗ್ಯವಾಗಿದೆ ಎಂದು ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡಿದೆ. ಅದನ್ನೇ ಸುಪ್ರೀಂಕೋರ್ಡ್ ಹೇಳಿರುವುದು.
ಈಗ ವಿಷಯ ಇರುವುದು ಕೇರಳದಲ್ಲಿ ಸರಾಸರಿ ಎಷ್ಟು ಹಿಂದೂ ಮತ್ತು ಕ್ರೈಸ್ತ ಹೆಣ್ಣುಮಕ್ಕಳು ಹೀಗೆ ಬ್ರೇನ್ ವಾಶಿಗೆ ಒಳಗಾಗಿ, ಮತಾಂತರವಾಗಿ, ಐಸಿಸ್ ಸಂಘಟನೆಗೆ ಸೇರಿ ಅಲ್ಲಿ ಕ್ರೌರ್ಯಕ್ಕೆ ತುತ್ತಾಗಿ ಮರಭೂಮಿಯಡಿ ಹೂತು ಹೋಗಿದ್ದಾರೆ ಎನ್ನುವ ಸಂಖ್ಯೆಯ ಬಗ್ಗೆ ಗೊಂದಲವಿರುವುದು. ಕೆಲವರು 32 ಸಾವಿರ ಉತ್ರ್ಪೇಕ್ಷೆಯಾಗಿದೆ ಎಂದಿದ್ದಾರೆ. ಕೇರಳದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದಂತಹ ಅಚ್ಯುತಾನಂದ್ ಅವರು ಹತ್ತು ವರ್ಷಗಳ ಹಿಂದೆ ಹೇಳಿರುವ ಅಂಕಿಸಂಖ್ಯೆಯ ಮೇಲೆ ಈಗ ಚರ್ಚೆ ಶುರುವಾಗಿದೆ. ಅವರು ಸರಾಸರಿ ಪ್ರತಿ ವರ್ಷ 2500 ದಿಂದ 3000 ಯುವತಿಯರು ಕೇರಳದಿಂದ ಕಣ್ಮರೆಯಾಗುತ್ತಿದ್ದಾರೆ ಎಂದು ಹೇಳಿರುವ ಸಂಗತಿಯಲ್ಲಿ ಪ್ರತಿ ವರ್ಷ ಎಂದು ಹೇಳಿಲ್ಲ ಎನ್ನುವುದು ಕೆಲವರ ವಾದ ಬಿಟ್ಟರೆ ಈ ಕಥೆಯೇ ಸುಳ್ಳು ಎಂದು ಹೇಳುವ ಸಾಮರ್ತ್ಯ ಯಾರಿಗೂ ಇಲ್ಲ. ಹಿಂದೂ ಸಂಘಟನೆಗಳು ಇಲ್ಲಿಯ ತನಕ ಹೀಗೆ ಲವ್ ಜಿಹಾದ್ ಗೆ ಒಳಗಾಗಿ ಕಣ್ಮರೆಯಾಗಿದ್ದ ಅಂದಾಜು 7000 ಯುವತಿಯರನ್ನು ದುಷ್ಟಜಾಲದಿಂದ ಬಿಡುಗಡೆಗೊಳಿಸಿ ತಂದಿರುವುದು ಪತ್ತೆಯಾಗಿದೆ. ಈಗ ಬೇಕಾದರೆ ಕಾಸರಗೋಡಿನ ಶ್ರುತಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಇದು ತನ್ನ ಮತ್ತು ತನ್ನಂತೆ ಆ ಜಾಲಕ್ಕೆ ಸಿಲುಕಿದ ಹೆಣ್ಣುಗಳ ಕತೆಯೆಂದು ಆಕೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಕೇರಳದ ಎಷ್ಟೋ ಕುಟುಂಬಗಳು ಮಾನ, ಮರ್ಯಾದೆಗೆ ಅಂಜಿ ತಮ್ಮ ಮನೆಯ ಹೆಣ್ಣುಮಗಳು ಓಡಿ ಹೋಗಿರುವುದನ್ನು ಪ್ರಪಂಚಕ್ಕೆ ಬಾಯಿಬಿಡದೇ ಎಲ್ಲಿಯೋ ಕೆಲಸ ಮಾಡುತ್ತಾ ಇದ್ದಾಳೆ ಎಂದು ನಂಬಿಸುತ್ತಾ ಇದ್ದಾರೆ. ಒಳಗೊಳಗೆ ಆ ಕುಟುಂಬಗಳು ಅನುಭವಿಸುವ ನೋವು ಮಾತ್ರ ಅವರಿಗೆ ಮಾತ್ರ ಗೊತ್ತು. ಕಲಿಯಲು ಹೋಗುವ, ಉದ್ಯೋಗಕ್ಕೆ ಸೇರುವ ಹೆಣ್ಣು ಮಕ್ಕಳು ಹೇಗೆ ಈ ಬಲೆ ಆದ್ದರಿಂದ ಈ ಸಿನೆಮಾ ನಮ್ಮ ಕಣ್ಣನ್ನು ತೆರೆಸುತ್ತದೆ. ಜಾಗೃತಿಯನ್ನು ಉಂಟು ಮಾಡುತ್ತಿದೆ. ಈ ಸಿನೆಮಾವನ್ನು ಹರೆಯಕ್ಕೆ ಬಂದ ಪ್ರತಿ ಹೆಣ್ಣುಮಗಳು ಕೂಡ ನೋಡಬೇಕು. ಎಲ್ಲಾ ಪುರುಷರನ್ನು ಅನುಮಾನದ ದೃಷ್ಟಿಯಿಂದ ನೋಡಬೇಕಾಗಿಲ್ಲ. ಆದರೆ ನನ್ನ ಅಬ್ದುಲ್ಲಾ ಅಲಗ್ ಹೇ ಎಂದು ಭ್ರಮಿಸಿ ಪ್ರೇಮಜಾಲದಲ್ಲಿ ಬೀಳುವ ಯುವತಿಯರು ರಾತ್ರಿ ಮಲಗಿ ಬೆಳಿಗ್ಗೆ ಏಳುವಾಗ ದುಂಡಗಿದ್ದ ಚಂದ್ರ ಹೇಗೆ ಅರ್ಧವಾಗಿರುತ್ತಾನೆ ಎಂದು ಗೊತ್ತಿದ್ದರೆ ಸಾಕು!
Leave A Reply