ಮೋದಿ ಅಭಿವೃದ್ಧಿಯಿಂದ ತುಂಬುತ್ತಿದೆ ಜನಸಾಮಾನ್ಯರ ಹೊಟ್ಟೆ!
ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿಗೆ ಕಳೆದ ಒಂದು ವರ್ಷದಲ್ಲಿ ಹತ್ತು ಕೋಟಿ ಪ್ರವಾಸಿಗರು ಭೇಟಿ ನೀಡುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇದು ಭಾರತೀಯ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಹೊಸ ಬಾಷ್ಪ ಬರೆದಿರುವುದು ಮಾತ್ರವಲ್ಲ, ವಾರಣಾಸಿಯಲ್ಲಿ ಗಣನೀಯ ಪ್ರಮಾಣದಲ್ಲಿ ಉದ್ಯೋಗ ಹೆಚ್ಚಳಕ್ಕೂ ಕಾರಣವಾಗಿದೆ. ಇದರಿಂದ ವಾರಣಾಸಿಯಲ್ಲಿ ಜನಸಾಮಾನ್ಯರ ಜೀವನ ಶೈಲಿ ಕೂಡ ಅಭಿವೃದ್ಧಿಯಾಗಿದೆ.
ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಾಗಿರುವ ಅಯೋಧ್ಯೆ, ಮಥುರಾ ಮತ್ತು ಉಜೈಯಿನಿಯಲ್ಲಿಯೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಇದರಿಂದ ಲಕ್ಷಾಂತರ ಜನರ ಜೀವನಕ್ಕೆ ಇದು ದಾರಿಯಾಗಿದೆ. ಇದು ಮೋದಿಯವರ ದೂರದೃಷ್ಟಿಯ ಒಂದು ಭಾಗ ಎಂದೇ ಪರಿಗಣಿಸಲಾಗಿದೆ. ಭಾರತದ ಸನಾತನ ಪರಂಪರೆಯ ಪುನರುತ್ಥಾನದಲ್ಲಿ ಈ ಕ್ಷೇತ್ರಗಳ ಅಭಿವೃದ್ಧಿಯಿಂದ ವಿದೇಶದ ಜನರು ಕೂಡ ಭಾರತ ಭೇಟಿಗೆ ಈ ಸ್ಥಳಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಕಾಶೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ಧಾರದ ನಂತರ ಪ್ರವಾಸಿಗರಿಗೆ ಈ ಕ್ಷೇತ್ರ ಆಕರ್ಷಣೆಯ ಕೇಂದ್ರವಾಗಿರುವುದರ ಜೊತೆಗೆ ಧಾರ್ಮಿಕ ಪ್ರವಾಸೋದ್ಯಮದ ದೃಷ್ಟಿಯಿಂದ ಮೋದಿಯವರ ಕಾರ್ಯವನ್ನು ವಿಶ್ವದಾದ್ಯಂತ ಪ್ರಶಂಸಿಸಲಾಗುತ್ತಿದೆ.
2022 ರಲ್ಲಿ ಗೋವಾಕ್ಕೆ ಹೋಲಿಸಿದರೆ ಗೋವಾಕ್ಕೆ ಭೇಟಿ ಕೊಟ್ಟ ಪ್ರವಾಸಿಗರ ಸಂಖ್ಯೆ 85 ಲಕ್ಷ ಇದ್ದರೆ, ವಾರಣಾಸಿಗೆ ಭೇಟಿ ಕೊಟ್ಟವರು 7.2 ಕೋಟಿ. ವಾರಣಾಸಿಯಲ್ಲಿ ಪ್ರವಾಸೋದ್ಯಮ ಸರಾಸರಿ 20 ಶೇಕಡಾದಿಂದ 65% ಗೆ ಏರಿಕೆ ಕಂಡಿದ್ದರೆ ಒಟ್ಟು ದೇಶದ ಪ್ರವಾಸೋದ್ಯಮ ಕೂಡ 34% ಏರಿಕೆ ಕಾಣುತ್ತಿರುವುದು ಈ ರಂಗದಲ್ಲಿರುವವರಿಗೆ ಖುಷಿಯನ್ನು ನೀಡಿದೆ.
Leave A Reply