ಇಂತವರು ನಮ್ಮ ಮನೆಗಳಿಗೂ ಕಲ್ಲು ಹೊಡೆಯುವ ದಿನ ದೂರವಿಲ್ಲ!!
ಯಾಕೆ ಹೀಗೆ ಆಗುತ್ತಿದೆ. ಭಾರತ ಯಾವುದಾದರೂ ಸಾಧನೆ ಮಾಡಿದಾಗ ಈ ಕಲ್ಲು ಹೊಡೆಯುವ ಕೆಲಸ ಯಾಕೆ ನಡೆಯುತ್ತಿದೆ. ಇದನ್ನು ನಾವು ಗಂಭೀರವಾಗಿ ಚಿಂತಿಸಬೇಕು. ವಂದೇ ಮಾತರಂ ರೈಲುಗಳಿಗೆ ಕಲ್ಲು ಹೊಡೆಯುವ ದುಷ್ಕರ್ಯ ಮುಂದುವರೆಯುತ್ತಿದ್ದಂತೆ ಇತ್ತ ಇಸ್ರೋ ವಿಜ್ಞಾನಿಯ ಕಾರಿಗೆ ಕಲ್ಲು ಹೊಡೆಯುವ ಕೀಳುಮಟ್ಟದ ಕೆಲಸ ನಡೆದಿದೆ. ಅದಾಗಿ ನಾಲ್ಕು ದಿನಗಳ ನಂತರ ವಿಷಯ ಬಾಹ್ಯ ಪ್ರಪಂಚಕ್ಕೆ ಗೊತ್ತಾಗಿದೆ. ಬೆಂಗಳೂರಿನಲ್ಲಿ ತಮ್ಮ ಮೇಲೆ ನಡೆದ ಘಟನೆಯನ್ನು ಯುವ ವಿಜ್ಞಾನಿ ಅಶುತೋಷ್ ಸಿಂಗ್ ಅವರು “ಏಕ್ಸ್” ನಲ್ಲಿ ಬರೆದ ನಂತರ ಹೀಗೆ ಆಗಿರುವುದು ಎಲ್ಲರಿಗೂ ಗೊತ್ತಾಗಿದೆ. ಇದು ನಿಜಕ್ಕೂ ಭಾರತದ ಮಟ್ಟಿಗೆ ಬೇಸರದ ವಿಷಯ. ಹಾಗೆ ನೋಡಿದರೆ ವಿರೋಧಿಗಳು ಎಲ್ಲಾ ಕಡೆಯಲ್ಲಿ ಇರುತ್ತಾರೆ. ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಗಳು ಇರುವುದರಲ್ಲಿ ವಿಶೇಷವೇನಿಲ್ಲ. ಆದರೆ ದೇಶ ಪ್ರಗತಿಯನ್ನು ಸಾಧಿಸುವಾಗ ಒಳಗಿನಿಂದಲೇ ವಿರೋಧಗಳು ಕಂಡುಬಂದರೆ ಆಗ ಇದನ್ನು ಸವಾಲಾಗಿ ಸ್ವೀಕರಿಸಬೇಕು. ಅಂತವರನ್ನು ಬೆಂಡೆತ್ತಿಬಿಡಬೇಕು.
ಇಸ್ರೋ ನಮ್ಮ ದೇಶದ ಹೆಮ್ಮೆ!
ಚಂದ್ರಯಾನ 3 ಯಶಸ್ವಿಯಾದ ನಂತರ ಸಹಜವಾಗಿ ಭಾರತದ ಹಿರಿಮೆ ಜಗತ್ತಿನಾದ್ಯಂತ ಉನ್ನತ ಸ್ಥಾನಕ್ಕೆ ಏರಿದೆ. ಒಂದು ಹಾಲಿವುಡ್ ಸಿನೆಮಾಗಿಂತ ಕಡಿಮೆ ಖರ್ಚಿನಲ್ಲಿ ಭಾರತದ ಲ್ಯಾಂಡರ್ ಚಂದ್ರನಲ್ಲಿ ಇಳಿದು ಅಲ್ಲಿನ ವಸ್ತುಸ್ಥಿತಿಯನ್ನು ಸಮರ್ಪಕವಾಗಿ ಅಧ್ಯಯನ ಮಾಡುತ್ತಿದೆ ಎಂದರೆ ಅದು ಭಾರತದ ಮಟ್ಟಿಗೆ ದೊಡ್ಡ ಸಾಧನೆ. ಅದಕ್ಕೆ ಪ್ರತಿಯೊಬ್ಬ ಭಾರತೀಯ ಕೂಡ ಹೆಮ್ಮೆಪಡಬೇಕು. ಇನ್ನು ಚಂದ್ರಯಾನ ಯಾವುದೇ ಮ್ಯಾಜಿಕ್ ಅಲ್ಲ. ಅದರ ಹಿಂದೆ ನೂರಾರು ವಿಜ್ಞಾನಿಗಳ ಶ್ರಮ ಇದೆ. ಅವರ ಸಾಧನೆಯ ಫಲದಿಂದ ಇವತ್ತು ಭಾರತ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಹೆಮ್ಮೆಯಿಂದ ತಲೆ ಎತ್ತಿದೆ. ಈಗ ಅವರಲ್ಲಿ ಒಬ್ಬರ ಕಾರಿಗೆ ಕಲ್ಲು ಬಿಸಾಡಿದರೂ ಅದು ಇಡೀ ಇಸ್ರೋ ಸಂಸ್ಥೆಯ ಮೇಲೆ ಕಲ್ಲು ಬಿಸಾಡಿದಂತೆ. ಇನ್ನು ಇಸ್ರೋ ಭಾರತದ ಅಂಗ. ಆದ್ದರಿಂದ ಇಸ್ರೋದ ಒಬ್ಬ ವಿಜ್ಞಾನಿಯ ಕಾರಿಗೆ ಕಲ್ಲು ಬಿಸಾಡಿದರೂ ಅದು ಭಾರತದ ಅಖಂಡತೆಗೆ ಕಲ್ಲು ಬಿಸಾಡಿದ ಹಾಗೆ. ಅಂತವರು ಯಾರೇ ಆಗಿರಲಿ, ಅವರನ್ನು ಹಾಗೆ ಬಿಡಬಾರದು.
ವಂದೇ ಮಾತರಂ ಟ್ರೇನ್ ಗ್ಲಾಸ್ ಬೆಲೆ ಲಕ್ಷದಲ್ಲಿದೆ!
ಇನ್ನು ವಂದೇ ಮಾತರಂ ಟ್ರೇನಿಗೆ ಕಲ್ಲು ಹೊಡೆಯುವುದು ಎಂದರೆ ಯಾರೋ ಪಾಕಿಸ್ತಾನಿಗೆ ಗಡಿಯಲ್ಲಿ ಹುಟ್ಟಿದವರು ದೇಶದ ಬೇರೆ ಬೇರೆ ಕಡೆ ಟೆಂಟ್ ಬಿಚ್ಚಿ ಕುಳಿತುಕೊಂಡಿದ್ದಾರೆ ಎಂದೇ ಅರ್ಥ. ಅಂತವರನ್ನು ಅದೇ ಕಲ್ಲಿನಿಂದ ಹೊಡೆದು ಬಿಡಬೇಕು. ಯಾಕೆಂದರೆ ವಂದೇ ಮಾತರಂ ರೈಲು ಈ ದೇಶದ ಗರಿಮೆ. ಅದಕ್ಕೆ ಕಲ್ಲು ಹೊಡೆದು ಹಾನಿ ಮಾಡಿದರೆ ಯಾರಿಗಾದರೂ ಹೊಟ್ಟೆ ಉರಿಯುತ್ತದೆ. ಅದರ ಒಂದೊಂದು ವಿಂಡೋ ಗ್ಲಾಸಿಗೂ ಲಕ್ಷಗಟ್ಟಲೆ ಹಣ ತಗಲುತ್ತದೆ. ಅದು ಯಾರ ಹಣ. ಕಲ್ಲು ಹೊಡೆದವರ ತಂದೆದೂ ಅಲ್ಲ. ಹಾಗಿರುವಾಗ ಅಂತವನಿಗೆ ಹೊಡೆಯುವ ಅಧಿಕಾರ ಇಲ್ಲ. ಆದ್ದರಿಂದ ಹಾಗೆ ಹೊಡೆದವರನ್ನು ಬಂಧಿಸಿ ಅಂತವರಿಂದ ಆದ ನಷ್ಟವನ್ನು ಪೀಕಿಸಬೇಕು ಮತ್ತು ಅವರನ್ನು ಆರು ತಿಂಗಳು ಜೈಲಿನಲ್ಲಿ ಕುಳ್ಳಿರಿಸಬೇಕು.
ಇನ್ನು ಇಸ್ರೋ ವಿಜ್ಞಾನಿಯ ಕಾರಿನ ಮೇಲೆ ಕಲ್ಲು ಹೊಡೆದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಡಲು ಹೋದಾಗ ಅಲ್ಲಿ ಪೊಲೀಸರು ಸೂಕ್ತವಾಗಿ ಸ್ಪಂದಿಸಲಿಲ್ಲ ಎನ್ನುವ ಮಾಹಿತಿಯನ್ನು ವಿಜ್ಞಾನಿ ಬಹಿರಂಗಪಡಿಸಿದ್ದಾರೆ. ಇದು ಕೂಡ ಖೇದಕರ ಸಂಗತಿ. ಇದನ್ನು ಕೂಡ ಉನ್ನತ ಪೊಲೀಸ್ ಅಧಿಕಾರಿಗಳು ಹಗುರವಾಗಿ ತೆಗೆದುಕೊಳ್ಳಬಾರದು. ಯಾಕೆಂದರೆ ಕಲ್ಲು ಬಿಸಾಡುವವರು ತಮ್ಮ ಕೆಲಸ ಮುಗಿಸಿ ಬಿಲ ಸೇರುತ್ತಾರೆ. ಅಂತವರನ್ನು ಬಂಧಿಸಬೇಕು. ಅದು ಆಗುತ್ತಿಲ್ಲ. ಇದು ದೇಶದ ಒಳಗಿರುವ #Sleeper Cell ಉಗ್ರರಿಗೆ ಪೊಲೀಸರು ಸೂಕ್ತ ಬಿಸಿ ಮುಟ್ಟಿಸುತ್ತಿಲ್ಲ ಎನ್ನುವುದರ ಸಂಕೇತ. ಇದು ಇಲ್ಲಿಗೆ ನಿಂತುಬಿಡಬೇಕು. ಇಲ್ಲದೇ ಹೋದರೆ ಇಂತವರು ನಮ್ಮ ಮನೆಗಳಿಗೂ ಕಲ್ಲು ಹೊಡೆಯುವ ದಿನ ದೂರವಿಲ್ಲ!
Leave A Reply