ಸೋನಿಯಾ, ರಾಹುಲ್ ಮಾಡಿದ ಕೆಲಸ ಒಬ್ಬ ಸೈನಿಕ ಮಾಡಿದ್ರೆ ದೇಶದ್ರೋಹ ಆಗುತ್ತಿತ್ತು ಎಂದ್ರು ರಾಥೋಡ್!
ಕರ್ನಲ್ ರಾಜವರ್ಧನ ಸಿಂಗ್ ರಾಥೋಡ್ ಅವರು ತಮ್ಮ ಟ್ವಿಟರ್ ನಲ್ಲಿ 2008 ರ ಘಟನೆಯೊಂದರ ಕುರಿತು ತಾವು ಸಂಸತ್ ಅಧಿವೇಶನದಲ್ಲಿ ಮಾತನಾಡಿದ ವಿಷಯದ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. ರಾಜಸ್ಥಾನದ ಜೈಪುರ ಗ್ರಾಮೀಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ರಾಥೋಡ್ ಅವರು ಒಲಿಂಪಿಕ್ ಪದಕ ವಿಜೇತರೂ ಆಗಿದ್ದಾರೆ. ಶೂಟಿಂಗ್ ಕ್ರೀಡೆಯಲ್ಲಿ ಭಾರತವನ್ನು ವಿವಿಧ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿದ್ದಾರೆ. ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಅವರು “2008 ರಲ್ಲಿ ಚೀನಾದ ಬಿಜಿಂಗ್ ನಲ್ಲಿ ಒಲಿಪಿಂಕ್ ಕ್ರೀಡಾಕೂಡ ನಡೆದಿತ್ತು. ಅದರಲ್ಲಿ ತಾವು ಭಾರತವನ್ನು ಪ್ರತಿನಿಧಿಸುತ್ತಿದ್ದೆ. ಆ ಅವಧಿಯಲ್ಲಿ ಭಾರತದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿತ್ತು. ಬಿಜಿಂಗ್ ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರು ಆಗಮಿಸಿ ಒಲಿಪಿಂಕ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳನ್ನು ಭೇಟಿ ಆಗುತ್ತಾರೆ ಎಂದು ನಮಗೆ ಮಾಹಿತಿ ನೀಡಲಾಯಿತು.
ಸೋನಿಯಾ, ರಾಹುಲ್ ಭಾರತದಲ್ಲಿ ಆಗ ರಿಮೋಟ್ ಕಂಟ್ರೋಲ್ ನಿಂದ ಸರಕಾರವನ್ನು ಚಲಾಯಿಸುತ್ತಿದ್ದರು. ಆದರೆ ಸೋನಿಯಾ ಹಾಗೂ ರಾಹುಲ್ ಚೀನಾಗೆ ಆಗ ಆಗಮಿಸಿದರಾದರೂ ನಮ್ಮನ್ನು ಯಾರನ್ನೂ ಭೇಟಿಯಾಗಲು ಬಂದಿಲ್ಲ. ಯಾಕೆಂದರೆ ಚೀನಾದ ಕಮ್ಯೂನಿಸ್ಟ್ ಆಡಳಿತ ಇವರಿಗೆ ಅತಿಥಿ ಸತ್ಕಾರದ ಸಂಪೂರ್ಣ ವ್ಯವಸ್ಥೆ ಮಾಡಿತ್ತು. ನಮ್ಮ ದೇಶದ ಒಬ್ಬ ಸೈನಿಕ ಹಾಗೆ ಮಾಡಿದಿದ್ದರೆ ಆತನ ಮೇಲೆ ದೇಶದ್ರೋಹದ ಆಪಾದನೆ ಬರುತ್ತಿತ್ತು. ಅದೇ ಆರೋಪ ಈಗ ಇವರ ಮೇಲೆ ಹಾಕಬೇಕಾಗುತ್ತದೆ. ಈ ಬಗ್ಗೆ ತನಿಖೆ ಆಗಬೇಕು. ಯಾಕೆಂದರೆ ಶತ್ರು ದೇಶದೊಂದಿಗೆ ಮಾತುಕತೆ ಮಾಡುವುದು ಎಂದರೆ ದೇಶದ್ರೋಹಕ್ಕೆ ಸಮ ಎಂದು ರಾಥೋಡ್ ಹೇಳಿದ್ದಾರೆ.
ಸಾಮಾನ್ಯವಾಗಿ ಜಾಗತಿಕ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಳುಗಳನ್ನು ಹುರಿದುಂಬಿಸಲು ಆಯಾ ದೇಶದ ಉನ್ನತ ಸ್ಥಾನದಲ್ಲಿರುವ ಪ್ರತಿನಿಧಿಗಳು ತೆರಳುವುದು ಸಾಮಾನ್ಯ. ಆದರೆ ಚೀನಾದ ಬೀಜಿಂಗ್ ಗೆ ಬಂದರೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಳುಗಳನ್ನು ಪ್ರೋತ್ಸಾಹಿಸಲು ಯುಪಿಎ ಚೇರ್ ಪರ್ಸನ್ ಆಗಿದ್ದ ಸೋನಿಯಾ ಗಾಂಧಿ ಬಂದಿರದೇ ಇದದ್ದು ಸರಿಯಲ್ಲ ಎಂದು ರಾಥೋಡ್ ಹೇಳಿದ್ದಾರೆ.
Leave A Reply