ಪಾಪ ಉಪೇಂದ್ರ ತಮ್ಮ ಸಿನೆಮಾದಂತೆ ಮಾತು ಕೂಡ “ಬುದ್ಧಿವಂತರಿಗೆ ಮಾತ್ರ” ಎಂಬ ಕ್ಯಾಪ್ಶನ್ ಹಾಕಲು ಮರೆತು ಬಿಟ್ಟರು!
ಸಂತೋಷ್ ಕುಮಾರ್ ಮುದ್ರಾಡಿ ಬರೆಯುತ್ತಾರೆ…..
ವೇದ ಸುಳ್ಳಾದರೂ, ಗಾದೆ ಸುಳ್ಳಾಗುವುದಿಲ್ಲ ಎನ್ನುವುದರಿಂದ ಹಿಡಿದು ..ಇಂಥಹಾ ಸುಳ್ಳು ಗಾದೆಗಳನ್ನು ಬರೆದ ಕೊಳಕು ಮನಸಿನ ಬಹಳ ಮಂದಿ ವಿದ್ಯಾವಂತರೆಲ್ಲರೂ ತಮ್ಮ ಬಾಯಿ ತೀಟೆಯನ್ನು ತೀರಿಸಿದ್ದು ಬ್ರಾಹ್ಮಣರನ್ನು ಬಯ್ಯುವ ಮೂಲಕವೇ..
ಉಪೇಂದ್ರರ ಒಂದು ಮಾತಿಗೆ ಬುದ್ಧಿಜೀವಿಗಳ ಎದೆ ಸುಡುತ್ತಿದೆ.. ಮಹಾ ಮಾನವತಾವಾದಿಗಳೆಲ್ಲರೂ ಒಟ್ಟಿ ಕೂಡಿ ಅರಚುತ್ತಿದ್ದಾರೆ.. ಪೇಜಾವರ ಶ್ರೀಗಳಂತ ಮಹಾಪುರುಷರು ಈ ಅಸ್ಪೃಶ್ಯತಾ ನಿವಾರಣೆಗಾಗಿ ಮಹತ್ವದ ಬದಲಾವಣೆಯನ್ನು ತಂದಾಗಿದೆ, ಈಗ ಹೊಲೆಕೇರಿ ಎನ್ನುವ ವಿಚಾರ ಸವಕಲಾದ ನಾಣ್ಯವಿದ್ದ ಹಾಗೆ. ಅಲ್ಲಿದ್ದವರು ಉನ್ನತ ಹುದ್ದೆಗಳಿಲ್ಲಿದ್ದಾರೆ. ಎಲ್ಲರೂ ಕೂಡ ತಲೆಬಾಗಲೇಬೇಕು. ಆದರೆ ಜಾತಿಯ ನಡುವೆ ವಿಷ ಬೀಜ ಬಿತ್ತಿ ಬೇಳೆ ಬೇಯಿಸಿಕೊಳ್ಳುವ ಮಂದಿಯಿಂದ ಈ ಹೋರಾಟ.
ಅಷ್ಟಕ್ಕೂ ಉಪೇಂದ್ರ ಅದೇನು ಜಾತಿಯನ್ನು ತಿರಸ್ಕರಿಸಿದ ಗಾದೆಯನ್ನು ಹೇಳಲಿಲ್ಲ, ಹೊಲೆಕೇರಿಯನ್ನು ತಿರಸ್ಕರಿಸುವಂತಹ ಒಂದು ಗಾದೆಯನ್ನು ಉಲ್ಲೇಖಿಸಿದ್ದಾರೆ.. ಅದು ಕೂಡ ಬಹಳ ಹಳೆಯ ಕಾಲದ ಗಾದೆ ಮಾತು. ಈಗ ಅದು ಕೇವಲ ತಿರುಳಿಲ್ಲದ ಮಾತಾಗಿದೆಯಷ್ಟೇ. ಆ ಗಾದೆಯನ್ನು ಉಲ್ಲೇಖಿಸುವ ಸಂದರ್ಭ ಬರಲು ಸಾಧ್ಯವೇ ಇಲ್ಲ. ಏಕೆಂದರೆ ಈಗ ಅಂತಹ ಹೊಲೆಕೇರಿಗಳು ಕಾಣಸಿಗುವುದಿಲ್ಲ. ಆದರೆ ಇದನ್ನು ದೊಡ್ಡ ಅವಮಾನ ಎಂದು ಬಿಂಬಿಸಿ ಹೋರಾಡುವ ಹೋರಾಟಗಾರರಿಗೂ ಕೂಡ ಈಗ ಅಂತಹ ಕೇರಿಗಳು ಎಲ್ಲಿದೆ ಎಂಬುದು ಕೂಡ ಗೊತ್ತಿರಲಿಕ್ಕಿಲ್ಲ.. ಕಾಲ ಬದಲಾಗಿದೆ ಆದರೆ ಇವರ ಮನಸ್ಥಿತಿ ಬದಲಾಗಲಿಲ್ಲವಷ್ಟೇ..
ಪಾಪ ಉಪೇಂದ್ರರು ಸ್ವಲ್ಪದರಲ್ಲಿ ಬದುಕಿದರು. ಒಂದು ವೇಳೆ ಒಂದು ಜಾತಿಯ ಬಗ್ಗೆ ಹೇಳಿದ್ದರೆ, ಅಸ್ಪೃಶ್ಯತೆಯ ನಿವಾರಣೆಗಾಗಿ ಹಗಲಿರುಳು ಎಸಿ ರೂಮಿನೊಳಗೆ ದುಡಿಯುವ ದುರ್ಬುದ್ಧಿ ಜೀವಿಗಳು ಇನ್ನೆಷ್ಟು ಹಲುಬುತ್ತಿದ್ದರೋ ಏನೋ. ನಾಯಿಗೆ ಮಾಂಸದ ತುಂಡು ಸಿಕ್ಕಿದ ಹಾಗೆ ಹಿಡಿದು, ಎಳೆದು, ಜಗ್ಗಿ, ಕಡಿದು, ತಿಂದು, ತೇಗಿ ಬೊಗಳುತ್ತಿದ್ದವು. ಆದರೆ ಆಗಲಿಲ್ಲವಲ್ಲ ಎಂದು ಬೇಸರಿಸಿ ಈ ಕ್ಯಾತೆಯನ್ನು ತೆಗೆದಿದ್ದಾರೆ ಅಷ್ಟೇ. ಇಲ್ಲಿರುವ ಪ್ರಧಾನ ಕಾರಣ ಉಪೇಂದ್ರ ಒಬ್ಬ ಬ್ರಾಹ್ಮಣ ಎನ್ನುವುದೇ ಆಗಿದೆ ಎಂಬುವುದು ಯಾರಿಗೂ ಗೊತ್ತಾಗುತ್ತದೆ.
ಏಕೆಂದರೆ ಇದೇ ಸ್ವಲ್ಪ ವರ್ಷದ ಕೆಳಗೆ ಎಂ ಬಿ ಪಾಟೀಲರು ಕೂಡ ಇದೆ ಹೊಲೆಕೇರಿ ಶಬ್ದಕ್ಕೆ ಸಂಬಂಧಪಟ್ಟ, ಬಸವಣ್ಣನ ಒಂದು ವಚನವನ್ನು ತಮ್ಮ ಮುಖಪುಟದಲ್ಲಿ ಹಾಕಿಕೊಂಡಿದ್ದರು. ಮಾನ್ಯ ಮಂತ್ರಿ ಮಹಾಶಯರಾದ ಎಸ್ ಎಸ್ ಮಲ್ಲಿಕಾರ್ಜುನರು ಕೂಡ ಇದೇ ಮಾತನ್ನು ಹೇಳಿದ್ದರು. ಆದರೆ ಆ ಸಂದರ್ಭದಲ್ಲಿ ಏನೂ ಗಲಾಟೆಯಾದ ಬಗ್ಗೆ ಮಾಹಿತಿ ಇಲ್ಲ. ಆದರೆ ಈಗ ಅಂತಹದ್ದೇ ಮತ್ತೊಂದು ಮಾತನ್ನು ಹೇಳುವಾಗ ಗಲಾಟೆಯಾಗುತ್ತಿದೆ ಎಂದರೆ ಇವರಿಗೆ ವಿಚಾರಕ್ಕಿಂತಲೂ ವ್ಯಕ್ತಿ ಮುಖ್ಯ ಎಂಬುವುದು ಗೊತ್ತಾಗುತ್ತದೆಯಲ್ಲವೇ.
ಅದೇ ಈ ತಲೆ ಹಿಡುಕ ಚಿಂತಕರು ಒಂದು ದಿವಸವಾದರು ಬ್ರಾಹ್ಮಣರ ವಿರುದ್ಧವಾಗಿ ಬಂದಿರುವ ಗಾದೆ ಮಾತುಗಳಾಗಲಿ ಅಥವಾ ಚುಚ್ಚು ಮಾತುಗಳಾಗಲಿ ಆ ಬಗ್ಗೆ ಹೋರಾಟ ಮಾಡುತ್ತಾರೆಯೋ, ಇಲ್ಲ ಏಕೆಂದರೆ ಅಲ್ಲಿ ಇವರಿಗೆ ಬೇಳೆ ಬೇಯುವುದಿಲ್ಲ. ಇವರ ಗಂಜಿಗೆ ಲಾಭವಾಗುವುದಿಲ್ಲ. ಇವತ್ತಿಗೂ ಕೂಡ ಯಾವುದೋ ಕಾಲದ ಇತಿಹಾಸವನ್ನು ಇಟ್ಟುಕೊಂಡು ಬ್ರಾಹ್ಮಣರನ್ನು ಬೈಯುತ್ತಲೇ ಬರುವ ಇವರಿಗೆ ಆಗೆಲ್ಲ ಮಾನವೀಯ ಗುಣಗಳು ಸತ್ತುಹೋಗಿರುತ್ತದೆ. ಅದೇ, ಸಮಾಜದಲ್ಲಿ ಯಾರೇ ಆದರೂ ಒಂದು ವೇಳೆ ಬೇರೆ ಜಾತಿಗಳನ್ನು ನಿಂದಿಸುವಾಗ ಮಾನವೀಯತೆಯ ಗುಣಗಳು ಒಳಗಿಂದ ಎದ್ದು ಬರುತ್ತದೆ.
ಇವತ್ತಿಗೆ ಬ್ರಾಹ್ಮಣರಷ್ಟು ಬೈಗುಳ ತಿನ್ನುವ ಬೇರೊಂದು ಜಾತಿ ಇಲ್ಲ. ಇದು ಎಲ್ಲರಿಗೂ ಗೊತ್ತಿದೆ. ಈಗೀಗ ಯಾವುದೇ ಜಾತಿಗಳನ್ನು ಕೂಡ ನಿಂದಿಸುವುದು ಕಾನೂನು ರೀತಿಯ ಅಪರಾಧ. ಆದ್ದರಿಂದ ಎಲ್ಲಿಯೂ ಜಾತಿ ನಿಂದನೆ ಇಲ್ಲವೇ ಇಲ್ಲ ಎಂದು ಹೇಳಬಹುದು. ಆದ್ದರಿಂದಲೇ ಇತರ ಜಾತಿಗಳಿಗೆ ಸಂಬಂಧಪಟ್ಟ ಯಾವ ಗಾದೆ ಮಾತುಗಳಾಗಲಿ, ಯಾರು ಕೂಡ ಆಡುವುದಿಲ್ಲ. ಏಕೆಂದರೆ ಅಲ್ಲೆಲ್ಲಾ ಭೀಕರ ಹೋರಾಟ ನಡೆಯುತ್ತದೆ. ಬ್ರಾಹ್ಮಣರು ಅಂತಹ ಹೋರಾಟಕ್ಕೆ ಇಳಿಯುವುದಿಲ್ಲ ಎನ್ನುವುದೇ ಇವರಿಗೆ ದೊಡ್ಡ ಬಂಡವಾಳದ ವಿಚಾರ ಹಾಗೂ ಧೈರ್ಯಕ್ಕೆ ಕಾರಣ.
ರಾಷ್ಟ್ರಕವಿಯಿಂದ ಹಿಡಿದು ಸಾಮಾನ್ಯ ಕವಿಯ ತನಕವೂ ಕೂಡ ಎಲ್ಲರೂ ತಿದ್ದಿದ್ದು ಬ್ರಾಹ್ಮಣರನ್ನೇ. ಎಲ್ಲಾ ಅನರ್ತಕ್ಕೂ ಬ್ರಾಹ್ಮಣವೇ ಕಾರಣ ಎನ್ನುವ ರೀತಿಯಲ್ಲಿ ಎಲ್ಲಾ ಬುದ್ಧಿಜೀವಿಗಳು ಹಾಗೂ ಚಿಂತಕರು ಹೇಳುತ್ತಲೇ ಬರುತ್ತಿದ್ದಾರೆ. ಇವತ್ತಿಗೂ ಕೂಡ ಬ್ರಾಹ್ಮಣರ ವಿರುದ್ಧವಾಗಿರುವ ಗಾದೆ ಮಾತುಗಳಿಗೆ ಹಾಗೂ ಚುಚ್ಚು ಮಾತುಗಳಿಗೆ ಒಳ್ಳೆಯ ಬೆಲೆ ಇದೆ. ಬ್ರಾಹ್ಮಣರ ವಿರುದ್ಧವಾಗಿರುವ ಮಾತುಗಳಿಗೆ ಸಾಟಿ ಮಾಡಿದರೆ,ಒಂದಂಶದಷ್ಟು ಕೂಡ ಬೇರೆ ಜಾತಿಗಳ ಬಗ್ಗೆ ಇವರ ವಿಮರ್ಷೆ ಸಾಗಲಿಲ್ಲ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಕೇವಲ ಬ್ರಾಹ್ಮಣರನ್ನು ತಮಾಷೆ ಮಾಡುವಂತಿರುವ ಕೆಲವು ಗಾದೆ ಮಾತುಗಳನ್ನು ನೀವೇ ಬೇಕಾದರೆ ನೋಡಿ…
ವಚನಕ್ಕೆ ಬರವೇ ಪಿಶಾಚಿ ಬ್ರಾಹ್ಮಣ..
ದೇವರು ಕೊಟ್ರೂ ಪೂಜಾರಿ ಕೊಡ
ಪ್ರದಕ್ಷಿಣೆ ಹಾಕಿದ್ರೂ ದಕ್ಷಿಣೆ ಕೊಟ್ಟರೇನೆ ತೀರ್ಥ..
ತಿರುದುಂಬೋನು ಭೋಜನ ಬಿಟ್ರು, ದಕ್ಷಿಣ ಬಿಡ…
ಅಭ್ಯಾಸವಿಲ್ಲದ ಬ್ರಾಹ್ಮಣ ಔಪಾಸನೆ ಮಾಡಲು ಹೋಗಿ ಗಡ್ಡ ಮೀಸೆ ಸುಟ್ಕೊಂಡ್ನಂತೆ…
ತುತ್ತಿಗೆ ತತ್ವಾರವಾದರೂ ನೆತ್ತಿ ಪೂರ್ತಿ ನಾಮಕ್ಕೇನು ಕಮ್ಮಿ ಇಲ್ಲ…
ಓದಿ ಓದಿ ಮರುಳಾದ ಕೂಚು ಭಟ್ಟ..
ಬಾಯಲ್ಲೆಲ್ಲಾ ವೇದಾಂತ ,ಮಾಡುವುದೆಲ್ಲ ರಾದ್ಧಾಂತ….
ಮಂತ್ರಕ್ಕಿಂತ ಉಗುಳೇ ಜಾಸ್ತಿ…
ತುಪ್ಪ ತಿಂದ ಮಾತಿಗಷ್ಟು, ತಪ್ಪು ಮಾತು ಬಂತು…
ಇನ್ನೂ ಇಂತಹ ನೂರಾರು ಮಾತುಗಳಿವೆ..ಗಾದೆ ಮಾತುಗಳ ಪ್ರಪಂಚದಲ್ಲಿಯೆ ಬ್ರಾಹ್ಮಣರ ವಿರುದ್ಧವಾಗಿರುವಷ್ಟು ಬೇರೆ ಯಾರ ಬಗ್ಗೆಯೂ ಇಷ್ಟೊಂದು ಗಾದೆ ಮಾತುಗಳು ಸಿಗಲಾರದು. ಎಲ್ಲರೂ ತಮ್ಮ ಬಾಯಿ ತೀಟೆಯನ್ನು ತೀರಿಸಿಕೊಂಡದ್ದು ಬ್ರಾಹ್ಮಣರ ವಿರುದ್ಧವೇ ಎನ್ನುವುದಕ್ಕೆ ಇದೊಂದು ಸಾಕ್ಷಿ ಸಾಕು.
ಇಷ್ಟೇ ಅಲ್ಲದೆ ಪುಲ್ಚಾರು ಬ್ರಾಹ್ಮಣ, ತಟ್ಟೆ ಕಾಸಿಗೆ ಬಾಯಿ ಬಿಡುವವ, ಇವರು ಬ್ರಾಮಿ0ಡ್ರಿಗಳು,ಹರುಕ ಕಚ್ಚೆ ಭಟ್ಟ.. ಹೀಗಿರುವ ಬೈಗುಳಗಳು ಕೂಡ ಬೇಕಾದಷ್ಟು ಇವೆ. ಅಸ್ಪೃಶ್ಯತೆಯ ವಿರುದ್ಧವಾಗಿ ಏನು ಮಾತಾಡುತ್ತಿದ್ದರೂ ಕೂಡ ಇಂತಹ ಮಾತುಗಳು ಬಂದೇ ಬರುತ್ತವೆ. ಇಲ್ಲೆಲ್ಲಿಯೂ ಕೂಡ ಈ ವಿಚಾರವಾದಿಗಳು, ಮಾನವತಾವಾದಿಗಳು, ವಿಶ್ವಮಾನವ ಸಂದೇಶದ ವಾಹಕರು ಬಾಯಿ ಬಿಡುವುದಿಲ್ಲ. ಅವರ ಎಲ್ಲಾ ಪ್ರಜ್ಞೆಯು ಸತ್ತು ಮಸಣ ಸೇರಿರುತ್ತದೆ. ಅದು ಎದ್ದು ಬರುವುದು ಎಲ್ಲಿ ಜಾತಿ ಗಲಾಟೆಗಳು ಮಾಡಿಸಲಿಕ್ಕೆ ಸಾಧ್ಯವಾಗುತ್ತದೆಯೋ ಅಲ್ಲಿ ಮಾತ್ರ.
ಇವರು ಹೋರಾಟ ಮಾಡುವ ಎಲ್ಲಾ ವಿಚಾರಗಳು ಕೂಡ ಬ್ರಾಹ್ಮಣರ ವಿರುದ್ಧವಾಗಿರುತ್ತದೆ. ಎಲ್ಲಿ ತನ್ನ ಸಾಧನೆಯಿಂದ, ತನ್ನ ಬುದ್ಧಿವಂತಿಕೆಯಿಂದ ಸಾಧನೆಯನ್ನು ಹೊಂದಿದ ವ್ಯಕ್ತಿಯನ್ನು ಹೇಗಾದರೂ ತೇಜೋವಧೆ ಮಾಡಬೇಕಾದರೆ ಇವರಿಂದ ಕಲಿಯಬೇಕು. ಅದಕ್ಕೆ ಬೇಕಾದ ಇವರಿಗೆ ಅನುಕೂಲವಾದ ಕಾನೂನಿನ ಚೌಕಟ್ಟುಗಳು ಕೂಡ ಇಲ್ಲಿ ಬೇಕಾದಷ್ಟಿವೆ. ಇವರು ಕಲಿತು ಬಂದ ವಿದ್ಯಾಲಯಗಳಲ್ಲಿ ಕೂಡ ಇಂತಹ ದುರ್ಬುದ್ಧಿಯ ಸಂದೇಶವನ್ನೇ ತುಂಬಿಸಿಕೊಡುವುದು. ತಲೆಗೆ ಕೆಲಸ ಕೊಡದೆ ಪುಸ್ತಕದ ಬದನೆಕಾಯಿಯನ್ನು ಉರು ಹೊಡೆದು,ಬರೆದು ಬಂದವರಲ್ಲವೇ. ಅವರು ಸ್ವಯಂ ಬುದ್ಧಿಯಿಂದ ಬೇರೆದನ್ನು ಹೇಗೆ ಯೋಚಿಸಿ ಯಾರು..
ಒಟ್ಟಾರೆ ಯೋಚಿಸಬೇಕಾದದ್ದು ಬ್ರಾಹ್ಮಣರು. ಎಲ್ಲಿ, ಹೇಗೆ ಕಾಲೆಳೆಯಬೇಕು ಎಂಬುವುದನ್ನು ಕರಗತವಾಗಿರುವ ಸಮಾಜದ ನಡುವೆ ನಾಜೂಕಲ್ಲಿ ಬದುಕಬೇಕಾದದ್ದು ಅನಿವಾರ್ಯವಾಗಿದೆ.
ಕೊಳೆತು ನಾರುತ್ತಿದ್ದ ಪಾಠವನ್ನು, ನಿದ್ರೆ ಊಟ ಬಿಟ್ಟು ಪರಿಷ್ಕರಿಸಿದ ವ್ಯಕ್ತಿ ಕೇವಲ ಬ್ರಾಹ್ಮಣ ಎನ್ನುವ ಕಾರಣಕ್ಕಾಗಿ ಸಾರಾ ಸಗಟಾಗಿ ಅದನ್ನು ತಿರಸ್ಕರಿಸಿದರು.ಪುನಃ ಆ ಸ್ಥಾನಕ್ಕೆ ನಮ್ಮ ನಮ್ಮೊಳಗೆ ವಿಷ ತುಂಬಿಸುವ ಅದೇ ಪಾಠವನ್ನು ಮಕ್ಕಳಿಗೆ ಕೊಟ್ಟಿದ್ದಾರೆ. ಇವರ ಬ್ರಾಹ್ಮಣ ದ್ವೇಷದ ನೀಚ ಬುದ್ಧಿಗೆ ಬೇರೆ ಉದಾಹರಣೆ ಬೇಡ…
Leave A Reply