• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಆಗ ಸೇವಾದಳ ಇತ್ತು!

Hanumantha Kamath Posted On June 14, 2023


  • Share On Facebook
  • Tweet It

ಮಕ್ಕಳು ಚಿಕ್ಕಂದಿನಲ್ಲಿ ಶಾಲೆಗಳಲ್ಲಿ ಯಾವುದು ಕಲಿಯಬೇಕು ಮತ್ತು ಯಾವುದು ಕಲಿತರೆ ಅದು ಅವರ ಭವ್ಯ ಭವಿಷ್ಯಕ್ಕೆ ಅದು ಉತ್ತಮ ಅಡಿಪಾಯವಾಗುತ್ತದೆ ಎನ್ನುವುದು ಪ್ರಮುಖವಾದ ವಿಚಾರವಾಗಿತ್ತು. ಯಾಕೆಂದರೆ ಮಕ್ಕಳ ಮನಸ್ಸಿನಲ್ಲಿ ಆರಂಭದಲ್ಲಿ ಹೇಳಿದ್ದು ಗಟ್ಟಿಯಾಗಿ ಕುಳಿತುಕೊಳ್ಳುತ್ತದೆ ಎನ್ನುವುದು ವಾಸ್ತವ. ಆ ಸಮಯದಲ್ಲಿ ಅವರಿಗೆ “ಸತ್ಯ”ದ ಪ್ಯಾಕೇಟಿನಲ್ಲಿ ಸುಳ್ಳನ್ನು ಕಟ್ಟಿಕೊಟ್ಟರೂ ಗೊತ್ತೇ ಆಗುವುದಿಲ್ಲ. ಹಾಗಂತ ಚಿಕ್ಕಂದಿನಲ್ಲಿ ಅಕ್ಬರ್ ದಿ ಗ್ರೇಟ್, ಔರಾಂಗಜೇಬ್ ದೊಡ್ಡ ಚಕ್ರವರ್ತಿ ಎಂದು ಮಕ್ಕಳು ಓದುತ್ತಾ ಬೆಳೆದರೆ ಅವರು ಅದನ್ನೇ ನಂಬಿ ತಮ್ಮ ಜೀವನವನ್ನು ರೂಪಿಸುತ್ತಾರೆ ಎಂದು ಇಂದಿನ ಕಾಲದಲ್ಲಿ ಹೇಳಲು ಆಗುವುದಿಲ್ಲ. ಈಗಿನ ಆಧುನಿಕ ತಂತ್ರಜ್ಞಾನ ಮತ್ತು ಎಲ್ಲಾ ಕಡೆಯಿಂದ ಸಿಗುತ್ತಿರುವ ಜ್ಞಾನದ ಹರಿವಿನಿಂದ ಮಕ್ಕಳಿಗೆ ಯಾವುದು ಸತ್ಯ ಮತ್ತು ಯಾವುದು ಮಿಥ್ಯ ಎಂದು ತಕ್ಷಣ ಗೊತ್ತಾಗುತ್ತದೆ. ಆದರೆ ಭಾರತದಲ್ಲಿ ಸ್ವಾತಂತ್ರ್ಯ ಸಿಕ್ಕ ಸಮಯದಿಂದ ಹಿಡಿದು ಬಹುತೇಕ ಅವಧಿಯ ತನಕ ಶಿಕ್ಷಣ ಸಚಿವರಾಗಿ ಇದ್ದವರು ಕಾಂಗ್ರೆಸ್ ಮತ್ತು ಎಡಪಂಥಿಯ ಮನಸ್ಸಿನವರು ಮತ್ತು ಒಂದು ಮತಕ್ಕೆ ಸೀಮಿತವಾಗಿದ್ದವರಾದ ಕಾರಣ ಮಕ್ಕಳಿಗೂ ಷಹಜಹಾನ್ ಮತ್ತು ಟಿಪ್ಪುನಂತವರ ಕಥೆಗಳೇ ಮುಖ್ಯವಾಗಿ ಬೋಧಿಸಲಾಗುತ್ತಿತ್ತು. ಅವರು ಯಾವತ್ತೂ ರಾಣಾ ಪ್ರತಾಪ್ ಅಥವಾ ಶಿವಾಜಿಯ ಪರಾಕ್ರಮವನ್ನು ನಮಗೆ ತಿಳಿಸುವ ಗೋಜಿಗೆ ಹೋಗಲಿಲ್ಲ. ಬೇರೆ ಪಕ್ಷಗಳ ಸರಕಾರಗಳು ಕೂಡ ಅಲ್ಪಾವಧಿಗೆ ಬಂದ ಕಾರಣ ಸ್ವಾತಂತ್ರ್ಯದ ನಂತರ ಎರಡ್ಮೂರು ತಲೆಮಾರುಗಳು ಕಲಿತದ್ದು ಅದೇ ಮೊಗಲ್ ರಾಜರ ಪಳೆಯುಳಿಕೆಗಳನ್ನು ವಿನ: ಎಲ್ಲಿಯೂ ನಲಂದಾ ವಿಶ್ವವಿದ್ಯಾನಿಲಯದ ಚರಿತ್ರೆ ಮಕ್ಕಳಿಗೆ ತಿಳಿಸುವ ಪ್ರಯತ್ನ ನಡೆಯಲೇ ಇಲ್ಲ.

ಮತ್ತೆ ಕಾಂಗ್ರೆಸ್, ಮತ್ತೆ ಪಠ್ಯಪುಸ್ತಕ ಪರಿಷ್ಕರಣೆ!

ಕಳೆದ ಬಾರಿ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿಯ ಸರಕಾರ ಬಂದ ನಂತರ ಬಹಳ ವರ್ಷಗಳಿಂದ ಏನೂ ಆಗದೇ ಹಾಗೇ ಉಳಿದಿದ್ದ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಮಾಡುವ ಕೆಲಸಕ್ಕೆ ಕೈ ಹಾಕಿತಾದರೂ ಅಲ್ಲಿ ಉದ್ಭವಿಸಿದ ಗೋಜಲುಗಳನ್ನು ಬಿಡಿಸುವಷ್ಟರಲ್ಲಿ ಬಿಜೆಪಿ ಸರಕಾರಕ್ಕೆ ಸಾಕು ಸಾಕಾಗಿತ್ತು. ಯಾಕೆಂದರೆ ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತವನ್ನು ಮಾತ್ರ ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕೆಂಬ ಹಟ ಮತ್ತು ಬಲಪಂಥಿಯ ವಿಚಾರಧಾರೆಗಳು ಎಂದರೆ ಅದು ಕಪೋಲಕಲ್ಪಿತ ಕಥೆಗಳು ಎಂದು ಎಲ್ಲಾ ಕಡೆ ವಿಚಾರ ಬಿತ್ತುವಲ್ಲಿ ತನ್ನ ಪೂರ್ಣ ಶಕ್ತಿಯನ್ನು ವಿನಿಯೋಗಿಸಿಬಿಟ್ಟಿತ್ತು. ಆದರೂ ಹೆಗಡೇವಾರ್, ಚಕ್ರವರ್ತಿ ಸೂಲಿಬೆಲೆಯವರ ರಚನೆಗಳು ಶಾಲಾ ಪಠ್ಯಕ್ರಮದೊಳಗೆ ಸೇರಿಸಲಾಗಿತ್ತು. ಆದರೆ ಈಗ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಬಂದಿರುವುದರಿಂದ ಹಿಂದಿನ ಪಠ್ಯಗಳಲ್ಲಿ ಕೇಸರಿ ಪಠ್ಯಗಳು ಎಂದು ಅವರು ಅಂದುಕೊಂಡಿರುವ ವಿಷಯಗಳನ್ನು ಕಿತ್ತು ಬಿಸಾಡುವ ನಿರ್ಧಾರಕ್ಕೆ ಬರಲಾಗಿದೆ. ಅದರ ಸುಳಿವನ್ನು ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್ ಅವರಂತವರು ಕೊಟ್ಟಿದ್ದಾರೆ. ಯಾರಿಗೆ ಸುಭಾಷ್ ಚಂದ್ರ ಬೋಸ ಅವರಿಗಿಂತ ನೆಹರೂ ಶ್ರೇಷ್ಟರೋ, ಯಾರಿಗೆ ರಾಜಗುರು, ಭಗತ್ ಸಿಂಗ್ ಗಿಂತ ಮುಸ್ಲಿಂ ಅರಸರು ಗ್ರೇಟ್ ಆಗಿರುತ್ತಾರೋ ಅಂತವರಿಂದ ಇನ್ನೇನೂ ನಿರೀಕ್ಷೆ ಮಾಡಲು ಸಾಧ್ಯ.

ಆಗ ಸೇವಾದಳ ಇತ್ತು!

ಭಾರತಕ್ಕೆ ಸ್ವಾತಂತ್ರ್ಯ ಕೇವಲ ಗಾಂಧಿ, ನೆಹರೂ ಅವರಿಂದ ಮಾತ್ರ ಬಂದಿದೆ ಎಂದು ಕಾಂಗ್ರೆಸ್ಸಿನವರು ಎಷ್ಟೇ ಮಕ್ಕಳಿಗೆ ಹೇಳುವ ಪ್ರಯತ್ನ ಮಾಡಿದರೂ ಮಕ್ಕಳು ಕೂಡ ಅದನ್ನು ಪರೀಕ್ಷೆಗೆ ಮಾತ್ರ ಮಾರ್ಕ್ ಹೆಚ್ಚು ಬರಲು ಕಲಿಯುತ್ತಾರೆ ವಿನ: ಅದನ್ನೇ ಇಡೀ ಜೀವಮಾನವೀಡಿ ಬದುಕಿನಲ್ಲಿ ಅಳವಡಿಸಿಕೊಂಡು ಬೆಳೆಯಲ್ಲ. ಮೂರು ದಶಕಗಳ ಹಿಂದೆ ಶಾಲೆಗಳಲ್ಲಿ ಸೇವಾದಳ ಎನ್ನುವ ಒಂದು ಕ್ಲಾಸ್ ಕೂಡ ಇತ್ತು. ಅಲ್ಲಿ ನೆಹರೂ ಮತ್ತು ಅವರ ಮನಸ್ಥಿತಿಯ ಕೆಲವು ನಾಯಕರ ಬಗ್ಗೆ ಮಾತ್ರ ಹೇಳಲಾಗುವ ಕೆಲಸ ಮಾಡಲಾಗುತ್ತಿತ್ತು. ಅಷ್ಟಕ್ಕೂ ಸೇವಾದಳ ಏನು? ಅದು ಕಾಂಗ್ರೆಸ್ಸಿನ ಒಂದು ಅಂಗ ಸಂಸ್ಥೆ. ಆಗ ಅದನ್ನು ವಿರೋಧಿಸುವ, ಆ ಬಗ್ಗೆ ಪ್ರತಿಭಟಿಸುವ ಕೆಲಸ ನಡೆದಿರಲಿಲ್ಲವೇನೋ. ಯಾಕೆಂದರೆ ಆಗ ಬಹುತೇಕ ಎಲ್ಲಾ ಕಡೆ ಇದ್ದದ್ದೇ ಕಾಂಗ್ರೆಸ್ ಪಕ್ಷ ಮತ್ತು ಅದರ ಸರಕಾರ. ಆದರೆ ನೀವು ಊಹಿಸಿ ನೋಡಿ. ಕಳೆದ ಬಾರಿ ಬಿಜೆಪಿಯ ಸರಕಾರ ಬಂದಿತ್ತಲ್ಲ, ಆಗ ಶಾಲೆಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗಳನ್ನು ಮಾಡುತ್ತೇವೆ ಎಂದು ಘೋಷಿಸಿದ್ದರೆ ಗೊತ್ತಾಗುತ್ತಿತ್ತು. ಕಾಂಗ್ರೆಸ್ ನಿಂದ ವಿಪರೀತ ಎನಿಸುವಷ್ಟು ವಿರೋಧಗಳು ಕಂಡು ಬರುತ್ತಿದ್ದವು. ಅಷ್ಟೇ ಯಾಕೆ, ಕೆಲವು ಅದೇ ಮಾನಸಿಕತೆಯ ಹೆತ್ತವರು ಕೂಡ ಶಾಲೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದರು. ಕ್ರೈಸ್ತ ಸಮುದಾಯದ ಶಾಲೆಗಳಂತೂ ಅದನ್ನು ಬಿಲ್ ಕುಲ್ ಅನುಷ್ಟಾನಕ್ಕೆ ತರಲು ಸಾಧ್ಯವಿಲ್ಲ ಎಂದು ಹಟಕ್ಕೆ ಕುಳಿತುಕೊಂಡುಬಿಡುತ್ತಿದ್ದವು. ಈ ಎಲ್ಲದರ ನಡುವೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ಮರುಕಳಿಸಿದೆ. ಮಕ್ಕಳು ಹಳೆಪಠ್ಯದೊಂದಿಗೆ ಹೊಸ ಸರಕಾರದ ಸೂಚನೆಗಳನ್ನು ಅನುಸರಿಸಿ ಹಿಂದಿನ ಸರಕಾರ ಅಳವಡಿಸಿದ ಪಾಠಗಳನ್ನು ಓದದೇ ಮುಂದುವರೆಯಲಿದ್ದಾರೆ. ಯಾಕೋ, ಮಕ್ಕಳನ್ನು ನೋಡುವಾಗ ಪಾಪ ಎಂದೆನಿಸುತ್ತದೆ!

  • Share On Facebook
  • Tweet It


- Advertisement -


Trending Now
ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
Hanumantha Kamath September 26, 2023
ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
Hanumantha Kamath September 26, 2023
Leave A Reply

  • Recent Posts

    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
  • Popular Posts

    • 1
      ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
    • 2
      ಕಾಂಗ್ರೆಸ್ಸಿಗೆ ಇ.0.ಡಿ.ಯಾ ಮೈತ್ರಿಕೂಟದ ಒಳಗೆನೆ ಸ್ಪರ್ಧೆ!
    • 3
      ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • 4
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search