ನಿಮ್ಮ ವಾಹನ 2019 ಕ್ಕಿಂತ ಹಿಂದಿನದಾ? ಹಾಗಾದ್ರೆ ತಕ್ಷಣ ಅಳವಡಿಸಿ!
ಎಪ್ರಿಲ್ 1, 2019 ರ ಹಿಂದಿನ ವಾಹನಗಳು ಇದೇ ವರ್ಷದ ನವೆಂಬರ್ 17 ರೊಳಗೆ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟುಗಳನ್ನು ಹೊಂದಿರಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಕರ್ನಾಟಕದ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು, ಇದರ ಉದ್ದೇಶ ಎಲ್ಲಾ ವಾಹನಗಳ ನೋಂದಣಿ ಫಲಕಗಳನ್ನು ಪ್ರಮಾಣೀಕರಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
ಇದರ ಮುಖ್ಯ ಉದ್ದೇಶ ವಾಹನಗಳಿಗೆ ಸಂಬಂಧಪಟ್ಟ ಅಪರಾಧಗಳನ್ನು ತಡೆಗಟ್ಟುವುದು ಮತ್ತು ವಾಹನ ಸುರಕ್ಷತೆಗಳನ್ನು ಕಾಪಾಡುವುದು ಮುಖ್ಯವಾಗಿದೆ. ವಾಹನಗಳ ನಂಬರ್ ಪ್ಲೇಟ್ ಗಳನ್ನು
ದುರುಪಯೋಗ ಮಾಡುವುದನ್ನು ಈ ಮೂಲಕ ತಡೆಯಬಹುದಾಗಿದೆ. ಅದೇ ರೀತಿಯಲ್ಲಿ ವಾಹನ ನೊಂದಣಿ ಪ್ರಮಾಣಪತ್ರ ಇಲ್ಲದಿರುವಿಕೆ, ಫಿಟ್ ನೆಸ್ ಪ್ರಮಾಣಪತ್ರ ಇಲ್ಲದಿರುವಿಕೆ( ಸಾರಿಗೆ ವಾಹನ) ಹಾಗೂ ರಸ್ತೆ ತೆರಿಗೆ ಬಾಕಿ ಇರಿಸಿಕೊಂಡ ವಾಹನಗಳಿಗೆ ಈ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲಾಗುವುದಿಲ್ಲ.
2019 ರ ನಂತರದ ವಾಹನಗಳ ತಯಾರಕರು ಎಚ್ ಎಸ್ ಆರ್ ಪಿ ಉತ್ಪಾದಕರಿಂದ ಸ್ಪರ್ಧಾತ್ಮಕ ದರದಲ್ಲಿ ಸುಧಾರಿತ ಆಧುನಿಕ ನಂಬರ್ ಖರೀದಿಸಿ ವಾಹನಗಳಿಗೆ ಅಳವಡಿಸಬಹುದಾಗಿದೆ. ನಾಲ್ಕು ಚಕ್ರಗಳ ವಾಹನಗಳಿಗೆ 400 ರಿಂದ 500 ತನಕ ಇದರ ದರ ತಗುಲಿದರೆ, ದ್ವಿಚಕ್ರ ವಾಹನಗಳ ಹೊಸ ಇಂತಹ ನಂಬರ್ ಪ್ಲೇಟ್ ಅಳವಡಿಸಲು 250 ರಿಂದ 300 ವೆಚ್ಚವಾಗುತ್ತದೆ. ಇಂತಹ ನಿಯಮ ದೇಶದ 12 ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ. ಸದ್ಯದ ಅಂದಾಜಿನಂತೆ 2019, ಎಪ್ರಿಲ್ 1 ರ ಮೊದಲು ಕರ್ನಾಟಕ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟಿರುವ ವಾಹನಗಳ ಸಂಖ್ಯೆ 1.75 ಕೋಟಿಯಿಂದ 2 ಕೋಟಿ. ನೀವಿನ್ನು ಹೈ ಸೆಕ್ಯುರಿಟಿ ನೋಂದಣಿ ಪ್ಲೇಟುಗಳನ್ನು ನಿಮ್ಮ ವಾಹನಕ್ಕೆ ಅಳವಡಿಸದಿದ್ದರೆ ತಕ್ಷಣ ಅಳವಡಿಸಿ. ನವೆಂಬರ್ ನಂತರ ಇಂತಹ ನಂಬರ್ ಪ್ಲೇಟುಗಳು ಇಲ್ಲದ ವಾಹನಗಳಿಗೆ ದಂಡ ವಿಧಿಸುವ ಯೋಚನೆ ಸರಕಾರದ ಮುಂದಿದೆ
Leave A Reply