ಕರ್ನಾಟಕದಲ್ಲಿ ಮಹಿಳೆಯರಿಗೆ 2000, ಎಂಪಿಯಲ್ಲಿ 1500ಕ್ಕೆ ಇಳಿಸಿದ ಕಾಂಗ್ರೆಸ್!
ಈ ವರ್ಷಾಂತ್ಯಕ್ಕೆ ವಿಧಾನಸಭಾ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಘೋಷಣೆಗಳನ್ನು ಮುಂದುವರೆಸಿದೆ. ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜಜುನ ಖರ್ಗೆಯವರು ಹೊಸ ಗ್ಯಾರಂಟಿಗಳನ್ನು ಘೋಷಿಸಿದರು. ತಾವು ಒಂದೊಂದು ಗ್ಯಾರಂಟಿಗಳನ್ನು ಉದ್ಘರಿಸುತ್ತಿದ್ದಂತೆ ಅವರು ವೇದಿಕೆಯಲ್ಲಿದ್ದ ಮುಖಂಡ ಕಮಲನಾಥ್ ಅವರನ್ನು ನೋಡಿ “ನಾನು ಭರವಸೆ ನೀಡುತ್ತಿದ್ದೇನೆ” ಎಂದು ಅವರ ಗಮನ ಸೆಳೆದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ಎಲ್ ಪಿಜಿ ಸಿಲೆಂಡರ್ ಬೆಲೆ 500 ರೂ ಇಳಿಕೆ, ಮಹಿಳೆಯರಿಗೆ 1500 ರೂ ತಿಂಗಳಿಗೆ ನೀಡುವ ವಾಗ್ದಾನ, ಸರಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ, ನೂರು ಯೂನಿಟ್ ತನಕ ಉಚಿತ ವಿದ್ಯುತ್ ಬಿಲ್ ಫ್ರೀ ಎಂದು ಗ್ಯಾರಂಟಿಗಳನ್ನು ಮಂಡಿಸಿದ್ದಾರೆ.
ಕರ್ನಾಟಕದಲ್ಲಿ ಉಚಿತ ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಏರಿದ ಕಾಂಗ್ರೆಸ್ಸಿಗರು ಈಗ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯಗಳಲ್ಲಿಯೂ ಅದೇ ರೀತಿಯ ಘೋಷಣೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತು ಮಧ್ಯಪ್ರದೇಶದಲ್ಲಿ ನೀಡಿರುವ ಗ್ಯಾರಂಟಿ ಭಾಗ್ಯಗಳಲ್ಲಿ ಕೆಲವು ವ್ಯತ್ಯಾಸಗಳಿವೆ. ಉದಾಹರಣೆಗೆ ವಿದ್ಯುತ್ ಬಿಲ್ ಮಾಫಿ ವಿಷಯದಲ್ಲಿ ಕರ್ನಾಟಕದಲ್ಲಿ ಇನ್ನೂರು ಯೂನಿಟ್ ತನಕ ಫ್ರೀ ಆದರೆ ಮಧ್ಯಪ್ರದೇಶದಲ್ಲಿ ನೂರು ಯೂನಿಟ್ ಮಾತ್ರ ಫ್ರೀ ಎಂದು ಹೇಳಲಾಗಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಮಹಿಳೆಯರಿಗೆ 2000 ರೂ ತಿಂಗಳಿಗೆ ಕೊಡುವ ಘೋಷಣೆ ಮಾಡಿದ್ದ ಕಾಂಗ್ರೆಸ್ ಮಧ್ಯಪ್ರದೇಶದಲ್ಲಿ ಅದನ್ನು 1500 ರೂಗಳಿಗೆ ಇಳಿಸಿದೆ. ಅಡುಗೆ ಅನಿಲದ ಬೆಲೆಯನ್ನು 500 ರೂಗಳಿಗೆ ನೀಡುವ ವಾಗ್ದಾನ ಅಲ್ಲಿಯೂ ನೀಡಲಾಗಿದೆ. ಒಟ್ಟಿನಲ್ಲಿ ಇಲ್ಲಿ ಯಶಸ್ವಿಯಾಗಿರುವ ಪ್ಲೇಟ್ ಅಲ್ಲಿ ತಿರುಗಿಸಿ ಹಾಕಿರುವ ಕಾಂಗ್ರೆಸ್ ಅಲ್ಲಿ ಮಹಿಳೆಯರಿಗೆ 500 ರೂ ಕಡಿಮೆ ಕೊಡಲು ತೀರ್ಮಾನಿಸಿದ್ದೇಕೆ ಎನ್ನುವುದು ಅವರಿಗೆ ಮಾತ್ರ ಗೊತ್ತು!
Leave A Reply