• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಇದರಲ್ಲಿಯೂ ರಾಜಕೀಯವೇ?

Hanumantha Kamath Posted On June 24, 2023
0


0
Shares
  • Share On Facebook
  • Tweet It

ಒಂದೇ ಮಾತಿನಲ್ಲಿ ಹೇಳುವುದಾದರೆ ಯು.ಟಿ.ಖಾದರ್ ಆಯೋಜಿಸಿರುವ ತರಬೇತಿ ಕಾರ್ಯಕ್ರಮ ಶ್ಲಾಘನೀಯವಾಗಿರುವಂತದ್ದು. ಮೊದಲ ಬಾರಿ ಗೆದ್ದಿರುವ ಶಾಸಕರುಗಳಿಗೆ ಬ್ರೇನ್ ಸೇಶನ್ ಅತೀ ಅಗತ್ಯ. ಇದೇನೂ ಮೊದಲ ಬಾರಿ ಗೆದ್ದಿರುವ ಕೇವಲ ಕಾಂಗ್ರೆಸ್ ಶಾಸಕರುಗಳಿಗೆ ಮಾತ್ರವಲ್ಲ, ಭಾರತೀಯ ಜನತಾ ಪಾರ್ಟಿಯಿಂದ ಮೊದಲ ಬಾರಿ ವಿಧಾನಸಭೆಗೆ ಪಾದಾರ್ಪಣೆ ಮಾಡುತ್ತಿರುವ ಶಾಸಕರುಗಳಿಗೂ ಈ ತರಬೇತಿ ಶಿಬಿರದಲ್ಲಿ ಭಾಗವಹಿಸಲು ಆಹ್ವಾನ ಇದೆ. ಶಿಬಿರದಲ್ಲಿ ವಿವಿಧ ಗೋಷ್ಟಿಗಳು ನಡೆಯಲಿವೆ. ಅದರಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸರ್ವಧರ್ಮದ ಆಧ್ಯಾತ್ಮಿಕ, ಧಾರ್ಮಿಕ ಮುಖಂಡರನ್ನು ಖಾದರ್ ಕರೆಸುತ್ತಿದ್ದಾರೆ. ಅದರಲ್ಲಿ ರವಿಶಂಕರ್ ಗುರೂಜಿ ಹಾಗೂ ಡಾ. ವಿರೇಂದ್ರ ಹೆಗ್ಗಡೆಯವರನ್ನು ಕರೆಸಿರುವುದಕ್ಕೆ ಎಡಪಂಥಿಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರ ವಿರೋಧ ಸಾಮಾಜಿಕ ಜಾಲತಾಣದಲ್ಲಿ ಖಾದರ್ ಅವರನ್ನು ಟೀಕಿಸಿ ಬರೆಯಲಾಗುತ್ತಿದೆ. ಅಷ್ಟಕ್ಕೂ ಖಾದರ್ ಅವರು ಭಜರಂಗದಳ ಅಥವಾ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಪದಾಧಿಕಾರಿಗಳನ್ನು ಕರೆಸಿ ಭಾಷಣ ಮಾಡಿಸುತ್ತಿದ್ದರೆ ಆಗ ಎಡಪಂಥಿಯರ ಸೆರಗಿನಲ್ಲಿ ಅವಿತಿರುವವರು ವಿರೋಧಿಸುತ್ತಿದ್ದರೆ ಅವರ ವಾದ ಸಮಂಜಸ ಎನಿಸುತ್ತಿತ್ತು. ಆದರೆ ರವಿಶಂಕರ್ ಗುರೂಜಿ ಯಾವುದೇ ಧಾರ್ಮಿಕ ಸಂಘಟನೆಯ ಮುಖಂಡರಲ್ಲ. ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಪ್ರವಚನ ಕೇಳಲು ಜನ ಮುಗಿಬೀಳುತ್ತಾರೆ. ಅವರ ಮಾತುಗಳು ಮನಸ್ಸನ್ನು ಹಗುರ ಮಾಡುತ್ತದೆ. ಅವರು ಖಾದರ್ ಅವರ ಮನವಿಗೆ ಓಗೊಟ್ಟು ಸಮಯ ಹೊಂದಿಸಿ ಬರುವುದು ಹೊಸ ಶಾಸಕರ ಪುಣ್ಯ. ಇನ್ನು ಡಾ. ವಿರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರು. ಅವರು ಕೇಂದ್ರದ ಬಿಜೆಪಿ ಸರಕಾರದಿಂದ ಆಯ್ಕೆಯಾಗಿದ್ದರೂ ಅವರು ಪಕ್ಷ, ಜಾತಿ, ಧರ್ಮ ಮೀರಿದವರು. ಧರ್ಮಸ್ಥಳ ಪ್ರಪಂಚದಲ್ಲಿರುವ ಆಸ್ತಿಕರ ನಂಬಿಕೆಯ ಕ್ಷೇತ್ರ. ಅಲ್ಲಿನ ಧರ್ಮಾಧಿಕಾರಿಯವರನ್ನು ಕರೆಸಿ ಅವರ ಮಾತುಗಳನ್ನು ಖಾದರ್ ಕೇಳಿಸುವ ವ್ಯವಸ್ಥೆ ಮಾಡಿದ್ದಾರೆ ಎಂದರೆ ಖಾದರ್ ಅವರ ಮಾದರಿ ನಡೆಯನ್ನು ಅಭಿನಂದಿಸಬೇಕು. ಇದರೊಂದಿಗೆ ಖಾದರ್ ಮುಸ್ಲಿಂ, ಕ್ರೈಸ್ತ ಗುರುಗಳನ್ನು ಕೂಡ ಕರೆಸಿ ಸೆಶನ್ ಇಟ್ಟುಕೊಂಡಿದ್ದಾರೆ. ಇಷ್ಟೇ ಅಲ್ಲ, ಬಿಎಸ್ ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ಸಿಎಂ ಸಿದ್ಧರಾಮಯ್ಯನವರು ಕೂಡ ತಮ್ಮ ಅನುಭವಗಳನ್ನು ಹೊಸ ಶಾಸಕರುಗಳಿಗೆ ಧಾರೆ ಎರೆಯಲು ಕ್ಲಾಸು ತೆಗೆದುಕೊಳ್ಳಲಿದ್ದಾರೆ. ಇದೆಲ್ಲವನ್ನು ಶುದ್ಧವಾದ ಕಣ್ಣುಗಳಿಂದ ನಾವು ನೋಡಬೇಕು. ಒಂದು ವೇಳೆ ಈಗ ಬಿಜೆಪಿ ಸರಕಾರ ಇದ್ದು, ಇಂತಹ ಶಿಬಿರ ಆಯೋಜನೆ ಆಗಿ ಅದರಲ್ಲಿ ಚಕ್ರವರ್ತಿ ಸೂಲಿಬೆಲೆಯವರನ್ನು ಅತಿಥಿ ಉಪನ್ಯಾಸಕರನ್ನಾಗಿ ಕರೆಸಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸುಮ್ಮನೆ ಕುಳಿತುಕೊಳ್ಳುತ್ತಿತ್ತಾ?

ರವಿಶಂಕರ್ ಅಥವಾ ಹೆಗ್ಗಡೆಯವರು ಮಾತನಾಡಿದರೆ ಯಾರಿಗೆ ತೊಂದರೆ!

ಅಷ್ಟಕ್ಕೂ ಒಂದು ಗಂಟೆ ರವಿಶಂಕರ್ ಗುರೂಜಿ ಹಾಗೂ ಒಂದು ಗಂಟೆ ಡಾ.ಹೆಗ್ಗಡೆಯವರು ಬೋಧಿಸಿದರೆ ಕಾಂಗ್ರೆಸ್ ಶಾಸಕರುಗಳು ರಾತ್ರೋರಾತ್ರಿ ಮನಪರಿವರ್ತನೆಗೊಂಡು ಬಿಜೆಪಿಯಾಗುವುದಿಲ್ಲ ಅಥವಾ ಶಿಬಿರ ಏನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಐಟಿಸಿ, ಓಟಿಸಿ ಅಲ್ಲ. ಇದನ್ನು ಅರ್ಥ ಮಾಡಿಕೊಳ್ಳದವರು ಮಾತ್ರ ಖಾದರ್ ಕ್ರಮವನ್ನು ಖಂಡಿಸುತ್ತಿದ್ದಾರೆ. ಇನ್ನು ಒಮ್ಮೆ ಶಾಸಕರಾಗಿ ಆಯ್ಕೆಯಾದ ಬಳಿಕ ಅವರು ತಮ್ಮ ಕ್ಷೇತ್ರದಲ್ಲಿರುವ ಎಲ್ಲಾ ಹಿಂದೂ, ಮುಸ್ಲಿಂ, ಕ್ರೈಸ್ತರ ಪ್ರತಿನಿಧಿ. ಅವರನ್ನು ಕೇವಲ ಕಾಂಗ್ರೆಸ್ ಶಾಸಕರು ಅಥವಾ ಬಿಜೆಪಿ ಶಾಸಕರು ಎಂದು ಹೇಳುವುದೇ ಕ್ಷೇತ್ರದ ಜನರಿಗೆ ಮಾಡುವ ದೊಡ್ಡ ಅನ್ಯಾಯ. ಇನ್ನು ಇಂತಿಂತವರನ್ನು ಕರೆಸಲು ಕಾಂಗ್ರೆಸ್ ಸರಕಾರ ಹೇಗೆ ತಯಾರಾಯಿತು? ಇದನ್ನು ಸಿದ್ದು ಒಪ್ಪುತ್ತಾರಾ ಎನ್ನುವ ಪ್ರಶ್ನೆಗಳು ಇವೆ. ಆದರೆ ಖಾದರ್ ಅವರ ರಾಜಕೀಯ ಜೀವನವನ್ನು ನೋಡಿದವರಿಗೆ ಖಾದರ್ ಮಾಡಿರುವುದರಲ್ಲಿ ಏನೂ ವಿಶೇಷ ಕಾಣುವುದಿಲ್ಲ. ಖಾದರ್ ತಮ್ಮ ಮೊದಲ ಶಾಸಕತ್ವದ ಅವಧಿಯಿಂದ ಹಿಡಿದು ಈ ಬಾರಿ ಐದನೇ ಸಲ ಗೆಲ್ಲುವ ತನಕ ತಮ್ಮ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಜಾತಿ, ಧರ್ಮದ ಪ್ರೀತಿ, ವಿಶ್ವಾಸವನ್ನು ಗಳಿಸುತ್ತಾ ಶಾಸಕರಾದವರು. ಅವರ ಕ್ಷೇತ್ರದಲ್ಲಿ ಅವರನ್ನು ಪ್ರೀತಿಸುವ ಅಪಾರ ಹಿಂದೂಗಳಿದ್ದಾರೆ. ನಖಶಿಖಾಂತ ದ್ವೇಷಿಸುವ ಅನೇಕ ಮುಸ್ಲಿಮರಿದ್ದಾರೆ. ಎಸ್ ಡಿಪಿಐ ಖಾದರ್ ವಿರುದ್ಧ ಬೆಂಕಿ ಉಗುಳುತ್ತದೆ. ಹಿಂದೂ ಶಾಸಕ ಉಳ್ಳಾಲಕ್ಕೆ ಬೇಕು ಎಂದು ಕೇಸರಿ ಸಂಘಟನೆಗಳು ತುಂಬಾ ಪ್ರಯತ್ನಪಟ್ಟವು. ಆದ್ದರಿಂದ ಖಾದರ್ ಎಲ್ಲಾ ಕಡೆಯಿಂದ ಬಾಣಗಳನ್ನು ಎದುರಿಸುತ್ತಾ ನಗುನಗುತ್ತಾ ಮುನ್ನಡೆಯುತ್ತಾರೆ. ಆದ್ದರಿಂದ ಖಾದರ್ ಅವರ ಜಾತ್ಯಾತೀತತೆ ಕಾಂಗ್ರೆಸ್ಸಿಗರಿಗಿಂತ ಒಂದು ಮುಷ್ಟಿ ಜಾಸ್ತಿಯೇ ಇದೆ. ಅವರು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದಾರೆ. ಅವರಿಗೆ ಅಭಿನಂದನೆಗಳು.

ಇದರಲ್ಲಿಯೂ ರಾಜಕೀಯವೇ?

ಇನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಪತ್ರಕರ್ತ ಶ್ರೀಕಾಂತ್ ಶೆಟ್ಟಿಯವರ ಭಾಷಣವನ್ನು ಆಯೋಜಿಸಲಾಗಿತ್ತು. ಆದರೆ ಎನ್ ಎಸ್ ಯುಐ ಸಂಘಟನೆ ಇದನ್ನು ವಿರೋಧಿಸಿದ ಕಾರಣ ಕಾರ್ಯಕ್ರಮ ರದ್ದಾಗಿದೆ. ನಾನು ಹೇಳುವುದು ಇಷ್ಟೇ. ಪವಿತ್ರ ದೇಗುಲಗಳಾಗಿರುವ ವಿಧಾನಸೌಧ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸರ್ವರ ಹಿತಕ್ಕಾಗಿ ಏನಾದರೂ ಕಾರ್ಯಕ್ರಮ ಆಯೋಜನೆಗೊಂಡಾಗ ಅದನ್ನು ರಾಜಕೀಯ ಕಾರಣಗಳಿಗಾಗಿ ವಿರೋಧಿಸುವುದು ಸರಿಯಲ್ಲ. ಅಷ್ಟೇ!!

0
Shares
  • Share On Facebook
  • Tweet It


- Advertisement -


Trending Now
ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
Hanumantha Kamath May 31, 2025
ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
Hanumantha Kamath May 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
    • ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search