ಯುವತಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ.
Posted On July 6, 2023
ಪಜೀರು:ಯುವತಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ.
ಉಳ್ಳಾಲ:ಬಾಡಿಗೆ ಮನೆಯಲ್ಲಿ ತಾಯಿ ಮತ್ತು ಅಣ್ಣನೊಂದಿಗೆ ವಾಸವಿದ್ದ ಯುವತಿಯೋರ್ವಳು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯಲ್ಲಿ ನಡೆದಿದೆ.
ಪ್ರೀತಿಕಾ ಪೂಜಾರಿ(21)ಆತ್ಮ ಹತ್ಯೆಗೈದ ಯುವತಿ.ಪ್ರೀತಿಕ ತನ್ನ ತಾಯಿ ಮತ್ತು ಅಣ್ಣನೊಂದಿಗೆ ಪಜೀರು ಗ್ರಾಮದ ಅಡಪ್ಪ ರೆಸಿಡೆನ್ಸಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು.ಮಂಗಳೂರಿನ ಕಾಲ್ ಸೆಂಟರ್ ಒಂದರಲ್ಲಿ ಪ್ರೀತಿಕಾ ಉದ್ಯೋಗದಲ್ಲಿದ್ದರು.ಇಂದು ಮದ್ಯಾಹ್ನ 12.30 ರ ವೇಳೆಗೆ ಪ್ರೀತಿಕಾ ಮನೆಯೊಳಗೆ ಆತ್ಮಹತ್ಯೆಗೈದಿರುವ ವಿಚಾರ ಬೆಳಕಿಗೆ ಬಂದಿದೆ.ಮದ್ಯಾಹ್ನ ಕೆಲಸದಿಂದ ಮರಳಿದ್ದ ಪ್ರೀತಿಕಾ ನೇಣಿಗೆ ಕೊರಳೊಡ್ಡಿದ್ದಾರೆ.
ಕೊಣಾಜೆ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದು ಪ್ರಕರಣ ದಾಖಲಿಸಿದ್ದಾರೆ.
ಮೃತ ಪ್ರೀತಿಕ ಯುವಕನೊಬ್ಬನನ್ನ ಪ್ರೀತಿಸುತ್ತಿದ್ದು ಆತ ಪ್ರೇಮ ನಿರಾಕರಣೆ ಮಾಡಿದ್ದೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.
- Advertisement -
Trending Now
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಿಟಿ ರವಿ ಆ "ಶಬ್ದ" ಹೇಳಿದ್ದು ಹೌದಾ!?
December 19, 2024
ವಿಜಯ ಮಲ್ಯ, ನೀರವ್ ಮೋದಿ ಸೇರಿ 22,280 ಕೋಟಿ ರೂ ಬಾಕಿ ವಸೂಲಿ - ನಿರ್ಮಲಾ
December 18, 2024
Leave A Reply