• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!

Hanumanth Kamath Posted On May 31, 2023
0


0
Shares
  • Share On Facebook
  • Tweet It

ಕೇರಳ ಸ್ಟೋರಿ ಸಿನೆಮಾವನ್ನು ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಸರಕಾರ ತಮ್ಮ ರಾಜ್ಯದಲ್ಲಿ ತೋರಿಸಲು ನಿಷೇಧ ಹೇರಿದ್ದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯನ್ನು ಸ್ವೀಕರಿಸಿದ ಮಾನ್ಯ ನ್ಯಾಯಾಲಯ ರಾಜ್ಯದಲ್ಲಿ ಪ್ರದರ್ಶನಕ್ಕೆ ಅನುಮತಿಯನ್ನು ನೀಡಿದೆ. ಆದರೆ ಸಿನೆಮಾದ ಆರಂಭದಲ್ಲಿ ಇದೊಂದು ಕಾಲ್ಪನಿಕ ಸಿನೆಮಾ ಎಂದು ಸ್ಲೈಡ್ ಹಾಕಬೇಕಾಗಿ ಹೇಳಿದೆ. ನ್ಯಾಯಾಲಯದ ಆದೇಶವನ್ನು ಶಿರಸಾವಹಿಸಿ ಪಾಲಿಸುವುದು ನಮ್ಮ ಧರ್ಮ. ಅದಕ್ಕೆ ಎರಡು ಮಾತಿಲ್ಲ. ಅದನ್ನು ಪ್ರದರ್ಶಕರು ನೋಡಿಕೊಳ್ಳುತ್ತಾರೆ. ಆದರೆ ಒಂದಂತೂ ನಿಜ. ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ. ಇದು ಜೀವಂತ ಕಥೆಗಳ ಹೂರಣ. ಈ ಸಿನೆಮಾವನ್ನು ನೋಡಿದವರು ಒಂದು ಡಾಕ್ಯುಮೆಂಟರಿಯನ್ನು ನೋಡಿದ ಹಾಗೆ ಆಯಿತು. ಸಿನೆಮಾಗೆ ಬೇಕಿರುವ ಮಸಾಲೆ ಇದರಲ್ಲಿ ಇಲ್ಲ ಎಂದು ಹೇಳಿದ್ದು ಇದೆ. ಅದು ಈ ಸಿನೆಮಾದ ಮೈನಸ್ ಅಲ್ಲ. ಅದು ಈ ಸಿನೆಮಾಕ್ಕೆ ಸಿಕ್ಕಿರುವ ಪ್ರಶಂಸೆ. ಯಾಕೆಂದರೆ ಇದು ಸಿನೆಮಾ ಎಂದು ನೋಡುವುದಕ್ಕಿಂತ ಅಂಗೈ ಮೇಲಿನ ಹುಣ್ಣಿನಂತೆ ನೋಡುವುದು ಉತ್ತಮ. ಯಾಕೆಂದರೆ ಈ ಸಿನೆಮಾ ಯಾವುದೇ ಮಸಾಲೆ ಇಲ್ಲದೆಯೂ ಕಲೆಕ್ಷನ್ ವಿಷಯದಲ್ಲಿ ಎಲ್ಲಾ ದಾಖಲೆಯನ್ನು ಮುರಿಯುತ್ತದೆ ಎಂದರೆ ಅರ್ಥ ಈ ಸಿನೆಮಾ ಸತ್ಯ ಹೇಳುತ್ತಿದೆ. ಇಲ್ಲಿಯ ತನಕ ಇಂತಹ ಸಿನೆಮಾಗಳನ್ನು ಮಾಡಲು ಯಾರೂ ಧೈರ್ಯ ತೋರುತ್ತಿರಲಿಲ್ಲ. ಯಾಕೆಂದರೆ ದೇಶದ ಚುಕ್ಕಾಣಿ ಹಿಡಿದಿದ್ದವರಿಗೆ ಇಂತಹ ಕಹಿಸತ್ಯವನ್ನು ಅರಗಿಸಿಕೊಳ್ಳುವ ಇಚ್ಚೆ ಮತ್ತು ಜನರಿಗೆ ಜ್ಞಾನೋದಯವಾಗಲಿ ಎನ್ನುವ ಆಶಯ ಇರಲೇ ಇಲ್ಲ. ಆದರೆ ಈಗ ಒಂಭತ್ತು ವರ್ಷಗಳಿಂದ ಇಂತಹ ಪ್ರಯತ್ನಕ್ಕೆ ಸಿನೆಮಾ ನಿರ್ಮಾತೃರು ಮುಂದಾಗಿದ್ದಾರೆ. ಅದರ ಭಾಗವೇ ಕೇರಳ ಸ್ಟೋರಿ.

ಇದು ಕಲ್ಪನೆ ಅಲ್ಲ!

ಈ ಸಿನೆಮಾದ ನಿರ್ಮಾಪಕರು ಮತ್ತು ನಿರ್ದೇಶಕರು ಕೇರಳ ಸ್ಟೋರಿ ಸಿನೆಮಾ ನಿರ್ಮಿಸುವ ಮೊದಲು ಕನಿಷ್ಟ ನೂರು ಜನ ಹೆಣ್ಣುಮಕ್ಕಳ ಜೊತೆ ಮಾತನಾಡಿದ್ದಾರೆ. ಅವರ ಅಭಿಪ್ರಾಯಗಳನ್ನು ಕೇಳಿದ್ದಾರೆ. ಅವರಿಂದ ವಿಷಯಗಳನ್ನು ಸಂಗ್ರಹಿಸಿದ್ದಾರೆ. ಅವರ ಅನುಭವಗಳನ್ನು ದಾಖಲೆ ರೂಪಕ್ಕೆ ಇಳಿಸಿದ್ದಾರೆ. ಅದರ ನಂತರವೇ ಇದು ಸಿನೆಮಾ ರೂಪದಲ್ಲಿ ಸಿದ್ಧವಾಗಿರುವುದು. ಇವರು ಮಾತನಾಡಿಸಿದ ಅಷ್ಟೂ ಹೆಣ್ಣುಮಕ್ಕಳು ಕೂಡ ಸಿರಿಯಾಗೆ ಹೋಗಿಬಂದವರಲ್ಲದೇ ಇರಬಹುದು. ಎಲ್ಲರೂ ಐಸಿಸ್ ಸಂಘಟನೆಯಲ್ಲಿ ಕರಾಳತೆಯನ್ನು ಕಣ್ಣಾರೆ ಕಾಣದೇ ಇರಬಹುದು. ಆದರೆ ಪ್ರತಿಯೊಬ್ಬರು ಆ ಜಾಲದ ಬಲೆಯೊಳಗೆ ಸಿಲುಕಿ ಹೊರಗೆ ಬಂದಿದ್ದಾರೆ. ಕೆಲವರು ಬೇಗ ಎಚ್ಚೆತ್ತುಕೊಂಡಿದ್ದಾರೆ. ಕೆಲವರು ಸಾವಿನ ದವಡೆಯ ತನಕ ಹೋಗಿ ಬಂದಿದ್ದಾರೆ. ಕೆಲವರು ಸಾವಿನ ಕುಣಿಕೆಯನ್ನು ನೋಡಿದ್ದಾರೆ. ಕೆಲವರು ಕತ್ತಿಯ ಹಲಗಿಗೆ ತಲೆಕೊಟ್ಟು ಮರಳಿನ ಅಡಿಯಲ್ಲಿಯೇ ಹೆಣವಾಗಿದ್ದಾರೆ. ಹೀಗೆ ಬೇರೆ ಬೇರೆ ರೂಪದಲ್ಲಿ ಕೇರಳದ ಹೆಣ್ಣುಮಕ್ಕಳು ಅನುಭವಿಸಿದ ಕಥೆಗಳು ಕಲ್ಪನೆಗೆ ನಿಲುಕದ್ದು. ಅದನ್ನು ಕಾಲ್ಪನಿಕ ಎಂದು ಹೇಳಲು ಸಾಧ್ಯವಿಲ್ಲ. ಅದು ಕೆಲವರ ಕಲ್ಪನೆಗೆ ಅತೀತವಾಗಿರಬಹುದು ಬಿಟ್ಟರೆ ಬೇರೆ ಏನೂ ಇಲ್ಲ.

ಸಿನೆಮಾ ಕೊನೆಯಲ್ಲಿ ಪೋಷಕರ ನೈಜ ನುಡಿಗಳು

ಕೇರಳ ಸ್ಟೋರಿ ಸಿನೆಮಾದ ಕೊನೆಯಲ್ಲಿ ನೊಂದ ಪೋಷಕರ ಮಾತುಗಳು ಇವೆ. ಸಿನೆಮಾ ನೋಡಿ ಹೊರಗೆ ಬಂದ ವೈದ್ಯೆಯೊಬ್ಬರು ತಾವು ಅನುಭವಿಸಿದ ಕಷ್ಟಗಳನ್ನು ಮಾಧ್ಯಮದ ಮುಂದೆ ಹೇಳಿದ್ದನ್ನು ಪ್ರಪಂಚ ನೋಡಿತು. ಆದರೂ ಇದನ್ನು ಸುಳ್ಳು, ವೈಭವಿಕರಣ ಎಂದು ಹೇಳುವವರು ಇದ್ದಾರೆ. ಕೇರಳದಲ್ಲಿ ಎಷ್ಟು ಪೊಲೀಸ್ ಠಾಣೆಗಳಲ್ಲಿ ಇಂತಹ ಪ್ರಕರಣ ದಾಖಲಾಗಿದೆ ಎಂದು ಕೆಲವರು ಪ್ರಶ್ನೆ ಎತ್ತುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಸದನದಲ್ಲಿ ಲವ್ ಜಿಹಾದ್ ಪ್ರಕರಣಗಳು ದಾಖಲಾಗಿಲ್ಲ ಎಂದು ಹೇಳಿಲ್ವಾ ಎಂದು ಕೇಳುತ್ತಾರೆ. ವಿಷಯ ಏನೆಂದರೆ ಕೇರಳ ಆಗಲಿ, ದೇಶದ ಯಾವುದೇ ರಾಜ್ಯವಾಗಲಿ ಇಂತಹ ವಿಷಯಗಳಲ್ಲಿ ಇನ್ನು ಕೂಡ ನಮ್ಮ ಸಮಾಜ ಮಡಿವಂತಿಕೆಯನ್ನು ಉಳಿಸಿಕೊಂಡು ಬಂದಿದೆ. ಯಾವ ತಾಯಿ, ತಂದೆ ಕೂಡ ತಮ್ಮ ಮಗಳು ಓಡಿ ಹೋಗಿದ್ದಾಳೆ ಎಂದು ಡಂಗುರ ಸಾರಲು ಹೋಗುವುದಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ಕೊಡುವುದು ಬಿಡಿ, ಒಂದು ವೇಳೆ ಪಕ್ಕದ ಮನೆಯವರಿಗೆ ಗೊತ್ತಾದರೆ ಏನು ಮಾಡುವುದು ಎನ್ನುವ ಟೆನ್ಷನ್ ನಲ್ಲಿ ಅವರಿರುತ್ತಾರೆ. ಹೀಗಿರುವಾಗ ಪ್ರಕರಣ ದಾಖಲಾಗುವುದು ಎಲ್ಲಿಂದ ಬಂತು? ಇನ್ನು ಪ್ರಕರಣ ದಾಖಲಾಗದೇ ಹೋದರೆ ಎಲ್ಲಿಂದ ಸಾಕ್ಷ್ಯ ಕೊಡುವುದು? ಹೀಗೆ ಮೇಲ್ನೋಟಕ್ಕೆ ನಿಮಗೆ ಲವ್ ಜಿಹಾದ್ ಕಾಣುವುದಿಲ್ಲ ಎನ್ನುವುದು ನಿಜವಾದರೂ ಅಂಡರ್ ಕರೆಂಟ್ ಆಗಿ ಇದು ಇಲ್ಲ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಹಾಗಂತ ಸಿನೆಮಾದ ತಿರುಳು ಇವತ್ತು ನಿನ್ನೆಯ ತಕ್ಷಣದ ಘಟನೆಯಿಂದ ಪ್ರೇರೆಪಿತರಾದ ಸಬ್ಜೆಕ್ಟಿನಿಂದ ಮಾಡಿದ ಸಿನೆಮಾ ಅಲ್ಲ. ಈ ಸಿನೆಮಾದ ಕಥೆಗೆ ದಶಕಗಳ ಇತಿಹಾಸ ಇದೆ. ಮೊದಲಿಗೆ ಅದೇ ಸಮುದಾಯದ ಯುವತಿ ತನ್ನ ಹಿಂದೂ, ಕ್ರೈಸ್ತ ಸಹಪಾಠಿಗಳನ್ನು ಕರೆದುಕೊಂಡು ಕ್ಯಾಂಟೀನೋ ಅಥವಾ ಸಮೀಪದ ರೆಸ್ಟೋರೆಂಟಿಗೆ ಹೋಗುವುದು, ಅಲ್ಲಿ ಕೂಲ್ ಡ್ರಿಂಕ್ಸ್, ಪಪ್ಸ್ ನಲ್ಲಿ ಸಣ್ಣ ಡ್ರಗ್ಸ್ ಲೇಪಿತ ವಸ್ತು ಇಟ್ಟು ತಿನ್ನುವಂತೆ ನೋಡುವುದು, ನಂತರ ಅದು ಚಟವಾಗಿ ಆ ಹೊತ್ತಿಗೆ ಅದು ಬೇಕು ಎಂದು ಆಗುವುದು, ಅದರ ಬಳಿಕ ಆಕೆಯನ್ನು ಲೈಂಗಿಕವಾಗಿ ಬಳಸಿ ವಿಡಿಯೋ ಮಾಡುವುದು, ಅದನ್ನಿಟ್ಟು ಆಡುವುದು, ಅವಳಿಗೆ ಸಮಸ್ಯೆ ಆದಾಗ ನಿನ್ನ 33000 ಕೋಟಿ ದೇವರು ಸಹಾಯಕ್ಕೆ ಬಂದ್ರಾ ಎಂದು ಹೇಳುವುದು ನಡೆಯುತ್ತಾ ಬಂದಿದೆ. ಅದನ್ನು ಸಿನೆಮಾದಲ್ಲಿ ತೋರಿಸಲಾಗಿದೆ. ನಿಮ್ಮ ನೆರೆಮನೆಯವರನ್ನು ಆಯ್ಕೆ ಮಾಡುವ ಅವಕಾಶ ನಿಮಗೆ ಸಿಗದಿರಬಹುದು. ಆದರೆ ಸ್ನೇಹಿತರನ್ನು ಆಯ್ಕೆ ಮಾಡುವ ಅವಕಾಶ ಇದ್ದೇ ಇರುತ್ತದೆ. ಇಲ್ಲದಿದ್ದರೆ ಒಮ್ಮೆ ಕೇರಳ ಸ್ಟೋರಿ ನೋಡಿ!!

0
Shares
  • Share On Facebook
  • Tweet It




Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
Hanumanth Kamath July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
Hanumanth Kamath July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search