ಕೆಂಪು ರಾಣಿಯ ಸಹವಾಸದಿಂದ ರೈತರ ಮೊಗದಲ್ಲಿ ಮುಗುಳ್ನಗೆ!
ಪ್ರತಿಯೊಂದಕ್ಕೂ ಒಂದು ದಿನ ಬರುತ್ತದೆ ಎನ್ನುವ ಮಾತು ಇದೆ. ವರ್ಷದ ಆರಂಭದಲ್ಲಿ ಕಿಲೋಗೆ 20 ರೂಪಾಯಿ ಇದ್ದ ಟೋಮೆಟೋ ದರ ಈಗ 150 ರ ಆಸುಪಾಸಿನಲ್ಲಿರುವುದು ಎಲ್ಲರಿಗೂ ಗೊತ್ತೆ ಇದೆ. ಇದರಿಂದ ಟೊಮೆಟೊ ಬೆಳೆಗಾರರಲ್ಲಿ ಹರ್ಷದ ಹೊನಲು ಹರಿಯುತ್ತಿದೆ. ವಿಜಯಪುರದ ಜಿಲ್ಲೆಯ ಭೀಮು ಬಾವಸಿಂಗ್ ಲಮಾನಿ ಎಂಬ ವ್ಯಕ್ತಿ 45 ದಿನಗಳ ಅಂತರದಲ್ಲಿ 50 ಲಕ್ಷ ರೂಪಾಯಿಗಳನ್ನು ಟೊಮೆಟೊ ಬೆಳೆಯ ಮೂಲಕ ಸಂಪಾದಿಸಿದ್ದಾರೆ. ತಮ್ಮ ನಾಲ್ಕು ಎಕರೆ ಒಣಭೂಮಿಯಲ್ಲಿ ಟೊಮೆಟೊ ಬೆಳೆದ ಲಮಾನಿ ಅವರು ಪರಿಸ್ಥಿತಿ ಹೀಗೆ ಮುಂದುವರೆದರೆ ಇನ್ನಷ್ಟು ಹೆಚ್ಚಿನ ಲಾಭವನ್ನು ನಿರೀಕ್ಷಿಸುತ್ತಿದ್ದಾರೆ.
40 ವರ್ಷದ ಲಮಾಣಿ ಅವರು ಈ ಹಿಂದೆ ಜೋಳ, ದಾಕ್ಷಿ, ಕಬ್ಬನ್ನು ಬೆಳೆಯುತ್ತಿದ್ದರು. ಯಾವಾಗ ಅಚಾನಕ್ ಆಗಿ ಟೊಮೆಟೊ ಬೆಳೆಗೆ ಬಂಪರ್ ಬೆಲೆ ಬರುವ ಲಕ್ಷಣಗಳು ಕಾಣಿಸಿಕೊಂಡವೋ ಆವತ್ತು ಅವರು ಟೊಮೆಟೊ ಬೆಳೆಯಲು ನಿರ್ಧರಿಸಿದರು. 45 ದಿನಗಳ ಒಳಗೆ ಅವರಿಗೆ ಬಂದಿರುವ ಫಸಲಿನಿಂದ ಅವರು ಈಗ ಲಕ್ಷಾಧಿಪತಿ ಆಗಿದ್ದಾರೆ. ಹಿಂದೆ ಫಸಲು ಚೆನ್ನಾಗಿ ಬಂದರೆ ಹೆಚ್ಚೆಂದರೆ ಒಂದು ಲಕ್ಷ ರೂಪಾಯಿ ಗಳಿಸುತ್ತಿದ್ದ ಲಮಾಣಿ ಅವರು ಈಗ ಟೊಮೆಟೊ ಬಂಪರ್ ಬೆಳೆಯಿಂದ ಲಕ್ಷಗಳನ್ನು ಎಣಿಸುತ್ತಿದ್ದಾರೆ.
ಚಿಕ್ಕೋಡಿ ಭಾಗದ ವಿಜಯಪುರ, ಬಾಗಲಕೋಟೆ ಮತ್ತು ಕಿತ್ತೂರು ಕರ್ನಾಟಕದ ಬೆಳಗಾವಿ ಪ್ರದೇಶಗಳು ಒಣ ಮತ್ತು ಮಳೆ ಕಡಿಮೆ ಬರುವ ಪ್ರದೇಶಗಳಾಗಿದ್ದು, ಇಲ್ಲಿ ನೀರಾವರಿ ಪ್ರದೇಶದ ಕೊರತೆ ಇದೆ. ಆದ್ದರಿಂದ ಇಲ್ಲಿನ ರೈತರು ಸದ್ಯ ಟೊಮೆಟೊ ಬೆಳೆಯನ್ನು ಮಾತ್ರ ಬೆಳೆಯಲು ನಿಶ್ಚಯಿಸಿದ್ದಾರೆ.
Leave A Reply